ಕಳೆದ ಮೂರ್ನಾಲ್ಕು ದಿನಗಳಿಂದ ಖಷಿಸುದ್ದಿ ಕೇಳಿದ್ದ ಮಹಿಳೆಯರಿಗೆ, ಈಗ ದಿಢೀರ್ ಕಹಿಸುದ್ದಿ ಸಿಕ್ಕಂತಾಗಿದೆ. ಭಾರತದಲ್ಲಿ ಇಂದು ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಕಂಡು ಬಂದಿದೆ. ಶಿವರಾತ್ರಿ ಹಬ್ಬದ ಬಳಿಕ ಮೂರ್ನಾಲ್ಕು ದಿನಗಳ ಕಾಲ ಚಿನ್ನದ ಬೆಲೆಯಲ್ಲಿ ಸ್ವಲ್ಪ ಸ್ವಲ್ಪವೇ ಇಳಿಕೆ ಕಂಡುಬಂದಿತ್ತು. ಬೆಲೆ ಮತ್ತಷ್ಟು ಇಳಿಕೆಯಾಗಬಹುದು ಕಾದು ನೋಡಿ ಚಿನ್ನ ಕೊಳ್ಳೋಣ ಎನ್ನುತ್ತಿದ್ದ ಮಹಿಳೆಯರಿಗೆ ಮತ್ತೆ ಶಾಕ್ ಆಗಿದೆ. ಚಿನ್ನ ಎಂದರೆ ಹೆಣ್ಣು ಮಕ್ಕಳಿಗೆ ಏನೋ ಪ್ರೀತಿ. ಚಿನ್ನವು ಪ್ರತಿಷ್ಠೆಯ ಸಂಕೇತವಾಗಿದ್ದು, ಇದೊಂದು ದೊಡ್ಡ ಸಂಪತ್ತಿಗೆ ಸಮಾನವಾಗಿದೆ. ಇದರ ಬೆಲೆ ದಿನದಿಂದ ದಿನಕ್ಕೆ ಭೂಮಿಗಿಂತ ತೂಕವಾಗುತ್ತಿದ್ದು, ಬೇಡಿಕೆಯಂತೂ ಎಂದೂ ಕಡಿಮೆಯಾಗುವ ಮಾತಿಲ್ಲ ಎನ್ನುವಂತಾಗಿದೆ.

ಸಭೆ-ಸಮಾರಂಭಗಳಲ್ಲಿ ಅತ್ಯಂತ ಆಕರ್ಷಣೀಯವಾಗಿರುವ ಚಿನ್ನಕ್ಕೆ, ಈಗ ಎಲ್ಲಿಲ್ಲದ ಬೇಡಿಕೆ. ಅದರಲ್ಲೂ ಮಹಿಳೆಯರಿಗೆ ಏನೇ ಕೊಟ್ಟರೂ ಚಿನ್ನ ಕೊಟ್ಟಾಗ ಆಗುವ ಖುಷಿ ಮತ್ತೆಲ್ಲೂ ಸಿಗುವುದಿಲ್ಲ. ಅದರಲ್ಲೂ ಇದು ಬೆಲೆ ಜಾಸ್ತಿಯಾಗುತ್ತಿದ್ದು, ಚಿನ್ನವನ್ನೇ ಉಡುಗೊರೆಯಾಗಿ ಕೊಟ್ಟರೆ ಮಹಿಳೆಯರ ಸಂತೋಷ ಆಕಾಶಕ್ಕೆ ಹಾರಿರುತ್ತದೆ. ಇನ್ನು ಭಾರತದಲ್ಲಿ ಚಿನ್ನಕ್ಕೆ ಅದರದ್ದೇ ಆದ ಮಹತ್ವವಿದೆ. ನಮ್ಮ ಸಂಸ್ಕೃತಿಯಲ್ಲಿ ಚಿನ್ನಕ್ಕೆ ಒಂದು ಮಹತ್ವ ನೀಡಲಾಗಿದೆ. ಇದರ ಬೆಲೆ ಎಷ್ಟೇ ಹೆಚ್ಚಾದರೂ ಇದರ ಮೇಲಿನ ಪ್ರೀತಿ ಕಡಿಮೆಯಾಗುವುದಿಲ್ಲ. ಹಾಗಾದರೆ ಭಾರತದಲ್ಲಿ ಇಂದು ಚಿನ್ನದ ಬೆಲೆ ಎಷ್ಟಿದೆ ಎಂದು ನೋಡೋಣ ಬನ್ನಿ.
