ಈ ವರ್ಷವಂತೂ ಬೆಳ್ಳಿ ಬೆಲೆ (Silver Rate) ಕೂಡಾ ಸುರಕ್ಷಿತ ಹೂಡಿಕೆಯಾಗಿ ಬದಲಾಗುತ್ತಿದೆ. ಏಕೆಂದರೆ ಬೆಳ್ಳಿ ಬೆಲೆ ದಿನೇ ದಿನೇ ಭಾರೀ ಏರಿಕೆ ಕಾಣುತ್ತಿದೆ. ಭಾರೀ ಅಗ್ಗದಲ್ಲಿ ಸಿಗುತ್ತಿದ್ದ ಬೆಳ್ಳಿ, ಇಂದು ದುಬಾರಿ ಲೋಹವಾಗಿಬಿಟ್ಟಿದೆ. ಇಂದು ಕಮ್ಮಿಯಾಗಬಹುದು, ನಾಳೆ ಕಮ್ಮಿಯಾಗಬಹುದು ಎಂದು ನಿರೀಕ್ಷೆಯಲ್ಲಿದ್ದವರಿಗೆ ದಿನ ಹೋದಂತೆ ನಿರಾಸಾಭಾವ ವ್ಯಕ್ತವಾಗುತ್ತಿದೆ. ಇದೀಗ ಇಂದೂ ಕೂಡಾ (ಜ.14) ಭಾರತದಲ್ಲಿ ಬೆಳ್ಳಿ ದರ ಭರ್ಜರಿ ಏರಿಕೆ ಕಂಡಿದೆ.

ಜನವರಿ 14, 2026ರ ಮನಿ ಕಂಟ್ರೋಲ್ ವರದಿ ಪ್ರಕಾರ, ಮಲ್ಟಿ-ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX) ಬೆಳ್ಳಿ ದರ ಹಿಂದಿನ ವಹಿವಾಟಿಗಿಂತಲೂ ಏರಿಕೆ ಕಂಡಿದೆ. ಭಾರತೀಯ ಸಮಯ 10:07 ರ ಹೊತ್ತಿಗೆ ಪ್ರತೀ ಕೆಜಿಗೆ ಇಂದು 2,86,901 ಲಕ್ಷ ರೂ. ತಲುಪಿದೆ. ಅಂದರೆ ಹಿಂದಿನ ವಹಿವಾಟಿಗೆ ಹೋಲಿಸಿದ್ರೆ 4.22% ರಷ್ಟು ಏರಿಕೆ ಕಂಡಿದೆ. ಹಾಗಿದ್ರೆ ಬೇರೆ ರಾಜ್ಯಗಳಲ್ಲಿ ಬೆಳ್ಳಿ ದರ ಎಷ್ಟು ಏರಿಕೆಯಾಗಿದೆ ಗೊತ್ತಾ?.
ಭಾರತದಲ್ಲಿ ಬೆಳ್ಳಿ ದರ ಹೇಗಿದೆ?
