ನಿನ್ನೆ ಭಾರತದಲ್ಲಿ ಸ್ಥಿರವಾಗಿದ್ದ ಚಿನ್ನದ ಬೆಲೆ, ಇಂದು ದಿಢೀರ್ ಇಳಿಕೆಯಾಗಿದೆ. ದೀಪಾವಳಿ ನಂತರ ಒಂದೆರಡು ದಿನ ಬಿಟ್ಟು, ಉಳಿದೆಲ್ಲಾ ದಿನಗಳಲ್ಲಿ ಚಿನ್ನದ ಬೆಲೆ ಸ್ವಲ್ಪ ಮಟ್ಟಿಗೆ ಇಳಿಕೆ ಕಂಡಿದೆ. ಇದೀಗ ಇಂದು (ಅ.27) ರಂದು ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ನಿನ್ನೆಗೆ ಹೋಲಿಸಿದ್ರೆ ಚಿನ್ನದ ಬೆಲೆಯಲ್ಲಿ ಭಾರೀ ಕಡಿಮೆಯಾಗಿದೆ. ಕೊನೆಗೂ ಚಿನ್ನ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಈ ಮೂಲಕ ಮತ್ತಷ್ಟು ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ.

ಭಾರತದಲ್ಲಿ 22K ಚಿನ್ನದ ಬೆಲೆ:
22K ಚಿನ್ನದ 1 ಗ್ರಾಂ ಬೆಲೆ 11,300 ರೂ. ಆಗಿದ್ದು, ನಿನ್ನೆ ₹11,515 ರೂ. ಇತ್ತು. ಈ ಮೂಲಕ ಒಂದೇ ದಿನ ₹215 ರೂ. ಇಳಿಕೆಯಾಗಿದೆ. ಅದೇ ರೀತಿ 8 ಗ್ರಾಂ ಚಿನ್ನದಲ್ಲೂ ₹1,720 ರೂ. ಇಳಿಕೆಯಾಗಿದ್ದು ಒಟ್ಟು ಬೆಲೆ ₹90,400 ರೂ. ಆಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,13,000 ರೂ ಆಗಿದ್ದು, ನಿನ್ನೆ ₹1,15,150 ರೂ ಇತ್ತು. ಒಟ್ಟು ₹2,150 ರೂ ಇಳಿಕೆಯಾಗಿದೆ. ಹಾಗೆಯೇ 100 ಗ್ರಾಂ ಚಿನ್ನದ ಬೆಲೆ ಇಂದು ₹11,30,000 ರೂ. ಆಗಿದ್ದು, ನಿನ್ನೆ ₹11,51,500 ರೂ. ಇತ್ತು. ಒಟ್ಟು ₹21,500 ರೂ. ಇಳಿಕೆಯಾಗಿದೆ.
ಭಾರತದಲ್ಲಿ 18K ಚಿನ್ನದ ಬೆಲೆ:
24K,22K ಚಿನ್ನಕ್ಕೆ ಹೋಲಿಸಿದ್ರೆ 18K ಚಿನ್ನ ಸ್ವಲ್ಪ ಕಡಿಮೆ ಬೆಲೆಗೆ ಸಿಗುತ್ತದೆ. ಆದ್ರೆ ಇದೀಗ 18K ಚಿನ್ನದಲ್ಲೂ ಭಾರೀ ಇಳಿಕೆಯಾಗಿದೆ. 1 ಗ್ರಾಂ ಚಿನ್ನದ ಬೆಲೆ ಇಂದು ₹9,246 ರೂ. ಆಗಿದ್ದು, ನಿನ್ನೆ ₹9,422 ರೀ. ಇತ್ತು. ಒಂದೇ ದಿನದಲ್ಲಿ 176 ರೂ. ಇಳಿಕೆಯಾಗಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು ₹73,968 ರೂ. ಆಗಿದ್ದು, ನಿನ್ನೆ ₹75,376 ರೂ ಇತ್ತು. ಒಟ್ಟು 1,408 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹2,460 ರೂ. ಆಗಿದ್ದು, ನಿನ್ನೆ ₹94,220 ರೂ ಆಗಿತ್ತು. ಒಂದೇ ದಿನ 1,760 ರೂ.ನಷ್ಟು ಇಳಿಕೆಯಾಗಿದೆ.
ಭಾರತದ ವಿವಿಧ ನಗರಗಳ ಚಿನ್ನದ ಬೆಲೆ ಇಂದು ಹೇಗಿದೆ?
