ಐಸಿಸಿ ಏಕದಿನ ವಿಶ್ವಕಪ್ 2025 (ICC World Cup), ನವೆಂಬರ್ 2 ಭಾನುವಾರದಂದು ಅದ್ಧೂರಿಯಾಗಿ ನವಿಮುಂಬೈನಲ್ಲಿ ಜರುಗಿತು. ಈ ಫೈನಲ್ ಪಂದ್ಯದಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ದಕ್ಷಿಣ ಆಫ್ರಿಕಾವನ್ನು (India-South Africa) 52 ರನ್‌ಗಳಿಂದ ಸೋಲಿಸುವ ಮೂಲಕ, 52 ವರ್ಷಗಳ ಮಹಿಳಾ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಚೊಚ್ಚಲ ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿದೆ. ಇನ್ನು ಈ ಬಾರಿ ಮಹಿಳಾ ವಿಶ್ವಕಪ್‌ನ ಬಹುಮಾನದ ಮೊತ್ತ ಕೂಡಾ ಹೆಚ್ಚಿಸಲಾಗಿದ್ದು, ಈ ಹಿಂದೆಗಿಂತ ಮೂರು ಪಟ್ಟು ಹೆಚ್ಚಾಗಿದೆ ಎನ್ನಲಾಗಿದೆ.

