ಚಿನ್ನದ ಮೇಲೆ ಹೂಡಿಕೆ (Gold Investment) ಮಾಡುವವರಿಗೆ ಇತ್ತೀಚೆಗೆ ಒಂದು ದೊಡ್ಡ ಗೊಂದಲವನ್ನೇ ಸೃಷ್ಟಿಸಿದೆ. ಭಾರತದಲ್ಲಂತೂ ಚಿನ್ನದ ಬೆಲೆ ದಿನೇ ದಿನೇ ಏರಿಕೆಯಾಗುತ್ತಿದೆ. ಇದರಿಂದ ಚಿನ್ನ ಖರೀದಿದಾರರು, ಹೂಡಿಕೆದಾರರು ಗೊಂದಲ್ಲಕ್ಕೀಡಾಗಿದ್ದಾರೆ. ಶುಕ್ರವಾರವಷ್ಟೇ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ ಕಂಡಿತ್ತು. ಆದ್ರೆ ಈ ಬೆಲೆ ಇಳಿಕೆಯ ಮರುದಿನವೇ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಇಂದೂ ಕೂಡಾ ಚಿನ್ನದ ಬೆಲೆ ಯಥಾಸ್ಥಿತಿಯಲ್ಲಿದೆ. ಹಾಗಿದ್ರೆ ಚಿನ್ನದ ಬೆಲೆ (Today Gold Rate India) ಇಂದು ಹೇಗಿದೆ ಎಂದು ಈ ವರದಿಯಲ್ಲಿ ತಿಳಿದುಕೊಳ್ಳೋಣ. ಭಾರತದಲ್ಲಿ 24K, 22K ಮತ್ತು 18K ಚಿನ್ನದ ಪ್ರತಿ ಗ್ರಾಂ, 8 ಗ್ರಾಂ, 100 ಗ್ರಾಂ, 10 ಗ್ರಾಂ ಮತ್ತು 100 ಗ್ರಾಂ ಬೆಲೆಯ ಬಗ್ಗೆ ವಿವರಿಸಲಾಗಿದೆ. ಈ ಮೂಲಕ ಚಿನ್ನ ಖರೀದಿದಾರರು, ಹೂಡಿಕೆದಾರರು ಪರಿಸ್ಥಿತಿ ನೋಡಿಕೊಂಡು ಚಿನ್ನವನ್ನು ಖರೀದಿಸಬಹುದು.

ಭಾರತದಲ್ಲಿ ಹೇಗಿದೆ 24K ಚಿನ್ನದ ಬೆಲೆ?
ನಿನ್ನೆಗೆ ಹೋಲಿಸಿದ್ರೆ ಇಂದು (ಅ.12) 24 ಕ್ಯಾರೆಟ್ ಚಿನ್ನದ ಪ್ರತಿ ಗ್ರಾಂ ಬೆಲೆ ರೂ. 12,508 ಆಗಿದ್ದು, ನಿನ್ನೆಯ ಬೆಲೆಯಲ್ಲೇ ಯಥಾಸ್ಥಿತಿಯಲ್ಲಿದೆ. ಆದರೆ ಶುಕ್ರವಾರದ ಚಿನ್ನದ ಬೆಲೆಗೆ ಹೋಲಿಸಿದ್ರೆ ಇಂದು 137 ರೂ. ಹೆಚ್ಚಾಗಿದೆ. 8 ಗ್ರಾಂ ಚಿನ್ನದ ಬೆಲೆ 1,00,064 ರೂ, 10 ಗ್ರಾಂ ಚಿನ್ನದ ಬೆಲೆ ಇಂದು ರೂ. 1,25,080 ಆಗಿದೆ. ಆದರೆ ಶುಕ್ರವಾರ (ಅ.10) 1,23,710 ರೂಪಾಯಿ ಇಳಿಕೆಯಾಗಿತ್ತು. ಆದರೆ ಒಂದೇ ದಿನ ಬೆಲೆ 1370 ರೂ. ಹೆಚ್ಚಾಗಿದೆ. 100 ಗ್ರಾಂ ಚಿನ್ನದ ಬೆಲೆ ಇಂದು ರೂ. 12,50,800 ಆಗಿದೆ. ಉಳಿದ ಚಿನ್ನಗಳಿಗೆ ಹೋಲಿಸಿದ್ರೆ 24K ಚಿನ್ನ ಪ್ಯೂರ್ ಗೋಲ್ಡ್ ಅಂತಾನೇ ಹೇಳಬಹುದು.