ಭಾರತದಲ್ಲಿ ಇಂದಿನ ಚಿನ್ನದ ಬೆಲೆ
22 ಕ್ಯಾರಟ್ ಚಿನ್ನದ ಬೆಲೆ
ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿಇಂದಿನ ಚಿನ್ನದ ಬೆಲೆ ಏರಿಕೆಯಾಗಿದೆ, 22 ಕ್ಯಾರಟ್‌ನ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,010 ಇದೆ. ಅಂದರೆ ನಿನ್ನೆ ₹7,940 ಆಗಿದ್ದು ಇಂದು ₹70 ಹೆಚ್ಚಳವಾಗಿದೆ. 22 ಕ್ಯಾರಟ್‌ನ ಚಿನ್ನದ ಬೆಲೆ 10 ಗ್ರಾಂಗೆ 80 ಸಾವಿರದ 100 ರೂ. ಇದೆ. ಅಂದರೆ ನಿನ್ನೆ 79 ಸಾವಿರದ 400 ರೂ. ಆಗಿದ್ದು ಇಂದು ₹700 ಹೆಚ್ಚಳವಾಗಿದೆ. ಹಾಗೆಯೇ 22 ಕ್ಯಾರಟ್‌ನ ಚಿನ್ನದ ಬೆಲೆ 100 ಗ್ರಾಂಗೆ 8 ಲಕ್ಷದ 1 ಸಾವಿರ ರೂ. ಆಗಿದೆ. ಅಂದರೆ ನಿನ್ನೆ 7 ಲಕ್ಷ 94 ಸಾವಿರ ರೂ. ಆಗಿದ್ದು ಇಂದು ₹7,000 ಹೆಚ್ಚಳವಾಗಿದೆ.
24 ಕ್ಯಾರಟ್ ಚಿನ್ನದ ಬೆಲೆ
24 ಕ್ಯಾರಟ್‌ನ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,738 ಇದೆ. ಅಂದರೆ ನಿನ್ನೆಯ ಬೆಲೆ ₹8,662 ಆಗಿದ್ದು ಇಂದು ಪ್ರತಿ ಗ್ರಾಂಗೆ ₹76 ಏರಿಕೆಯಾಗಿದೆ. 24 ಕ್ಯಾರಟ್‌ನ ಚಿನ್ನದ ಬೆಲೆ 10 ಗ್ರಾಂಗೆ 87 ಸಾವಿರದ 380 ರೂ. ಇದೆ. ಅಂದರೆ ನಿನ್ನೆಯ ಬೆಲೆ 86 ಸಾವಿರದ 620 ರೂ. ಆಗಿದ್ದು ಇಂದು ಪ್ರತಿ ಗ್ರಾಂಗೆ ₹760 ಏರಿಕೆಯಾಗಿದೆ. ಹಾಗೆಯೇ 24 ಕ್ಯಾರಟ್‌ನ ಚಿನ್ನದ ಬೆಲೆ 100 ಗ್ರಾಂಗೆ 8 ಲಕ್ಷ 73 ಸಾವಿರದ 800 ರೂ. ಆಗಿದೆ. ಅಂದರೆ ನಿನ್ನೆಯ ಬೆಲೆ 8 ಲಕ್ಷದ 66 ಸಾವಿರದ 200 ರೂ. ಆಗಿದ್ದು ಇಂದು ₹7,600 ಏರಿಕೆಯಾಗಿದೆ.
18 ಕ್ಯಾರಟ್ ಚಿನ್ನದ ಬೆಲೆ
18 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹6,554 ಇದೆ. ಅಂದರೆ ನಿನ್ನೆಯ ಬೆಲೆ ₹6,497 ಆಗಿದ್ದು ಇಂದು ಪ್ರತಿ ಗ್ರಾಂಗೆ ₹57 ಏರಿಕೆಯಾಗಿದೆ. 18 ಕ್ಯಾರಟ್‌ನ ಚಿನ್ನದ ಬೆಲೆ 10 ಗ್ರಾಂಗೆ 65 ಸಾವಿರದ 540 ರೂ. ಇದೆ. ಅಂದರೆ ನಿನ್ನೆಯ ಬೆಲೆ 64 ಸಾವಿರದ 970 ರೂ. ಆಗಿದ್ದು ಇಂದು ಪ್ರತಿ ಗ್ರಾಂಗೆ ₹570 ಏರಿಕೆಯಾಗಿದೆ. ಹಾಗೆಯೇ ಕ್ಯಾರಟ್‌ನ ಚಿನ್ನದ ಬೆಲೆ 100 ಗ್ರಾಂಗೆ 6 ಲಕ್ಷ 55 ಸಾವಿರದ 400 ರೂ. ಆಗಿದೆ. ಅಂದರೆ ನಿನ್ನೆಯ ಬೆಲೆ 6 ಲಕ್ಷದ 49 ಸಾವಿರದ 700 ರೂ. ಆಗಿದ್ದು ಇಂದು ₹5,700 ಏರಿಕೆಯಾಗಿದೆ. ಈ ರೀತಿಯ ಚಿನ್ನದ ಬೆಲೆ ಏರಿಕೆಯಿಂದ ಮಹಿಳೆಯರಿಗೆ ಕಹಿಸುದ್ದಿ ಸಿಕ್ಕಂತಾಗಿದೆ.
