ಮಾಜಿ ಸಿಎಂ ಎಸ್‌ಎಂ ಕೃಷ್ಣ ನಿಧನ ಹಿನ್ನೆಲೆ ಸರ್ಕಾರ ರಾಜ್ಯದಾದ್ಯಂತ ರಜೆ ಘೋಷಣೆ ಮಾಡಿದೆ. ಅವರ ಗೌರವಾರ್ಥವಾಗಿ ಕರ್ನಾಟಕ ಸರ್ಕಾರ ಮೂರು ದಿನಗಳ ಶೋಕಾಚರಣೆಯನ್ನು ಘೋಷಿಸಿದೆ. ಹೀಗಾಗಿ ಶಾಲಾ ಕಾಲೇಜುಗಳಿಗೆ, ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಲಾಗಿದೆ. ಇನ್ನು ಈ ಹಿನ್ನೆಲೆ ನಮ್ಮ ಮೆಟ್ರೋ ಕೂಡ ಎಸ್‌ಎಂ ಕೃಷ್ಣ ನಿಧನಕ್ಕೆ ಸಂತಾಪ ಸೂಚಿಸಿ ಪ್ರಕಟಣೆಯನ್ನ ಹೊರಡಿಸಿತ್ತು. ಹೀಗಾಗಿ ಹಲವಾರು ಜನರು ಡಿಸೆಂಬರ್ 11ರಂದು ಮೆಟ್ರೋ ಸಂಚಾರ ಇರಲಿದೆಯಾ ಇಲ್ಲವಾ ಎಂಬ ಗೊಂದಲಕ್ಕೆ ಒಳಗಾಗಿದ್ದರು.
ಆದ್ರೆ ಈ ಎಲ್ಲಾ ಗೊಂದಲಗಳಿಗೆ ಬಿಎಂಆರ್‌ಸಿಎಲ್ ಪೂರ್ಣವಿರಾಮವನ್ನಿಟ್ಟಿದೆ. ಹೌದು ಡಿಸೆಂಬರ್ 11ರಂದು ಶಾಲಾ ಕಾಲೇಜು, ಸರ್ಕಾರಿ ಕಚೇರಿಗಳಿಗೆ ರಜೆ ಘೋಷಣೆ ಮಾಡಿದ್ರು ಕೂಡ ನಮ್ಮ ಮೆಟ್ರೋ ಎಂದಿನಂತೆ ಸೇವೆಯನ್ನ ನೀಡಲಿದೆ ಎಂದು BMRCL (ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್) ಸ್ಪಷ್ಟಪಡಿಸಿದೆ. ಹಾಗೆ ಎಂದಿನಂತೆ ಮೆಟ್ರೋಗಳು ಕಾರ್ಯನಿರ್ವಹಿಸಲಿದ್ದು, ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ನಮ್ಮ ಮೆಟ್ರೋ ತಿಳಿಸಿದೆ.