22K ಚಿನ್ನದ ಬೆಲೆ:
ಇನ್ನು 22K ಚಿನ್ನದ ಬೆಲೆಯೂ ನಿನೆಯಷ್ಟೇ ಇಂದೂ ಕೂಡಾ ಇದೆ. ಇಂದು 22K ಚಿನ್ನದ 1 ಗ್ರಾಂ ಬೆಲೆ 11,465 ರೂ. ಆಗಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ 90,720 ಆಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,14, 650 ರೂಪಾಯಿ ಆಗಿದೆ. 100 ಗ್ರಾಂ ಚಿನ್ನದ ಬೆಲೆ ಕೂಡಾ ನಿನ್ನೆಯಷ್ಟೇ ಇದ್ದು, ಇಂದೂ ಕೂಡಾ 11,46,500 ರೂಪಾಯಿ ಆಗಿದೆ.
18K ಚಿನ್ನದ ಬೆಲೆ ಹೇಗಿದೆ?
18K ಚಿನ್ನದಲ್ಲಿ ಹೆಚ್ಚು ಮಿಶ್ರಣ ಮಾಡುವುದರಿಂದ ಇದರ ಬೆಲೆ ಕೂಡಾ 24K ಚಿನ್ನಕ್ಕೆ ಹೋಲಿಸಿದ್ರೆ ತುಂಬಾ ಕಡಿಮೆ. ಆದ್ದರಿಂದ ಹೂಡಿಕೆ ಮಾಡುವವರಿಗೆ ಇದೂ ಕೂಡಾ ಬೆಸ್ಟ್. 18K ಚಿನ್ನದ ಬೆಲೆಯೂ ನಿನ್ನೆಯಷ್ಟೇ ಇಂದೂ ಕೂಡಾ ಮುಂದುವರೆದಿದೆ. ಅಂದರೆ 1 ಗ್ರಾಂ ಚಿನ್ನದ ಬೆಲೆ 9,381 ರೂಪಾಯಿ ಆಗಿದೆ. 8 ಗ್ರಾಂ ಚಿನ್ನದ ಬೆಲೆ 75,048 ರೂಪಾಯಿ ಇದೆ. ಹಾಗೆಯೇ 10 ಗ್ರಾಂ ಚಿನ್ನದ ಬೆಲೆ 93,810 ಆಗಿದೆ. ಇನ್ನು 100 ಗ್ರಾಂ ಚಿನ್ನದ ಬೆಲೆ 9,38,100 ಆಗಿದ್ದು, ಶುಕ್ರವಾರಕ್ಕೆ ಹೋಲಿಸಿದ್ರೆ ನಿನ್ನೆ ಮತ್ತು ಇಂದು ಒಂದೇ ಬೆಲೆಯಲ್ಲಿ ದಿಢೀರ್ ಏರಿಕೆ ಕಂಡಿದೆ.
ಭಾರತದ ವಿವಿಧ ನಗರಗಳಲ್ಲಿ ಎಷ್ಟಿದೆ ಚಿನ್ನದ ಬೆಲೆ?
