ಇಂದಿನ ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ ತಂತ್ರಜ್ಞಾನ, ಇ-ವಾಣಿಜ್ಯ, ಐಷಾರಾಮಿ ವಸ್ತುಗಳು ಮತ್ತು ಹೂಡಿಕೆ ಕ್ಷೇತ್ರಗಳಲ್ಲಿ ಪ್ರಭುತ್ವ ಸಾಧಿಸಿದವರು ವಿಶ್ವದ ಟಾಪ್ ಬಿಲಿಯನೇರ್‌ಗಳು. ಅವರ ನವೀನ ಆಲೋಚನೆಗಳು, ತಂತ್ರಗಳು ಮತ್ತು ಉದ್ಯಮ ಸ್ಥಾಪನೆಯ ದೃಷ್ಟಿಕೋನವು ಜಾಗತಿಕ ಆರ್ಥಿಕತೆಯ ಪರಿಕಲ್ಪನೆಯನ್ನು ಸಂಪೂರ್ಣವಾಗಿ ರೂಪಿಸುತ್ತಿದೆ. ಫೋರ್ಬ್ಸ್ ಪ್ರಕಟಿಸಿದ ಇತ್ತೀಚಿನ ಪಟ್ಟಿಯಲ್ಲಿ, ಹತ್ತು ಶ್ರೀಮಂತ ವ್ಯಕ್ತಿಗಳಲ್ಲಿ ಒಂಬತ್ತು ಮಂದಿ ಅಮೆರಿಕ ಮೂಲದವರು ಎನ್ನುವುದು ಅಮೆರಿಕದ ಆರ್ಥಿಕ ಪ್ರಭಾವವನ್ನು ಪ್ರತಿಬಿಂಬಿಸುತ್ತದೆ.

1. ಎಲೋನ್ ಮಸ್ಕ್..ಟೆಸ್‌ಲಾ, ಸ್ಪೇಸ್‌ಎಕ್ಸ್, ಎಕ್ಸ್ (ಟ್ವಿಟರ್):
ಎಲೋನ್ ಮಸ್ಕ್ ಅವರು ವಿಶ್ವದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು, $408.5 ಬಿಲಿಯನ್ ಮೌಲ್ಯದ ಸಂಪತ್ತನ್ನು ಹೊಂದಿದ್ದಾರೆ. ವಿದ್ಯುತ್ ವಾಹನಗಳಲ್ಲಿ ತಂತ್ರಜ್ಞಾನವನ್ನು ಕ್ರಾಂತಿಕರವಾಗಿ ರೂಪಿಸಿದ ಟೆಸ್ಲಾದಲ್ಲಿ 12% ಪಾಲು ಹೊಂದಿದ್ದಾರೆ. ಬಾಹ್ಯಾಕಾಶ ಸಂಸ್ಥೆ ಸ್ಪೇಸ್‌ಎಕ್ಸ್‌ನಲ್ಲಿ 42% ಹಂಚು ಹೊಂದಿರುವ ಮಸ್ಕ್, ಎಕ್ಸ್ (ಹಳೆಯ ಟ್ವಿಟರ್).
2. ಲ್ಯಾರಿ ಎಲಿಸನ್.. ಒರಾಕಲ್ ಸಂಸ್ಥಾಪಕ:
$296.1 ಬಿಲಿಯನ್ ಮೌಲ್ಯದ ಸಂಪತ್ತನ್ನು ಹೊಂದಿರುವ ಲ್ಯಾರಿ ಎಲಿಸನ್, ಡೇಟಾಬೇಸ್ ತಂತ್ರಜ್ಞಾನದ ಮಾಲೀಕತ್ವ ಹೊಂದಿರುವ ಒರಾಕಲ್ ಸಂಸ್ಥೆಯ ಸ್ಥಾಪಕರಾಗಿದ್ದಾರೆ. ಒರಾಕಲ್‌ನ 40% ಷೇರುಗಳ ಮೂಲಕ ಅವರ ಧನಸಂಪತ್ತು ಹೆಚ್ಚಾಗಿದೆ.
3. ಜೆಫ್ ಬೆಜೋಸ್..ಅಮೆಜಾನ್ ಸ್ಥಾಪಕ:
ಇ-ವಾಣಿಜ್ಯದಲ್ಲಿ ಕ್ರಾಂತಿ ತಂದ ಅಮೆಜಾನ್ ಸಂಸ್ಥೆಯ ಸ್ಥಾಪಕ ಜೆಫ್ ಬೆಜೋಸ್ $243.6 ಬಿಲಿಯನ್ ಮೌಲ್ಯದ ಸಂಪತ್ತನ್ನು ಹೊಂದಿದ್ದಾರೆ. ಬ್ಲೂ ಅರಿಜಿನ್ ಎಂಬ ಖಾಸಗಿ ಬಾಹ್ಯಾಕಾಶ ಸಂಸ್ಥೆಯ ಮಾಲೀಕರಾಗಿರುವ ಅವರು, ಹವಾಮಾನ ಬದಲಾವಣೆ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿಯೂ ಮಹತ್ವದ ಹೂಡಿಕೆಗಳನ್ನು ಮಾಡುತ್ತಿದ್ದಾರೆ.
