ಇತ್ತೀಚಿನ ದಿನಗಳಲ್ಲಿ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆದಾರರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಮ್ಯೂಚುವಲ್ ಫಂಡ್‌ಗಳಲ್ಲಿ ಸಣ್ಣ ಮೊತ್ತದ ಹಣದಿಂದಲೂ ಹೂಡಿಕೆ ಮಾಡಬಹುದು. ಉದಾಹರಣೆಗೆ, SIP (Systematic Investment Plan) ಮೂಲಕ ಪ್ರತಿ ತಿಂಗಳು ಸಣ್ಣ ಮೊತ್ತವನ್ನು ಹೂಡಿಕೆ ಮಾಡಬಹುದು ಇದು ಜನರನ್ನು ಹೆಚ್ಚು ಆಕರ್ಷಿಸುತ್ತಿದೆ. ಇದೇ ನಡುವೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೂಡ ತನ್ನ ಮ್ಯೂಚ್‌ವಲ್ ಫಂಡ್‌ಗಳಲ್ಲಿ ಅತೀ ಹೆಚ್ಚಿನ ಎಸ್‌ಐಪಿ ಲಾಭ ನೀಡುತಿದ್ದು, ಅದರ ಬಗ್ಗೆ ತಿಳಿದುಕೊಳ್ಳೋಣ.
ದೇಶದ ಅತೀ ದೊಡ್ಡ ಮ್ಯೂಚ್‌ವಲ್ ಹೌಸ್ ಫಂಡ್
SBI ಮ್ಯೂಚುಯಲ್ ಫಂಡ್ ಭಾರತದಲ್ಲಿನ ಅತೀ ದೊಡ್ಡ ಮ್ಯೂಚುಯಲ್ ಫಂಡ್ ಹೌಸ್ ಆಗಿದ್ದು, ನಿರ್ವಹಣೆಯ ಅಡಿಯಲ್ಲಿ (AUM) ಬರೊಬ್ಬರಿ 11,34,051 ಕೋಟಿ ರೂ. ಆಸ್ತಿಯನ್ನು ಹೊಂದಿದೆ. ಇದು 72 ಪ್ರಾಥಮಿಕ ಯೋಜನೆಗಳನ್ನು ಹೊಂದಿದ್ದು, ಈ ಪೈಕಿ 37 ಇಕ್ವಿಟಿ ಫಂಡ್‌ಗಳು, 22 ಸಾಲ ಯೋಜನೆಗಳು ಮತ್ತು 2 ಇತರ ನಿಧಿಗಳು ಕೂಡ ಸೇರಿವೆ. SBI ಯು ದೇಶದಲ್ಲಿನ ಅತೀ ಹಳೆಯ ಮ್ಯೂಚುಯಲ್ ಫಂಡ್ ಯೋಜನೆಗಳನ್ನು ನಡೆಸುತ್ತಿದ್ದು, ಅವುಗಳಲ್ಲಿ ಕೆಲವು ಸ್ಥಿರ ಕಾರ್ಯಕ್ಷಮತೆಯನ್ನು ಹೊಂದಿದ್ದು, ಗ್ರಾಹಕರ ನಂಬಿಕೆಗೆ ಪಾತ್ರವಾಗಿದೆ. ಸಹಜವಾಗಿಯೇ ಇದರಿಂದ ಬಹಳಷ್ಟು ಮಂದಿ ಹೂಡಿಕೆದಾರರು ತಮ್ಮ ಸಂಪತ್ತನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿಕೊಂಡಿದ್ದಾರೆ.

