ಮಹಿಳೆಯರೇ ನೀವು ಆರ್ಥಿಕವಾಗಿ ಸದೃಢಗೊಳ್ಳಬೇಕೆ..? ಪೋಸ್ಟ್‌ ಆಫೀಸ್‌ನ ಈ 5 ಯೋಜನೆಗಳ ಉಪಯೋಗ ಪಡೆಯಿರಿ..!

ಬಂಡವಾಳ ಹೂಡಿಕೆಗೇ ಆಗಲಿ, ಉಳಿತಾಯ ಸಂಗ್ರಹಣೆಗೇ ಆಗಲಿ ಅಂಚೆ ಕಚೇರಿ ಉತ್ತಮ ಸೌಲಭ್ಯಗಳನ್ನೇ ನೀಡುತ್ತಾ ಬಂದಿದೆ. ಒಂದಲ್ಲ, ಎರಡಲ್ಲ ಹಲವಾರು ರೀತಿಯಲ್ಲಿ ಅಂಚೆ ಕಚೇರಿಯ ಯೋಜನೆಗಳು ಮಹಿಳೆಯರಿಗೆ ಅತಿಹೆಚ್ಚು ಉಪಯೋಗಕಾರಿಯಾಗಿವೆ. ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡುವುದರಿಂದ ಮಹಿಳೆಯರಿಗೆ ಸಾಮಾಜಿಕ ಭದ್ರತೆಯೊಂದೇ ಅಲ್ಲ, ಉತ್ತಮ ಆದಾಯವನ್ನು ಕೂಡ ಅಂಚೆ ಕಚೇರಿ ಹಿಂದಿರುಗಿಸುತ್ತದೆ. ಮಹಿಳೆಯರು ಕೂಡ ಅಂಚೆ ಕಚೇರಿಯ ಯೋಜನೆಗಳನ್ನು ಉಪಯೋಗಿಸಿಕೊಂಡು, ಆರ್ಥಿಕವಾಗಿ ಬೆಳವಣಿಗೆ ಕಾಣುತ್ತಿದ್ದಾರೆ.

ಮಹಿಳೆಯರ ಆರ್ಥಿಕ ಪ್ರಗತಿಗೆ ಇವು ಉತ್ತಮ ಯೋಜನೆಗಳು..!

ಹೀಗೆ ಮಹಿಳೆಯರ ಉತ್ತೇಜನಕ್ಕಾಗಿ ಪೂರಕವಾಗಿರುವ ಪೋಸ್ಟ್ ಆಫೀಸ್‌ ಯೋಜನೆಗಳಲ್ಲಿ, ಪ್ರಮುಖ ಐದು ಯೋಜನೆಗಳು ಅತಿಹೆಚ್ಚು ಉಪಯೋಗಕರವಾಗಿವೆ. ಅವು ಯಾವುವೆಂದರೆ ಸುಕನ್ಯಾ ಸಮೃದ್ಧಿ ಉಳಿತಾಯ ಯೋಜನೆ, ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ, ಮಹಿಳಾ ಸಮ್ಮಾನ್ ಬಚತ್ ಪತ್ರ, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ, ಪೋಸ್ಟ್ ಆಫೀಸ್ ಪಿಪಿಎಫ್ ಯೋಜನೆಯಾಗಿವೆ. ಮಹಿಳೆಯರು ಆರ್ಥಿಕವಾಗಿ ಸದೃಢ ಹೊಂದಲು, ಸ್ವಾವಲಂಬಿಗಳಾಗಿ ಜೀವನ ನಡೆಸಲು ಈ ಯೋಜನೆಗಳು ಸಹಾಯಕರವಾಗಿವೆ. ಹಾಗಾದರೆ ಇವು ಮಹಿಳೆಯರಿಗೆ ಹೇಗೆ ಉಪಯುಕ್ತವಾಗಿವೆ. ಅವುಗಳ ಮಹತ್ವವೇನು ಎಂಬುದರ ಕುರಿತು ಮಾಹಿತಿ ಇಲ್ಲಿದೆ.

