ಬೆಂಗಳೂರಿನಲ್ಲಿ ಚಿನ್ನದ ಬೆಲೆ ಗಗನಕ್ಕೇರಿದೆ. ಅದೇ ಕಾರಣದಿಂದ ಎಷ್ಟೋ ಹೂಡಿಕೆದಾರರು, ಖರೀದಿದಾರರು ಚಿನ್ನದ ಬೆಲೆ ಇಳಿಕೆಯ ನಿರೀಕ್ಷೆಯಲ್ಲಿದ್ದರು. ಇದೀಗ ಮತ್ತೆ ಚಿನ್ನದ ಬೆಲೆ ಪಾತಾಳಕ್ಕಿಳಿದಿದೆ. ಕೊನೆಗೂ ಚಿನ್ನ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಹಾಗಿದ್ರೆ ಇಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆ (Bengaluru Gold Rate) ಎಷ್ಟಿದೆ ಗೊತ್ತಾ?

ಬೆಂಗಳೂರಿನಲ್ಲಿ 24K ಚಿನ್ನದ ಬೆಲೆ:
ಬೆಂಗಳೂರಿನಲ್ಲಿ 24K ಚಿನ್ನದ 1 ಗ್ರಾಂ ಬೆಲೆಯಲ್ಲಿ ಭಾರೀ ಇಳಿಕೆ ಕಂಡಿದೆ. ಅದರಂತೆ ಇಂದು ಒಂದು ಗ್ರಾಂ ಚಿನ್ನದ ಬೆಲೆ 12,300 ರೂ. ಆಗಿದೆ. ನಿನ್ನೆ ಕೂಡಾ 12,328 ರೂ. ಇತ್ತು. ನಿನ್ನೆಗಿಂತ ಇಂದು ₹28 ರೂ. ಇಳಿಕೆಯಾಗಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ 98,400 ರೂ. ಆಗಿದ್ದು, ನಿನ್ನೆ 98,624 ರೂ. ಇತ್ತು. ಈ ಮೂಲಕ ಒಂದೇ ದಿನ ₹224 ರೂ. ಇಳಿಕೆಯಾಗಿದೆ. ಇನ್ನು 10 ಗ್ರಾಂ ಮತ್ತು 100 ಗ್ರಾಂ ಚಿನ್ನದ ಬೆಲೆ ಇಂದು ಪ್ರತಿಯಾಗಿ 1,23,000 ರೂ. ಮತ್ತು 12,30,000 ರೂ. ಆಗಿದೆ.
ಬೆಂಗಳೂರಿನಲ್ಲಿ 22K ಚಿನ್ನದ ಬೆಲೆ:
22K ಚಿನ್ನದ ಇಂದು 1 ಗ್ರಾಂ ಬೆಲೆ 11,275 ರೂ. ಆಗಿದೆ. ನಿನ್ನೆ 11,300 ರೂ. ಇತ್ತು. ಇನ್ನು 8 ಗ್ರಾಂ ಚಿನ್ನದ ಬೆಲೆ ಇಂದು 90,200 ರೂ. ಆಗಿದ್ದು, ನಿನ್ನೆ 90,400 ರೂ. ಇತ್ತು. ಈ ಮೂಲಕ ₹200 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆಯಲ್ಲೂ ಒಟ್ಟು ₹250 ರೂ. ಇಂದು ಇಳಿಕೆಯಾಗಿದೆ. ಅಂದರೆ ಇಂದು ರೂ. 1,15,150 ನಷ್ಟು ಆಗಿದೆ. 100 ಗ್ರಾಂ ಚಿನ್ನದ ಬೆಲೆ ಇಂದು 11,27,500 ರೂಪಾಯಿ ಆಗಿದ್ದು, ನಿನ್ನೆ 11,30,000 ರೂ. ಇತ್ತು.
18K ಚಿನ್ನದ ಬೆಲೆ ಹೇಗಿದೆ?
