ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಇಂದು ಚಿನ್ನದ ಬೆಲೆ ಏರಿಕೆಯಾಗಿದೆ. ಇದರಿಂದ ಮಹಿಳೆಯರಿಗೆ ಮತ್ತೆ ಕಹಿಸುದ್ದಿ ಸಿಕ್ಕಂತಾಗಿದೆ. ಮಹಿಳೆಯರಿಗೆ ಅಚ್ಚು ಮೆಚ್ಚಿನ ಉಡುಗೊರೆಯಾದ ಚಿನ್ನ ಪ್ರತಿಷ್ಠೆಯ ಸಂಕೇತ. ಸಭೆ-ಸಮಾರಂಭಗಳಲ್ಲಿ ಅತ್ಯಂತ ಆಕರ್ಷಣೀಯವಾಗಿರುವ ಚಿನ್ನಕ್ಕೆ, ಈಗ ಎಲ್ಲಿಲ್ಲದ ಬೇಡಿಕೆ. ಅದರಲ್ಲೂ ಮಹಿಳೆಯರಿಗೆ ಏನೇ ಕೊಟ್ಟರೂ ಚಿನ್ನ ಕೊಟ್ಟಾಗ ಆಗುವ ಖುಷಿ ಮತ್ತೆಲ್ಲೂ ಸಿಗುವುದಿಲ್ಲ. ಅದರಲ್ಲೂ ಇದು ಬೆಲೆ ಜಾಸ್ತಿಯಾಗುತ್ತಿದ್ದು, ಚಿನ್ನವನ್ನೇ ಉಡುಗೊರೆಯಾಗಿ ಕೊಟ್ಟರೆ ಮಹಿಳೆಯರ ಸಂತೋಷ ಆಕಾಶಕ್ಕೆ ಹಾರಿರುತ್ತದೆ. ಇನ್ನು ಭಾರತದಲ್ಲಿ ಚಿನ್ನಕ್ಕೆ ಅದರದ್ದೇ ಆದ ಮಹತ್ವವಿದೆ. ನಮ್ಮ ಸಂಸ್ಕೃತಿಯಲ್ಲಿ ಚಿನ್ನಕ್ಕೆ ಒಂದು ಮಹತ್ವ ನೀಡಲಾಗಿದೆ. ಇದರ ಬೆಲೆ ಎಷ್ಟೇ ಹೆಚ್ಚಾದರೂ ಇದರ ಮೇಲಿನ ಪ್ರೀತಿ ಕಡಿಮೆಯಾಗುವುದಿಲ್ಲ. ಹಾಗಾದರೆ ಭಾರತದಲ್ಲಿ ಇಂದು ಚಿನ್ನದ ಬೆಲೆ ಎಷ್ಟಿದೆ ಎಂದು ನೋಡೋಣ ಬನ್ನಿ.

ಜಾಗತಿ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಹೆಚ್ಚಾದಾಗ ಸಾಮಾನ್ಯವಾಗಿ ಭಾರತದ ಮಾರುಕಟ್ಟೆಯ ಮೇಲೂ ಪರಿಣಾಮ ಬೀರುತ್ತದೆ. ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರದಲ್ಲಿ ಬದಲಾವಣೆ ಮತ್ತು ಜಾಗತಿಕ ಆರ್ಥಿಕ ಕುಸಿತದ ಭೀತಿಯು ಚಿನ್ನದ ಬೆಲೆ ಏರಿಸಲು ಕಾರಣವಾಗಿದೆ. ಹಾಗೂ ಡಾಲರ್ ಗಟ್ಟಿಯಾಗಿದಂತೆ ರೂಪಾಯಿ ಮೌಲ್ಯ ಕುಸಿದರೆ, ಚಿನ್ನದ ಆಮದು ಬೆಲೆ ಹೆಚ್ಚಾಗುತ್ತದೆ. ಇಂದು ರೂಪಾಯಿ ಮೌಲ್ಯ ಕುಸಿದಿರುವ ಕಾರಣ ಚಿನ್ನದ ಬೆಲೆಯಲ್ಲಿ ಹೆಚ್ಚಳವಾಗಿದೆ. ಷೇರು ಮಾರುಕಟ್ಟೆಯಲ್ಲೂ ಅಸ್ಥಿರತೆ ಇರುವ ಕಾರಣ, ಹೂಡಿಕೆದಾರರು ಚಿನ್ನವನ್ನು ಸುರಕ್ಷಿತ ಹೂಡಿಕೆಯಾಗಿ ಪರಿಗಣಿಸುತ್ತಿದ್ದಾರೆ. ಹಾಗೂ ಈ ಚಿನ್ನ ಎಲ್ಲಕ್ಕಿಂತ ದೊಡ್ಡ ಮಟ್ಟದ ಆಸ್ತಿಯಂತೆಯೂ ಗುರುತಿಸಿಕೊಂಡಿದೆ. ಇದರಿಂದ ಚಿನ್ನದ ಬೇಡಿಕೆ ಹೆಚ್ಚಾಗಿ, ಬೆಲೆ ಏರಿಕೆಯಾಗಿದೆ.