ವಿವಿಧ ನಗರಗಳಲ್ಲಿ ಚಿನ್ನದ ಬೆಲೆ
ನಗರ 22K ಚಿನ್ನ 24K ಚಿನ್ನ 18K ಚಿನ್ನ
ಚೆನೈ ₹8,010 ₹8,738 ₹6,600
ಮುಂಬೈ ₹8,010 ₹8,738 ₹6,554
ದೆಹಲಿ ₹8,025 ₹8,753 ₹6,566
ಕೋಲ್ಕತಾ ₹8,010 ₹8,738 ₹6,554
ಬೆಂಗಳೂರು ₹8,010 ₹8,738 ₹6,554
ಹೈದರಾಬಾದ್ ₹8,010 ₹8,738 ₹6,554
ಕೇರಳ ₹8,010 ₹8,738 ₹6,554
ಪುಣೆ ₹8,010 ₹8,738 ₹6,554
ಬರೋಡಾ ₹8,015 ₹8,743 ₹6,558
ಅಹಮದಾಬಾದ್ ₹8,015 ₹8,743 ₹6,558
ಭಾರತದಲ್ಲಿ ಇಂದು ಬೆಳ್ಳಿ ಬೆಲೆ:
ಭಾರತದಲ್ಲಿ ಇಂದು ಬೆಳ್ಳಿ ಬೆಲೆಯೂ ಏರಿಕೆಯಾಗಿದೆ. 1 ಗ್ರಾಂ ಬೆಳ್ಳಿ ದರ ₹98 ಆಗಿದೆ. ನಿನ್ನೆ ಈ ದರ ₹97 ಆಗಿದ್ದು ಇಂದು ₹1 ಹೆಚ್ಚಳವಾಗಿದೆ. 10 ಗ್ರಾಂ ಬೆಳ್ಳಿ ದರ ₹980 ಆಗಿದೆ. ನಿನ್ನೆ ಈ ದರ ₹970 ಆಗಿದ್ದು ಇಂದು ₹10 ಹೆಚ್ಚಳವಾಗಿದೆ. ಮತ್ತು 100 ಗ್ರಾಂ ಬೆಳ್ಳಿ ದರ ₹9,800 ಆಗಿದೆ. ನಿನ್ನೆ ಈ ದರ ₹9,700 ಆಗಿದ್ದು ಇಂದು ₹100 ಹೆಚ್ಚಳವಾಗಿದೆ. ಹಾಗೆಯೇ ಒಂದು ಕೆ.ಜಿ ಬೆಳ್ಳಿ ದರ ಇಂದು ₹98,000 ಆಗಿದೆ. ನಿನ್ನೆ ಈ ದರ ₹97,000 ಆಗಿದ್ದು ಇಂದು ಒಂದು ಕೆ.ಜಿ ಬೆಳ್ಳಿಗೆ ₹1,000 ಹೆಚ್ಚಾಗಿದೆ. ಇಂದು ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಚಿನ್ನದ ಜೊತೆ ಬೆಳ್ಳಿ ಬೆಲೆಯೂ ಏರಿಕೆಯಾದಂತಾಗಿದೆ.
ಸ್ಪಾಟ್ ಗೋಲ್ಡ್ ವಿವರ:
ರಾಯಿಟರ್ಸ್ ವರದಿ ಪ್ರಕಾರ ಇಂದು ಸ್ಪಾಟ್ ಗೋಲ್ಡ್ ಬೆಲೆ 0.3% ಕಡಿಮೆಯಾಗಿದ್ದು, $2,885.40 ಪ್ರತಿ ಔನ್ಸ್ ವ್ಯವಹಾರ ನಡೆದಿದೆ. ಯುಎಸ್ ಗೋಲ್ಡ್ ಫ್ಯೂಚರ್ಸ್ 0300 GMT ಸಮಯಕ್ಕೆ, 0.2% ಇಳಿದು $2,895.40 ಆಗಿದೆ. ಇಂದು ಸ್ಪಾಟ್ ಗೋಲ್ಡ್ ವಿವರ ಹೀಗಿದೆ ಎನ್ನಲಾಗುತ್ತಿದೆ.


Click it and Unblock the Notifications