ಗುಡ್ ನ್ಯೂಸ್, ಗುಡ್ ನ್ಯೂಸ್.. ಚಿನ್ನ ಪ್ರಿಯರಿಗೆ ಗುಡ್ ನ್ಯೂಸ್. ಬೆಲೆ ಏರಿಕೆಯಿಂದ ಚಿಂತೆ ಮಾಡುತ್ತಿದ್ದ ಗ್ರಾಹಕರು ಕೊನೆಗೂ ನಿಟ್ಟುಸಿರು ಬಿಡುವಂತಾಗಿದೆ. ಭಾರತದಲ್ಲಿ ಚಿನ್ನದ ಬೆಲೆ (Gold Rate India) ಏರಿಕೆಯಿಂದ ಮಾರುಕಟ್ಟೆಯಲ್ಲಿ ಗ್ರಾಹಕರ ಸಂಖ್ಯೆ ಕಡಿಮೆಯಾಗಿತ್ತು. ಆದ್ರೆ ಇದೀಗ ಮತ್ತೆ ಚಿನ್ನದ ಮಾರುಕಟ್ಟೆಗಳಿಗೆ ಬೇಡಿಕೆ ಹೆಚ್ಚಾಗುವ ನಿರೀಕ್ಷೆಯಿದೆ. ಏಕೆಂದರೆ ದಿನೇ ದಿನೇ ಏರಿಕೆ ಕಾಣುತ್ತಿದ್ದ ಚಿನ್ನದ ಬೆಲೆ, ಕಳೆದೆರಡು ದಿನಗಳಿಂದ ಇಳಿಕೆ ಕಂಡಿದೆ. ಹಾಗಿದ್ರೆ ಇಂದು (ಅ.23) ಚಿನ್ನದ ಬೆಲೆ ಎಷ್ಟು ಇಳಿಕೆಯಾಗಿದೆ ಗೊತ್ತಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಭಾರತದಲ್ಲಿ ಇಂದಿನ 24K ಚಿನ್ನದ ಬೆಲೆ:
ದೀಪಾವಳಿ ಹಬ್ಬದ ಸಂದರ್ಭದಲ್ಲೇ ಚಿನ್ನದ ಬೆಲೆ ಭಾರೀ ಇಳಿಕೆಯಾಗಿದೆ. ಚಿನ್ನ ಖರೀದಿಸುವವರಿಗೆ ಇದು ಬೆಸ್ಟ್ ಟೈಂ. ದೀಪಾವಳಿಯಲ್ಲಿ ಚಿನ್ನದ ಬೆಲೆ ಇಳಿಕೆಯಾಗಿದ್ದು, 24 ಕ್ಯಾರೆಟ್ ಚಿನ್ನದ ಒಂದು ಗ್ರಾಂ ಬೆಲೆ ನಿನ್ನೆಗಿಂತ ಇಂದು 81 ರೂ. ಇಳಿಕೆಯಾಗಿದೆ. ಅಂದರೆ ಪ್ರತೀ ಗ್ರಾಂ ಬೆಲೆ 12,508 ರೂ. ಆಗಿದೆ. ಇನ್ನು 8 ಗ್ರಾಂ ಚಿನ್ನದ ಬೆಲೆ 1,00,064 ರೂ. ಆಗಿದ್ದು, ನಿನ್ನೆ 1,00,712 ರೂ ಇತ್ತು. ಈ ಮೂಲಕ ಒಂದೇ ದಿನದಲ್ಲಿ ₹648 ರೂ.ನಷ್ಟು ಇಳಿಕೆಯಾಗಿದೆ. ಅದೇ ರೀತಿ 10 ಚಿನ್ನದ ಬೆಲೆ 1,25,080 ರೂಪಾಯಿ ಆಗಿದ್ದು, ₹810 ರೂ.ನಷ್ಟು ದಿಢೀರ್ ಇಳಿಕೆಯಾಗಿದೆ. 100 ಚಿನ್ನದ ಬೆಲೆಯಲ್ಲೂ ಏರಿಕೆಯಾಗಿದ್ದು, ಇಂದು 12,50,800 ರೂ. ಆಗಿದ್ದು, ನಿನ್ನೆ 12,58,900 ರೂ. ಇತ್ತು. ಒಟ್ಟು 8,100 ರೂ. ಇಳಿಕೆಯಾಗಿದೆ.
ಭಾರತದಲ್ಲಿ 22K ಚಿನ್ನದ ಬೆಲೆ:
22K ಚಿನ್ನದ ಬೆಲೆ ಇಂದು 11,465 ರೂ. ಆಗಿದ್ದು, ನಿನ್ನೆ 11,540 ರೂ. ಇತ್ತು. ಒಂದೇ ದಿನದಲ್ಲಿ ಪ್ರತೀ ಗ್ರಾಂ ಬೆಲೆಯಲ್ಲಿ ದಿಢೀರ್ ಅಂತ ₹75 ರೂ. ಇಳಿಕೆಯಾಗಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ 91,720 ರೂಪಾಯಿ ಆಗಿದ್ದು, ನಿನ್ನೆ 92,320 ರೂ. ಇತ್ತು. ನಿನ್ನೆಗಿಂತ ಇಂದು 600 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,14,650 ರೂ. ಇದ್ದು, ನಿನ್ನೆ 1,15,400 ರೂ ಇತ್ತು. ಹಾಗೆಯೇ 100 ಗ್ರಾಂ ಚಿನ್ನದ ಬೆಲೆಯಲ್ಲೂ ಒಟ್ಟು 7,500 ರೂ.ನಷ್ಟು ಭಾರೀ ಇಳಿಕೆಯಾಗಿದ್ದು, ಒಟ್ಟು ಬೆಲೆ 11,46,500 ರೂ. ಆಗಿದೆ.
ಭಾರತದಲ್ಲಿ 18K ಚಿನ್ನದ ಬೆಲೆ:
