ದೀಪಾವಳಿಯಲ್ಲಿ ಚಿನ್ನ ಖರೀದಿಸಬೇಕೆಂದುಕೊಂಡವರಿಗೆ (Gold Rate) ಗುಡ್ ನ್ಯೂಸ್ ಸಿಕ್ಕಿದೆ. ಅತ್ತ ದಿನೇ ದಿನೇ ಏರಿಕೆ ಕಾಣುತ್ತಿದ್ದ ಭಾರತದಲ್ಲಿ ಚಿನ್ನದ ಬೆಲೆ, ಇತ್ತೀಚೆಗೆ ಭಾರೀ ಇಳಿಕೆ ಕಂಡಿದೆ. ಧನ್ತೇರಸ್ ಹಬ್ಬದ ನಂತರ ಚಿನ್ನ ಖರೀದಿದಾರರಿಗೆ ಒಳ್ಳೆಯ ಸಮಯ ಬಂದಾಗಿದೆ. ಚಿನ್ನದ ಖರೀದಿ (Gold Buying) ಮಾಡುವವರಿಗೆ ಇದ್ದಕ್ಕಿಂತ ಬೆಸ್ಟ್ ಟೈಂ ಮತ್ತೊಂದಿಲ್ಲ ಎಂಬಂತಾಗಿದೆ. ಕಾರಣ ಗ್ರಾಂಗೆ 300ಕ್ಕೂ ಅಧಿಕ ರೂಪಾಯಿ ಕಡಿಮೆಯಾಗಿದೆ.

