ಭಾರತದಲ್ಲಿ ಚಿನ್ನದ ಬೆಲೆ ನವೆಂಬರ್‌-28: ಪ್ರತಿ 100 ಗ್ರಾಂ 24 ಕ್ಯಾರಟ್‌ ಚಿನ್ನದ ಬೆಲೆ 1,600 ರೂ. ಇಳಿಕೆ

ಭಾರತದಲ್ಲಿ ಮತ್ತೆ ಚಿನ್ನದ ಬೆಲೆ ಇಳಿಕೆಯಾಗಿದೆ. ಬಾಂಗಾರದ ಬೆಲೆ ಕಡಿಮೆಯಾದ್ರೆ ಸಾಕು ಎಂದು ತುದಿಗಾಲಿನಲ್ಲಿ ನಿಂತಿದ್ದ ಭಾರತಿಯರಿಗೆ ಶುಭ ಸುದ್ದಿ ಸಿಕ್ಕಿದೆ. ಚಿನ್ನದ ಬೆಲೆ ಭಾರಿ ಇಳಿಮುಖವಾಗಿದೆ. ಪ್ರತಿ 100 ಗ್ರಾಂನ 24 ಕ್ಯಾರೆಟ್‌ನ ಚಿನ್ನದ ಬೆಲೆಯಲ್ಲಿ 1,600 ರೂ. ಇಳಿಕೆಯಾಗಿದೆ.

ಗುರುವಾರ, ನವೆಂಬರ್‌ 28ರಂದು ಭಾರತದಲ್ಲಿ ಬಂಗಾರದ ಬೆಲೆ ಇಳಿಕೆಯಾಗಿದೆ. ಭೌಗೋಳಿಕ ರಾಜಕೀಯ ಪ್ರಗತಿಗಳಲ್ಲಿ ಆಗುತ್ತಿರುವ ಬದಲಾವಣೆಗಳು ಹಾಗೆ ರಷ್ಯಾ ಉಕ್ರೇನ್‌ನ ಯದ್ಧ ಸಮಸ್ಯೆಗಳು ಚಿನ್ನದ ಬೆಲೆಗಳ ಮೇಲೆ ತೀವ್ರವಾಗಿ ಪರಿಣಾಮವನ್ನ ಬೀರುತ್ತಿವೆ. ಹೀಗಾಗಿ ಚಿನ್ನದ ಮಾರುಕಟ್ಟೆ ತನ್ನ ಬೆಲೆಯನ್ನ ಸ್ಥಿರವಾಗಿ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಮುಂಬರುವ ದಿನಗಳಲ್ಲಿ ಕೂಡ ಚಿನ್ನದ ದರಗಳು ಏರಿಳಿತವನ್ನು ಮುಂದುವರೆಸಬಹುದು ಎನ್ನಲಾಗ್ತಿದೆ. ಹೂಡಿಕೆದಾರರು US ಆರ್ಥಿಕ ದತ್ತಾಂಶದ ಇತ್ತೀಚಿನ ಸುತ್ತಿನ ಮೌಲ್ಯಮಾಪನವನ್ನು ಮುಂದುವರೆಸುವುದರಿಂದ ಚಿನ್ನದ ಬೆಲೆಗಳು ವ್ಯಾಪ್ತಿಗೆ ಒಳಪಡುತ್ತವೆ ಎಂದು ಊಹಿಸಲಾಗಿದೆ. ಇನ್ನು ಗುರುವಾರ ಸ್ಪಾಟ್‌ ಚಿನ್ನದ ಬೆಲೆ ಪ್ರತಿ ಔನ್ಸ್‌ಗೆ 2,630 ಡಾಲರ್‌ನಷ್ಟು ಕುಸಿದಿದೆ.