ಇನ್ನು ಬೆಂಗಳೂರಿನಲ್ಲಿ ಇಂದು 18K ಚಿನ್ನದ 1 ಗ್ರಾಂ ಬೆಲೆ 9,225 ರೂಪಾಯಿಯಾಗಿದೆ. ಅಂದರೆ ನಿನ್ನೆಗೆ ಹೋಲಿಸಿದ್ರೆ ಇಂದು ಕೇವಲ ₹21 ರೂ. ಇಳಿಕೆಯಾಗಿದೆ. ಹಾಗೆಯೇ 8 ಗ್ರಾಂ ಚಿನ್ನದ ಬೆಲೆ ಇಂದು 73,800 ರೂ. ಆಗಿದೆ. ಆದರೆ ನಿನ್ನೆ 73,968 ರೂ. ಇತ್ತು. ಈ ಮೂಲಕ ಕೇವಲ 168 ರೂ. ಇಳಿಕೆಯಾಗಿದೆ. ಅದೇ ರೀತಿ 10 ಗ್ರಾಂ ಚಿನ್ನದ ಬೆಲೆ ಇಂದು 92,250 ರೂ. ಆಗಿದ್ದು, ನಿನ್ನೆ 92,460 ರೂ. ಇತ್ತು. ಒಟ್ಟು ₹210 ರೂ. ಇಳಿಕೆ ಕಂಡಿದೆ.
ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಹೇಗಿದೆ?
ಇನ್ನು ಚಿನ್ನದ ದರದಲ್ಲಿ ಇಂದು ಇಳಿಕೆ ಕಂಡರೆ, ಬೆಳ್ಳಿ ದರ ಇಂದು ಏರಿಕೆ ಕಂಡಿದೆ. ನಿನ್ನೆಗಿಂತ ಪ್ರತೀ ಗ್ರಾಂನಲ್ಲಿ 1 ರೂ.ನಂತೆ ಏರಿಕೆಯಾಗಿದೆ. ಅಂದರೆ ಇಂದು 1 ಗ್ರಾಂ ಬೆಳ್ಳಿದರ ₹152 ರೂ ಆಗಿದ್ದು, ನಿನ್ನೆ ₹151 ರೂ. ಇತ್ತು. ಅದೇ ರೀತಿ 8 ಗ್ರಾಂ ಬೆಳ್ಳಿ ಬೆಲೆ ಇಂದು ₹1,216 ರೂ. ಆಗಿದ್ದು, ನಿನ್ನೆ ₹1,208 ರೂ. ಇತ್ತು. ಈ ಮೂಲಕ ₹8 ರೂ ಏರಿಕೆಯಾಗಿದೆ. ಇನ್ನು 1 ಕಿಲೋ ಬೆಳ್ಳಿ ಬೆಲೆ ಇಂದು ಬೆಂಗಳೂರಿನಲ್ಲಿ ₹1,52,000 ರೂ ಆಗಿದ್ದು, ನಿನ್ನೆಗೆ ಹೋಲಿಸಿದ್ರೆ ಇಂದು ₹1,000 ರೂ ಏರಿಕೆ ಕಂಡಿದೆ.
ಸ್ಪಾಟ್ ಗೋಲ್ಡ್ ವಿವರ: ಅಕ್ಟೋಬರ್ 31, ರಾಯಿಟರ್ಸ್ ವರದಿ ಪ್ರಕಾರ ಈ ವರ್ಷ ಯುಎಸ್ ಫೆಡರಲ್ ರಿಸರ್ವ್ ಬಡ್ಡಿದರ ಮತ್ತೊಮ್ಮೆ ಕಡಿತ ಮಾಡಿದ್ದರಿಂದ, ಶುಕ್ರವಾರ ಚಿನ್ನದ ಬೆಲೆಗಳು 1% ರಷ್ಟು ಕುಸಿದಿದೆ. ಆದರೆ ಲೋಹದಲ್ಲಿ ಸತತ ಮೂರನೇ ತಿಂಗಳು ಕೂಡಾ ಲಾಭದಲ್ಲೇ ಇದೆ.
ಇನ್ನು ಸ್ಪಾಟ್ ಚಿನ್ನ ದರವು ಮಧ್ಯಾಹ್ನ 1:49 ET (1749 GMT) ಕ್ಕೆ ಔನ್ಸ್‌ಗೆ 0.6% ರಷ್ಟು ಕುಸಿತ ಕಂಡಿದೆ. ಅಂದರೆ ಪ್ರತೀ ಔನ್ಸ್‌ಗೆ $4,001.74 ಕ್ಕೆ ತಲುಪಿದೆ ಮತ್ತು ಈ ತಿಂಗಳು 3.7% ರಷ್ಟು ಏರಿಕೆಯಲ್ಲಿದೆ.


Click it and Unblock the Notifications