1.ಸುಕನ್ಯಾ ಸಮೃದ್ಧಿ ಉಳಿತಾಯ ಯೋಜನೆ:

ಸುಕನ್ಯಾ ಸಮೃದ್ಧಿ ಉಳಿತಾಯ ಯೋಜನೆಯು ಹೆಣ್ಣು ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿ, ಆರ್ಥಿಕವಾಗಿ ಸದೃಢತೆ ನೀಡಲು ರೂಪಿಸಿರುವ ಯೋಜನೆಯಾಗಿದೆ. ಈ ಯೋಜನೆಯ ಅನುಸಾರವಾಗಿ ಒಂದು ಹೆಣ್ಣು ಮಗುವಿಗೆ 10 ವರ್ಷ ತುಂಬುವ ಮುನ್ನವೆ ಹಣ ಹೂಡಿಕೆ ಮಾಡಲಾಗುತ್ತದೆ. ಹೂಡಿಕೆ ಮಾಡಲಾದ ಹಣಕ್ಕೆ ವಾರ್ಷಿಕ 8.2% ಬಡ್ಡಿದರ ನೀಡಲಾಗುತ್ತದೆ. ಅಲ್ಲದೇ ಪ್ರತಿ ಮೂರು ತಿಂಗಳಿಗೊಮ್ಮೆ ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿ ದರವನ್ನು ಪರಿಶೀಲನೆ ಮಾಡಲಾಗುತ್ತದೆ. ಪ್ರತೀ ಹಣಕಾಸು ವರ್ಷದ ಕೊನೆಯಲ್ಲಿ ಖಾತೆಗೆ ಬಡ್ಡಿಯನ್ನು ಜಮಾ ಮಾಡಲಾಗುತ್ತದೆ. ಈ ಮೂಲಕ ಒಂದು ಹೆಣ್ಣು ಮಗುವಿನ ಭವಿಷ್ಯಕ್ಕೆ ಆರಂಭದಲ್ಲೇ ಬುನಾದಿ ಹಾಕಿ ಸದೃಢಗೊಳಿಸಲು ಸಹಾಯ ಮಾಡುತ್ತದೆ. ಇನ್ನು ಈ ಯೋಜನೆಯಡಿಯಲ್ಲಿ ಮಾಡಿದ ಠೇವಣಿಗಳು ಸೆಕ್ಷನ್ 80C ಅಡಿಯಲ್ಲಿ ಕಡಿತಕ್ಕೆ ಅರ್ಹತೆ ಪಡೆಯುತ್ತವೆ.

2.ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆ:

ಫಲಾನುಭವಿಗಳು ತಮ್ಮ ಉಳಿತಾಯದಿಂದ ಪ್ರತಿ ತಿಂಗಳು ಸ್ಥಿರ ಆದಾಯ ಬಯಸುವುದಾದರೆ, ಪೋಸ್ಟ್ ಆಫೀಸ್‌ನ ಮಾಸಿಕ ಆದಾಯ ಯೋಜನೆ ಉತ್ತಮ ಆಯ್ಕೆ ಎನ್ನಬಹುದಾಗಿದೆ. ಅಂದರೆ ಪ್ರತಿ ತಿಂಗಳು ಕೂಡ ಮಾಸಿಕ ಆದಾಯ ಈ ಯೋಜನೆ ಅಡಿಯಲ್ಲಿ ಸಿಗುತ್ತದೆ. ಈ ಯೋಜನೆಲ್ಲಿ ಕನಿಷ್ಠ ಹೂಡಿಕೆ ಮಾಡುವ ಮೊತ್ತ 1000 ರೂ. ಆಗಿರುತ್ತದೆ. ಮತ್ತು ಇದು 7.4% ಬಡ್ಡಿದರವನ್ನು ನೀಡುತ್ತದೆ.

3.ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ:

ಮಹಿಳಾ ಹೂಡಿಕೆದಾರರಿಗೆ ಈ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ ಒಂದು ವಿಶೇಷ ಯೋಜನೆಯಾಗಿದೆ. ಅಲ್ಲದೇ ಇದೊಂದು ಅಪಾಯ-ಮುಕ್ತ ಯೋಜನೆಯಾಗಿದೆ ಅಂದ್ರೂ ತಪ್ಪಾಗಲ್ಲ. ಈ ಯೋಜನೆಯಡಿಯಲ್ಲಿ ಎಲ್ಲಾ ವಯಸ್ಸಿನ ಮಹಿಳೆಯರು ಹೂಡಿಕೆ ಮಾಡಬಹುದು. ಈ ಯೋಜನೆಯಡಿ ತೆರೆದಿರುವ ಖಾತೆಗೆ ವಾರ್ಷಿಕವಾಗಿ 7.5% ಬಡ್ಡಿ ಲಭ್ಯವಿದೆ. ಅಲ್ಲದೇ ಮಹಿಳೆಯರು ಒಂದು ವರ್ಷದ ಬಳಿಕ ತಮ್ಮ ಠೇವಣಿಯಲ್ಲಿರುವ 40% ಹಣವನ್ನು ಹಿಂಪಡೆಯಬಹುದಾಗಿದೆ.