ಬೆಳ್ಳಿ ಬೆಲೆ ಭಾರತದಲ್ಲಿ ದಿನೇ ದಿನೇ ಭಾರೀ ಹೆಚ್ಚಳವಾಗುತ್ತಿದೆ. ಅದರಲ್ಲೂ ಇಂದು ಭಾರೀ ಏರಿಕೆ ಕಂಡಿದೆ. ಅಂದರೆ 1 ಗ್ರಾಂ ಬೆಳ್ಳಿ ದರ ಇಂದು ₹290 ರೂ. ಆಗಿದ್ದು, ನಿನ್ನೆ ₹275 ರೂ. ಇತ್ತು. ನಿನ್ನೆಗಿಂತ ಇಂದು ಒಂದೇ ದಿನ ಪ್ರತೀ ಗ್ರಾಂನಲ್ಲಿ ₹15 ರೂ. ಏರಿಕೆ ಕಂಡಿದೆ. 8 ಗ್ರಾಂ ಬೆಳ್ಳಿ ಬೆಲೆ ₹2,320 ರೂ. ಆಗಿದೆ. ನಿನ್ನೆ ₹2,200 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ₹120 ರೂ. ಹೆಚ್ಚಳ ಕಂಡಿದೆ. 10 ಗ್ರಾಂ ಬೆಳ್ಳಿ ಬೆಲೆ ಇಂದು ₹2,900 ರೂ. ಆಗಿದೆ. ನಿನ್ನೆ ₹2,750 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹150 ರೂ. ಏರಿಕೆ ಕಂಡಿದೆ. ಇನ್ನು 100 ಗ್ರಾಂ ಬೆಳ್ಳಿ ಬೆಲೆ ₹29,000 ರೂ. ಆಗಿದ್ದು, ನಿನ್ನೆ ₹27,500 ರೂ. ಇತ್ತು. ಒಂದೇ ದಿನ ₹1,500 ರೂ. ಹೆಚ್ಚಳ ಕಂಡಿದೆ. 1000 ಗ್ರಾಂ ಬೆಳ್ಳಿ ಬೆಲೆ ₹2,90,000 ರೂ. ಆಗಿದ್ದು, ನಿನ್ನೆ ₹2,75,000 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹15,000 ರೂ. ಹೆಚ್ಚಳವಾಗಿದೆ.
ಭಾರತದಲ್ಲಿ ಚಿನ್ನದ ಬೆಲೆಯೂ ಏರಿಕೆ!
ಭಾರತದಲ್ಲಿ ಇಂದು ಚಿನ್ನದ ಬೆಲೆ ಗಗನಕ್ಕೇರಿದೆ. 24 ಕ್ಯಾರಟ್ ಚಿನ್ನದ ಬೆಲೆ ಇಂದು 14,362 ರೂ. ಆಗಿದೆ. ಅದೇ ರೀತಿ 22K ಚಿನ್ನದ ಬೆಲೆ 13,165 ರೂ. ಮತ್ತು 18K ಚಿನ್ನದ ಬೆಲೆ 10,772 ರೂ. ಹೆಚ್ಚಳ ಕಂಡಿದೆ.
ಬೆಂಗಳೂರಿನಲ್ಲಿ ಬೆಳ್ಳಿ ದರ ಎಷ್ಟಿದೆ?
ಬೆಂಗಳೂರಿನಲ್ಲೂ ನಿನ್ನೆಗಿಂತಲೂ ಇಂದು ಬೆಳ್ಳಿ ಬೆಲೆ ಭಾರೀ ಹೆಚ್ಚಳವಾಗಿದೆ. ಇಂದು 10 ಗ್ರಾಂ ಬೆಳ್ಳಿ ಬೆಲೆ ₹2,900 ರೂ. ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ ₹29,000 ರೂ., 1 ಕೆಜಿ ಬೆಳ್ಳಿ ದರ ₹2,90,000 ರೂ. ಆಗಿದೆ. ಅಂದರೆ ಪ್ರತೀ ಗ್ರಾಂ ಬೆಳ್ಳಿಯಲ್ಲಿ ಇಂದು 15 ರೂ. ಹೆಚ್ಚಳವಾಗಿದ್ದು, ಇದರಿಂದ ಬೆಳ್ಳಿ ಇಂದು ದುಬಾರಿಯಾಗಿದೆ.
ಚೆನ್ನೈ ಬೆಳ್ಳಿ ದರ:
ಚೆನ್ನೈನಲ್ಲಿ ಇಂದು 10 ಗ್ರಾಂ ಬೆಳ್ಳಿ ಬೆಲೆ ಇಂದು 3,070 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ದರ 30,700 ರೂ. ಇದೆ. ಅದೇ ರೀತಿ 1 ಕೆಜಿ ಬೆಳ್ಳಿ ದರ ಇಂದು 3,07,000 ರೂ. ಆಗಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದ್ರೆ ಚೆನ್ನೈನಲ್ಲಿ ಬೆಳ್ಳಿ ದರ ಏರಿಕೆಯೇ ಇರುತ್ತದೆ. ಅದೇ ರೀತಿ ಇಂದು ಒಂದು ಕೆಜಿ ಬೆಳ್ಳಿ ದರ 3 ಲಕ್ಷ ಗಡಿ ದಾಟಿದೆ.
