ತಕ್ಕ ಮಟ್ಟಿಗೆ ನಿಟ್ಟುಸಿರು ಬಿಡುವಂತೆ ಮಾಡಿದ್ದ ಭಾರತದ ಚಿನ್ನದ ಬೆಲೆ (Gold Rate India) ಇಂದು ದಿಢೀರ್ ಏರಿಕೆ ಕಂಡಿದೆ. ಅಕ್ಟೋಬರ್ 30 ರಂದು ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಿತ್ತು. ಆದ್ರೆ ಇಂದು (ಅ.31) ಚಿನ್ನದ ಬೆಲೆ ಮತ್ತೆ ಏರಿಕೆ ಕಂಡಿದೆ. ಹಾಗಿದ್ರೆ ಭಾರತದಲ್ಲಿ ಇಂದು ಚಿನ್ನದ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ಓದಿ.

ಭಾರತದಲ್ಲಿ 24K ಚಿನ್ನದ ಬೆಲೆ ಇಂದು ಎಷ್ಟಿದೆ?
24 ಕ್ಯಾರಟ್ ಚಿನ್ನದ ಬೆಲೆ ಇಂದು ದಿಢೀರ್ ಏರಿಕೆ ಕಂಡಿದ್ದು, ಚಿನ್ನ ಪ್ರಿಯರಿಗೆ ಶಾಕ್ ಆಗೋದು ಗ್ಯಾರಂಟಿ, ನಿನ್ನೆಗಿಂತಲೂ ಇಂದು ಮತ್ತಷ್ಟು ಇಳಿಕೆಯಾಗಬಹುದು ಎಂದು ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆಯಾಗೋದು ಪಕ್ಕಾ. ಇಂದು 24 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ ₹12,328 ರೂ. ಆಗಿದೆ. ನಿನ್ನೆ ₹12,148 ರೂ ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹180 ರೂ. ದಿಢೀರ್ ಏರಿಕೆ ಕಂಡಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು ₹98,624 ರೂ. ಆಗಿದ್ದು, ನಿನ್ನೆ ₹97,184 ಇತ್ತು. ಈ ಮೂಲಕ 8 ಗ್ರಾಂ ಚಿನ್ನದಲ್ಲಿ ಒಂದೇ ದಿನ ಬರೋಬ್ಬರಿ 1,440 ರೂ. ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,23,280 ರೂ. ಆಗಿದ್ದು, ನಿನ್ನೆಗಿಂತ 1,800 ರೂ ಏರಿಕೆಯಾಗಿದೆ. ಹಾಗೆಯೇ 100 ಗ್ರಾಂ ಚಿನ್ನದ ಒಟ್ಟು ಬೆಲೆ ₹12,32,800 ರೂ. ಆಗಿದ್ದು, ನಿನ್ನೆ 12,14,800 ರೂ. ಇತ್ತು. ಈ ಮೂಲಕ ಒಂದೇ ದಿನದಲ್ಲಿ 18,000 ರೂ.ನಷ್ಟು ಏರಿಕೆಯಾಗಿದೆ.
ಭಾರತದಲ್ಲಿ 22K ಚಿನ್ನದ ಬೆಲೆ:
ಇಂದು 22K ಚಿನ್ನದ 1 ಗ್ರಾಂ ಬೆಲೆ 11,300 ರೂ. ಆಗಿದ್ದು, ನಿನ್ನೆ ₹11,135 ರೂ. ಇತ್ತು. ಒಂದೇ ದಿನದಲ್ಲಿ ₹165 ರೂ. ಏರಿಕೆಯಾಗಿದೆ. ಹಾಗೆಯೇ 8 ಗ್ರಾಂ ಚಿನ್ನದ ಬೆಲೆ ಇಂದು 90,400 ರೂ. ಆಗಿದ್ದು, ನಿನ್ನೆ 89,080 ರೂ. ಇತ್ತು. ಈ ಮೂಲಕ ಒಂದೇ ದಿನದಲ್ಲಿ 1,320 ರೂ. ದಿಢೀರ್ ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,113,000 ರೂ ಆಗಿದ್ದು, ನಿನ್ನೆ ₹1,11,350 ರೂ ಇತ್ತು. ನಿನ್ನೆಗಿಂತ ಇಂದು 1,650 ರೂ ಏರಿಕೆ ಕಂಡಿದೆ. ಹಾಗೆಯೇ 100 ಗ್ರಾಂ ಚಿನ್ನದ ಬೆಲೆ ಇಂದು 11,30,000 ರೂ. ಆಗಿದ್ದು, ನಿನ್ನೆ ₹11,13,500 ರೂ. ಇತ್ತು. ಒಂದೇ ದಿನದಲ್ಲಿ 16,500 ರೂ. ಏರಿಕೆಯಾಗಿದೆ.
ಭಾರತದಲ್ಲಿ 18K ಚಿನ್ನದ ಬೆಲೆ ಇಂದು ಎಷ್ಟಿದೆ?