18K ಚಿನ್ನದ ಬೆಲೆ ಇಂದು ಭಾರೀ ಇಳಿಕೆಯಾಗಿದ್ದು 1 ಗ್ರಾಂ ಬೆಲೆ ಇಂದು 9,381 ರೂಪಾಯಿ ಆಗಿದ್ದು, ನಿನ್ನೆ 9,442 ರೂ. ಇತ್ತು. ಅಂದರೆ ಒಂದೇ ದಿನದಲ್ಲಿ 61 ರೂ.ನಷ್ಟು ಇಳಿಕೆಯಾಗಿದೆ. 8 ಗ್ರಾಂ ಚಿನ್ನದ ಬೆಲೆ ಕೂಡಾ ಇಂದು 75,048 ರೂ. ಆಗಿದ್ದು, ನಿನ್ನೆ 75,536 ರೂ. ಇತ್ತು. ಈ ಮೂಲಕ ಒಟ್ಟು 488 ರೂ. ಇಳಿಕೆಯಾಗಿದೆ. 10 ಚಿನ್ನದ ಬೆಲೆಯೂ ಇಂದು ಇಳಿಕೆಯಾಗಿದ್ದು, ₹93,810 ರೂ. ಆಗಿದೆ. ನಿನ್ನೆ ಹತ್ತು ಗ್ರಾಂ ಚಿನ್ನದ ಬೆಲೆ 94,420 ರೂ. ಇತ್ತು. ಅದೇ ರೀತಿ 100 ಚಿನ್ನದ ಬೆಲೆ ಇಂದು 9,44,200 ರೂ. ಆಗಿದೆ.
ಭಾರತದ ವಿವಿಧ ನಗರಗಳ ಚಿನ್ನದ ಬೆಲೆ ಇಂದು ಹೇಗಿದೆ?
ಚೆನ್ನೈ: 24K ರೂ. 12,546, 22K ರೂ. 11,500, 18K ರೂ. 9,650
ಮುಂಬೈ: 24K ರೂ. 12,508, 22K ರೂ. 11,465, 18K ರೂ. 9,381
ದೆಹಲಿ: 24K ರೂ. 12,603, 22K ರೂ. 11,480, 18K ರೂ. 9,456
ಕೋಲ್ಕತ್ತಾ: 24K ರೂ. 12,508, 22K ರೂ. 11,465, 18K ರೂ. 9,381
ಬೆಂಗಳೂರು: 24K ರೂ. 12,508, 22K ರೂ. 11,465, 18K ರೂ. 9,381
ಹೈದರಾಬಾದ್: 24K ರೂ. 12,508, 22K ರೂ. 11,465, 18K ರೂ. 9,381
ಕೇರಳ: 24K ರೂ. 12,508, 22K ರೂ. 11,465, 18K ರೂ. 9,381
ಪುಣೆ: 24K ರೂ. 12,508, 22K ರೂ. 11,465, 18K ರೂ. 9,381
ವಡೋದರಾ: 24K ರೂ. 12,513, 22K ರೂ. 11,470, 18K ರೂ. 9,386
ಅಹಮದಾಬಾದ್: 24K ರೂ. 12,513, 22K ರೂ. 11,470, 18K ರೂ. 9,386
ಸ್ಪಾಟ್ ವಿವರ:
ಗುರುವಾರ ಚಿನ್ನದ ಬೆಲೆ ಭಾರೀ ಇಳಿಕೆಯಾಗಿದ್ದು, ಡಾಲರ್ ಮೌಲ್ಯ ಏರಿಳಿತಗಳಿಂದ, ಬಡ್ಡಿದರದ ಹಾದಿಯಲ್ಲಿ ಹೆಚ್ಚಿನ ಸೂಚನೆಗಳಿಗಾಗಿ ಹೂಡಿಕೆದಾರರು ಈ ವಾರದ ಕೊನೆಯಲ್ಲಿ ಅಮೆರಿಕದ ಪ್ರಮುಖ ಹಣದುಬ್ಬರ ದತ್ತಾಂಶಕ್ಕಾಗಿ ಹೆಚ್ಚಿನವರು ಕಾದು ಕುಳಿತಿದ್ದರು.
0502 GMT ರಂತೆ ಸ್ಪಾಟ್ ಚಿನ್ನವು ಔನ್ಸ್‌ಗೆ 0.1% ಇಳಿಕೆಯಾಗಿ $4,089.21 ಕ್ಕೆ ತಲುಪಿತು.
ಬೆಳ್ಳಿ ಬೆಲೆ ಹೇಗಿದೆ?
ಇಂದು ಚಿನ್ನ, ಬೆಳ್ಳಿ ಖರೀದಿದಾರರಿಗೆ ಗುಡ್ ನ್ಯೂಸ್ ಸಿಕ್ಕಂತಾಗಿದೆ. ಬೆಳ್ಳಿ ಬೆಲೆಯಲ್ಲಿ ಕಳೆದ ಮೂರು ದಿನಗಳಿಂದ ಇಳಿಕೆ ಕಾಣುತ್ತಲೇ ಇದೆ. ಇಂದು 1 ಗ್ರಾಂ ಬೆಳ್ಳಿ ಬೆಲೆ 159 ರೂ. ಆಗಿದ್ದು, ನಿನ್ನೆ ₹160 ರೂ. ಬೆಲೆ ಇತ್ತು. ಇನ್ನು 8 ಗ್ರಾಂ ಬೆಳ್ಳಿ ಬೆಲೆ 1,272 ರೂಪಾಯಿಯಾಗಿದ್ದು, ನಿನ್ನೆ 1,280 ರೂ. ಇತ್ತು. 10 ಗ್ರಾಂ ಬೆಳ್ಳಿ ದರ ಇಂದು 1,590 ರೂ. ಆಗಿದೆ. ನಿನ್ನೆಗೆ ಹೋಲಿಸಿದ್ರೆ ಇಂದು ಹತ್ತು ಗ್ರಾಂ ಬೆಳ್ಳಿಯಲ್ಲಿ ₹10 ರೂ.ನಷ್ಟು ಇಳಿಕೆಯಾಗಿದೆ. ಅದೇ ರೀತಿ 100 ಗ್ರಾಂ ಬೆಳ್ಳಿಯ ಬೆಲೆ 15,900 ರೂ. ಆಗಿದ್ದು, ನೂರು ರೂಪಾಯಿಯಷ್ಟು ಇಂದು ಇಳಿಕೆಯಾಗಿದೆ.
More From GoodReturns