ಮುಂಬೈ ಬೆಳ್ಳಿ ದರ:
ಮುಂಬೈನಲ್ಲಿ ಇಂದು 10 ಗ್ರಾಂ ಬೆಳ್ಳಿ ದರ 2,900 ರೂ. ತಲುಪಿದೆ. 100 ಗ್ರಾಂ ಬೆಳ್ಳಿ ಬೆಲೆ 29,000 ರೂ. ಆಗಿದೆ. ಹಾಗೆಯೇ 1 ಕೆಜಿ ಬೆಳ್ಳಿ ಬೆಲೆ 2,90,000 ರೂ. ಆಗಿದೆ.
ಹೈದರಾಬಾದ್ ಬೆಳ್ಳಿ ಬೆಲೆ:
ಹೈದರಾಬಾದ್‌ನಲ್ಲಿ ಇಂದು 10 ಗ್ರಾಂ ಬೆಳ್ಳಿ ಬೆಲೆ ಇಂದು 3,070 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ದರ 30,700 ರೂ. ಆಗಿದೆ. ಅಲ್ಲದೇ 1 ಕೆಜಿ ಬೆಳ್ಳಿ ಬೆಲೆ ಇಂದು 3,07,000 ರೂ. ಆಗಿದೆ.
ದೆಹಲಿ ಬೆಳ್ಳಿ ದರ:
ರಾಜಧಾನಿ ದೆಹಲಿಯಲ್ಲಿ ಇಂದು 10 ಗ್ರಾಂ ಬೆಳ್ಳಿ ದರ ₹2,900 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ಬೆಲೆ ₹29,000 ರೂ. ಆಗಿದೆ. ಹಾಗೆಯೇ 1 ಕೆಜಿ ಬೆಳ್ಳಿ ದರ ₹2,90,000 ರೂ. ಆಗಿದೆ.
MCX ಬೆಳ್ಳಿ ದರ:
ಜನವರಿ 14, 2026ರ ಮನಿ ಕಂಟ್ರೋಲ್ ವರದಿ ಪ್ರಕಾರ, ಮಲ್ಟಿ-ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX) ಬೆಳ್ಳಿ ದರ ಹಿಂದಿನ ವಹಿವಾಟಿಗಿಂತಲೂ ಏರಿಕೆ ಕಂಡಿದೆ. ಭಾರತೀಯ ಸಮಯ 10:07 ರ ಹೊತ್ತಿಗೆ ಪ್ರತೀ ಕೆಜಿಗೆ ಇಂದು 2,86,901 ಲಕ್ಷ ರೂ. ತಲುಪಿದೆ. ಅಂದರೆ ಹಿಂದಿನ ವಹಿವಾಟಿಗೆ ಹೋಲಿಸಿದ್ರೆ 4.22% ರಷ್ಟು ಏರಿಕೆ ಕಂಡಿದೆ.
ಸ್ಪಾಟ್ ಬೆಳ್ಳಿ ದರ:
ಜನವರಿ 14ರ GOLDPROCE.org ವರದಿ ಪ್ರಕಾರ, ಬೆಳಿಗ್ಗೆ 10:27ರ ಸಮಯದಲ್ಲಿ ಬೆಳ್ಳಿ ದರ ಪ್ರತೀ ಔನ್ಸ್‌ಗೆ $90.82 ಕ್ಕೆ ತಲುಪಿದೆ. ಅಂತೂ ದಾಖಲೆ ಬೆಲೆಯಲ್ಲಿ ಇಂದು ಬೆಳ್ಳಿ ವಹಿವಾಟು ನಡೆಸುತ್ತಿದೆ. ಹಿಂದಿನ ವಹಿವಾಟಿಗೆ ಹೋಲಿಸಿದ್ರೆ ಇಂದು 6.52%ನಲ್ಲಿ ವಹಿವಾಟು ನಡೆಸುತ್ತಿದೆ.


Click it and Unblock the Notifications