ಹುರುನ್ ಇಂಡಿಯಾ ತನ್ನ 2024ರ ಶ್ರೀಮಂತರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ದೇಶದಲ್ಲಿ ಶ್ರೀಮಂತರ ಸಂಖ್ಯೆ ಹೆಚ್ಚಾಗುತ್ತಿರುವುದು ಬಹಿರಂಗವಾಗಿದೆ. ಕಳೆದ ವರ್ಷ ಪ್ರತಿ ಐದು ದಿನಗಳಲ್ಲಿ ಒಬ್ಬ ಬಿಲಿಯನೇರ್ ಹೊರ ಹೊಮ್ಮಿದ್ದಾರೆ. ದೇಶದಲ್ಲಿ ಈಗ ಒಟ್ಟು 334 ಬಿಲಿಯನೇರ್‌ಗಳು ವಾಸವಾಗಿದ್ದಾರೆ. ದೇಶದ ಪ್ರತಿ ರಾಜ್ಯದಲ್ಲೂ ಶ್ರೀಮಂತ ವ್ಯಕ್ತಿಗಳಿಗೇನು ಕಡಿಮೆ ಇಲ್ಲ. ಅಂತೆಯೇ ಬೆಂಗಳೂರಿನಲ್ಲಿ ಇವರ ಸಂಖ್ಯೆ ಹೆಚ್ಚಳವಾಗಿದೆ.
ರಾಜ್ಯ ರಾಜಧಾನಿಯಲ್ಲಿ ಶ್ರೀಮಂತರು ಹೆಚ್ಚಾಗಿದ್ದಾರೆ. ಇವರು ತಮ್ಮ ಐಶಾರಾಮಿ ಲೈಫ್‌ಸ್ಟೈಲ್‌ನಿಂದ ಫೇಮಸ್ ಆಗಿದ್ದಾರೆ. ಬೆಂಗಳೂರಿನಲ್ಲಿ ಅದೆಷ್ಟೋ ಶ್ರೀಮಂತರು ನೆಲಿಸಿದ್ದಾರೆ. ಅವರ ಮನೆಗಳು ಸಹ ಒಂದಕ್ಕೊಂದು ಬೊಂಬಾಟ ಆಗಿ ಇರುತ್ತವೆ. ಈ ವರದಿಯಲ್ಲಿ ಬೆಂಗಳೂರಿನಲ್ಲಿರುವ ಟಾಪ್ ಐದು ಶ್ರೀಮಂತರ ಯಾರ ಎನ್ನುವ ಬಗ್ಗೆ ಮಾಹಿತಿ ಇದೆ.

ಬೆಂಗಳೂರಿನಲ್ಲಿ ಶ್ರೀಮಂತ ವ್ಯಕ್ತಿಗಳು
ಐಟಿ ಕ್ಷೇತ್ರದ ದಿಗ್ಗಜ ಅಜೀಂ ಪ್ರೇಮಜಿ ಸಹ ಇದೇ ನಗರದಲ್ಲಿ ವಾಸಿಸುತ್ತಾರೆ. ಬೆಂಗಳೂರಿನಲ್ಲಿ ಇರುವ ಶ್ರೀಮಂತರ ಪೈಕಿ ಇವರಿಗೆ ಮೊದಲ ಸ್ಥಾನ. ಮಾಜಿ ವಿಪ್ರೋ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುವ ಇವರ ಆಸ್ತಿ ಶೆಕಡಾ 24 ರಷ್ಟು ಏರಿಕೆ ಆಗಿದೆ. ಇವರು ಹುರುನ್ ಇಂಡಿಯಾ ರಿಲೀಸ್ ಮಾಡಿದ ಶ್ರೀಮಂತರ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದಾರೆ. ಇವರ ಒಟ್ಟು ಮೌಲ್ಯ 1,90,700 ಕೋಟಿ ರೂಪಾಯಿ. ಇವರು ಸಾಫ್ಟ್‌ವೇರ್ ಹಾಗೂ ಸರ್ವಿಸ್ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.
ದೇಶದ ಪ್ರಸಿದ್ಧ ರಿಯಲ್ ಎಸ್ಟೇಟ್ ಡೆವಲಪರ್‌ಗಳಲ್ಲಿ ಒಂದಾಗಿರುವ ಪ್ರೆಸ್ಟಿಜ್ ಗ್ರೂಪ್ ಅಧ್ಯಕ್ಷ ಇರ್ಫಾನ್ ರಜಾಕ್ ಈ ಪಟ್ಟಿಯಲ್ಲಿ 51ನೇ ಸ್ಥಾನದಲ್ಲಿದ್ಧಾರೆ. ಇವರ ಸಂಪತ್ತು ಶೇಕಡಾ 178 ಪ್ರತಿಶತದಷ್ಟು ಹೆಚ್ಚಾಗಿದೆ.