ಚೆನ್ನೈ: 24K ರೂ. 12,491, 22K ರೂ. 11,450, 18K ರೂ. 9,575
ಮುಂಬೈ: 24K ರೂ. 12,328, 22K ರೂ. 11,300, 18K ರೂ. 9,246
ದೆಹಲಿ: 24K ರೂ. 12,343, 22K ರೂ. 11,315, 18K ರೂ. 9,261
ಕೋಲ್ಕತ್ತಾ: 24K ರೂ. 12,328, 22K ರೂ. 11,300, 18K ರೂ. 9,246
ಬೆಂಗಳೂರು: 24K ರೂ. 12,328, 22K ರೂ. 11,300, 18K ರೂ. 9,246
ಹೈದರಾಬಾದ್: 24K ರೂ. 12,328, 22K ರೂ. 11,300, 18K ರೂ. 9,246
ಕೇರಳ: 24K ರೂ. 12,328, 22K ರೂ. 11,300, 18K ರೂ. 9,246
ಪುಣೆ: 24K ರೂ. 12,328, 22K ರೂ. 11,300, 18K ರೂ. 9,246
ವಡೋದರಾ: 24K ರೂ. 12,333, 22K ರೂ. 11,305, 18K ರೂ. 9,251
ಅಹಮದಾಬಾದ್: 24K ರೂ. 12,333, 22K ರೂ. 11,305, 18K ರೂ. 9,251
ಸ್ಪಾಟ್ ಗೋಲ್ಡ್ ವಿವರ:
ಅಕ್ಟೋಬರ್ 27ರ ರಾಯಿಟರ್ಸ್ ವರದಿ ಪ್ರಕಾರ, ಡಾಲರ್ ಮೌಲ್ಯ ಮತ್ತು ಯುಎಸ್ ಮತ್ತು ಚೀನಾ ವ್ಯಾಪಾರ ಸಂಘರ್ಷ ಕಡಿಮೆಯಾಗುತ್ತಿರುವುದರಿಂದ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ ಕಂಡಿದೆ. 0158 GMT ವೇಳೆಗೆ ಸ್ಪಾಟ್ ಚಿನ್ನದ ಬೆಲೆ ಶೇ.0.7 ರಷ್ಟು ಇಳಿಕೆಯಾಗಿದ್ದು, ಪ್ರತಿ ಔನ್ಸ್‌ಗೆ $4,082.77 ಕ್ಕೆ ತಲುಪಿದೆ.
ಬೆಳ್ಳಿ ಬೆಲೆ ಹೇಗಿದೆ?
ಭಾರತದಲ್ಲಿ 1 ಗ್ರಾಂ ಬೆಳ್ಳಿ ಬೆಲೆ ರೂ. ₹155 ಆಗಿದ್ದು, ನಿನ್ನೆನೂ 155 ರೂ. ಇತ್ತು. ಈ ಮೂಲಕ ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. 10 ಗ್ರಾಂ ಬೆಳ್ಳಿ ಬೆಲೆ ಇಂದು ರೂ. 1,550, ನಿನ್ನೆಯೂ ರೂ. 1,550 ಆಗಿತ್ತು. ಅದೇ ರೀತಿ 100 ಗ್ರಾಂ ಬೆಳ್ಳಿ ಬೆಲೆ ಇಂದು ರೂ. 15,500 ಆಗಿದ್ದು, 1 ಕಿಲೋಗ್ರಾಂ ಬೆಳ್ಳಿ ಬೆಲೆ ಇಂದು ರೂ. 1,55,000 ಆಗಿದೆ. ಈ ಮೂಲಕ ಬೆಳ್ಳಿ ಬೆಲೆಯಲ್ಲಿ ಶೂನ್ಯ ಬೆಳವಣಿಯಾಗಿದೆ.
ಚಿನ್ನ, ಬೆಳ್ಳಿ ಮೇಲೆ ಹೂಡಿಕೆ ಮಾಡುವವರಿಗೆ ಇದು ಸೂಕ್ತ ಸಮಯ ಎಂದು ತಜ್ಞರು ಹೇಳುತ್ತಾರೆ. ಏಕೆಂದರೆ ಕೆಲದಿನಗಳ ಹಿಂದಿನ ಬೆಲೆಗೆ ಹೋಲಿಸಿದ್ರೆ, ಇತ್ತೀಚೆಗೆ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಆದ್ರೆ ಮಾರುಕಟ್ಟೆ ಬೆಳವಣಿಗೆಗಳನ್ನು ನೋಡಿಕೊಂಡು ಹೂಡಿಕೆ ಮಾಡಿದ್ರೆ ಉತ್ತಮ.


Click it and Unblock the Notifications