Today Gold Rate In India: ದೀಪಾವಳಿಯಂದು ಚಿನ್ನದ ಬೆಲೆಯಲ್ಲಿ 1,700 ರೂ. ಇಳಿಕೆ! ಚಿನ್ನ ಪ್ರಿಯರಿಗೆ ಗುಡ್‌ ನ್ಯೂಸ್‌

ಚಿನ್ನ, ಬೆಳ್ಳಿ ಮೇಲೆ ಹೂಡಿಕೆ (Gold Investment) ಮಾಡಬೇಕು, ಖರೀದಿ ಮಾಡಬೇಕು ಎಂದು ಪ್ಲಾನ್‌ ಮಾಡಿದ್ದವರಿಗೆ ಕೊನೆಗೂ ಗುಡ್‌ ನ್ಯೂಸ್‌ ಸಿಕ್ಕೇ ಬಿಟ್ಟಿದೆ. ಇದೀಗ ಧನ್ತೇರಸ್‌ ಹಬ್ಬದ (Dhanteras Festival) ನಂತರ, ದೀಪಾವಳಿಯ (Deepavali) ಮೊದಲ ದಿನವೇ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಆದ್ದರಿಂದ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಇದೇ ಬೆಸ್ಟ್‌ ಟೈಂ. ಚಿನ್ನದ ಮೇಲಿನ ಹೂಡಿಕೆಯನ್ನು ಹೆಚ್ಚಿನವರು ಸುರಕ್ಷಿತ ಎಂದು ಭಾವಿಸುತ್ತಾರೆ. ಅದಕ್ಕಾಗಿಯೇ ಹೆಚ್ಚಿನವರು ಚಿನ್ನ, ಬೆಳ್ಳಿ ಮೇಲೆ ಹೂಡಿಕೆ ಮಾಡುತ್ತಾರೆ. ಆದ್ರೆ ಯಾರೇ ಆಗಲಿ ಚಿನ್ನದ ಮೇಲೆ ಹೂಡಿಕೆ ಮಾಡುವವರು ಮಾರುಕಟ್ಟೆ ಬೆಳವಣಿಗಳನ್ನು ನೋಡಿಕೊಂಡು ಹೂಡಿಕೆ ಮಾಡಿದ್ರೆ ಉತ್ತಮ.

ದೀಪಾವಳಿಯಂದು ಚಿನ್ನದ ಬೆಲೆಯಲ್ಲಿ 1,700 ರೂ. ಇಳಿಕೆ!

ಭಾರತದಲ್ಲಿ ಇಂದಿನ 24K ಚಿನ್ನದ ಬೆಲೆ ಹೇಗಿದೆ?
24K ಚಿನ್ನದ ಬೆಲೆ ಕಳೆದ ಕೆಲವು ದಿನಗಳಿಂದ ಏರಿಕೆ ಕಾಣುತ್ತಲೇ ಇತ್ತು. ಅಲ್ಲದೇ ಧನ್ತೇರಸ್‌ ಹಬ್ಬದಂದೂ ಕೂಡಾ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಿತ್ತು. ಇದೀಗ ದೀಪಾವಳಿಯಂದೂ ಕೂಡಾ ಗ್ರಾಹಕರು ಸಿಹಿ ತಿನ್ನುವಂತಾಗಿದೆ. ಇಂದೂ ಕೂಡಾ ಚಿನ್ನದ ಬೆಲೆ ಇಳಿಕೆಯಾಗಿದೆ. ದೀಪಾವಳಿಯಲ್ಲಿ ಚಿನ್ನದ ಬೆಲೆ ಏರಿಕೆಯಾಗುತ್ತೆ ಎಂದು ಭಾವಿಸಿದ್ದ ಜನರಿಗೆ ಕೊನೆಗೂ ನಿಟ್ಟುಸಿರು ಬಿಡುವಂತಾಗಿದೆ. ಇದೀಗ 24 ಕ್ಯಾರೆಟ್‌ ಚಿನ್ನದ ಒಂದು ಗ್ರಾಂ ಬೆಲೆ ನಿನ್ನೆಗಿಂತ ಇಂದು 17 ರೂ. ಇಳಿಕೆಯಾಗಿದೆ. ಅಂದರೆ ಪ್ರತೀ ಗ್ರಾಂ ಬೆಲೆ 13,069 ರೂ. ಆಗಿದೆ. ಇನ್ನು 8 ಗ್ರಾಂ ಚಿನ್ನದ ಬೆಲೆ 1,04,552 ರೂ. ಆಗಿದ್ದು, ನಿನ್ನೆ 1,04,688 ರೂ ಇತ್ತು. ಈ ಮೂಲಕ ಒಂದೇ ದಿನದಲ್ಲಿ 136 ರೂ.ನಷ್ಟು ಇಳಿಕೆಯಾಗಿದೆ. ಅದೇ ರೀತಿ 10 ಚಿನ್ನದ ಬೆಲೆ 1,30,690 ರೂಪಾಯಿ ಆಗಿದ್ದು, 170 ರೂ.ನಷ್ಟು ದಿಢೀರ್‌ ಇಳಿಕೆಯಾಗಿದೆ. 100 ಚಿನ್ನದ ಬೆಲೆಯಲ್ಲೂ ಇಳಿಕೆಯಾಗಿದ್ದು, ಇಂದು 13,06,900 ರೂ. ಆಗಿದ್ದು, ನಿನ್ನೆ 13,08,600 ರೂ. ಇತ್ತು. ಒಟ್ಟು 1,700 ರೂ. ಇಳಿಕೆಯಾಗಿದೆ.