ಈ ಮಧ್ಯೆ ಸೋಷಿಯಲ್ ಮೀಡಿಯಾದಲ್ಲಿ ಶ್ರೀಮಂತ ಮಹಿಳಾ ಭಾರತೀಯ ಕ್ರಿಕೆಟಿಗರು ಯಾರು ಎಂಬ ಪ್ರಶ್ನೆ ಉದ್ಭವಿಸಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
ಮಿತಾಲಿ ರಾಜ್ ಮತ್ತು ಝೂಲನ್ ಗೋಸ್ವಾಮಿ ಅವರಂತಹ ಅನುಭವಿ ಆಟಗಾರ್ತಿಯರಿಂದ ಹಿಡಿದು ಸ್ಮೃತಿ ಮಂಧಾನಾ ಮತ್ತು ಹರ್ಮನ್‌ಪ್ರೀತ್ ಕೌರ್ ಯುವ ಪ್ರತಿಭೆಗಳವರೆಗೆ ಇಂದು ಕ್ರಿಕೆಟ್ ಮೂಲಕ ಶ್ರೀಮಂತರಾಗಿದ್ದಾರೆ.
ಮಿತಾಲಿ ರಾಜ್: ಶ್ರೀಮಂತ ಮಹಿಳಾ ಕ್ರಿಕೆಟಿಗರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಮಿತಾಲಿ ರಾಜ್ ಇದ್ದಾರೆ. ಅವರ ಅಂದಾಜು ನಿವ್ವಳ ಮೌಲ್ಯ ₹40-45 ಕೋಟಿ ರೂ. ನಿವೃತ್ತಿಯ ನಂತರವೂ, ಮಿತಾಲಿ ಸದ್ಯ ಜಾಹೀರಾತುಗಳು ಮತ್ತು ಕ್ರೀಡಾ ಕ್ಷೇತ್ರದಲ್ಲಿ ತಮ್ಮ ಸಂಪಾದನೆಯನ್ನು ಮುಂದುವರೆಸಿದ್ದಾರೆ
ಸ್ಮೃತಿ ಮಂಧಾನಾ: ಮಹಿಳಾ ಕ್ರಿಕೆಟಿಗರಲ್ಲಿ ಅತ್ಯಂತ ಜನಪ್ರಿಯ ಹೆಸರುಗಳಲ್ಲಿ ಸ್ಮೃತಿ ಮಂಧಾನಾ ಕೂಡಾ ಒಬ್ಬರು. ಭಾರತೀಯ ತಂಡದ ವೈಸ್ ಕ್ಯಾಪ್ಟನ್ ಆಗಿದ್ದ ಸ್ಮೃತಿ ಮಂಧಾನ ಅವರ ಒಟ್ಟು ಆಸ್ತಿ ₹32-34 ಕೋಟಿ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಅವರನ್ನು WPL ನಲ್ಲಿ ₹3.4 ಕೋಟಿಗೆ ಖರೀದಿಸಿದೆ. ಜೊತೆಗೆ ಹಲವಾರು ಬ್ರಾಂಡ್ ಪ್ರಮೋಟರ್ ಆಗಿಯೂ ಕಾಣಿಸಿಕೊಂಡಿದ್ದಾರೆ.
ಹರ್ಮನ್‌ಪ್ರೀತ್ ಕೌರ್: ಸದ್ಯ ಭಾರತೀಯ ತಂಡ ನಾಯಕಿ ಹರ್ಮನ್‌ಪ್ರೀತ್ ಕೂಡಾ ಶ್ರೀಮಂತ ಮಹಿಳಾ ಕ್ರಿಕೆಟಿಗರಲ್ಲಿ ಮೂರನೇಯವರು. ಅವರ ನಿವ್ವಳ ಮೌಲ್ಯ ₹24-26 ಕೋಟಿ. ಅವರು BCCI ಗ್ರೇಡ್ A ಒಪ್ಪಂದದ ವಾರ್ಷಿಕ ₹50 ಲಕ್ಷ, ಮುಂಬೈ ಇಂಡಿಯನ್ಸ್‌ನೊಂದಿಗೆ ₹1.8 ಕೋಟಿ WPL ಒಪ್ಪಂದ ಮತ್ತು ಹಲವಾರು ಜಾಹೀರಾತುಗಳ ಹಣ ಸಂಪಾದಿಸುತ್ತಿದ್ದಾರೆ.
ಝೂಲನ್ ಗೋಸ್ವಾಮಿ: ವೇಗದ ಬೌಲರ್ ಆಗಿ ಗುರುತಿಸಿಕೊಂಡಿದ್ದ ಝೂಲನ್ ಗೋಸ್ವಾಮಿ, ಸದ್ಯ ನಿವೃತ್ತರಾಗಿದ್ದಾರೆ. ಸದ್ಯ ಝೂಲನ್ ಗೋಸ್ವಾಮಿ ಅವರ ಅಂದಾಜು ನಿವ್ವಳ ಮೌಲ್ಯ ₹8 ಕೋಟಿ. ನಿವೃತ್ತಿಯ ನಂತರ, ಝೂಲನ್, ಲೆಜೆಂಡ್ಸ್ ಲೀಗ್ ಕ್ರಿಕೆಟ್ ಮತ್ತು ಏರ್ ಇಂಡಿಯಾದೊಂದಿಗೆ ಸಹ ಆಕ್ಟಿವ್ ಆಗಿದ್ದಾರೆ.
ಶಫಾಲಿ ವರ್ಮಾ: ಶ್ರೀಮಂತರ ಪಟ್ಟಿಯಲ್ಲಿ ಶಫಾಲಿ ವರ್ಮಾ ಅವರೂ ಒಬ್ಬರು. ಇವರ ನಿವ್ವಳ ಮೌಲ್ಯ ಸುಮಾರು ₹8-11 ಕೋಟಿ. ಡೆಲ್ಲಿ ಕ್ಯಾಪಿಟಲ್ಸ್‌ನ ಈ ಆಟಗಾರ್ತಿ ₹2 ಕೋಟಿ WPL ಒಪ್ಪಂದ ಮತ್ತು CEAT ಟೈರ್ಸ್ ಹಾಗೂ ಬ್ಯಾಂಕ್ ಆಫ್ ಬರೋಡಾದೊಂದಿಗೆ ಬ್ರಾಂಡ್ ಅಂಬಾಸಿಡರ್ ಆಗಿ ಸಂಪಾದಿಸುತ್ತಿದ್ದಾರೆ.