4. ಮಾರ್ಕ್ ಜುಕರ್‌ಬರ್ಗ್..ಮೆಟಾ ಪ್ಲಾಟ್‌ಫಾರ್ಮ್ಸ್:
ಫೇಸ್‌ಬುಕ್‌ನ ಸ್ಥಾಪಕರಾದ ಮಾರ್ಕ್ ಜುಕರ್‌ಬರ್ಗ್ $241.6 ಬಿಲಿಯನ್ ಸಂಪತ್ತಿನೊಂದಿಗೆ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅವರು ಮೆಟಾ ಕಂಪನಿಯಲ್ಲಿ 13% ಪಾಲು ಹೊಂದಿದ್ದಾರೆ. ಮೆಟಾವರ್ಸ್, AI ಮತ್ತು ವರ್ಚುವಲ್ ರಿಯಾಲಿಟಿಯ ತಂತ್ರಜ್ಞಾನಗಳಲ್ಲಿ ಬೃಹತ್ ಹೂಡಿಕೆ ಮಾಡುತ್ತಿದ್ದಾರೆ.
5. ಲ್ಯಾರಿ ಪೇಜ್..ಗೂಗಲ್ ಸಹ-ಸ್ಥಾಪಕ:
ಗೂಗಲ್‌ನ ಸಹ-ಸ್ಥಾಪಕರಾದ ಲ್ಯಾರಿ ಪೇಜ್ $160.8 ಬಿಲಿಯನ್ ಸಂಪತ್ತನ್ನು ಹೊಂದಿದ್ದು, ಗೂಗಲ್ ಮತ್ತು ಆಲ್ಫಾಬೆಟ್ ಸಂಸ್ಥೆಗಳ ಮೇಲೆ ಪ್ರಭಾವವನ್ನು ಮುಂದುವರೆಸಿದ್ದಾರೆ. AI, ಹಾರುವ ವಾಹನಗಳು ಮತ್ತು ದೀರ್ಘಕಾಲೀನ ತಂತ್ರಜ್ಞಾನ ಯೋಜನೆಗಳಲ್ಲಿ ಅವರು ಹೂಡಿಕೆ ಮಾಡುತ್ತಿದ್ದಾರೆ.
6. ಸೆರ್ಗೆ ಬ್ರಿನ್..ಗೂಗಲ್ ಸಹ-ಸ್ಥಾಪಕ:
$153.5 ಬಿಲಿಯನ್ ಮೌಲ್ಯದ ಸಂಪತ್ತನ್ನು ಹೊಂದಿರುವ ಸೆರ್ಗೆ ಬ್ರಿನ್ ಸಹ ಗೂಗಲ್ ಸ್ಥಾಪನೆಯಲ್ಲಿಯೂ, ಆಲ್ಫಾಬೆಟ್ ಕಂಪನಿಯ ಆಂತರಿಕ ಪ್ರಗತಿಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. AI, ರೊಬೊಟಿಕ್ಸ್, ಮತ್ತು ನವೋದ್ಯಮಗಳಲ್ಲಿ ಹೂಡಿಕೆಯಿಂದ ಮುಂದಾಳತ್ವವನ್ನು ಮುಂದುವರೆಸುತ್ತಿದ್ದಾರೆ.
7. ಜೆನ್ಸನ್ ಹುವಾಂಗ್ - ಎನ್ವಿಡಿಯಾ ಸಿಇಒ:
ಗ್ರಾಫಿಕ್ಸ್ ಪ್ರೊಸೆಸರ್ ಕ್ಷೇತ್ರದಲ್ಲಿ ಹೆಸರುವಾಸಿಯಾದ ಎನ್ವಿಡಿಯಾ ಸಂಸ್ಥೆಯ ಸ್ಥಾಪಕರಾದ ಜೆನ್ಸನ್ ಹುವಾಂಗ್ $152.7 ಬಿಲಿಯನ್ ಸಂಪತ್ತನ್ನು ಹೊಂದಿದ್ದಾರೆ. AI ಚಿಪ್‌ಗಳ ಜಾಗತಿಕ ಬೇಡಿಕೆಯಿಂದಾಗಿ ಎನ್ವಿಡಿಯಾದ ಮೌಲ್ಯವು ಭಾರಿಯಾಗಿ ಏರಿಕೆಯಾಗಿದ್ದು, ಕಂಪನಿಯಲ್ಲಿ 3% ಪಾಲು ಹೊಂದಿದ್ದಾರೆ.