ಇದಿಷ್ಟೇ ಅಲ್ಲ ಸ್ಥಳೀಯಗಳಲ್ಲಿ ಬೇಡಿಕೆ ಹೆಚ್ಚಾಗಿದೆ. ಇದಕ್ಕೆ ಹಬ್ಬದ ಪ್ರಭಾವವೂ ಕಾರಣವಿರಬಹುದು. ಮದುವೆ ಸರದಿ, ಉತ್ಸವ ಮತ್ತು ಹಬ್ಬಗಳ ಕಾರಣದಿಂದ ಚಿನ್ನದ ಬೇಡಿಕೆ ಹೆಚ್ಚಾಗುತ್ತದೆ. ಬೇಡಿಕೆ ಹೆಚ್ಚಾದಂತೆ, ಬೆಲೆ ಸಹ ಸ್ವಾಭಾವಿಕವಾಗಿ ಏರುತ್ತದೆ. ಸರ್ಕಾರವು ಚಿನ್ನದ ಆಮದು ಸುಂಕ ಹೆಚ್ಚಿಸಿದರೆ, ಬೆಲೆ ಕೂಡಾ ಏರಬಹುದು. ಈ ಎಲ್ಲ ಅಂಶಗಳ ಮೆಲ್ನೋಟದಿಂದ, ಚಿನ್ನದ ಬೆಲೆಯಲ್ಲಿ ಏರಿಕೆಯಾಗಲು ಜಾಗತಿಕ ಮತ್ತು ಸ್ಥಳೀಯ ಅನೇಕ ಕಾರಣಗಳಿವೆ.
ಭಾರತದಲ್ಲಿ ಚಿನ್ನದ ಬೆಲೆ
22 ಕ್ಯಾರಟ್ ಚಿನ್ನದ ಬೆಲೆ
ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿಇಂದಿನ ಚಿನ್ನದ ಬೆಲೆ ಏರಿಕೆಯಾಗಿದೆ, 22 ಕ್ಯಾರಟ್‌ನ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,065 ಇದೆ. ಅಂದರೆ ನಿನ್ನೆ ₹8,010 ಆಗಿದ್ದು ಇಂದು ₹55 ಹೆಚ್ಚಳವಾಗಿದೆ. 22 ಕ್ಯಾರಟ್‌ನ ಚಿನ್ನದ ಬೆಲೆ 10 ಗ್ರಾಂಗೆ 80 ಸಾವಿರದ 650 ರೂ. ಇದೆ. ಅಂದರೆ ನಿನ್ನೆ 80 ಸಾವಿರದ 100 ರೂ. ಆಗಿದ್ದು ಇಂದು ₹550 ಹೆಚ್ಚಳವಾಗಿದೆ. ಹಾಗೆಯೇ 22 ಕ್ಯಾರಟ್‌ನ ಚಿನ್ನದ ಬೆಲೆ 100 ಗ್ರಾಂಗೆ 8 ಲಕ್ಷದ 6,500 ರೂ. ಆಗಿದೆ. ಅಂದರೆ ನಿನ್ನೆ 8 ಲಕ್ಷ 1 ಸಾವಿರ ರೂ. ಆಗಿದ್ದು ಇಂದು ₹5,500 ಹೆಚ್ಚಳವಾಗಿದೆ.