ಭಾರತದಲ್ಲಿ ಇಂದಿನ 24K ಚಿನ್ನದ ಬೆಲೆ:
ಧನ್ತೇರಸ್ ನಂತರ ಚಿನ್ನ ಖರೀದಿದಾರರಿಗೆ ಸಿಹಿತಿಂಡಿ ತಿನ್ನುವಂತಾಗಿದೆ. ಕಾರಣ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ದೀಪಾವಳಿಯಲ್ಲಿ ಚಿನ್ನದ ಬೆಲೆ ಇಳಿಕೆಯಾಗಿದ್ದು, 24 ಕ್ಯಾರೆಟ್ ಚಿನ್ನದ ಒಂದು ಗ್ರಾಂ ಬೆಲೆ ನಿನ್ನೆಗಿಂತ ಇಂದು 469 ರೂ. ಇಳಿಕೆಯಾಗಿದೆ. ಅಂದರೆ ಪ್ರತೀ ಗ್ರಾಂ ಬೆಲೆ 12,589 ರೂ. ಆಗಿದೆ. ಇನ್ನು 8 ಗ್ರಾಂ ಚಿನ್ನದ ಬೆಲೆ 1,00,712 ರೂ. ಆಗಿದ್ದು, ನಿನ್ನೆ 1,04,464 ರೂ ಇತ್ತು. ಈ ಮೂಲಕ ಒಂದೇ ದಿನದಲ್ಲಿ 3,752 ರೂ.ನಷ್ಟು ಇಳಿಕೆಯಾಗಿದೆ. ಅದೇ ರೀತಿ 10 ಚಿನ್ನದ ಬೆಲೆ 1,25,890 ರೂಪಾಯಿ ಆಗಿದ್ದು, 4,690 ರೂ.ನಷ್ಟು ದಿಢೀರ್ ಇಳಿಕೆಯಾಗಿದೆ. 100 ಚಿನ್ನದ ಬೆಲೆಯಲ್ಲೂ ಏರಿಕೆಯಾಗಿದ್ದು, ಇಂದು 12,58,900 ರೂ. ಆಗಿದ್ದು, ನಿನ್ನೆ 13,05,800 ರೂ. ಇತ್ತು. ಒಟ್ಟು 46,900 ರೂ. ಇಳಿಕೆಯಾಗಿದೆ.
ಭಾರತದಲ್ಲಿ 22K ಚಿನ್ನದ ಬೆಲೆ:
22K ಚಿನ್ನದ ಬೆಲೆ ಇಂದು 11,540 ರೂ. ಆಗಿದ್ದು, ನಿನ್ನೆ 11,970 ರೂ. ಇತ್ತು. ಒಂದೇ ದಿನದಲ್ಲಿ ಪ್ರತೀ ಗ್ರಾಂ ಬೆಲೆಯಲ್ಲಿ ದಿಢೀರ್ ಅಂತ ₹430 ರೂ. ಇಳಿಕೆಯಾಗಿದೆ. ಹಾಗೆಯೇ ದೀಪಾವಳಿಯ ಮೂರನೇ ದಿನ 8 ಗ್ರಾಂ ಚಿನ್ನದ ಬೆಲೆ 95,760 ರೂಪಾಯಿ ಆಗಿದ್ದು, ನಿನ್ನೆ 95,760 ರೂ. ಇತ್ತು. ನಿನ್ನೆಗಿಂತ ಇಂದು 3,440 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,15,400 ರೂ. ಇದ್ದು, ನಿನ್ನೆ 1,19,700 ರೂ ಇತ್ತು. ಅದೇ ರೀತಿ 100 ಗ್ರಾಂ ಚಿನ್ನದ ಬೆಲೆಯಲ್ಲೂ ಒಟ್ಟು 43,000 ರೂ.ನಷ್ಟು ಭಾರೀ ಇಳಿಕೆಯಾಗಿದ್ದು, ಒಟ್ಟು ಬೆಲೆ 11,97,000 ರೂ. ಆಗಿದೆ.
ಭಾರತದಲ್ಲಿ 18K ಚಿನ್ನದ ಬೆಲೆ:
18K ಚಿನ್ನದ ಬೆಲೆ ಇಂದು ಭಾರೀ ಇಳಿಕೆಯಾಗಿದ್ದು 1 ಗ್ರಾಂ ಬೆಲೆ ಇಂದು 9,442 ರೂಪಾಯಿ ಆಗಿದ್ದು, ನಿನ್ನೆ 9,794 ರೂ. ಇತ್ತು. ಅಂದರೆ ಒಂದೇ ದಿನದಲ್ಲಿ 352 ರೂ.ನಷ್ಟು ಇಳಿಕೆಯಾಗಿದೆ. 8 ಗ್ರಾಂ ಚಿನ್ನದ ಬೆಲೆ ಕೂಡಾ ಇಂದು 78,352 ರೂ. ಆಗಿದ್ದು, ನಿನ್ನೆ 78,352 ರೂ. ಇತ್ತು. ಈ ಮೂಲಕ ಒಟ್ಟು 2,816 ರೂ. ಇಳಿಕೆಯಾಗಿದೆ. 10 ಚಿನ್ನದ ಬೆಲೆಯೂ ಇಂದು ಇಳಿಕೆಯಾಗಿದ್ದು, 94,420 ರೂ. ಆಗಿದ್ದು, 100 ಚಿನ್ನದ ಬೆಲೆ ಇಂದು 9,44,200 ರೂ. ಆಗಿದೆ.
ಭಾರತದ ವಿವಿಧ ನಗರಗಳ ಚಿನ್ನದ ಬೆಲೆ ಇಂದು ಹೇಗಿದೆ?
ಚೆನ್ನೈ: 24K ರೂ. 12,589, 22K ರೂ. 11,540, 18K ರೂ. 9,700
ಮುಂಬೈ: 24K ರೂ. 12,589, 22K ರೂ. 11,540, 18K ರೂ. 9,700
ದೆಹಲಿ: 24K ರೂ. 12,604, 22K ರೂ. 11,555, 18K ರೂ. 9,457
ಕೋಲ್ಕತ್ತಾ: 24K ರೂ. 12,589, 22K ರೂ. 11,540, 18K ರೂ. 9,442
ಬೆಂಗಳೂರು: 24K ರೂ. 12,589, 22K ರೂ. 11,540, 18K ರೂ. 9,442
ಹೈದರಾಬಾದ್: 24K ರೂ. 12,589, 22K ರೂ. 11,540, 18K ರೂ. 9,442
ಕೇರಳ: 24K ರೂ. 12,589, 22K ರೂ. 11,540, 18K ರೂ. 9,442
ಪುಣೆ: 24K ರೂ. 12,589, 22K ರೂ. 11,540, 18K ರೂ. 9,442
ವಡೋದರಾ: 24K ರೂ. 12,594, 22K ರೂ. 11,545, 18K ರೂ. 9,447
ಅಹಮದಾಬಾದ್: 24K ರೂ. 12,594, 22K ರೂ. 11,545, 18K ರೂ. 9,44
ಸ್ಪಾಟ್ ವಿವರ:
ರಾಯಿಟರ್ಸ್ ವರದಿ ಪ್ರಕಾರ, ಅಕ್ಟೋಬರ್ 22 ರಂದು ಅಮೆರಿಕ-ಚೀನಾ ವ್ಯಾಪಾರ ಉದ್ವಿಗ್ನತೆ ಕಡಿಮೆಯಾಗುವ ಲಕ್ಷಣಗಳಿಂದಾಗಿ ಮತ್ತು ಈ ವಾರದ ಕೊನೆಯಲ್ಲಿ ಬಿಡುಗಡೆಯಾಗಲಿರುವ ಅಮೆರಿಕದ ಹಣದುಬ್ಬರ ದತ್ತಾಂಶಕ್ಕಾಗಿ ಕಾಯುತ್ತಿರುವಾಗ ಹೂಡಿಕೆದಾರರು ಇತ್ತೀಚಿನ ದಾಖಲೆಯ ಏರಿಕೆಯ ಲಾಭವನ್ನು ಪಡೆದುಕೊಂಡಿದ್ದರಿಂದ ಬುಧವಾರ ಚಿನ್ನದ ಬೆಲೆಗಳು ಮತ್ತಷ್ಟು ಇಳಿಕೆಯಾದವು.
GMT 0236 ರ ಹೊತ್ತಿಗೆ ಸ್ಪಾಟ್ ಚಿನ್ನವು ಪ್ರತಿ ಔನ್ಸ್‌ಗೆ 0.4% ರಷ್ಟು ಕುಸಿದು $4,109.19 ಕ್ಕೆ ತಲುಪಿದೆ. ಆಗಸ್ಟ್ 2020 ರ ನಂತರದ ಅತ್ಯಂತ ಕಡಿದಾದ ಕುಸಿತದಲ್ಲಿ ಮಂಗಳವಾರ ಬುಲಿಯನ್ 5% ಕ್ಕಿಂತ ಹೆಚ್ಚು ಕುಸಿದಿದೆ.
ಬೆಳ್ಳಿ ಬೆಲೆ ಹೇಗಿದೆ?
ಇಂದು ಚಿನ್ನ, ಬೆಳ್ಳಿ ಖರೀದಿದಾರರಿಗೆ ಗುಡ್ ನ್ಯೂಸ್ ಕೊಟ್ಟಿದೆ. ಬೆಳ್ಳಿ ಬೆಲೆಯಲ್ಲಿ ಇಂದು ನಿನ್ನೆಗಿಂತಲೂ ಭಾರೀ ಇಳಿಕೆಯಾಗಿದ್ದು, ಇಂದು 1 ಗ್ರಾಂ ಬೆಳ್ಳಿ ಬೆಲೆ ₹160 ರೂ. ಆಗಿದ್ದು, ನಿನ್ನೆ 164 ರೂ. ಬೆಲೆ ಇತ್ತು. ಇನ್ನು 8 ಗ್ರಾಂ ಬೆಳ್ಳಿ ಬೆಲೆ 1,280 ರೂಪಾಯಿಯಾಗಿದ್ದು, ನಿನ್ನೆ 1,312 ರೂ. ಇತ್ತು. 10 ಗ್ರಾಂ ಬೆಳ್ಳಿ ದರ ಇಂದು 1,600 ರೂ. ಆಗಿದೆ. ನಿನ್ನೆಗೆ ಹೋಲಿಸಿದ್ರೆ ಇಂದು ಹತ್ತು ಗ್ರಾಂ ಬೆಳ್ಳಿಯಲ್ಲಿ 40 ರೂ.ನಷ್ಟು ಇಳಿಕೆಯಾಗಿದೆ. ಅದೇ ರೀತಿ 100 ಗ್ರಾಂ ಬೆಳ್ಳಿಯ ಬೆಲೆ 16,000 ರೂ. ಆಗಿದೆ.
ಚಿನ್ನ, ಬೆಳ್ಳಿ ಖರೀದಿಸುವವರಿಗೆ ಇದು ಸೂಕ್ತ ಸಮಯ. ಆದರೆ ಕೆಲವೊಮ್ಮೆ ಮಾರುಕಟ್ಟೆಯಲ್ಲಿ ಏರಿಳಿತಗಳಾಗುತ್ತಿರುತ್ತದೆ. ಆದ್ದರಿಂದ ಚಿನ್ನ ಖರೀದಿ ಮಾಡುವವರು ಮಾರುಕಟ್ಟೆ ಏರಿಳಿತಗಳನ್ನು ಗಮನಿಸುವುದು ಮುಖ್ಯ.
More From GoodReturns