ಭಾರತದಲ್ಲಿ 22K ಚಿನ್ನದ ಬೆಲೆ ಹೇಗಿದೆ?
24K ಚಿನ್ನಕ್ಕೆ ಹೋಲಿಸಿದ್ರೆ ಬೆಲೆಯಲ್ಲಿ 22K ಚಿನ್ನದ ಬೆಲೆ ಸ್ವಲ್ಪ ಕಡಿಮೆ. 22K ಚಿನ್ನದ 1 ಗ್ರಾಂ ಬೆಲೆಯಲ್ಲೂ ಇಂದು ಇಳಿಕೆಯಾಗಿದ್ದು, ಚಿನ್ನದ ಬೆಲೆ ಇಂದು 11,980 ರೂ. ಆಗಿದ್ದು, ನಿನ್ನೆ 11,995 ರೂ. ಇತ್ತು. ಒಂದೇ ದಿನದಲ್ಲಿ ಪ್ರತೀ ಗ್ರಾಂ ಬೆಲೆಯಲ್ಲಿ ದಿಢೀರ್‌ ಅಂತ 15 ರೂ. ಇಳಿಕೆಯಾಗಿದೆ. ಹಾಗೆಯೇ 8 ಗ್ರಾಂ ಚಿನ್ನದ ಬೆಲೆ 95,840 ರೂಪಾಯಿ ಆಗಿದ್ದು, ನಿನ್ನೆ 97,960 ರೂ. ಇತ್ತು. ನಿನ್ನೆಗಿಂತ ಇಂದು 1,400 ರೂ. ಇಳಿಕೆ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,19,800 ರೂ. ಇದ್ದು, ನಿನ್ನೆ 1,19,950 ರೂ ಇತ್ತು. ಅದೇ ರೀತಿ 100 ಗ್ರಾಂ ಚಿನ್ನದ ಬೆಲೆಯಲ್ಲೂ ಒಟ್ಟು 1,500 ರೂ.ನಷ್ಟು ಇಳಿಕೆ ಕಂಡಿದ್ದು, ಒಟ್ಟು ಬೆಲೆ 11,98,000 ರೂ. ಆಗಿದೆ.

ಭಾರತದಲ್ಲಿ 18K ಚಿನ್ನದ ಬೆಲೆ:
18K ಚಿನ್ನದ ಬೆಲೆಯಲ್ಲೂ ಗ್ರಾಂನಲ್ಲಿ ನಿನ್ನೆಗಿಂತಲೂ ಇಳಿಕೆಯಾಗಿದೆ. 18 ಕ್ಯಾರೆಟ್‌ ಚಿನ್ನದ 1 ಗ್ರಾಂ ಬೆಲೆ ಇಂದು 9,802 ರೂಪಾಯಿ ಆಗಿದ್ದು, ನಿನ್ನೆ 9,814 ರೂ. ಇತ್ತು. ಅಂದರೆ ಒಂದೇ ದಿನದಲ್ಲಿ 12 ರೂ.ನಷ್ಟು ಇಳಿಕೆಯಾಗಿದೆ. 8 ಗ್ರಾಂ ಚಿನ್ನದ ಬೆಲೆ ಕೂಡಾ ಇಂದು 78,416 ರೂ. ಆಗಿದ್ದು, ನಿನ್ನೆ 78,512 ರೂ. ಆಗಿದೆ. ಈ ಮೂಲಕ ಒಟ್ಟು 96 ರೂ. ಇಳಿಕೆಯಾಗಿದೆ. 10 ಚಿನ್ನದ ಬೆಲೆಯೂ ಇಂದು ಇಳಿಕೆಯಾಗಿ 98,020 ರೂ. ಆಗಿದ್ದು, 100 ಚಿನ್ನದ ಬೆಲೆ ಇಂದು 9,80,200 ರೂ. ಆಗಿದೆ.