4.ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ:

ಈ ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ ಮಹಿಳೆಯರ ಪಾಲಿಗೆ ಸುರಕ್ಷಿತವಾದ ಒಂದು ಯೋಜನೆಯಾಗಿದೆ. ಎಲ್ಲಾ ಹೂಡಿಕೆದಾರರಿಗೆ ಈ ಯೋಜನೆ ಸೂಕ್ತವಾಗಿದೆ. ಇದರಲ್ಲಿ ಕನಿಷ್ಠ 100 ರೂ. ಹೂಡಿಕೆ ಮಾಡಬೇಕಿದ್ದು, ಅದರ ಮುಕ್ತಾಯ ಅವಧಿ 5 ವರ್ಷಗಳಾಗಿವೆ. ಇದರ ಜೊತೆಗೆ ಗಮನಿಸಬಹುದಾದ ಒಂದು ವಿಚಾರವೇನೆಂದರೆ ಅಕ್ಟೋಬರ್ 1, 2024 ರಿಂದ ಹೊಸ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆಯಲ್ಲಿ ಠೇವಣಿಗಳ ಮೇಲೆ ಯಾವುದೇ ಬಡ್ಡಿ ಇರಿಸಿಲ್ಲ. ಅದಕ್ಕೂ ಮುನ್ನ ಅಂದ್ರೆ, ಸೆಪ್ಟೆಂಬರ್ 30, 2024 ರವರೆಗೆ ಎಲ್ಲಾ ಠೇವಣಿಗಳ ಮೇಲೆ 7.5% ಬಡ್ಡಿ ಒದಗಿಸಲಾಗಿದೆ.

5.ಪೋಸ್ಟ್ ಆಫೀಸ್ ಪಿಪಿಎಫ್ ಯೋಜನೆ:

ಪೋಸ್ಟ್ ಆಫೀಸ್ ಪಿಪಿಎಫ್ ಯೋಜನೆ ಎಂದರೆ ಅಂಚೆ ಕಚೇರಿಯ ಸಾರ್ವಜನಿಕ ಭವಿಷ್ಯ ನಿಧಿ. ಈ ಯೋಜನೆಯು ದೀರ್ಘಾವಧಿಯ ಹೂಡಿಕೆ ಯೋಜನೆಯಾಗಿದ್ದು, ಇದರಲ್ಲಿ ಕನಿಷ್ಠ 500 ರೂ. ಹೂಡಿಕೆ ಮಾಡಬೇಕಾಗಿದೆ. ಮತ್ತು ಅದರ ಮೇಲಿನ ಬಡ್ಡಿ ದರ 7.1% ಆಗಿದ್ದು, ಇದು ದೀರ್ಘಾವಧಿ ಹೂಡಿಕೆದಾರರಿಗೆ ಒಂದು ಸುರಕ್ಷಿತ ಮತ್ತು ಸಹಾಯಕಾರಿಯಾದ ಯೋಜನೆಯಾಗಿದೆ.

ಈ ಮೇಲಿನ ಪ್ರಮುಖ ಐದು ಯೋಜನೆಗಳು ಮಹಿಳೆಯರ ಆರ್ಥಿಕ ಬೆಳವಣಿಗೆಗೆ ಅತಿಹೆಚ್ಚು ಸಹಾಯಕಾರಿಯಾಗಿವೆ. ಈ ಯೋಜನೆಗಳ ಅನುಸಾರ ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡುವ ಮಹಿಳೆಯರಿಗೆ ಆರ್ಥಿಕ ಸದೃಢತೆ ಇರುತ್ತದೆ. ಅಲ್ಲದೇ ಮಹಿಳೆಯರು ತಮ್ಮ ಭವಿಷ್ಯವನ್ನು ಭದ್ರಪಡಿಸಿಕೊಂಡು ಸ್ವಾವಲಂಬಿಗಳಾಗಬಹುದಾಗಿದೆ. ಅದರಲ್ಲೂ ಮದ್ಯಮ ವರ್ಗದ ಮಹಿಳೆಯರಿಗೆ ಅಂಚೆ ಕಚೇರಿಯ ಈ ಯೋಜನೆಗಳು ಎಲ್ಲಾ ಸಮಯದಲ್ಲೂ ಸಹಾಯಕ್ಕೆ ಬರುತ್ತವೆ. ಹೊಸ ವ್ಯವಹಾರಕ್ಕಾಗಿ ಹೂಡಿಕೆ ಮಾಡಲು, ಮಕ್ಕಳ ಶಿಕ್ಷಣಕ್ಕೆ, ಮಕ್ಕಳ ಮದುವೆಗೆ ಹೀಗೆ ಎಲ್ಲಾ ರೀತಿಯಲ್ಲೂ ಇವುಗಳು ಸಹಾಯ ಮಾಡುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+