ಇತರೆ ಯಾವೆಲ್ಲಾ ಸೇವೆಗಳು ಇರಲಿದೆ
ಮಾಜಿ ಸಿಎಂ ಎಸ್‌ಎಂಕೃಷ್ಣ ಅವರ ನಿಧನ ಹಿನ್ನೆಲೆ ಅವರ ಗೌರವಾರ್ಥವಾಗಿ ಮೂರು ದಿನಗಳ ಶೋಕಾಚರಣೆ ಆಚರಿಸುವಂತೆ ಸರ್ಕಾರ ಸೂಚಿಸಿತ್ತು. ಹೀಗಾಗಿ ಬುಧವಾರ ಸಾರ್ವಜನಿಕ ರಜೆ ಘೋಷಿಸಲಾಗಿದೆ. ಅಲ್ಲದೆ ಗೌರವ ಸೂಚಕವಾಗಿ ಪ್ರಮುಖ ಸರ್ಕಾರಿ ಕಚೇರಿಗಳಲ್ಲಿ ಧ್ವಜಗಳನ್ನು ಅರ್ಧಕ್ಕೆ ಹಾರಿಸುವಂತೆ ಸರ್ಕಾರ ಸೂಚನೆ ನೀಡಿದೆ. ಇನ್ನು ಈ ಅವಧಿಯಲ್ಲಿ ಅಧಿಕೃತ ಆದೇಶದ ಪ್ರಕಾರ ಯಾವುದೇ ಸರ್ಕಾರಿ ಕಾರ್ಯಕ್ರಮಗಳು ಅಥವಾ ಮನರಂಜನಾ ಕಾರ್ಯಕ್ರಮಗಳನ್ನ ನಡೆಸುವಂತಿಲ್ಲ ಎಂದು ಸರ್ಕಾರ ಸೂಚನೆ ನೀಡಿದೆ.
ರಾಜ್ಯಕ್ಕೆ ಮಹತ್ವ ಕೊಡುಗೆ ನೀಡಿದಂತ ದಿವಂಗತ ಮಾಜಿ ಸಿಎಂ ಎಸ್‌ಎಂ ಕೃಷ್ಣ ಅವರಿಗೆ ಗೌರವ ಸಮರ್ಪಣೆ ಮಾಡುವ ಸಲುವಾಗಿ ಡಿಸೆಂಬರ್ 11ರಂದು, ಎಲ್ಲಾ ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳು, ಶಾಲೆಗಳು, ಕಾಲೇಜುಗಳು ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರ ರಜೆ ಘೋಷಣೆ ಮಾಡಿದೆ. ಅಲ್ಲದೆ ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳಿಗೂ ರಜೆಯನ್ನ ಘೋಷಿಸಲಾಗಿದೆ. ಹಾಗೆ ಡಿಸೆಂಬರ್ 12 ರಂದು ಎಂದಿನಂತೆ ಶಾಲಾ, ಕಾಲೇಜು, ಕಚೇರಿಗಳು ತೆರೆಯಲಿವೆ. ಹಾಗೆ ಬ್ಯಾಂಕ್‌ಗಳಿಗೆ ರಜೆ ಇರುತ್ತದಾ ಎಂಬ ಗೊಂದಲಾ ಕೂಡ ಇತ್ತು, ಆದ್ರೆ ಆರ್‌ಬಿಐ ನಿರ್ದೇಶಿಸದ ಹೊರತು ಬ್ಯಾಂಕ್‌ಗಳಿಗೆ ರಜೆ ಇರುವುದಿಲ್ಲ. ಹೀಗಾಗಿ ಎಂದಿನಂತೆ ಬ್ಯಾಂಕ್‌ಗಳು ತೆರೆದಿರುತ್ತವೆ ಎಂದು ನಿರೀಕ್ಷಿಸಲಾಗಿದೆ.ಇದೆಲ್ಲದರ ಜೊತೆಗೆ ನಮ್ಮ ಮೆಟ್ರೋ ಸಂಚಾರ ಕೂಡ ಎಂದಿನಂತೆ ಕಾರ್ಯನಿರ್ವಹಿಸಲಿದ್ದು, ಸಾರ್ವಜನಿಕ ರಜೆಯ ಹೊರತಾಗಿಯೂ ಕೂಡ ಜನರಿಗೆ ಮೆಟ್ರೋ ಸೇವೆಯನ್ನ ಒದಗಿಸಲಿದೆ.
ಹಿರಿಯ ನಾಯಕ ದಿವಂಗತ ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ ಅವರ ನಿಧನಕ್ಕೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಸಂತಾಪ ಸೂಚಿಸಿದ್ರು. ಎಸ್ ಎಂ ಕೃಷ್ಣ ಅವರು ನನ್ನ ತಂದೆಯಿದ್ದಂತೆ ಅವೆ ಮಾರ್ಗದರ್ಶನ, ಸಲಹೆ ನನ್ನ ಜೀವನದಲ್ಲಿ ಎದ್ದುಕಾಣುತ್ತಿದೆ, ಅವರು ನವ ಕರ್ನಾಟಕದ ಶಿಲ್ಪಿ ಎಂದರು.ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ ಅವರು 1932 ಮೇ 1 ರಂದು ಜನಿಸಿದರು. ಹುಟ್ಟೂರಿನಲ್ಲೇ ಪ್ರಥಮಿಕ- ಪ್ರೌಡ ಶಿಕ್ಷಣವನ್ನ ಪಡೆದ ಕೃಷ್ಣ ಅವರು, ಮೈಸುರು ಹಾಗೂ ಅಮೇರಿಕಾ ವಿಶ್ವವಿದ್ಯಾಲಯದಿಂದ ಪದವಿಯನ್ನ ಪಡೆದರು. ನಂತರ ನಂತರ 1962ರಲ್ಲಿ ರಾಜಕೀಯಕ್ಕೆ ದುಮುಖಿದ ಕೃಷ್ಣ ಅವರು ಮೊದಲ ಗೆಲುವಿನೊಂದಿಗೆ ರಾಜ್ಯಕೀಯ ಪಡಸಾಲೆಯಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದರು. ನಿಧಾನವಾಗಿ ರಾಜಕೀಯ ಮೈಲುಗಲ್ಲನ್ನ ಸಾಧಿಸುತ್ತಾ ಬಂದ ಅವರು ಮುಖ್ಯಮಂತ್ರಿಯಾಗಿ, ಕೆಪಿಸಿಸಿ ಅಧ್ಯಕ್ಷರಾಗಿ, ಸಂಸದ, ಕೇಂದ್ರ ಸಚಿವರಾಗಿ. ಅಷ್ಟೇ ಅಲ್ಲ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದಾರೆ.2023 ರಲ್ಲಿ ಕೃಷ್ಣ ಅವರಿಗೆ ಭಾರತ ಸರ್ಕಾರ ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣವನ್ನು ನೀಡಿ ಗೌರವಿಸಿದೆ.
1999 ರಿಂದ 2004 ರವರೆಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ ಎಸ್‌ಎಂ ಕೃಷ್ಣ ಅವರು ಕರ್ನಾಟಕದ ಪ್ರಭಾವಿ ಭಾರತೀಯ ರಾಜಕಾರಣಿಯಾಗಿದ್ದಾರೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸದಸ್ಯರಾಗಿದ್ದ ಅವರು ತಮ್ಮ ನಾಯಕತ್ವದ ಅವಧಿಯಲ್ಲಿ ರಾಜ್ಯದ ಮೂಲಸೌಕರ್ಯ ಮತ್ತು ಆರ್ಥಿಕತೆಯನ್ನು ಆಧುನೀಕರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕೃಷ್ಣ ಅವರು 2009 ರಿಂದ 2012 ರವರೆಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸಿದರು, ಅಲ್ಲಿ ಅವರು ದೇಶದ ವಿದೇಶಾಂಗ ನೀತಿಯನ್ನು ರೂಪಿಸಲು ಕೊಡುಗೆ ನೀಡಿದರು. ನಂತರ, ಅವರು 2014 ರಲ್ಲಿ ಮಹಾರಾಷ್ಟ್ರದ ಗವರ್ನರ್ ಆಗಿ ನೇಮಕಗೊಂಡರು. ಅವರ ರಾಜತಾಂತ್ರಿಕ ಕೌಶಲ್ಯ, ಶಾಂತ ವರ್ತನೆ ಮತ್ತು ಪರಿಣಾಮಕಾರಿ ಆಡಳಿತಕ್ಕೆ ಹೆಸರುವಾಸಿಯಾದ ಎಸ್.ಎಂ.ಕೃಷ್ಣ ಹಲವಾರು ದಶಕಗಳಿಂದ ಭಾರತೀಯ ರಾಜಕೀಯದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದಾರೆ.
ಎಸ್.ಎಂ ಕೃಷ್ಣ ಒಬ್ಬರು ದೀಮಂತ ರಾಜಕಾರಣಿ, ಅಜಾತ ಶತೃ ಎಂದು ಕರೆಯಲಾಗುತ್ತೆ.ಮುತ್ಸದ್ದಿ ರಾಜಕಾರಣಿಯ ಮರಣಕ್ಕೆ ಇಡೀ ದೇಶವೇ ಮಿಡಿದಿದ್ದು, ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ. ಆದರೆ ಬ್ಯಾಂಕು ಸಿಬ್ಬಂದಿ ಮಾತ್ರ ಇನ್ನೂ ಗೊಂದಲದಲ್ಲಿದ್ದು, ನಾಳಿನ ರಜೆಗಾಗಿ ಎದುರು ನೋಡುತ್ತಿದ್ದಾರೆ. ಆದರೆ ಈ ಬಗ್ಗೆ ಆರ್‌ಬಿಐ ಇನ್ನೂ ಯಾವುದೇ ನಿರ್ಧಾರಗಳನ್ನ ತೆಗೆದುಕೊಂಡಿಲ್ಲ. ಹಾಗಾಗಿ ನಾಳೆ ಬ್ಯಾಂಕುಗಳು ಎಂದಿನಂತೆ ಎರೆದಿರುತ್ತದೆ ಎಂದು ಹೇಳಲಾಗುತ್ತಿದೆ.
More From GoodReturns

