ಚಿನ್ನದ ಮೇಲಿನ ಹೂಡಿಕೆ (Gold Investment) ಬಗ್ಗೆ ಅದೆಷ್ಟೋ ಜನ ಒಳ್ಳೆಯ ಭಾವನೆ ಹೊಂದಿದ್ದಾರೆ. ಆದ್ರೆ ಇತ್ತೀಚಿನ ಬೆಲೆ ನೋಡಿದ್ರೆ ಖರೀದಿಸೋದೆ ಬೇಡವೆಂಬಂತಾಗಿದೆ. ಚಿನ್ನದ ಬೆಲೆ ಕಡಿಮೆಯಾಗುತ್ತೆ ಎಂದು ಕಾದು ಕುಳಿತವರಿಗೆ ನಿರಾಸೆ ಹುಟ್ಟಿಸುತ್ತಿದೆ. ಎರಡು ದಿನದ ಹಿಂದೆಯಷ್ಟೇ ಚಿನ್ನದ ಬೆಲೆಯಲ್ಲಿ ಸ್ವಲ್ಪ ಇಳಿಕೆಯಾಗಿತ್ತು. ಆದ್ರೆ ಇದೀಗ ನಿನ್ನೆ ಮತ್ತು ಇಂದು ದಿಢೀರ್ ಏರಿಕೆ ಕಂಡಿದೆ. ಹಾಗಿದ್ರೆ ಭಾರತದಲ್ಲಿ ಇಂದು ಚಿನ್ನದ ಬೆಲೆ (Today Gold Rate India) ಹೇಗಿದೆ ಗೊತ್ತಾ? ಈ ಸುದ್ದಿಯಲ್ಲಿ ಭಾರತದ 24K, 22K ಮತ್ತು 18K ಚಿನ್ನದ ಪ್ರತಿ ಗ್ರಾಂ, 8 ಗ್ರಾಂ, 100 ಗ್ರಾಂ, 10 ಗ್ರಾಂ ಮತ್ತು 100 ಗ್ರಾಂ ಬೆಲೆಯ ಬಗ್ಗೆ ವಿವರಿಸಲಾಗಿದೆ. ಈ ಮೂಲಕ ಚಿನ್ನ ಖರೀದಿದಾರರು, ಹೂಡಿಕೆದಾರರು ಬೆಳವಣಿಗೆ ನೋಡಿಕೊಂಡು ಚಿನ್ನವನ್ನು ಖರೀದಿಸಬಹುದು.

ಭಾರತದಲ್ಲಿ 24K ಚಿನ್ನದ ಬೆಲೆ:
ನಿನ್ನೆಗೆ ಹೋಲಿಸಿದ್ರೆ ಇಂದು (ಅ.14) 24 ಕ್ಯಾರೆಟ್ ಚಿನ್ನದ ಪ್ರತಿ ಗ್ರಾಂ ಬೆಲೆ ರೂ. 12,835 ಆಗಿದ್ದು, ನಿನ್ನೆಯ ಬೆಲೆಗೆ ಹೋಲಿಸಿದ್ರೆ ಇಂದು ಭಾರೀ ಏರಿಕೆ ಕಂಡಿದೆ. ಅಂದರೆ ಬರೋಬ್ಬರಿ 295 ರೂ. ಹೆಚ್ಚಾಗಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 1,02,680 ರೂ. ಆಗಿದ್ದು, ನಿನ್ನೆ 1,00,320 ರೂ. ಇತ್ತು. ಈ ಮೂಲಕ ಒಟ್ಟು 2,360 ರೂ. ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,28,350 ರೂ. ಆಗಿದ್ದು, ನಿನ್ನೆ 1,25,400 ಆಗಿತ್ತು. ಅದೇ ರೀತಿ 24 ಕ್ಯಾರೆಟ್ 100 ಗ್ರಾಂ ಚಿನ್ನದ ಬೆಲೆ 12,83,500 ಆಗಿದೆ. ನಿನ್ನೆಗಿಂತ ಇಂದು 29,500 ರೂ. ಹೆಚ್ಚಾಗಿದೆ.
22K ಚಿನ್ನದ ಬೆಲೆ:
ಇನ್ನು 22K ಚಿನ್ನದ ಬೆಲೆಯೂ ನಿನ್ನೆಗಿಂತ ಇಂದು ಭಾರೀ ಏರಿಕೆಯಾಗಿದೆ. ಇಂದು 22K ಚಿನ್ನದ 1 ಗ್ರಾಂ ಬೆಲೆ 11,765 ರೂ. ಆಗಿದ್ದು, ನಿನ್ನೆ 11,495 ರೂ. ಇತ್ತು. ಈ ಮೂಲಕ ಒಂದೇ ದಿನದಲ್ಲಿ 270 ರೂ. ಏರಿಕೆಯಾಗಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ 94,120 ರೂ ಆಗಿದ್ದು, ನಿನ್ನೆ 91,960 ರೂ. ಇತ್ತು. ನಿನ್ನೆಗಿಂತ ಇಂದು 2,160 ರೂ. ಏರಿಕೆ ಕಂಡಿದೆ. 10 ಗ್ರಾಂ ಮತ್ತು 100 ಗ್ರಾಂ ಚಿನ್ನದ ಬೆಲೆ ಕ್ರಮವಾಗಿ 1,17,650 ರೂ ಮತ್ತು 11,76,500 ಆಗಿದೆ. ಈ ಮೂಲಕ 10 ಗ್ರಾಂನಲ್ಲಿ 2,700 ರೂ ಹೆಚ್ಚಾದರೆ, 100 ಗ್ರಾಂನಲ್ಲಿ 27,000 ರೂ. ಹೆಚ್ಚಾಗಿದೆ.
