ಚಿನ್ನದ ಬೆಲೆ (Gold Rate) ನೋಡಿದ್ರೆ ಅಯ್ಯೋ ಎನ್ನುವಂತಾಗಿದೆ. ಇಂದು ಕಮ್ಮಿಯಾಗುತ್ತೆ, ನಾಳೆ ಕಮ್ಮಿಯಾಗುತ್ತೆ ಅಂದು ಕೊಂಡವರಿಗೆ ದಿನ ಹೋದಂತೆ ನಿರಾಸೆ ಮೂಡುತ್ತಲೇ ಇದೆ. ಏಕೆಂದರೆ ಚಿನ್ನದ ಬೆಲೆ ದಿನೇ ದಿನೇ ಏರಿಕೆಯಾಗುತ್ತಲೇ ಇದೆ. ಚಿನ್ನದ ಮೇಲಿನ ಹೂಡಿಕೆ ಬೆಸ್ಟ್ ಅನ್ನೋರು, ಇಂದು ಚಿನ್ನ ಖರೀದಿಸೋಕು ಹಿಂದೆ ಮುಂದೆ ನೋಡುತ್ತಿದ್ದಾರೆ. ಹಾಗಿದ್ರೆ ಭಾರತದಲ್ಲಿ ಇಂದು (ಅ.15) ಚಿನ್ನದ ಬೆಲೆ ಹೇಗಿದೆ ಗೊತ್ತಾ? (Today India Gold Rate) ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಭಾರತದಲ್ಲಿ ಹೇಗಿದೆ 24K ಚಿನ್ನದ ಬೆಲೆ?
ನಿನ್ನೆಗೆ ಹೋಲಿಸಿದ್ರೆ ಇಂದು (ಅ.15) 24 ಕ್ಯಾರೆಟ್ ಚಿನ್ನದ ಪ್ರತಿ ಗ್ರಾಂ ಬೆಲೆ ಏರಿಕೆಯಾಗಿದೆ. ಆದರೆ ಏರಿಕೆ ಮಟ್ಟದಲ್ಲಿ ಸ್ವಲ್ಪ ಇಳಿಕೆ ಕಂಡಿದೆ. ನಿನ್ನೆ ರೂ. 12,835 ಆಗಿತ್ತು, ಆದ್ರೆ ನಿನ್ನೆ ಬೆಲೆಗಿಂತ ಇಂದು 1 ರೂ. ಹೆಚ್ಚಳವಾಗಿದ್ದು, ಪ್ರತೀ ಗ್ರಾಂ ಚಿನ್ನದ ಬೆಲೆ 12,836 ರೂ ಆಗಿದೆ. ಇನ್ನು 8 ಗ್ರಾಂ ಚಿನ್ನದ ಬೆಲೆ ಇಂದು 1,02,688 ರೂ. ಆಗಿದ್ದು, ನಿನ್ನೆ 1,02,680 ರೂ. ಇತ್ತು. 10 ಗ್ರಾಂ ಚಿನ್ನದ ಬೆಲೆ ಇಂದು 1,28,360 ರೂ. ಆಗಿದ್ದು, 10 ರೂ. ಏರಿಕೆಯಾಗಿದೆ. ಅದೇ ರೀತಿ 100 ಗ್ರಾಂ ಚಿನ್ನದ ಬೆಲೆಯಲ್ಲಿ 100 ರೂ. ಏರಿಕೆಯಾಗಿದ್ದು, ನಿನ್ನೆಗಿಂತ ಇಂದು 12,83,600 ರೂ. ಆಗಿದೆ.