Bengaluru - Stock Market: ಷೇರು ಮಾರುಕಟ್ಟೆಯಲ್ಲಿ ಭಾರೀ ನಷ್ಟ; ಮನನೊಂದು ಬೆಂಗಳೂರಿನ ವ್ಯಕ್ತಿ ಆತ್ಮಹತ್ಯೆ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Bengaluru: ಮಳೆಗಾಲಕ್ಕೂ ಮುನ್ನ ಫೀಲ್ಡ್ಗೆ ಇಳಿದ ಶಾಸಕ ಗೋಪಾಲಯ್ಯ...ಮಹಾಲಕ್ಷ್ಮಿ ಲೇಔಟ್ನಲ್ಲಿ ಕಾಮಗಾರಿಗಳ ಪರಿಶೀಲನೆ!

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru: ಬೆಂಗಳೂರಿಗೆ 5,000 ರೂ. ಕೋಟಿ ಪ್ರವಾಹ ಯೋಜನೆ, 41 ಕಿ.ಮೀ ಮೆಟ್ರೋ, 450 ಕಿ.ಮೀ ರಸ್ತೆ ಅಭಿವೃದ್ಧಿ!

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಇರಲ್ಲ ಕರೆಂಟ್! ಎಲ್ಲೆಲ್ಲಿ ಗೊತ್ತಾ?

Bengaluru-Mangaluru Flight: ಬೆಂಗಳೂರು-ಮಂಗಳೂರು ವಿಮಾನ ಪ್ರಯಾಣಿಕರಿಗೆ ಬಂಪರ್ ಸುದ್ದಿ! ಇನ್ಮೇಲೆ ತಡರಾತ್ರಿಯೂ ವಿಮಾನ ಸೇವೆ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Bengaluru: ಬೆಂಗಳೂರು ಮೂಲಸೌಕರ್ಯ ಮತ್ತು ಸ್ಮಾರ್ಟ್ ಸಿಟಿ ಯೋಜನೆಗಳಿಗೆ 7000 ಕೋಟಿ ರೂ. ಹೂಡಿಕೆ!

Karnataka Budget 2026–27: ಬೆಂಗಳೂರು ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳಿಗೆ ಒತ್ತು ಸಾಧ್ಯತೆ!

Bengaluru Airport: ಬೆಂಗಳೂರು ಏರ್ಪೋರ್ಟ್ಗೆ 2025ರ ACI ಪ್ರಶಸ್ತಿ... ಪ್ರಯಾಣಿಕರ ಹೃದಯ ಗೆದ್ದ ವಿಮಾನ ನಿಲ್ದಾಣ!



Click it and Unblock the Notifications