8. ಬರ್ನಾರ್ಡ್ ಅರ್ನಾಲ್ಟ್:
ಫ್ರಾನ್ಸ್‌ನವರಾದ ಬರ್ನಾರ್ಡ್ ಅರ್ನಾಲ್ಟ್, ಐಷಾರಾಮಿ ಉತ್ಪನ್ನ ಕಂಪನಿ LVMH ನ ಅಧ್ಯಕ್ಷರಾಗಿದ್ದು $147.9 ಬಿಲಿಯನ್ ಸಂಪತ್ತನ್ನು ಹೊಂದಿದ್ದಾರೆ. ಲೂಯಿ ವಿಟಾನ್, ಡಿಯರ್, ಸೆಫೊರಾ ಮುಂತಾದ 70ಕ್ಕೂ ಹೆಚ್ಚು ಐಷಾರಾಮಿ ಬ್ರಾಂಡ್‌ಗಳನ್ನೊಳಗೊಂಡ ಈ ಸಾಮ್ರಾಜ್ಯವು ಯುರೋಪಿನ ಶ್ರೇಷ್ಠ ಬಿಲಿಯನೇರ್ ಸ್ಥಾನವನ್ನು ಅವರಿಗೆ ನೀಡಿದೆ.
9. ಸ್ಟೀವ್ ಬಾಲ್ಮರ್ - ಮೈಕ್ರೋಸಾಫ್ಟ್ ಮಾಜಿ ಸಿಇಒ:
ಮೈಕ್ರೋಸಾಫ್ಟ್ ಸಂಸ್ಥೆಯ ಮಾಜಿ ಸಿಇಒ ಆಗಿರುವ ಸ್ಟೀವ್ ಬಾಲ್ಮರ್ $144 ಬಿಲಿಯನ್ ಸಂಪತ್ತಿನೊಂದಿಗೆ ತಂತ್ರಜ್ಞಾನ ಮತ್ತು ಕ್ರೀಡೆ ಕ್ಷೇತ್ರಗಳಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸಿಕೊಂಡಿದ್ದಾರೆ. ಅವರು NBA ತಂಡ ಲಾಸ್ ಏಂಜಲೀಸ್ ಕ್ಲಿಪ್ಪರ್ಸ್‌ನ್ನು ಖರೀದಿಸಿ ಕ್ರೀಡಾಕ್ಷೇತ್ರದಲ್ಲೂ ತನ್ನ ಹೂಡಿಕೆಯನ್ನು ವಿಸ್ತರಿಸಿದ್ದಾರೆ.
10. ವಾರೆನ್ ಬಫೆಟ್:
ಹೂಡಿಕೆ ಕ್ಷೇತ್ರದ ಐಕಾನ್ ಆಗಿರುವ ವಾರೆನ್ ಬಫೆಟ್ $142.1 ಬಿಲಿಯನ್ ಮೌಲ್ಯದ ಸಂಪತ್ತನ್ನು ಹೊಂದಿದ್ದಾರೆ. ಬರ್ಕ್‌ಷೈರ್ ಹ್ಯಾಥ್‌ವೇ ಕಂಪನಿಯ ಮೂಲಕ ಅವರು ಡ್ಯುರಾಸೆಲ್, ಗೀಕೊ, ಡೈರಿ ಕ್ವೀನ್ ಮುಂತಾದ ಹಲವಾರು ಬ್ರಾಂಡ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ.
ಈ ಬಿಲಿಯನೇರ್‌ಗಳ ಜೀವನಕಥೆಗಳು ಕೇವಲ ಹಣಕಾಸಿನ ಅಂಶವಲ್ಲ; ದೃಷ್ಟಿಕೋನ, ಅಪಾಯ ತೆಗೆದುಕೊಳ್ಳುವ ಧೈರ್ಯ, ತಂತ್ರಜ್ಞಾನವನ್ನು ಅಳವಡಿಸುವ ಮುನ್ನೋಟ ಮತ್ತು ಮಾನವತೆಗೂ ಸಹ ಸಮಾನವಾಗಿ ಸಂಬಂಧ ಹೊಂದಿವೆ. ಅವರು ಹೆಜ್ಜೆ ಇಟ್ಟಿರುವ ಉದ್ಯಮಗಳ ಬದಲಾವಣೆಯು ನೂರಾರು ಕೋಟಿ ಜನರ ಬದುಕಿಗೆ ಪ್ರಭಾವ ಬೀರುತ್ತಿದ್ದು, ಭವಿಷ್ಯವನ್ನು ರೂಪಿಸುತ್ತಿದೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಸಾವರಿನ್ ಗೋಲ್ಡ್ ಬಾಂಡ್ ಹೂಡಿಕೆದಾರರೇ, ಇಂದೇ ನಗದೀಕರಿಸಿಕೊಳ್ಳಿ ನಿಮ್ಮ ಲಾಭ!



Click it and Unblock the Notifications