ಭಾರತದಲ್ಲಿ ಚಿನ್ನದ ಬೆಲೆ (Gold Rate India) ಈ ವಾರದ ಆರಂಭದಲ್ಲೇ ಭಾರೀ ಏರಿಕೆ ಕಂಡಿತ್ತು. ಕಳೆದ ವಾರವಷ್ಟೇ ಇಳಿಕೆಯಾಗಿದ್ದ, ಚಿನ್ನ-ಬೆಳ್ಳಿ (Gold-Silver) ದರ ಈ ವಾರದಲ್ಲಿ ಭಾರೀ ಏರಿಕೆ ಕಾಣುತ್ತಿದೆ. ಆದರೆ ಇಂದು ಚಿನ್ನ ಪ್ರಿಯರಿಗೆ ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ. ಹಾಗಿದ್ರೆ ಏಕೆ ಗೊತ್ತಾ? ಇಲ್ಲಿದೆ ಓದಿ.

ಭಾರತದಲ್ಲಿ 24K ಚಿನ್ನದ ಬೆಲೆ:
ಚಿನ್ನದ ಬೆಲೆ ಇಂದು ಏರಿಕೆಯಾಗುತ್ತಾ? ಇಳಿಕೆಯಾಗುತ್ತಾ? ಎಂಬ ಪ್ರಶ್ನೆ ಗ್ರಾಹಕರಲ್ಲಿ ಮನೆ ಮಾಡಿತ್ತು. ಆದ್ರೆ ಇಂದು ಭಾರತದಲ್ಲಿ ಚಿನ್ನದ ದರ ನಿಂತ ನೀರಿನಂತಾಗಿದೆ. 24K ಚಿನ್ನದ 1 ಗ್ರಾಂ ಬೆಲೆ ₹15,791 ರೂ. ಆಗಿದ್ದು, ನಿನ್ನೆ ₹15,791 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರ ಇಂದು ಚಿನ್ನದ ದರದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. 8 ಗ್ರಾಂ ಬೆಳ್ಳಿ ದರ ಇಂದು ₹1,26,328 ರೂ. ಆಗಿದ್ದು, ನಿನ್ನೆಗಿಂತ ಇಂದು ಶೂನ್ಯ ಬದಲಾವಣೆಯಾಗಿದೆ. ಇನ್ನು 10 ಗ್ರಾಂ ಚಿನ್ನದ ದರ ₹1,57,910 ರೂ. ಆಗಿದ್ದು, ನಿನ್ನೆಯ ಬೆಲೆಯನ್ನೇ ಇಂದು ಕಾಯ್ದುಕೊಂಡಿದೆ. ಹಾಗೆಯೇ 100 ಗ್ರಾಂ ಬೆಳ್ಳಿ ಬೆಲೆ ₹15,79,100 ರೂ. ಆಗಿದ್ದು, ಯಾವುದೇ ಬದಲಾವಣೆಗಳಾಗಿಲ್ಲ.
ಭಾರತದಲ್ಲಿ 22K ಚಿನ್ನದ ಬೆಲೆ:
22K ಚಿನ್ನದ ಒಂದು ಗ್ರಾಂ ಬೆಲೆ 14,475 ರೂ. ಇದೆ. ನಿನ್ನೆಗೆ ಹೋಲಿಸಿದ್ರೆ ಇಂದು ಶೂನ್ಯ ಬದಲಾವಣೆಯಾಗಿದೆ. ಇನ್ನು 8 ಗ್ರಾಂ ಚಿನ್ನದ ಬೆಲೆ ಇಂದು 1,15,800 ರೂ. ಆಗಿದ್ದು, ನಿನ್ನೆಯ ಬೆಲೆಯಲ್ಲೇ ಮುಂದುವರೆದಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,44,750 ರೂ. ಆಗಿದೆ. 100 ಗ್ರಾಂ ಚಿನ್ನದ ಬೆಲೆ 14,47,500 ರೂ. ಆಗಿದೆ.
ಭಾರತದಲ್ಲಿ 18K ಚಿನ್ನದ ಬೆಲೆ:
ಭಾರತದಲ್ಲಿ 18K ಚಿನ್ನದ ಬೆಲೆಯಲ್ಲಿ ಇಂದು ಶೂನ್ಯ ಬದಲಾವಣೆಯಾಗಿದೆ. ಅಂದರೆ ಇಂದು 1 ಗ್ರಾಂ ಚಿನ್ನದ ಬೆಲೆ 11,844 ರೂ. ಇದೆ. 8 ಗ್ರಾಂ ಚಿನ್ನದ ಬೆಲೆ ಇಂದು ₹94,752 ರೂ. ಆಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,18,440 ರೂ. ಆಗಿದ್ದು, 100 ಗ್ರಾಂ ಚಿನ್ನದ ಬೆಲೆ 11,84,400 ರೂ. ಆಗಿದೆ.