ಝೆರೋಡಾದ ಸಿಇಒ ನಿತಿನ್ ಕಾಮತ್ ಅವರು ಸಹ ಇದೇ ಬೆಂಗಳೂರಿನ ಮೂಲದವರು. ಹಣಕಾಸು ಸೇವಾ ಕ್ಷೇತ್ರದಲ್ಲಿ ಇವರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಹುರುನ್ ಇಂಡಿಯಾ ಶ್ರೀಮಂತರ ಪಟ್ಟಿಯಲ್ಲಿ ಇವರಿಗೆ 57ನೇ ಸ್ಥಾನವಿದೆ. ಇವರ ಮೌಲ್ಯ ಪ್ರಸಕ್ತ ವರ್ಷ ಶೇಕಡಾ 16 ರಷ್ಟು ಹೆಚ್ಚಾಗಿದ್ದು, 41 ಸಾವಿರ ಕೋಟಿ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.
ಇನ್ಫೋಸಿಸ್ ಸಂಸ್ಥಾಪಕರಲ್ಲಿ ಒಬ್ಬರಾದ ಎಸ್ ಗೋಪಾಲಕೃಷ್ಣ ಅವರ ಆಸ್ಥಿ ಮೌಲ್ಯವು ನಿವ್ವಳವಾಗಿ ಏರಿಕೆ ಆಗಿದೆ. ಸದ್ಯ ಇವರು 62ನೇ ಸ್ಥಾನದಲ್ಲಿದ್ದು, ಇವರ ಒಟ್ಟು ಮೌಲ್ಯ 38500 ಕೋಟಿ ರೂ ಆಗಿದೆ.
ಹುರುನ್ ಇಂಡಿಯಾ ಶ್ರೀಮಂತರ ಪಟ್ಟಿಯಲ್ಲಿ 69ನೇ ಸ್ಥಾನದಲ್ಲಿ ಇನ್ಫೋಸಿಸ್ ಸಹ-ಸಂಸ್ಥಾಪಕರಾದ ಎನ್‌ಆರ್ ನಾರಾಯಣ ಮೂರ್ತಿ ಇದ್ದಾರೆ. ಇವರ ಒಟ್ಟು ಮೌಲ್ಯ 36,600 ಕೋಟಿ ಆಗಿದೆ.
ಜಿಎಂಆರ್ ಗ್ರೂಪ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷ ಜಿಎಂ ರಾವ್ ಈ ಪಟ್ಟಿಯಲ್ಲಿ 71ನೇ ಸ್ಥಾನದಲ್ಲಿದ್ದು, ಇವರ ಮೌಲ್ಯ 36,300 ಆಗಿದೆ. ಉದ್ಯಮಿ ರಂಜನ್ ಪೈ 34,700 ಕೋಟಿ ರೂ. ಆಸ್ತಿ ಹೊಂದಿದ್ದು ಈ ಪಟ್ಟಿಯಲ್ಲಿ 74, ಬೆಂಗಳೂರು ಮೂಲದ ಬಯೋಕಾನ್ ಕಂಪನಿಯ ಸಂಸ್ಥಾಪಕ ಮತ್ತು ಕಾರ್ಯನಿರ್ವಾಹಕ ಅಧ್ಯಕ್ಷೆ ಕಿರಣ್ ಮಜುಂದಾರ್ ಈ ಪಟ್ಟಿಯಲ್ಲಿ 98ನೇ ಸ್ಥಾನದಲ್ಲಿದ್ದು ಇವರು 29 ಸಾವಿರ ಕೋಟಿ ಆಸ್ಥಿ ಹೊಂದಿದ್ದಾರೆ.


Click it and Unblock the Notifications