24 ಕ್ಯಾರಟ್ ಚಿನ್ನದ ಬೆಲೆ
24 ಕ್ಯಾರಟ್‌ನ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,798 ಇದೆ. ಅಂದರೆ ನಿನ್ನೆಯ ಬೆಲೆ ₹8,738 ಆಗಿದ್ದು ಇಂದು ಪ್ರತಿ ಗ್ರಾಂಗೆ ₹60 ಏರಿಕೆಯಾಗಿದೆ. 24 ಕ್ಯಾರಟ್‌ನ ಚಿನ್ನದ ಬೆಲೆ 10 ಗ್ರಾಂಗೆ 87 ಸಾವಿರದ 980 ರೂ. ಇದೆ. ಅಂದರೆ ನಿನ್ನೆಯ ಬೆಲೆ 87 ಸಾವಿರದ 380 ರೂ. ಆಗಿದ್ದು ಇಂದು ಪ್ರತಿ ಗ್ರಾಂಗೆ ₹600 ಏರಿಕೆಯಾಗಿದೆ. ಹಾಗೆಯೇ 24 ಕ್ಯಾರಟ್‌ನ ಚಿನ್ನದ ಬೆಲೆ 100 ಗ್ರಾಂಗೆ 8 ಲಕ್ಷ 79 ಸಾವಿರದ 800 ರೂ. ಆಗಿದೆ. ಅಂದರೆ ನಿನ್ನೆಯ ಬೆಲೆ 8 ಲಕ್ಷದ 73 ಸಾವಿರದ 800 ರೂ. ಆಗಿದ್ದು ಇಂದು ₹6,000 ಏರಿಕೆಯಾಗಿದೆ.
18 ಕ್ಯಾರಟ್ ಚಿನ್ನದ ಬೆಲೆ
18 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹6,599 ಇದೆ. ಅಂದರೆ ನಿನ್ನೆಯ ಬೆಲೆ ₹6,554 ಆಗಿದ್ದು ಇಂದು ಪ್ರತಿ ಗ್ರಾಂಗೆ ₹45 ಏರಿಕೆಯಾಗಿದೆ. 18 ಕ್ಯಾರಟ್‌ನ ಚಿನ್ನದ ಬೆಲೆ 10 ಗ್ರಾಂಗೆ 65 ಸಾವಿರದ 990 ರೂ. ಇದೆ. ಅಂದರೆ ನಿನ್ನೆಯ ಬೆಲೆ 65 ಸಾವಿರದ 540 ರೂ. ಆಗಿದ್ದು ಇಂದು ಪ್ರತಿ ಗ್ರಾಂಗೆ ₹450 ಏರಿಕೆಯಾಗಿದೆ. ಹಾಗೆಯೇ ಕ್ಯಾರಟ್‌ನ ಚಿನ್ನದ ಬೆಲೆ 100 ಗ್ರಾಂಗೆ 6 ಲಕ್ಷ 59 ಸಾವಿರದ 900 ರೂ. ಆಗಿದೆ. ಅಂದರೆ ನಿನ್ನೆಯ ಬೆಲೆ 6 ಲಕ್ಷದ 55 ಸಾವಿರದ 400 ರೂ. ಆಗಿದ್ದು ಇಂದು ₹4,500 ಏರಿಕೆಯಾಗಿದೆ.
ವಿವಿಧ ನಗರಗಳಲ್ಲಿ ಚಿನ್ನದ ಬೆಲೆ
ನಗರ 22K ಚಿನ್ನ 24K ಚಿನ್ನ 18K ಚಿನ್ನ
ಚೆನೈ ₹8,065 ₹8,798 ₹6,645
ಮುಂಬೈ ₹8,065 ₹8,798 ₹6,599
ದೆಹಲಿ ₹8,080 ₹8,813 ₹6,611
ಕೋಲ್ಕತಾ ₹8,065 ₹8,798 ₹6,599
ಬೆಂಗಳೂರು ₹8,065 ₹8,798 ₹6,599
ಹೈದರಾಬಾದ್ ₹8,065 ₹8,798 ₹6,599
ಕೇರಳ ₹8,065 ₹8,798 ₹6,599
ಪುಣೆ ₹8,065 ₹8,798 ₹6,599
ಬರೋಡಾ ₹8,070 ₹8,803 ₹6,603
ಅಹಮದಾಬಾದ್ ₹8,070 ₹8,803 ₹6,603
ಸ್ಪಾಟ್ ಚಿನ್ನದ ದರ:
ಜಾಗತಿಕ ಮಾರುಕಟ್ಟೆಯಲ್ಲಿ ಇಂದು ಸ್ಪಾಟ್ ಗೋಲ್ಡ್ ಬೆಲೆ ಬೆಳಿಗ್ಗೆ 10:10ಕ್ಕೆ, ಪ್ರತಿ ಔನ್ಸ್‌ಗೆ$2,912.56 ಆಗಿತ್ತು. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನವನ್ನು ಭವಿಷ್ಯದ ವಹಿವಾಟು ಮೂಲಕ ಖರೀದಿಸುವ ದರ. ಇದು ಇಂದು $2,922.4 ಪ್ರತಿ ಔನ್ಸ್ ಆಗಿತ್ತು.


Click it and Unblock the Notifications