18K ಚಿನ್ನದ ಬೆಲೆ ಹೇಗಿದೆ?
18K ಚಿನ್ನದಲ್ಲಿ ಹೆಚ್ಚು ಮಿಶ್ರಣ ಮಾಡುವುದರಿಂದ ಇದರ ಬೆಲೆ ಕೂಡಾ 24K ಚಿನ್ನಕ್ಕೆ ಹೋಲಿಸಿದ್ರೆ ತುಂಬಾ ಕಡಿಮೆಗೆ ಸಿಗುತ್ತೆ. ಆದ್ದರಿಂದ ಹೂಡಿಕೆ ಮಾಡುವವರಿಗೆ ಇದೂ ಕೂಡಾ ಬೆಸ್ಟ್ ಆಗಿರುತ್ತೆ. 18K ಚಿನ್ನದ ಬೆಲೆಯೂ ನಿನ್ನೆಗಿಂತ ಇಂದು ದುಬಾರಿಯಾಗಿದೆ. ಅಂದರೆ 1 ಗ್ರಾಂ ಚಿನ್ನದ ಬೆಲೆ 9,626 ರೂಪಾಯಿ ಆಗಿದ್ದು, ನಿನ್ನೆಗಿಂತ ₹221 ರೂ ಹೆಚ್ಚಾಗಿದೆ. 8 ಗ್ರಾಂ ಚಿನ್ನದ ಬೆಲೆ 77,008 ರೂಪಾಯಿ ಇದ್ದು, ನಿನ್ನೆಗೆ ಹೋಲಿಸಿದ್ರೆ 1,768 ರೂ. ಹೆಚ್ಚಾಗಿದೆ. ಹಾಗೆಯೇ 10 ಗ್ರಾಂ ಚಿನ್ನದ ಬೆಲೆ 96,260 ಆಗಿದ್ದು, ನಿನ್ನೆ 94,050 ರೂ ಇತ್ತು. ಈ ಮೂಲಕ ಒಂದೇ ದಿನದಲ್ಲಿ 2,210 ರೂ ಜಾಸ್ತಿಯಾಗಿದೆ. ಅದೇ ರೀತಿ 100 ಗ್ರಾಂ ಚಿನ್ನದ ಬೆಲೆ 9,62,100 ಆಗಿದ್ದು, ನಿನ್ನೆಗೆ ಹೋಲಿಸಿದ್ರೆ ಇಂದು 22,100 ರೂ.ನಷ್ಟು ಒಂದೇ ದಿನ, ಬೆಲೆಯಲ್ಲಿ ದಿಢೀರ್ ಏರಿಕೆ ಕಂಡಿದೆ.
ಭಾರತದ ವಿವಿಧ ನಗರಗಳಲ್ಲಿ ಎಷ್ಟಿದೆ ಚಿನ್ನದ ಬೆಲೆ?
ಚೆನ್ನೈ: 24K ರೂ. 12,900, 22K ರೂ. 11,825, 18K ರೂ. 9,770
ಮುಂಬೈ: 24K ರೂ. 12,835, 22K ರೂ. 11,765, 18K ರೂ. 9,626
ದೆಹಲಿ: 24K ರೂ. 12,850, 22K ರೂ. 11,780, 18K ರೂ. 9,646
ಕೋಲ್ಕತ್ತಾ: 24K ರೂ. 12,835, 22K ರೂ. 11,765, 18K ರೂ. 9,626
ಬೆಂಗಳೂರು: 24K ರೂ. 12,835, 22K ರೂ. 11,765, 18K ರೂ. 9,626
ಹೈದರಾಬಾದ್: 24K ರೂ. 12,835, 22K ರೂ. 11,765, 18K ರೂ. 9,626
ಕೇರಳ: 24K ರೂ. 12,835, 22K ರೂ. 11,765, 18K ರೂ. 9,626
ಪುಣೆ: 24K ರೂ. 12,835, 22K ರೂ. 11,765, 18K ರೂ. 9,626
ವಡೋದರಾ: 24K ರೂ. 12,840, 22K ರೂ. 11,770, 18K ರೂ. 9,631
ಅಹಮದಾಬಾದ್: 24K ರೂ. 12,840, 22K ರೂ. 11,770, 18K ರೂ. 9,631
ಸ್ಪಾಟ್ ಗೋಲ್ಡ್ ವಿವರ
ರಾಯಿಟರ್ಸ್ ವರದಿ ಪ್ರಕಾರ, ಅಕ್ಟೋಬರ್ 14 ಯುಎಸ್ ಫೆಡರಲ್ ರಿಸರ್ವ್ ದರ ಕಡಿತದ ನಿರೀಕ್ಷೆಗಳು ಹೆಚ್ಚಿದ ಕಾರಣ ಮಂಗಳವಾರ ಚಿನ್ನದ ಬೆಲೆಗಳು ದಾಖಲೆ ಮಟ್ಟದಲ್ಲಿ ಗರಿಷ್ಠ $4,100 ಕ್ಕಿಂತ ಹೆಚ್ಚಾದವು. 0521 GMT ವೇಳೆಗೆ ಸ್ಪಾಟ್ ಚಿನ್ನವು ಶೇ. 1.7 ರಷ್ಟು ಏರಿಕೆಯಾಗಿ ಪ್ರತಿ ಔನ್ಸ್‌ಗೆ $4,179.48 ಕ್ಕೆ ತಲುಪಿ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ.