ದೀಪ್ತಿ ಶರ್ಮಾ: ಕ್ರಿಕೆಟ್ ಲೋಕದಲ್ಲಿ ಆಲ್‌ರೌಂಡರ್ ಆಗಿ ಗುರುತಿಸಿಕೊಂಡಿರುವ ದೀಪ್ತಿ ಶರ್ಮಾ ಅವರ ನಿವ್ವಳ ಮೌಲ್ಯ ₹8 ಕೋಟಿ. WPL ನಲ್ಲಿ UP ವಾರಿಯರ್ಸ್ ತಂಡವು ದೀಪ್ತಿ ಶರ್ಮಾ ಅವರನ್ನು ₹2.6 ಕೋಟಿಗೆ ಸಹಿ ಮಾಡಿಕೊಂಡಿದೆ. ಅವರು ಪೂಮಾ ಮತ್ತು ಥಮ್ಸ್ ಅಪ್‌ನಂತಹ ಬ್ರಾಂಡ್‌ಗಳ ಪ್ರಮೋಷನ್‌ನಲ್ಲೂ ಕಾಣಿಸಿಕೊಂಡಿದ್ದಾರೆ. ಈ ಮೂಲಕವೂ ಸಂಪಾದನೆ ಮಾಡುತ್ತಿದ್ದಾರೆ.
ಜೆಮಿಮಾ ರಾಡ್ರಿಗಸ್: ಮೂಲತಃ ಮಂಗಳೂರಿನವರಾದ ಜೆಮಿಮಾ, ಬ್ಯಾಟಿಂಗ್ ಮೂಲಕ ಎಲ್ಲರ ಕಣ್ಮನ ಸೆಳೆದಿದ್ದಾರೆ. ಅವರ ಅಂದಾಜು ನಿವ್ವಳ ಮೌಲ್ಯ ₹5 ಕೋಟಿ. ಜೆಮಿಮಾ ಡೆಲ್ಲಿ ಕ್ಯಾಪಿಟಲ್ಸ್‌ನೊಂದಿಗೆ ₹2.2 ಕೋಟಿ WPL ಒಪ್ಪಂದ ಮತ್ತು HMD ನಂತಹ ಬ್ರಾಂಡ್‌ಗಳೊಂದಿಗೆ ಜಾಹೀರಾತು ಒಪ್ಪಂದಗಳ ಮೂಲಕ
ಹಣ ಗಳಿಸುತ್ತಿದ್ದಾರೆ.
ಪೂಜಾ ವಸ್ತ್ರಾಕರ್: ಆಲ್ ರೌಂಡರ್ ಆಗಿರುವ ಪೂಜಾ ವಸ್ತ್ರಾಕರ್ ಕೂಡಾ ಉತ್ತಮ ಸಂಪಾದನೆ ಮಾಡಿದ್ದಾರೆ. ಅವರ ನಿವ್ವಳ ಮೌಲ್ಯ ₹3-5 ಕೋಟಿ. WPL ನಲ್ಲಿ ಮುಂಬೈ ಇಂಡಿಯನ್ಸ್ ಅವರನ್ನು ₹1.9 ಕೋಟಿಗೆ ಸಹಿ ಮಾಡಿದೆ. ಅವರು ಓಕ್ಲೆ ಮತ್ತು ಫೇರ್‌ಪ್ಲೇ ಸ್ಪೋರ್ಟ್ಸ್‌ನಂತಹ ಬ್ರಾಂಡ್‌ಗಳಿಗೆ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ.
ಯಾಸ್ತಿಕಾ ಭಾಟಿಯಾ: ಯುವ ವಿಕೆಟ್‌ಕೀಪರ್-ಬ್ಯಾಟರ್ ಆಗಿ ಗುರುತಿಸಿಕೊಂಡಿರುವ ಯಾಸ್ತಿಕಾ ಭಾಟಿಯಾ ಅವರು ಶ್ರೀಮಂತರ ಪಟ್ಟಿಯಲ್ಲಿದ್ದಾರೆ. ಅವರ ನಿವ್ವಳ ಮೌಲ್ಯ ಸುಮಾರು ₹1 ಕೋಟಿ. ಅವರು ತಮ್ಮ ದೇಶೀಯ ಮತ್ತು ಲೀಗ್ ಮ್ಯಾಚ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಸ್ಕೆಚರ್ಸ್ ಇಂಡಿಯಾದೊಂದಿಗಿನ ಬ್ರಾಂಡ್ ಕೊಲಾಬರೇಷನ್ ಹೊಂದಿದ್ದಾರೆ.
ರೇಣುಕಾ ಸಿಂಗ್ ಠಾಕೂರ್: ವೇಗದ ಬೌಲರ್ ಆಗಿರುವ ರೇಣುಕಾ ಸಿಂಗ್ ಠಾಕೂರ್ ಅವರ ನಿವ್ವಳ ಮೌಲ್ಯ ₹80 ಲಕ್ಷದಿಂದ ₹1 ಕೋಟಿ ಇದೆ ಎನ್ನಲಾಗಿದೆ. ಪ್ರಸ್ತುತ, ಅವರು ಅಡಿಡಾಸ್ ಮತ್ತು ಬೀಬಾ ಜೊತೆ ಜಾಹೀರಾತು ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಈ ಮೂಲಕವೂ ತನ್ನ ನಿವ್ವಳ ಆಸ್ತಿಯನ್ನು ಹೆಚ್ಚಿಸಿಕೊಂಡಿದ್ದಾರೆ.
More From GoodReturns