18K ಚಿನ್ನದ 1 ಗ್ರಾಂ ಬೆಲೆ ಇಂದು ₹9,246 ರೂ. ಆಗಿದ್ದು, ನಿನ್ನೆ 9,111 ರೂ. ಇತ್ತು. ಪ್ರತೀ ಗ್ರಾಂ ಚಿನ್ನದಲ್ಲಿ ₹135 ರೂ. ಏರಿಕೆ ಕಂಡಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು ₹73,968 ರೂ. ಆಗಿದ್ದು, ನಿನ್ನೆ 72,888 ರೂ ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 1,080 ರೂ. ಏರಿಕೆಯಾಗಿದೆ. ಇನ್ನು 10 ಗ್ರಾಂ ಚಿನ್ನದ ಬೆಲೆ ಇಂದು 92,460 ರೂ. ಆಗಿದ್ದು, ನಿನ್ನೆಗಿಂತ ಇಂದು 1,350 ರೂ. ದಿಢೀರ್ ಏರಿಕೆಯಾಗಿದೆ.
ಭಾರತದ ವಿವಿಧ ನಗರಗಳ ಚಿನ್ನದ ಬೆಲೆ ಇಂದು ಹೇಗಿದೆ?
ಚೆನ್ನೈ: 24K ರೂ. 12,328, 22K ರೂ. 11,300, 18K ರೂ. 9,420
ಮುಂಬೈ: 24K ರೂ. 12,328, 22K ರೂ. 11,300, 18K ರೂ. 9,246
ದೆಹಲಿ: 24K ರೂ. 12,343, 22K ರೂ. 11,315, 18K ರೂ. 9,261
ಕೋಲ್ಕತ್ತಾ: 24K ರೂ. 12,328, 22K ರೂ. 11,300, 18K ರೂ. 9,246
ಬೆಂಗಳೂರು: 24K ರೂ. 12,328, 22K ರೂ. 11,300, 18K ರೂ. 9,246
ಹೈದರಾಬಾದ್: 24K ರೂ. 12,328, 22K ರೂ. 11,300, 18K ರೂ. 9,246
ಕೇರಳ: 24K ರೂ. 12,328, 22K ರೂ. 11,300, 18K ರೂ. 9,246
ಪುಣೆ: 24K ರೂ. 12,328, 22K ರೂ. 11,300, 18K ರೂ. 9,246
ವಡೋದರಾ: 24K ರೂ. 12,333, 22K ರೂ. 11,305, 18K ರೂ. 9,251
ಅಹಮದಾಬಾದ್: 24K ರೂ. 12,333, 22K ರೂ. 11,305, 18K ರೂ. 9,251
ಸ್ಪಾಟ್ ಗೋಲ್ಡ್ ವಿವರ:
ಅಕ್ಟೋಬರ್ 31 ರ ರಾಯಿಟರ್ಸ್ ವರದಿ ಪ್ರಕಾರ, ಅಮೆರಿಕಾದ ಫೆಡರಲ್ ರಿಸರ್ವ್ ದರ ಕಡಿತದ ನಿರ್ಧಾರದಿಂದಾಗಿ ಡಾಲರ್ ಮೌಲ್ಯ ಸ್ಥಿರವಾಗಿತ್ತು. ಆ ಪರಿಣಾಮ ಶುಕ್ರವಾರ ಚಿನ್ನದ ಬೆಲೆಗಳು ಕುಸಿದಿದೆ ಎನ್ನಲಾಗಿದೆ. ಈ ಮೂಲಕ 0240 GMT ವೇಳೆಗೆ ಸ್ಪಾಟ್ ಚಿನ್ನವು ಔನ್ಸ್‌ಗೆ $4,004 ಕ್ಕೆ 0.5% ಇಳಿಕೆ ಕಂಡಿದೆ.
ಬೆಳ್ಳಿ ಬೆಲೆ ಹೇಗಿದೆ?
ಚಿನ್ನದ ಬೆಲೆ ಏರಿಕೆಯಾದರೂ, ಬೆಳ್ಳಿ ದರ ಮಾತ್ರ ನಿನ್ನೆಯ ಬೆಲೆಯನ್ನೇ ಕಾಯ್ದುಕೊಂಡಿದೆ. ನಿನ್ನೆಯಷ್ಟೇ ಇಂದೂ ಕೂಡಾ ಬೆಳ್ಳಿ ಬೆಲೆ ಸ್ಥಿರವಾಗಿದೆ. ನಿನ್ನೆ 1 ಗ್ರಾಂ ಬೆಳ್ಳಿ ಬೆಲೆ ₹151 ರೂ. ಇತ್ತು. ಇಂದೂ ಕೂಡಾ ₹151 ರೂ. ಇದೆ. ಈ ಮೂಲಕ ಬೆಲೆಯಲ್ಲಿ ಯಾವುದೇ ವ್ಯತ್ಯಾಸಗಳಿಲ್ಲ. ಅದೇ ರೀತಿ 8 ಗ್ರಾಂ ಬೆಳ್ಳಿ ನೆಲೆ ₹1,208 ರೂ., 10 ಗ್ರಾಂ ಬೆಳ್ಳಿ ದರ ₹1,510 ರೂ., 100 ಗ್ರಾಂ ಬೆಳ್ಳಿ ದರ ₹15,100 ರೂ., 1000 ಗ್ರಾಂ ಬೆಳ್ಳಿ ಬೆಲೆ ₹1,51,000 ರೂ. ಇದೆ.


Click it and Unblock the Notifications