20 ವರ್ಷಗಳ ಅತ್ಯಧಿಕ SIP ರಿಟರ್ನ್ ನೀಡುವ ಬಗ್ಗೆ ತಿಳಿದುಕೊಳ್ಳೋಣ
1. SBI ಕನ್ಸಂಪ್ಶನ್ ಅಪರ್ಚುನಿಟೀಸ್ ಫಂಡ್
ಈ ಯೋಜನೆಯು 20 ವರ್ಷಗಳ ಅವಧಿಯಲ್ಲಿ 20.21 ಪ್ರತಿಶತ ವಾರ್ಷಿಕ SIP ಆದಾಯವನ್ನು ನೀಡಿದೆ. ವಿಷಯಾಧಾರಿತ ನಿಧಿಯು 3,101 ಕೋಟಿ ರೂ.ಗಳ ನಿರ್ವಹಣೆಯ ಅಡಿಯಲ್ಲಿ ಸ್ವತ್ತುಗಳನ್ನು ಹೊಂದಿದ್ದು, ಅದರ ನಿವ್ವಳ ಆಸ್ತಿ ಮೌಲ್ಯ 210.5869 ರೂ. ಆಗಿದೆ.
ಈ ಯೋಜನೆ 1999 ರ ಜುಲೈ ಪ್ರಾರಂಭವಾದಾಗಿನಿಂದ ಫಂಡ್ 16.51 ಪ್ರತಿಶತ ವಾರ್ಷಿಕ ಆದಾಯವನ್ನು (CAGR) ನೀಡಿದೆ.
1.98 ಶೇಕಡಾ ವೆಚ್ಚದ ಅನುಪಾತದಲ್ಲಿ, ನಿಧಿಯು ಕನಿಷ್ಟ SIP ಹೂಡಿಕೆಯಾಗಿ ರೂ 500 ಮತ್ತು ಕನಿಷ್ಠ ಮೊತ್ತದ ಹೂಡಿಕೆಯಾಗಿ ರೂ 5,000 ಅನ್ನು ಹೊಂದಿದೆ. 20 ವರ್ಷಗಳಲ್ಲಿ 10,000 ರೂ. ಮಾಸಿಕ SIP ಹೂಡಿಕೆ ಅಥವಾ ರೂ 24,00,000 ಒಟ್ಟು ಹೂಡಿಕೆಯು ರೂ ಬರೊಬ್ಬರಿ 2,54,27,522 ರೂ. ಮೊತ್ತಕ್ಕೆ ಏರಿಕೆ ಕಂಡಿದೆ. ಈ ನಿಧಿಯು 20 ವರ್ಷಗಳ ಕಾಲಮಿತಿಯಲ್ಲಿ 17.72 ಪ್ರತಿಶತ ವಾರ್ಷಿಕ SIP ಆದಾಯವನ್ನು ನೀಡಿದೆ.ಅಲ್ಲದೆ ಇದು ರೂ 4,435 ಕೋಟಿ ರೂ.ಗಳ AUM ಅನ್ನು ಹೊಂದಿದೆ, ಅದರ NAV ಪ್ರಮಾಣವು 131.2617 ರೂ. ಆಗಿದೆ.
2. SBI ಟೆಕ್ನಾಲಜಿ ಆಪರ್ಚುನಿಟೀಸ್ ಫಂಡ್
( A) ಇದು 1999 ರ ಜುಲೈನಲ್ಲಿ ಪ್ರಾರಂಭವಾದಾಗಿನಿಂದ ಇಲ್ಲಿಯ ವರೆಗೆ ಸುಮಾರು 16.03 ಶೇಕಡಾ ವಾರ್ಷಿಕ ಆದಾಯವನ್ನು ನೀಡಿದೆ. 1.90 ಶೇಕಡಾ ವೆಚ್ಚದ ಅನುಪಾತದೊಂದಿಗೆ, ನಿಧಿಯು ಕನಿಷ್ಟ SIP ಹೂಡಿಕೆಯಾಗಿ ರೂ 500 ಮತ್ತು ಕನಿಷ್ಠ ಮೊತ್ತದ ಹೂಡಿಕೆಯಾಗಿ ರೂ 5,000 ಅನ್ನು ಹೊಂದಿದೆ.