ಭಾರತದಲ್ಲಿ ಚಿನ್ನದ ದರದಲ್ಲಿ ಭಾರಿ ಇಳಿಕೆ; ಬೆಳ್ಳಿ ಬೆಲೆ ಸ್ಥಿರ

ಭಾರತದಲ್ಲಿ ಇಂದಿನ ಬಂಗಾರದ ಬೆಲೆ

ಭಾರತದಲ್ಲಿ ಇಂದು 22ಕ್ಯಾರಟ್‌ನ ಪ್ರತಿ ಗ್ರಾಂ ಚಿನ್ನದ ಬೆಲೆ 7,093 ಇದೆ. ಹಾಗೆ 24ಕ್ಯಾರಟ್‌ನ ಪ್ರತೀ ಗ್ರಾಂ ಚಿನ್ನದ ಬೆಲೆ 7,735 ಇದೆ. ಹಾಗೆ ಭಾರತದಲ್ಲಿ 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 120 ರೂ. ಇಳಕೆಯಾಗಿ 70,850 ರೂ. ಆಗಿದೆ. ಆದ್ರೆ ಬುಧವಾರ ಒಟ್ಟು ಪ್ರತೀ 10 ಗ್ರಾಂಗೆ 71,050 ರೂ. ಇಂದು 70,930 ರೂ. ಆಗಿದೆ. ನಿನ್ನೆ 7,10,500 ಇದ್ದ ಪ್ರತೀ 100 ಗ್ರಾಂನ 22 ಕ್ಯಾರೆಟ್‌ ಚಿನ್ನದ ಬೆಲೆ ಇಂದು 1,200 ರೂಗಳಷ್ಟು ಇಳಿಕೆಕಂಡು, 7,09,300 ರೂಪಾಯಿ ಆಗಿದೆ.

ಭಾರತದಲ್ಲಿ ಬುಧವಾರ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 77,510 ರೂ. ಇತ್ತು, ಇಂದು 160 ರೂ. ಇಳಕೆಯಾಗಿ 77,350 ಆಗಿದೆ. ಹಾಗೆಯೇ ನಿನ್ನೆ 24 ಕ್ಯಾರೆಟ್ ನ 100 ಗ್ರಾಂಗೆ 7,75,100 ಇದ್ದ ಚಿನ್ನದ ಬೆಲೆ ಇಂದು 1,600 ರೂ. ಇಳಿಕೆಯಾಗಿ 7,73,500 ರೂಪಾಯಿಗಳಿಗೆ ತಲುಪಿದೆ.

ಹಾಗೆ ಪ್ರತೀ 10ಗ್ರಾಂನ 18 ಕ್ಯಾರಟ್‌ಗೆ ಬುಧವಾರ 58,130 ಇದ್ದ ಚಿನ್ನದ ಬೆಲೆ ಇಂದು 120 ರೂಗಳಷ್ಟು ಇಳಿಕೆಯಾಗಿ 58,010 ಆಗಿದೆ. ಜೊತೆಗೆ ನಿನ್ನೆ 5,81,300 ಇದ್ದ 100 ಗ್ರಾಂನ 18 ಕ್ಯಾರಟ್‌ನ ಚಿನ್ನದ ಬೆಲೆ 1,200 ಗಳಷ್ಟು ಇಳಿಕೆಕಂಡು 5,80,100 ರೂ. ಆಗಿದೆ.