ಭಾರತದ ವಿವಿಧ ನಗರಗಳ ಚಿನ್ನದ ಬೆಲೆ ಇಂದು ಹೇಗಿದೆ?
ಚೆನ್ನೈ: 24K ರೂ. 13,004, 22K ರೂ. 11,920, 18K ರೂ. 9,850
ಮುಂಬೈ: 24K ರೂ. 13,069, 22K ರೂ. 11,980, 18K ರೂ. 9,802
ದೆಹಲಿ: 24K ರೂ. 13,084, 22K ರೂ. 12,995, 18K ರೂ. 9,817
ಕೋಲ್ಕತ್ತಾ: 24K ರೂ. 13,069, 22K ರೂ. 11,980, 18K ರೂ. 9,802
ಬೆಂಗಳೂರು: 24K ರೂ. 13,069, 22K ರೂ. 11,980, 18K ರೂ. 9,802
ಹೈದರಾಬಾದ್: 24K ರೂ. 13,069, 22K ರೂ. 11,980, 18K ರೂ. 9,802
ಕೇರಳ: 24K ರೂ. 13,069, 22K ರೂ. 11,980, 18K ರೂ. 9,802
ಪುಣೆ: 24K ರೂ. 13,072, 22K ರೂ. 11,980, 18K ರೂ. 9,802
ವಡೋದರಾ: 24K ರೂ. 13,074, 22K ರೂ. 11,985, 18K ರೂ. 9,807
ಅಹಮದಾಬಾದ್: 24K ರೂ. 13,074, 22K ರೂ. 11,985, 18K ರೂ. 9,807

ಬೆಳ್ಳಿ ಬೆಲೆ ಹೇಗಿದೆ?
ಚಿನ್ನದ ಬೆಲೆಯಲ್ಲಿ ಇಂದೂ ಕೂಡಾ ಭಾರೀ ಇಳಿಕೆಯಾಗಿದೆ. ಈ ಮೂಲಕ ದೀಪಾವಳಿಯಂದು ಚಿನ್ನ ಪ್ರಿಯರಿಗೆ ಗುಡ್‌ ನ್ಯೂಸ್‌ ಸಿಕ್ಕಂತಾಗಿದೆ. ಆದ್ರೆ ಬೆಳ್ಳಿಯ ಬೆಲೆ ನಿಂತ ನೀರಾಗಿಬಿಟ್ಟಿದೆ. ನಿನ್ನೆಯ ಬೆಲೆಯನ್ನೇ ಇಂದು ಕೂಡಾ ಬೆಳ್ಳಿ ದರ ಸ್ಥಿರವಾಗಿದೆ. ಇಂದು ಬೆಳ್ಳಿ ಬೆಲೆ ಸ್ವಲ್ಪ ಇಳಿಕೆಯಾಗಿದ್ದು, ಇಂದು 1 ಗ್ರಾಂ ಬೆಳ್ಳಿ ಬೆಲೆ 172 ರೂ. ಆಗಿದ್ದು, ನಿನ್ನೆ ಇದೇ ಬೆಲೆ ಇತ್ತು. ಇನ್ನು 8 ಗ್ರಾಂ ಬೆಳ್ಳಿ ಬೆಲೆ 1,376 ರೂಪಾಯಿಯಾಗಿದ್ದು, ಯಾವುದೇ ಬದಲಾವಣೆಗಳಾಗಿಲ್ಲ. 10 ಗ್ರಾಂ ಬೆಳ್ಳಿ ದರ ಇಂದು 1,720 ರೂ. ಆಗಿದೆ. ನಿನ್ನೆಗೆ ಹೋಲಿಸಿದ್ರೆ ಇಂದು ಯಾವುದೇ ಬದಲಾವಣೆ ಇಲ್ಲ. ಅದೇ ರೀತಿ 100 ಗ್ರಾಂ ಬೆಳ್ಳಿಯಲ್ಲೂ 17,200 ರೂ. ಆಗಿದೆ.

ಚಿನ್ನದ ಮೇಲೆ ಹೂಡಿಕೆ ಮಾಡೋದು ಸುರಕ್ಷಿತ ಎಂದು ಹೇಳಲಾಗುತ್ತದೆ. ಆದ್ರೆ ಖರೀದಿಸುವ ಮುನ್ನ ಚಿನ್ನದ ಮಾರುಕಟ್ಟೆ ಬಗ್ಗೆ ಮಾಹಿತಿ ಪಡೆಯೋದು ಸೂಕ್ತ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+