ಬೆಳ್ಳಿ ಬೆಲೆ ಹೇಗಿದೆ?
ಚಿನ್ನದಂತೆಯೇ ಬೆಳ್ಳಿ ಕೂಡಾ ಹೂಡಿಕೆಗೆ ಬೆಸ್ಟ್. ಆದ್ರೆ ಇತ್ತೀಚೆಗೆ ಬೆಳ್ಳಿ ಬೆಲೆಯಲ್ಲೂ ಭಾರೀ ಏರಿಕೆಯಾಗುತ್ತಿದೆ. ನಿನ್ನೆಗೆ ಹೋಲಿಸಿದ್ರೆ ಬೆಳ್ಳಿ ಬೆಲೆಯಲ್ಲೂ ಇಂದು ಏರಿಕೆಯಾಗಿದೆ. ನಿನ್ನೆ ಗ್ರಾಂಗೆ ಬೆಳ್ಳಿ ದರ 185 ರೂ. ಇತ್ತು. ಆದರೆ ಇಂದು ಬೆಳ್ಳಿ ಬೆಲೆ ರೂ. 189 ಆಗಿದೆ. ಈ ಮೂಲಕ ಒಂದೇ ದಿನದಲ್ಲಿ 4 ರೂಪಾಯಿನಷ್ಟು ಹೆಚ್ಚಾಗಿದೆ. ಇನ್ನು 8 ಗ್ರಾಂ ಬೆಳ್ಳಿಗೆ ಇಂದು 1,512 ರೂ ಆಗಿದ್ದು, ನಿನ್ನೆ 1,480 ರೂ. ಇತ್ತು. ಒಟ್ಟು 32 ರೂ ಹೆಚ್ಚಾಗಿದೆ. 10 ಗ್ರಾಂ ಬೆಳ್ಳಿ ಬೆಲೆ ಇಂದು 1,890 ರೂಪಾಯಿ ಆಗಿದೆ. ನಿನ್ನೆಗಿಂತ ಇಂದು 40 ರೂಪಾಯಿಯಷ್ಟು ಏರಿಕೆಯಾಗಿದೆ. ಹಾಗೆಯೇ 100 ಬೆಳ್ಳಿ ಬೆಲೆ 18,900 ರೂ. ಮತ್ತು 1000 ಗ್ರಾಂ ಬೆಳ್ಳಿ ಬೆಲೆ 1,89,000 ರೂ. ಆಗಿದೆ. ಈ ಮೂಲಕ ಕ್ರಮವಾಗಿ 400 ರೂ. ಮತ್ತು 4,000 ರೂ. ಏರಿಕೆಯಾಗಿದೆ.
ಚಿನ್ನ, ಬೆಳ್ಳಿ ಮೇಲಿನ ಹೂಡಿಕೆಯನ್ನು ಬಹುತೇಕರು ಸೇಫ್ ಅಂತಾನೂ ಭಾವಿಸ್ತಾರೆ. ಆದ್ರೆ ಬೆಲೆ ಏರಿಕೆಯಿಂದಾಗಿ ಮಧ್ಯಮ ವರ್ಗದ ಜನರಿಗೆ ಖರೀದಿಸೋದೆ ಕಷ್ಟಸಾಧ್ಯವಾಗಿಬಿಟ್ಟಿದೆ. ಆದ್ದರಿಂದ ಮಾರುಕಟ್ಟೆಯಲ್ಲಿ ದಿನೇ ದಿನೇ ಏರಿಳಿತಗಳು ಆಗುತ್ತಿರುವುದರಿಂದ ಹೂಡಿಕೆದಾರರು, ಖರೀದಿದಾರರು ಬೆಲೆ, ಮಾರುಕಟ್ಟೆ ಬೆಳವಣಿಗೆ ಬಗ್ಗೆ ಸರಿಯಾಗಿ ಗಮನಿಸಿಕೊಂಡು ಹೂಡಿಕೆ ಮಾಡಿದ್ರೆ ಸೂಕ್ತ.


Click it and Unblock the Notifications