ಸ್ಪಾಟ್‌ ಚಿನ್ನದ ಬೆಲೆ

ಗುರುವಾರ ಅಮೆರಿಕದ ಕರೆನ್ಸಿ ಏರಿಕೆಯಾದ್ದರಿಂದ ಚಿನ್ನದ ಬೆಲೆ ಇಳಿಮುಖವಾಗಿದೆ ಎನ್ನಲಾಗ್ತಿದೆ. 0302 ಜಿಎಮ್‌ಟಿಯಲ್ಲಿ ಸ್ಪಾಟ್‌ ಚಿನ್ನ ಪ್ರತಿ 2,627.60 ಡಾಲರ್‌ ಔನ್ಸ್‌ಗೆ 0.3%ನಷ್ಟು ಸ್ಪಾಟ್‌ಚಿನ್ನ ಕುಸಿತಕಂಡಿದೆ. ಇನ್ನು ರಾಯಿಟರ್ಸ್‌ ವರದಿ ಪ್ರಕಾರ ಯುಎಸ್‌ನ ಚಿನ್ನದ ಬೆಲೆ 0.5% ನಷ್ಟು ಇಳಿಕೆಯಾಗಿ 2,627.00 ಡಾಲರ್‌ ಆಗಿದೆ. ಪಲ್ಲಾಡಿಯಮ್ 972.75 ಡಾಲರ್‌ನಷ್ಟಿದ್ದು ಸ್ಥಿರವಾಗಿದೆ. ಇನ್ನು ಪ್ಲಾಟಿನಂ ಶೇಕಡಾ 0.1 ರಷ್ಟು ಇಳಿಮುಖವಾಗಿದ್ದು, 928.05 ಡಾಲರ್‌ಗೆ ತಲುಪಿದೆ. ಇತ್ತ ಸ್ಪಾಟ್ ಬೆಳ್ಳಿ ಶೇಕಡಾ 1 ರಷ್ಟು ಕುಸಿದು 29.78 ಡಾಲರ್‌ ಆಗಿದೆ.

ಭಾರತದಲ್ಲಿ ಇಂದಿನ ಬೆಳ್ಳಿ ಬೆಲೆ

ಭಾರತದಲ್ಲಿ ಬೆಳ್ಳಿ ಬೆಲೆ ಮತ್ತೆ ಸ್ಥಿರವಾಗಿದೆ. ಹಾಗೆ ಪ್ರತಿ ಗ್ರಾಂ ಬೆಳ್ಳಿ ಬೆಲೆ ರೂ. ಇದೆ. ಹಾಗೆ ಪ್ರತಿ ಕೆಜಿಗೆ 89,500 ರೂ. ಇದೆ. ಬುಧವಾರದಿಂದ ಗುರುವಾರದ ವರೆಗು ಬೆಳ್ಲೀ ಬೆಲೆಯಲ್ಲಿ ಯಾವುದೆ ಬದಲಾವಣೆ ಆಗಿಲ್ಲ. ಚಿನ್ನದ ಬೆಲೆ ಇಂದು ಸ್ಥಿರವಾಗಿದೆ. ಪ್ರತಿ 10 ಗ್ರಾಂ ಬೆಳ್ಳಿ ಬೆಲೆ 895 ರೂ ಇದ್ದು, ಪ್ರತಿ 100 ಗ್ರಾಂಗೆ 8,950 ರೂ ಇದೆ.

ಆದ್ರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಏರಿಕೆಯನ್ನ ಕಾಣಬಹುದು. ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ದಿನದ ಮಟ್ಟಿಗೆ ಸ್ವಲ್ಪ ಕಡಿಮೆಯಾಗಿವೆ ಎನ್ನಬಹುದು. ಹಾಗೆ ನಿರ್ಮಲ್ ಬ್ಯಾಂಗ್ ಸೆಕ್ಯುರಿಟೀಸ್ ಪ್ರೈವೇಟ್ ಲಿಮಿಟೆಡ್ನ ತಾಂತ್ರಿಕ ಸಂಶೋಧನಾ ವಿಶ್ಲೇಷಕರು ಹೇಳಿರುವ ಪ್ರಕಾರ ಟ್ರಂಪ್ ಅವರ ವ್ಯಾಪಾರ ಸುಂಕಗಳು ಮತ್ತು ದೃಢವಾದ ಯುಎಸ್ ಆರ್ಥಿಕ ಬೆಳವಣಿಗೆಗೆ ಸಂಬಂಧಿಸಿದ ಹೆಚ್ಚಿನ ಲಾಭಗಳನ್ನು ಮಾರುಕಟ್ಟೆಗಳು ನಿರೀಕ್ಷಿಸುತ್ತಿರುವುದರಿಂದ ಡಾಲರ್ನ ಮಾಪಕವು ಒಂದು ವರ್ಷದಲ್ಲಿ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ ಎಂದಿದ್ದಾರೆ .