Silver Rate Today: ಭಾರತದಲ್ಲಿ ಸ್ಥಿರವಾದ ಬೆಳ್ಳಿ ದರ; ಎಷ್ಟಿದೆ ಗೊತ್ತಾ ಇಂದಿನ ದರ?

Gold Rate Today: ಆಭರಣ ಪ್ರಿಯರಿಗೆ ಶಾಕ್; ಚಿನ್ನದ ಬೆಲೆ ದಿಢೀರ್ 8,500 ರೂ. ಏರಿಕೆ

Bengaluru Gold: ಬೆಂಗಳೂರಿನ ಚಿನ್ನ ಪ್ರಿಯರಿಗೆ ಶಾಕ್; ದಿಢೀರ್ 7000 ರೂ. ಏರಿಕೆ ಕಂಡ ಬಂಗಾರ

Gold Rate Today: ಚಿನ್ನದ ಬೆಲೆ ದಿಢೀರ್ ಏರಿಕೆ; ಒಂದೇ ದಿನ 7,000 ರೂ. ಹೆಚ್ಚಳ

Gold Prices: ತೈಲ ಬೆಲೆ ಏರಿಕೆ ನಡುವೆಯೂ ಚಿನ್ನದ ಬೆಲೆ ಕುಸಿತ...ಭಾರತದಲ್ಲಿ ಹೂಡಿಕೆದಾರರನ್ನು ಆಘಾತ ನೀಡಿದ ಬೆಳವಣಿಗೆ

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

Gold Rate Today: ಶುಕ್ರವಾರ ಚಿನ್ನ ಪ್ರಿಯರಿಗೆ ಒಲಿದ ಲಕ್ಷ್ಮಿ! 7,000 ರೂ. ಇಳಿಕೆ

Gold Rate Today: ಭಾರತದಲ್ಲಿ ಚಿನ್ನದ ಬೆಲೆ ಭರ್ಜರಿ ಕುಸಿತ! ದಿಢೀರ್ 9,800 ರೂ. ಇಳಿಕೆ

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?



Click it and Unblock the Notifications