(B) ಈ ಯೋಜನೆಯಲ್ಲಿ 10,000 ರೂ. ಮಾಸಿಕ SIP ಹೂಡಿಕೆಯು 20 ವರ್ಷಗಳ ಅವಧಿಯಲ್ಲಿ ಸುಮಾರು 1,85,99,237 ರೂ. ಹೆಚ್ಚಿದೆ. ಇನ್ನು ಎಸ್‌ಬಿಐ ಹೆಲ್ತ್‌ಕೇರ್ ಆಪರ್ಚುನಿಟೀಸ್ ಫಂಡ್‌ನಲ್ಲಿ 20 ವರ್ಷಗಳಲ್ಲಿ 17.27 ಪ್ರತಿಶತ ವಾರ್ಷಿಕ SIP ಆದಾಯವನ್ನು ನೀಡಿದೆ. ಅಲ್ಲದೆ ಇದು 3,346 ಕೋಟಿ ರೂ.ಗಳ AUM ಅನ್ನು ಹೊಂದಿದ್ದು, ಅದರ NAV 422.1358 ರೂ. ಆಗಿದೆ.
4. ಎಸ್‌ಬಿಐ ಫೋಕಸ್ಡ್ ಇಕ್ವಿಟಿ ಫಂಡ್
ಈ ನಿಧಿಯು 20 ವರ್ಷಗಳ ಅವಧಿಯಲ್ಲಿ 16.84 ಪ್ರತಿಶತ ವಾರ್ಷಿಕ SIP ಆದಾಯವನ್ನು ನೀಡಿದೆ. ಅಲ್ಲದೆ ಇದು 36,367 ಕೋಟಿ ರೂ.ಗಳ AUM ಅನ್ನು ಹೊಂದಿದೆ. ಅದರ NAV 338.4721 ರೂ. ಆಗಿದೆ.
5. ಎಸ್‌ಬಿಐ ಹೆಲ್ತ್‌ಕೇರ್ ಆಪರ್ಚುನಿಟೀಸ್ ಫಂಡ್:
ಈ ಫಂಡ್ ಔಷಧ ಕಂಪನಿಗಳು, ಆಸ್ಪತ್ರೆಗಳು, ಡಯಾಗ್ನೋಸ್ಟಿಕ್ ಕೇಂದ್ರಗಳು ಮತ್ತು ಇತರ ಆರೋಗ್ಯ ಸಂಬಂಧಿತ ಸೇವೆಗಳನ್ನು ಒದಗಿಸುವ ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡುತ್ತದೆ.
ಈ ಯೋಜನೆಯಲ್ಲಿ ರೂ 10,000 ಮಾಸಿಕ SIP ಹೂಡಿಕೆಯನ್ನು ರೂ 1,75,85,022 ಆಗಿ ಪರಿವರ್ತಿಸಲಾಗಿದೆ
ಮ್ಯೂಚ್‌ವಲ್ ಹೂಡಿಕೆಯತ್ತ ಹೂಡಿಕೆದಾರರ ಚಿತ್ತ
ಸದ್ಯ ಭಾರತದಲ್ಲಿ ಮ್ಯೂಚುವಲ್ ಫಂಡ್‌ಗಳ ಮೇಲೆ ಹೂಡಿಕೆ ಮಾಡುವವರ ಸಂಖ್ಯೆಯಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆ ಯಾಗುತ್ತಿದೆ. ಅದರಲ್ಲೂ ಭಾರತದಲ್ಲಿ ಸದ್ಯ ಮಾರುಕಟ್ಟೆ ಬೆಳವಣಿಗೆ ದರವು ಸ್ಥಿರವಾಗಿದ್ದು, ಹಾಗಾಗಿ ಜಾಗತಿಕ ಮಟ್ಟದಲ್ಲಿ ಸಂಸ್ಥೆಗಳು, ಹೂಡಿಕೆದಾರರು ಹಾಗೂ ಕಂಪೆನಿಗಳು ಭಾರತದಲ್ಲಿ ಮ್ಯೂಚ್‌ವಲ್ ಫಂಡ್‌ಗಳ ಮೇಲೆ ಹೂಡಿಕೆ ಮಾಡುವ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿದೆ.


Click it and Unblock the Notifications