MCX ಗೋಲ್ಡ್ ಔಟ್ಲುಕ್ ಟುಡೇ

ದೇಶೀಯ ಹಳದಿ ಲೋಹ ಎಂಸಿಎಕ್ಸ್ ಗೋಲ್ಡ್ ಮಾರಾಟದ ಒತ್ತಡಕ್ಕೆ ಮಣಿದು ದೈನಂದಿನ ಚಾರ್ಟ್ನಲ್ಲಿ ಬೇರಿಷ್ ಮೇಣದಬತ್ತಿ ರಚನೆಯೊಂದಿಗೆ ಕೊನೆಗೊಂಡಿತು. ಸರಕು ಪ್ರಸ್ತುತ ಅದರ ನಿರ್ಣಾಯಕ ಪೂರೈಕೆ ವಲಯಗಳನ್ನು 76800/77000 ಮಟ್ಟವನ್ನು ಸಮೀಪಿಸುತ್ತಿದೆ. 74653/ 75000 ಮಟ್ಟಕ್ಕಿಂತ ಕಡಿಮೆ ವಿರಾಮದೊಂದಿಗೆ 75000 ಮಟ್ಟಗಳು ಬೆಲೆಗಳನ್ನು ಸಂಭಾವ್ಯವಾಗಿ ಎಳೆಯಬಹುದು 74000/73500 ಮಟ್ಟಗಳು ನಡೆಯುತ್ತಿರುವ ಭೌಗೋಳಿಕ ರಾಜಕೀಯ ಸಮಸ್ಯೆಗಳಿಂದಾಗಿ ಚಂಚಲತೆ ಹೆಚ್ಚಾಗಬಹುದಾದ್ದರಿಂದ ಕಟ್ಟುನಿಟ್ಟಾದ ಸ್ಟಾಪ್‌ಲಾಸ್‌ನೊಂದಿಗೆ ವ್ಯಾಪಾರ ಮಾಡಲು ಸಲಹೆ ನೀಡಲಾಗುತ್ತದೆ" ಎಂದು ವೇಟು ವೆಲ್ತ್‌ ಬ್ರೋಕರ್ಸ್‌ ಲಿಮಿಟೆಡ್‌ನ ಸಂಶೋಧನಾ ವಿಶ್ಲೇಷಕರು ಹೇಳಿದ್ದಾರೆ.

ಚಿನ್ನ ಮತ್ತು ಬೆಳ್ಳಿ ಬೆಲೆಯ ಔಟ್‌ಲುಕ್‌

ಚಿನ್ನ ಮತ್ತು ಬೆಳ್ಳಿ ವಹಿವಾಟಿನ ಬಗ್ಗೆ ಬ್ರೋಕಿಂಗ್ ಸಂಸ್ಥೆ ನಿರ್ಮಲ್ ಬ್ಯಾಂಗ್ ಸೆಕ್ಯುರಿಟೀಸ್ ಪ್ರೈ.ಲಿಮಿಟೆಡ್ ಪ್ರತಿಕ್ರಿಯಿಸಿದ್ದು, ಅಂತಾರಾಷ್ಟ್ರೀಯ ಷೇರು ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಂದು ಕಡಿಮೆ ವಹಿವಾಟು ನಡೆಸುತ್ತಿವೆ. ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ವಹಿವಾಟಿನ ವ್ಯಾಪ್ತಿ ಸ್ವಲ್ಪಮಟ್ಟಿಗೆ ಕಡಿಮೆ ಮಾಡಲು ನಾವು ನಿರೀಕ್ಷಿಸುತ್ತಿದ್ದೇವೆ. ಹಾಗೆ ಎರಡನೇ ದಿನಕ್ಕೆ ಚಿನ್ನದ ಬೆಲೆಗಳು ಸ್ಥಿರವಾಗಿರುತ್ತವೆ. US ಆಸಕ್ತಿಯ ದೃಷ್ಟಿಕೋನವನ್ನು ಹೂಡಿಕೆದಾರರು ನಿರ್ಣಯಿಸುತ್ತಿದ್ದು, ಹಣದುಬ್ಬರದ ದತ್ತಾಂಶದ ನಂತರದ ದರಗಳು ಮುಂದಿನ ತಿಂಗಳು ಕಡಿತವಾಗಬಹುದು ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+