ಟ್ಯಾಕ್ಸ್ ಉಳಿಸಲು ಅಡ್ಡ ದಾರಿ ಹಿಡಿದರೆ ನೋಟಿಸ್ ಪಕ್ಕಾ!

ಬೆಂಗಳೂರು, ಜುಲೈ 18: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಅಂತಿಮ ದಿನಾಂಕ ಹತ್ತಿರ ಬರುತ್ತಿದೆ. ಯಾವ ರೀತಿ ತೆರಿಗೆ ಉಳಿತಾಯ ಮಾಡಬಹುದು ಎನ್ನುವ ಸರಳ ಸೂತ್ರಗಳು ನಿಮಗೆ ಗೊತ್ತಿದೆ. ಅದೇ ರೀತಿ ಯಾವುದಾದರೂ ಮೂಲದಿಂದ ಬಂದ ಆದಾಯ ಮುಚ್ಚಿಟ್ಟರೆ ಯಾವೆಲ್ಲ ಅಪಾಯ ಎದುರಿಸಬೇಕಾಗುತ್ತದೆ ಎನ್ನುವುದು ನಿಮಗೆ ಗೊತ್ತಿರಬೇಕು.

ಯಾವುದಾದರೂ ರೀತಿಯಲ್ಲಿ ಆದಾಯ ಮರೆ ಮಾಚಿದ್ದರೆ ಅಥವಾ ಕಡಿಮೆ ಆದಾಯ ಘೋಷಿಸಿದ್ದರೆ ನೋಟಿಸ್ ಬರುತ್ತದೆ. ಎರಡನೆಯ ಕಾರಣ ಏನಂದರೆ ಆದಾಯ ತೆರಿಗೆ ರಿಟರ್ನ್ (ಐಟಿಆರ್) ನಲ್ಲಿ ತಪ್ಪು ಮಾಡಿದ್ದರೆ ನಿಮ್ಮ ರಿಟರ್ನ್‌ನಲ್ಲಿ ಕಡಿಮೆ ಆದಾಯ ತೋರಿಸಿದ್ದರೂ ನೋಟಿಸ್ ಬರಬಹುದು.
ಹಾಗಿದ್ದರೆ ITRನಲ್ಲಿ ಆದಾಯ ಮರೆ ಮಾಚಿದ್ದರೆ ಎಷ್ಟು ದಂಡ ಬೀಳುತ್ತದೆ ಎನ್ನುವುದನ್ನು ನಾವು ಮೊದಲು ತಿಳಿದುಕೊಳ್ಳಬೇಕು. ನೌಕರರು ಹೌಸ್ ರೆಂಟ್ ಅಲೋವೆನ್ಸ್ ಅಂದ್ರೆ HRA, ಲೀವ್ ಟ್ರಾವೆಲ್ ಅಲೋವೆನ್ಸ್ ಅಂದರೆ LTA, 80ಸಿ, 80ಡಿ ಮತ್ತು ಇತರ ಸೆಕ್ಷನ್‌ಗಳಲ್ಲಿ ಡಿಡಕ್ಷನ್‌ಗಳನ್ನು ಬಳಸಿಕೊಂಡು ತೆರಿಗೆ ಉಳಿತಾಯ ಮಾಡಬಹುದು. HRA ಕ್ಲೇಮ್ ಮಾಡೋದಕ್ಕೆ, ತೆರಿಗೆದಾರರು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರಬೇಕು. ಬಾಡಿಗೆ ಕೊಡುತ್ತಿರಬೇಕು ಮತ್ತು ಆ ಮನೆ ಬಾಡಿಗೆಗೆ ಅಂತ ಕಂಪನಿಯಿಂದ HRA ಪಡೆಯುತ್ತಿರಬೇಕು.

ಟ್ಯಾಕ್ಸ್ ಉಳಿಸಲು ಅಡ್ಡ ದಾರಿ ಹಿಡಿದರೆ ನೋಟಿಸ್ ಪಕ್ಕಾ!

ಸ್ವಂತ ಮನೆಯಲ್ಲಿ ವಾಸಿಸುತ್ತಿರುವವರು ಕೂಡಾ ಕಂಪನಿಗೆ ನಕಲಿ ಬಾಡಿಗೆ ರಸೀದಿ ಕೊಟ್ಟು HRA ಕ್ಲೇಮ್ ಮಾಡಿಕೊಳ್ಳುತ್ತಾರೆ. ವರ್ಷಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಬಾಡಿಗೆ ಕೊಡುತ್ತಿದ್ದರೆ ಮಾಲೀಕರ ಪ್ಯಾನ್ ನಂಬರ್ ಕೊಡಬೇಕು. ಅಂತಹ ಪ್ರಕರಣದಲ್ಲಿ, ಸಾಮಾನ್ಯವಾಗಿ ಜನರು ITR ಫೈಲ್ ಮಾಡದವರನ್ನು ಹುಡುಕಿ, ಅವರ PAN ನಂಬರ್ ಬಳಸುತ್ತಾರೆ. ಪ್ಯಾನ್ ನಂಬರ್ ಕೊಡೋದನ್ನ ತಪ್ಪಿಸಿಕೊಳ್ಳೋದಕ್ಕೆ, ಒಂದು ಲಕ್ಷಕ್ಕಿಂತ ಕಡಿಮೆ ಬಾಡಿಗೆಯನ್ನೂ ತೋರಿಸುವವರು ಇದ್ದಾರೆ.