- ಚೆನ್ನೈ: 24K ರೂ. 12,546, 22K ರೂ. 11,500, 18K ರೂ. 9,500
- ಮುಂಬೈ: 24K ರೂ. 12,508, 22K ರೂ. 11,465, 18K ರೂ. 9,381
- ದೆಹಲಿ: 24K ರೂ. 12,523, 22K ರೂ. 11,480, 18K ರೂ. 9,396
- ಕೋಲ್ಕತ್ತಾ: 24K ರೂ. 12,508, 22K ರೂ. 11,465, 18K ರೂ. 9,381
- ಬೆಂಗಳೂರು: 24K ರೂ. 12,508, 22K ರೂ. 11,465, 18K ರೂ. 9,381
- ಹೈದರಾಬಾದ್: 24K ರೂ. 12,508, 22K ರೂ. 11,465, 18K ರೂ. 9,381
- ಕೇರಳ: 24K ರೂ. 12,508, 22K ರೂ. 11,465, 18K ರೂ. 9,381
- ಪುಣೆ: 24K ರೂ. 12,508, 22K ರೂ. 11,465, 18K ರೂ. 9,381
- ವಡೋದರಾ: 24K ರೂ. 12,513, 22K ರೂ. 11,470, 18K ರೂ. 9,386
- ಅಹಮದಾಬಾದ್: 24K ರೂ. 12,513, 22K ರೂ. 11,470, 18K ರೂ. 9,386
ಬೆಳ್ಳಿ ಬೆಲೆ ಹೇಗಿದೆ?
ಚಿನ್ನದಂತೆಯೇ ಬೆಳ್ಳಿ ಬೆಲೆಯಲ್ಲೂ ನಿನ್ನೆಯಂತೆಯೇ ಯಥಾಸ್ಥಿತಿಯಲ್ಲಿ ಮುಂದುವರೆದಿದೆ. ನಿನ್ನೆ ಗ್ರಾಂಗೆ ಬೆಳ್ಳಿ ದರ 180 ರೂ. ಇತ್ತು. ಇಂದೂ ಕೂಡಾ ಅಷ್ಟೇ ಇದೆ. ಹಾಗೆಯೇ ಕೆಜಿಯಲ್ಲಿ ಬೆಳ್ಳಿ ಬೆಲೆ 1,80 ಸಾವಿರ ರೂಪಾಯಿ ಆಗಿದೆ. ಇನ್ನು 1 ಗ್ರಾಂ ಬೆಳ್ಳಿ ಬೆಲೆ 180 ರೂಪಾಯಿ ಇದೆ. ಹಾಗೆಯೇ 8 ಗ್ರಾಂ ಚಿನ್ನದ ಬೆಲೆ 1,440 ರೂಪಾಯಿ ಆಗಿದೆ. ಅದರಂತೆ 10 ಗ್ರಾಂ ಬೆಳ್ಳಿ ಬೆಲೆ 1,800 ರೂ ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 18,000 ಆಗಿದ್ದು, 1000 ಗ್ರಾಂ ಬೆಳ್ಳಿ ಬೆಲೆ 1,80,000 ಗಡಿ ಮುಟ್ಟಿದೆ. ಶುಕ್ರವಾರಕ್ಕೆ (ಅ.10) ಹೋಲಿಸಿದ್ರೆ ನಿನ್ನೆ ಮತ್ತು ಇವತ್ತು ಬೆಳ್ಳಿ ಬೆಲೆ ಸ್ವಲ್ಪ ಏರಿಕೆ ಕಂಡಿದೆ.
ಚಿನ್ನ, ಬೆಳ್ಳಿ ಬೆಲೆಯಲ್ಲಿ ಇಂದು ಯಾವುದೇ ವ್ಯತ್ಯಾಸವಾಗದ ಕಾರಣ ನಿನ್ನೆಯಷ್ಟೇ ಇಂದೂ ಕೂಡಾ ಬೆಲೆ ಮುಂದುವರೆದಿದೆ. ಆದ್ದರಿಂದ ಖರೀದಿದಾರರು, ಹೂಡಿಕೆದಾರರು ಚಿನ್ನ, ಬೆಳ್ಳಿ ಮೇಲೆ ಹೂಡಿಕೆ ಮಾಡುವ ಮುನ್ನ ಸರಿಯಾಗಿ ಗಮನಿಸುವುದು ಉತ್ತಮ. ಮಾರುಕಟ್ಟೆ ಬೆಳವಣಿಗಳನ್ನು ಗಮನದಲ್ಲಿಟ್ಟುಕೊಂಡು ಹೂಡಿಕೆ ಮಾಡುವುದು ಸೂಕ್ತ.


Click it and Unblock the Notifications