22K ಚಿನ್ನದ ಬೆಲೆ:
ಅದೇ ರೀತಿ 24K ಚಿನ್ನದಂತೆಯೇ 22K ಚಿನ್ನದ ಬೆಲೆಯೂ ನಿನ್ನೆಗಿಂತ ಇಂದು 1 ರೂಪಾಯಿ ಏರಿಕೆ ಕಂಡಿದೆ. ಇಂದು 22K ಚಿನ್ನದ 1 ಗ್ರಾಂ ಬೆಲೆ 11,766 ರೂ. ಆಗಿದೆ. ನಿನ್ನೆಗಿಂತ ಇಂದು ಕೇವಲ 1 ರೂ. ಹೆಚ್ಚಳವಾಗಿದೆ. 8 ಗ್ರಾಂ ಚಿನ್ನದ ಬೆಲೆ 94,128 ರೂ ಆಗಿದ್ದು, ನಿನ್ನೆ 94,120 ರೂ. ಇತ್ತು. ನಿನ್ನೆಗಿಂತ ಇಂದು 8 ರೂಪಾಯಿ ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆಯಲ್ಲೂ ಬರೀ 10ರೂ. ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,17,660 ಆಗಿದೆ. 100 ಗ್ರಾಂ ಚಿನ್ನದ ಬೆಲೆ 11,76,600 ರೂ. ಆಗಿದ್ದು, ಈ ಮೂಲಕ 100 ರೂ. ಹೆಚ್ಚಳ ಕಂಡಿದೆ.
18K ಚಿನ್ನದ ಬೆಲೆ ಹೇಗಿದೆ?
24K ಚಿನ್ನಕ್ಕೆ ಹೋಲಿಸಿದ್ರೆ 18K ಚಿನ್ನ ಕಡಿಮೆ ಬೆಲೆಗೆ ಸಿಗುತ್ತೆ. ಕಾರಣ ಇದರಲ್ಲಿರುವು ಮಿಶ್ರಣ. 18 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ ಇಂದು 9,627 ರೂಪಾಯಿ ಆಗಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ 77,016 ರೂಪಾಯಿ ಇದ್ದು, 10 ಗ್ರಾಂ ಚಿನ್ನದ ಬೆಲೆ 96,270 ಆಗಿದೆ. ಇನ್ನು 100 ಗ್ರಾಂ ಚಿನ್ನದ ಬೆಲೆಯಲ್ಲೂ ನಿನ್ನೆಗಿಂತ 100 ರೂಪಾಯಿ ಹೆಚ್ಚಳವಾಗಿದ್ದು, ಈ ಮೂಲಕ 9,62,700 ರೂಪಾಯಿ ಆಗಿದೆ.
ಭಾರತದ ವಿವಿಧ ನಗರಗಳ ಚಿನ್ನದ ಬೆಲೆ:
ಚೆನ್ನೈ: 24K ರೂ. 12,901, 22K ರೂ. 11,826, 18K ರೂ. 9,771
ಮುಂಬೈ: 24K ರೂ. 12,836, 22K ರೂ. 11,766, 18K ರೂ. 9,627
ದೆಹಲಿ: 24K ರೂ. 12,851, 22K ರೂ. 11,781, 18K ರೂ. 9,647
ಕೋಲ್ಕತ್ತಾ: 24K ರೂ. 12,836, 22K ರೂ. 11,766, 18K ರೂ. 9,627
ಬೆಂಗಳೂರು: 24K ರೂ. 12,836, 22K ರೂ. 11,766, 18K ರೂ. 9,627
ಹೈದರಾಬಾದ್: 24K ರೂ. 12,836, 22K ರೂ. 11,766, 18K ರೂ. 9,627
ಕೇರಳ: 24K ರೂ. 12,836, 22K ರೂ. 11,766, 18K ರೂ. 9,627
ಪುಣೆ: 24K ರೂ. 12,836, 22K ರೂ. 11,766, 18K ರೂ. 9,627
ವಡೋದರಾ: 24K ರೂ. 12,841, 22K ರೂ. 11,771, 18K ರೂ. 9,632
ಅಹಮದಾಬಾದ್: 24K ರೂ. 12,841, 22K ರೂ. 11,771, 18K ರೂ. 9,632
ಸ್ಪಾಟ್ ವಿವರ:
ರಾಯಿಟರ್ಸ್ ವರದಿ ಪ್ರಕಾರ, ಅಮೆರಿಕದಲ್ಲಿ ಮತ್ತಷ್ಟು ದರ ಕಡಿತದ ನಿರೀಕ್ಷೆಗಳು ಹೆಚ್ಚುತ್ತಿರುವುದರಿಂದ ಬುಧವಾರ ಚಿನ್ನವು ಪ್ರತಿ ಔನ್ಸ್‌ಗೆ $4,200 ಮಟ್ಟಕ್ಕಿಂತ ಸ್ವಲ್ಪ ಕಡಿಮೆಯಲ್ಲಿ, ಏರಿಕೆ ಕಂಡಿದೆ. ಇನ್ನು 0252 GMT ವೇಳೆಗೆ ಸ್ಪಾಟ್ ಚಿನ್ನವು ಪ್ರತಿ ಔನ್ಸ್‌ಗೆ 0.8% ಏರಿಕೆಯಾಗಿದ್ದು, $4,173.56 ಕ್ಕೆ ತಲುಪಿತು, ಇದು ಹಿಂದಿನ ವಹಿವಾಟಿಗೆ ಹೋಲಿಸಿದ್ರೆ ದಾಖಲೆಯ ಗರಿಷ್ಠ 4,186.68 ಕ್ಕೆ ತಲುಪಿತು.