Bengaluru Gold: ಬೆಂಗಳೂರಿನ ಚಿನ್ನ ಪ್ರಿಯರಿಗೆ ಶಾಕ್; ದಿಢೀರ್ 7000 ರೂ. ಏರಿಕೆ ಕಂಡ ಬಂಗಾರ

Gold Price Bengaluru: ಚಿನ್ನಪ್ರಿಯರಿಗೆ ಇಂದು ‘ಶುಕ್ರದೆಸೆ’…ಬಂಗಾರದ ದರದಲ್ಲಿ 7,700 ರೂ. ಕುಸಿತ!

Gold Rate: ಚಿನ್ನ ಕೊಳ್ಳುವವರಿಗೆ ‘ಗುರುದೆಸೆ’…ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ 9,800 ರೂ. ಕುಸಿತ!

Gold Rate Today: ಚಿನ್ನದ ಬೆಲೆ ದಿಢೀರ್ ಏರಿಕೆ; ಒಂದೇ ದಿನ 7,000 ರೂ. ಹೆಚ್ಚಳ

Gold Rate Today: ವಾರದ ಆರಂಭದಲ್ಲಿ ಚಿನ್ನದ ಬೆಲೆ ಭಾರೀ ಇಳಿಕೆ; ದಿಢೀರ್ 1,960 ರೂ. ಕುಸಿತ

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

Gold Price India: ದಿಢೀರ್ ಏರಿಕೆ ಹಾದಿಯನ್ನೇ ಅನುಸರಿಸಿದ ಚಿನ್ನದ ಬೆಲೆ…25,100 ರೂ. ಏರಿಕೆ!

Gold Rate Today: ಭಾರತದಲ್ಲಿ ಚಿನ್ನದ ಬೆಲೆ ಭರ್ಜರಿ ಕುಸಿತ! ದಿಢೀರ್ 9,800 ರೂ. ಇಳಿಕೆ

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Gold Rate Down: ಚಿನ್ನ ಪ್ರಿಯರಿಗೆ ಜಾಕ್ಪಾಟ್! ದಿಢೀರ್ 3,110 ರೂ. ಇಳಿಕೆ



Click it and Unblock the Notifications