ಬಹುತೇಕರು HRA (ಹೌಸ್ ರೆಂಟ್ ಅಲೋವೆನ್ಸ್) ಮತ್ತು ಹೋಮ್ ಲೋನ್ ಡಿಡಕ್ಷನ್‌ಗಳೆರಡನ್ನೂ ಕ್ಲೇಮ್ ಮಾಡುತ್ತಾರೆ. ಇದಕ್ಕೆ ನಿಷೇಧವೇನೂ ಇಲ್ಲ. ಆದರೆ, ಕೆಲವು ನಿರ್ಬಂಧಗಳೂ ಇವೆ. ನೀವು ಕೆಲಸ ಮಾಡುತ್ತಿರುವ ನಗರದಲ್ಲೇ ಮನೆ ಇರಲಿ ಅಥವಾ ಬೇರೆ ನಗರದಲ್ಲೇ ಇರಲಿ, ಈ ಎರಡೂ ಸನ್ನಿವೇಶದಲ್ಲಿ HRA ಮತ್ತು ಮನೆ ಸಾಲ ತೆರಿಗೆ ಡಿಡಕ್ಷನ್‌ ಪ್ರಯೋಜನ ಪಡೆದುಕೊಳ್ಳಬಹುದು. ಆದರೆ, ಈ ತೆರಿಗೆ ಪ್ರಯೋಜನಗಳನ್ನು ಕ್ಲೇಮ್ ಮಾಡುವುದಕ್ಕೆ ಕಾರಣ ಅಸಲಿ ಆಗಿರಬೇಕು. ಆದಾಯ ತೆರಿಗೆ ಇಲಾಖೆಯ ತೆರಿಗೆ ಅಧಿಕಾರಿಗಳು ತನಿಖೆ ಮಾಡುತ್ತಿರುತ್ತಾರೆ. ತನಿಖೆಯಲ್ಲಿ ಯಾವುದೇ ಅನುಮಾನ ಬಂದರೆ ವಿಚಾರಣೆ ಮಾಡುತ್ತಾರೆ. ಅಷ್ಟೇ ಅಲ್ಲ, ತೆರಿಗೆ ಉಳಿಸೋದಕ್ಕೆ ಅಂತ ಹಲವು ನಕಲಿ ಡೊನೇಶನ್ ರಸೀದಿಗಳನ್ನೂ ಸಲ್ಲಿಸುತ್ತಾರೆ.

ಯಾವುದೇ ರೂಪದಲ್ಲಿ ಬಂದ ಹೆಚ್ಚುವರಿ ಆದಾಯವನ್ನು ನಿಮ್ಮ ತೆರಿಗೆ ರಿಟರ್ನ್‌ನಲ್ಲಿ ವರದಿ ಮಾಡಬೇಕು. ಯಾವುದೇ ಹೆಚ್ಚುವರಿ ಆದಾಯವನ್ನು ಬಹಿರಂಗಗೊಳಿಸದಿದ್ದರೆ, ತೆರಿಗೆ ವಿಚಾರಣೆಯನ್ನು ಕಟ್ಟುನಿಟ್ಟಾಗಿ ಮಾಡುತ್ತಾರೆ. ಬ್ಯಾಂಕಿಂಗ್‌ ಮೂಲಕ ಹಣ ಬಂದರೆ ಅಥವಾ ಟಿಡಿಎಸ್‌ಗೆ ಅದು ಸಲ್ಲಿಕೆಯಾಗಿದ್ದರಂತೂ ಈ ಬಗ್ಗೆ ವಿಚಾರಣೆ ನಡೆಯುತ್ತದೆ.

ತೆರಿಗೆ ರಿಯಾಯಿತಿ ಪಡೆಯೋದಕ್ಕೆ ನಕಲಿ ದಾಖಲೆಗಳನ್ನು ಬಳಸೋದು ಸರಿಯಾದ ಆಯ್ಕೆಯಲ್ಲ. ಆದಾಯ ತೆರಿಗೆ ಇಲಾಖೆ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಅಂದರೆ ಎಐ ಮತ್ತು ಡೇಟಾ ಮೈನಿಂಗ್ ಬಳಸುತ್ತಿದೆ. ಈ ತಂತ್ರಜ್ಞಾನ ಬಳಸಿಕೊಂಡು 360 ಡಿಗ್ರಿ ದಾಖಲೆಗಳನ್ನು ಪರಿಶೀಲನೆ ಮಾಡುತ್ತದೆ.

ಕೆಲವು ಬಾರಿಗೆ ತೆರಿಗೆದಾರರು ತೆರಿಗೆ ಕಟ್ಟುವುದನ್ನು ಕಡಿಮೆ ಮಾಡಿಕೊಳ್ಳಲು ಆದಾಯವನ್ನೇ ಕಡಿಮೆ ತೋರಿಸುತ್ತಾರೆ. ಇದು ತಪ್ಪಾದ ವಿಧಾನ. ಇಂತಹ ಪ್ರಕರಣಗಳಲ್ಲಿ, ಸೆಕ್ಷನ್ 270ಎ ಅಡಿಯಲ್ಲಿ ದಂಡ ವಿಧಿಸಬಹುದು. ತೆರಿಗೆ ವರದಿ ಮಾಡುವುದರಲ್ಲಿ ಎಷ್ಟು ಕಡಿಮೆ ಮಾಡುತ್ತಾರೋ ಅದರ ಮೇಲೆ 50% ಗೆ ಸಮಾನವಾದ ದಂಡ ವಿಧಿಸಬಹುದು. ಹೀಗಾಗಿ, ತಪ್ಪಾಗಿ ವಿವರ ಕೊಟ್ಟಿದ್ದರೆ ಶೇ. 200ರವರೆಗೂ ದಂಡ ಬೀಳಬಹುದು. ಹಾಗಾಗಿ ಯಾವುದೇ ಕಾರಣಕ್ಕೂ ಆದಾಯ ಮುಚ್ಚಿಡುವ ದುಸ್ಸಾಹಸ ಮಾಡಲು ಹೋಗಬೇಡಿ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+