ಬೆಂಗಳೂರು: ಬೆಂಗಳೂರಿನಲ್ಲಿ (Bengaluru) ಕಳೆದ 2 ದಿನಗಳಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಲೇ ಇದೆ. ಇದೀಗ ಇಂದೂ (ಫೆ.9) ಬೆಂಗಳೂರಿನ ಹಲವೆಡೆ ಕರೆಂಟ್ (Bengaluru Power Cut) ಇರುವುದಿಲ್ಲ ಎಂದು ಬೆಸ್ಕಾಂ ತಿಳಿಸಿದೆ. ಬೆಂಗಳೂರಿನ ನಿವಾಸಿಗಳಿಗೆ ಫೆಬ್ರವರಿ 9, 2026, ಸೋಮವಾರದಂದು ಪವರ್ ಕಟ್ ಆಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (BESCOM) ಮಾಹಿತಿ ನೀಡಿದೆ. ನಿರ್ವಹಣಾ ಕಾರ್ಯಗಳ ಭಾಗವಾಗಿ, ಬೆಳಿಗ್ಗೆ 10:00 ರಿಂದ ಸಂಜೆ 5:00 ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಫೆಬ್ರವರಿ ಆರಂಭದಿಂದಲೇ ಬೆಂಗಳೂರಿನಲ್ಲಿ ಪವರ್ ಕಟ್ ಸಮಸ್ಯೆಯಾಗುತ್ತಲೇ ಇದೆ. ಇತ್ತೀಚೆಗೆ ಅಂತೂ ಪವರ್ ಕಟ್ ಅನ್ನೋದು ಬೆಂಗಳೂರಿನವರಿಗೆ ಸಾಮಾನ್ಯವಾಗಿಬಿಟ್ಟಿದೆ. ಆದ್ರೆ ಅಗತ್ಯ ಕೆಲಸ ಇರುವವರು ಮೊದಲೇ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳುವಂತೆ ಈ ಸೂಚನೆ ಹೊರಡಿಸಲಾಗಿದೆ.
ವಿದ್ಯುತ್ ಸೇವೆಯ ಗುಣಮಟ್ಟವನ್ನು ಹೆಚ್ಚಿಸಲು, ಅಗತ್ಯ ಮೂಲ ಸೌಕರ್ಯದ ನಿರ್ವಹಣೆಗಾಗಿ ಬೆಸ್ಕಾ ಫೆಬ್ರವರಿ ಆರಂಭದಿಂದಲೇ ನಗರದಾದ್ಯಂತ ಕೆಲಸ ಮಾಡುತ್ತಿದೆ. ಅದೇ ಕಾರಣದಿಂದ ಬೆಸ್ಕಾಂ ಮತ್ತು ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (KPTCL) ಪ್ರಮುಖ ಸಬ್‌ಸ್ಟೇಷನ್‌ಗಳು ಮತ್ತು ಪ್ರಸರಣ ಮಾರ್ಗಗಳಲ್ಲಿ ಇಂದು ನಿರ್ವಹಣಾ ಕಾರ್ಯ ಕೈಗೊಂಡಿದೆ.
ವಿದ್ಯುತ್ ಲೈನ್‌ಗಳ ಸುರಕ್ಷತೆ ಮತ್ತು ದೀರ್ಘಾವಧಿಯ ವಿಶ್ವಾಸಾರ್ಹತೆಯನ್ನು ಮತ್ತಷ್ಟು ಉತ್ತಮಗೊಳಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಇಂದೂ ಇರಲ್ಲ ಕರೆಂಟ್
ಫೆಬ್ರವರಿ 4 ರಿಂದ 9 ರವರೆಗೆ ನಿರ್ವಹಣಾ ಕಾರ್ಯದ ಮೊದಲೇ ಬೆಸ್ಕಾಂ ಪವರ್ ಕಟ್ ಕುರಿತು ಘೋಷಣೆ ಮಾಡಿತ್ತು. ಅದರಲ್ಲೂ ಪ್ರಭಾವ ವಿಶೇಷವಾಗಿ ಉತ್ತರ ಬೆಂಗಳೂರು ಮತ್ತು ಸುತ್ತಮುತ್ತಲಿನ ವಲಯಗಳ ಹಲವು ಪ್ರದೇಶಗಳ ಮೇಳೆ ಬೀರಿತ್ತು.
ಇಲ್ಲೆಲ್ಲಾ ಇರಲ್ಲ ಕರೆಂಟ್!
ಕಾವಲ್ ಬೈರಸಂದ್ರ,ಸುಲ್ತಾನ್ ಪಾಳ್ಯ, ರಂಕಾ ನಗರ, ಕನಕ ನಗರ, ಕೆಎಚ್‌ಬಿ ಮುಖ್ಯ ರಸ್ತೆ, ಭುವನೇಶ್ವರಿ ನಗರ, ಡಿ.ಜಿ.ಎ.ಹಳ್ಳಿ, ಕೆ.ಜೆ.ಹಳ್ಳಿ, ಎಲ್.ಆರ್.ಬಂಡೆ ಮುಖ್ಯ ರಸ್ತೆ, ಗಾಂಧಿನಗರ, ಚಿನ್ನಣ್ಣ ಲೇಔಟ್, ಅಂಬೇಡ್ಕರ್ ಲೇಔಟ್, ಅನ್ವರ್ ಲೇಔಟ್, ಕಾವೇರಿ ನಗರ, ಪೆರಿಯಾರ್ ನಗರ, ಶಾಂಪುರ, ಕುಶಾಲನಗರ, ಮೋದಿ ಗಾರ್ಡನ್, ದಿವ್ಯಾ ಶಾಂತಿ ಮತ್ತು ಗೋವಿಂದಪುರ.
ಇನ್ನು ಶಾಕಂಬರಿ ನಗರ, ಪೈಪ್‌ಲೈನ್ ರೋಡ್, ಜೆಪಿ ನಗರ ಮೊದಲೇ ಫೇಸ್, ಐಟಿಐ ಲೇಔಟ್ ಎಸ್.ಬಿ.ಐ ಕಾಲೋನಿ, ಆರ್.ವಿ. ಡೆಂಟಲ್ ಕಾಲೇಜ್, ರಾಘವೇಂದ್ರ ಸ್ವಾಮಿ ಮಠ, ಜನಯನಗರ 8, 5, 7 ನೇ ಬ್ಲಾಕ್, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್ ಇರುವುದಿಲ್ಲ.
ಫೆಬ್ರವರಿ 4 ರಿಂದ 9 ರವರೆಗಿನ ಬೆಸ್ಕಾಂ ನಿರ್ವಹಣಾ ಅವಧಿಯಲ್ಲಿ ಈ ಬಡಾವಣೆಗಳಲ್ಲಿ ನಿರಂತರವಾಗಿ ವಿದ್ಯುತ್ ಕಡಿತ ಉಂಟಾಗಿದೆ. ಇದರ ಜೊತೆಗೆ, ದಿನದ ನಿರ್ವಹಣಾ ಯೋಜನೆಯ ಆಧಾರದ ಮೇಲೆ ಇತರ ಸ್ಥಳೀಯ ಪ್ರದೇಶಗಳು ಮತ್ತು ಪಕ್ಕದ ಫೀಡರ್ ವಲಯಗಳಿಗೂ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.


Click it and Unblock the Notifications