ಭಾರತದ ವಿವಿಧ ನಗರಗಳ ಚಿನ್ನದ ಬೆಲೆ
ಚೆನ್ನೈ: 24K ರೂ. 15,906, 22K ರೂ. 14,580, 18K ರೂ. 12,530
ಮುಂಬೈ: 24K ರೂ. 15,791, 22K ರೂ. 14,475, 18K ರೂ. 11,844
ದೆಹಲಿ: 24K ರೂ. 15,806, 22K ರೂ. 14,490, 18K ರೂ. 11,859
ಕೋಲ್ಕತ್ತಾ: 24K ರೂ. 15,791, 22K ರೂ. 14,475, 18K ರೂ. 11,844
ಬೆಂಗಳೂರು: 24K ರೂ. 15,791, 22K ರೂ. 14,475, 18K ರೂ. 11,844
ಹೈದರಾಬಾದ್: 24K ರೂ. 15,791, 22K ರೂ. 14,475, 18K ರೂ. 11,844
ಕೇರಳ: 24K ರೂ. 15,791, 22K ರೂ. 14,475, 18K ರೂ. 11,844
ಪುಣೆ: 24K ರೂ. 15,791, 22K ರೂ. 14,475, 18K ರೂ. 11,844
ವಡೋದರಾ: 24K ರೂ. 15,796, 22K ರೂ. 14,480, 18K ರೂ. 11,849
ಅಹಮದಾಬಾದ್: 24K ರೂ. 15,796, 22K ರೂ. 14,480, 18K ರೂ. 11,849
ಭಾರತದಲ್ಲಿ ಬೆಳ್ಳಿ ದರ ಇಳಿಕೆ!
ಅತ್ತ ಚಿನ್ನದ ಬೆಲೆ ಇಂದು ಸ್ಥಿರವಾದರೂ, ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡಿದ್ದು, ಪ್ರತೀ ಗ್ರಾಂನಲ್ಲಿ ಒಟ್ಟು 10 ರೂ. ಇಳಿಕೆಯಾಗಿದೆ. ಆ ಪ್ರಕಾರ ಬೆಳ್ಳಿ ದರ ಪ್ರತೀ ಗ್ರಾಂ ಬೆಲೆ 290 ರೂ. ಆಗಿದೆ. ಇನ್ನು 8 ಗ್ರಾಂ ಬೆಳ್ಳಿ ಬೆಲೆ ₹2,320 ರೂ. ಆಗಿದ್ದು, ನಿನ್ನೆ ₹2,400 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹80 ರೂ. ಇಳಿಕೆ ಕಂಡಿದೆ. 10 ಗ್ರಾಂ ಬೆಳ್ಳಿ ದರ ಇಂದು ₹2,900 ರೂ. ಆಗಿದ್ದು, ನಿನ್ನೆ ₹3,000 ರೂ. ಇತ್ತು. ಒಂದೇ ದಿನದಲ್ಲಿ ₹100 ರೂ. ಇಳಿಕೆಯಾಗಿದೆ. ಇನ್ನು 100 ಗ್ರಾಂ ಬೆಳ್ಳಿ ದರ ₹29,000 ರೂ. ಆಗಿದೆ. 1000 ಗ್ರಾಂ ಬೆಳ್ಳಿ ಬೆಲೆ ₹2,90,000 ರೂ. ಆಗಿದೆ.
ಸ್ಪಾಟ್ ಗೋಲ್ಡ್ ವಿವರ:
ಫೆಬ್ರವರಿ 10 ರ ರಾಯಿಟರ್ಸ್ ವರದಿ ಪ್ರಕಾರ, ಈ ವಾರದ ಕೊನೆಯಲ್ಲಿ ಬಿಡುಗಡೆಯಾಗಲಿರುವ ಅಮೆರಿಕದ ಪ್ರಮುಖ ಉದ್ಯೋಗಗಳು ಮತ್ತು ಹಣದುಬ್ಬರದ ದತ್ತಾಂಶಗಳಿಂದಾಗಿ, ಹೂಡಿಕೆದಾರರು ನಿರೀಕ್ಷೆಯಲ್ಲಿರುವುದರಿಂದ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಕುಸಿದಿದೆ.
GMT 0332 ರ ವೇಳೆಗೆ, ಸ್ಪಾಟ್ ಚಿನ್ನದ ದರವು ಪ್ರತೀ ಔನ್ಸ್‌ಗೆ 0.7% ಇಳಿಕೆಯಾಗಿ, $5,029.49 ಕ್ಕೆ ತಲುಪಿದೆ.


Click it and Unblock the Notifications