ಏಪ್ರಿಲ್ 1ರಿಂದ ಈ ರಾಜ್ಯದ ಸರ್ಕಾರಿ ಜನರಿಗೆ ಹೊಸ ಪಿಂಚಣಿ...ಕೊನೆಯ ಸಂಬಳದ 50%ನಷ್ಟು ಖಚಿತ! ಈ ಗುಡ್ನ್ಯೂಸ್ ಯಾರಿಗೆ?

Gold Guidelines: ಭಾರತದಲ್ಲಿ ಚಿನ್ನಾಭರಣ ಎಷ್ಟು ಇಟ್ಟುಕೊಳ್ಳಬಹುದು? ಕಾನೂನಾತ್ಮಕವಾಗಿ ನಿರ್ವಹಿಸುವುದು ಹೇಗೆ ತಿಳಿಯಿರ

SBI Credit Card: ಎಸ್ಬಿಐ ಗ್ರಾಹಕರೇ ಇಲ್ಲಿ ಗಮನಿಸಿ! ಏಪ್ರಿಲ್ 1 ರಿಂದ ಈ ನಿಯಮ ಚೇಂಜ್

Investment: ಹೂಡಿಕೆ ತಡವಾಗಿ ಮಾಡ್ತಿದ್ದೀರ? 35ರ ನಂತರ ಹೇಗೆ ಸಂಪತ್ತು ನಿರ್ಮಿಸಬೇಕು ಎಂದು ಇಲ್ಲಿ ತಿಳಿಯಿರಿ

India Oil: ಇಸ್ರೇಲ್, ಯುಎಸ್ ಮತ್ತು ಇರಾನ್ ನಡುವೆ ವಾರ್! ಭಾರತದ ಕಚ್ಚಾ ತೈಲದ ಮೇಲೆ ಪರಿಣಾಮ ಬೀರಿದ್ದು ಹೇಗೆ?

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Bank Holidays: ಮಾರ್ಚ್ನಲ್ಲಿ ಬ್ಯಾಂಕ್ಗಳಿಗೆ 18 ದಿನ ರಜೆ! ಗ್ರಾಹಕರೇ ಇಲ್ಲಿ ಗಮನಿಸಿ

Silver Rate Kannada: ಬೆಳ್ಳಿ ದರದಲ್ಲಿ ಇಂದು ಭರ್ಜರಿ ಇಳಿಕೆ! ಒಂದೇ ದಿನ 20,000 ರೂ. ಕುಸಿತ

Silver Rate Today: 3 ದಿನದ ನಂತರ ಗಗನಕ್ಕೇರಿದ ಬೆಳ್ಳಿ ದರ! ದಿಢೀರ್ 10,000 ರೂ. ಹೆಚ್ಚಳ

Silver Rate Today: ಬೆಳ್ಳಿ ದರಕ್ಕೂ ತಟ್ಟಿದ ಇಸ್ರೇಲ್-ಇರಾನ್ ವಾರ್ ಬಿಸಿ! ಬೆಲೆ ಭಾರೀ ಏರಿಕೆ



Click it and Unblock the Notifications