ಬೆಳ್ಳಿ ಬೆಲೆ ಹೇಗಿದೆ?
ಇತ್ತೀಚೆಗೆ ಬೆಳ್ಳಿ ಬೇಡಿಕೆ ಕೂಡಾ ಹೆಚ್ಚಾಗಿದೆ. ಅದರಂತೆ ಬೆಳ್ಳಿ ಬೆಲೆಯಲ್ಲೂ ಏರಿಕೆ ಕಾಣುತ್ತಿದೆ. ಒಂದು ಕಾಲದಲ್ಲಿ ಭಾರೀ ಕಡಿಮೆ ಇದ್ದ ಬೆಳ್ಳಿ ಬೆಲೆ, ಇತ್ತೀಚೆಗೆ ದಿಢೀರ್ ಹೆಚ್ಚಳವಾಗಿದೆ. ನಿನ್ನೆ ಗ್ರಾಂಗೆ ಬೆಳ್ಳಿ ದರ 189 ರೂ. ಇತ್ತು. ಆದರೆ ಇಂದು ಬೆಳ್ಳಿ ಬೆಲೆ ರೂ. 189.10 ರೂ. ಆಗಿದೆ. ಅಂದರೆ ನಿನ್ನೆಗೆ ಹೋಲಿಸಿದ್ರೆ ಇಂದು ಬೆಳ್ಳಿದರದಲ್ಲಿ 10 ಪೈಸೆ ಹೆಚ್ಚಾಗಿದೆ. ಇನ್ನು 8 ಗ್ರಾಂ ಬೆಳ್ಳಿಗೆ ಇಂದು 1,512.80 ರೂ ಆಗಿದ್ದು, ನಿನ್ನೆ 1,512 ರೂ. ಇತ್ತು. ಒಟ್ಟು 0.80 ಪೈಸೆಯಷ್ಟು ಏರಿಕೆ ಕಂಡಿದೆ. 10 ಗ್ರಾಂ ಬೆಳ್ಳಿ ಬೆಲೆ ಇಂದು 1,891 ರೂಪಾಯಿ ಆಗಿದ್ದು, ನಿನ್ನೆಗಿಂತ ಇಂದು 1 ರೂಪಾಯಿಯಷ್ಟು ಏರಿಕೆಯಾಗಿದೆ. 100 ಗ್ರಾಂ ಬೆಳ್ಳಿ ಬೆಲೆಯಲ್ಲೂ 10 ರೂ.ನಷ್ಟು ಏರಿಕೆಯಾಗಿದ್ದು, ಒಟ್ಟು ಬೆಲೆ 18,910 ರೂಪಾಯಿಯಾಗಿದೆ. ಅದೇ ರೀತಿ 1000 ಗ್ರಾಂ ಬೆಳ್ಳಿ ಬೆಲೆ ಇಂದು 1,89,100 ರೂಪಾಯಿ ಆಗಿದ್ದು, ಈ ಮೂಲಕ 100 ರೂ. ಹೆಚ್ಚಳವಾಗಿದೆ.


Click it and Unblock the Notifications