ನಾಳೆ ಮಾರ್ಚ್ 3...ಭಾರತದಲ್ಲಿ ಹೋಳಿ ಸಂಭ್ರಮ ಒಂದು ಕಡೆಯಾದ್ರೆ, ನಾಳೆ ಇನ್ನೊಂದು ವಿಶೇಷತೆ ಇದೆ. ಅದೇನಂದ್ರೆ ನಾಳೆ ಆಕಾಶದಲ್ಲಿ ಅಪರೂಪದ ಖಗೋಳ ದೃಶ್ಯ ಕಾಣಿಸಿಕೊಳ್ಳುತ್ತಿದೆ. ಇದನ್ನ ಸಾಮಾನ್ಯವಾಗಿ ರಕ್ತ ಚಂದ್ರಗ್ರಹಣ ಎಂದು ಕೂಡ ಕರೆಯುತ್ತಾರೆ. ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ನೇರವಾಗಿ ಬಂದಾಗ ಈ ಗ್ರಹಣ ಉಂಟಾಗುತ್ತೆ. ಈ ಸಮಯದಲ್ಲಿ ಚಂದ್ರನು ಭೂಮಿಯ ಗಾಢ ನೆರಳಿನ ಭಾಗವಾದ ಅಂಬ್ರಾ ಪ್ರದೇಶಕ್ಕೆ ಪ್ರವೇಶ ಮಾಡುತ್ತಾನೆ.
ಇದರ ವಿಶೇಷತೆ ಏನೆಂದರೆ ಪೂರ್ಣ ಚಂದ್ರಗ್ರಹಣದ ವೇಳೆ ಚಂದ್ರ ಸಂಪೂರ್ಣ ಕಪ್ಪಾಗುವುದಿಲ್ಲ. ಬದಲಾಗಿ ಕಡುಗೆಂಪು ಅಥವಾ ತುಕ್ಕು ಹಿಡಿದ ಬಣ್ಣದಲ್ಲಿ ಚಂದ್ರ ಕಾಣಿಸುತ್ತಾನೆ. ಇದಕ್ಕೆ ಕಾರಣ ಭೂಮಿಯ ವಾತಾವರಣ ಎನ್ನಬಹುದು. ಇನ್ನು ಸೂರ್ಯನ ಬೆಳಕು ಭೂಮಿಯ ವಾತಾವರಣದ ಮೂಲಕ ಹಾದುಹೋಗುವಾದ ನೀಲಿ ಬಣ್ಣದ ಕಿರಣಗಳು ಚದುರಿಹೋಗುತ್ತವೆ. ಹೀಗಾಗಿ ಕೆಂಪು ಬಣ್ಣದ ಕಿರಣಗಳು ಮಾತ್ರ, ವಕ್ರವಾಗಿ ಚಂದ್ರನ ಮೇಲೆ ಬೀಳುತ್ತವೆ. ಹೀಗಾಗಿಯೇ ರಕ್ತ ಚಂದ್ರಗ್ರಹಣದ ಚಂದ್ರ ಕೆಂಪಾದ ಹೊಳಪಿಸಿನಿಂದ ಕಾಣಿಸುತ್ತದೆ.

ಭಾರತದಲ್ಲಿ ಮಾತ್ರ ಸ್ಪಷ್ಟ ವೀಕ್ಷಣೆ:
ಇನ್ನು ಈ ಗ್ರಹಣದ ಅಂತಿಮ ಹಂತಗಳನ್ನು ಭಾರತದಲ್ಲಿ ಮಾತ್ರ ಸ್ಪಷ್ಟವಾಗಿ ನೋಡಬಹುದು. ಸಮಯ ಮಧ್ಯಾಹ್ನ 3:20ಕ್ಕೆ ಭಾಗಶಃ ಗ್ರಹಣ ಶುರುವಾಗುತ್ತೆ. ಗಾfಐ ಸಂಜೆ 4:34ಕ್ಕೆ ಸಂಪೂರ್ಣ ಗ್ರಹಣ ಶುರುವಾಗುತ್ತೆ. ಆದರೆ ಹೆಚ್ಚಿನ ನಗರಗಳಲ್ಲಿ ಮಾತ್ರ ಚಂದ್ರೋದಯ ಸೂರ್ಯಾಸ್ತದ ನಂತರ ಆಗುತ್ತದೆ. ಹೀಗಾಗಿ ಗ್ರಹರಣ ಕೊನೆಯ ಭಾಗ ಮಾತ್ರ ಗೋಚರಿಸುತ್ತದೆ.
ದೆಹಲಿ, ಮುಂಬೈನಲ್ಲಿ ಯಾವಾಗ?
ದೆಹಲಿಯಲ್ಲಿ ಚಂದ್ರ ಸಂಜೆ 6:22 ಕ್ಕೆ ಉದಯಿಸುತ್ತಾನೆ. ಮುಂಬೈನಲ್ಲಿ ಸಂಜೆ 6:40 ಕ್ಕೆ ಕಾಣಿಸುತ್ತಾನೆ. ಗ್ರಹಣ ಸಂಜೆ 6:47 ಕ್ಕೆ ಮುಕ್ತಾಯವಾಗುವುದರಿಂದ, ಈ ನಗರಗಳಲ್ಲಿ ಕೆಂಪು ಚಂದ್ರನನ್ನು ನೋಡಲು ಕೇವಲ ಕೆಲವು ನಿಮಿಷಗಳಷ್ಟೇ ಸಮಯ ಸಿಗುತ್ತದೆ.
ಇನ್ನು ಭಾರತದ ಪೂರ್ವ ಮತ್ತು ಈಶಾನ್ಯ ಭಾಗಗಳಲ್ಲಿ ವೀಕ್ಷಣೆ ಉತ್ತಮವಾಗಿರುತ್ತದೆ. ಇಟಾನಗರ, ಗುವಾಹಟಿ ಮತ್ತು ಸಿಲಿಗುರಿ ನಗರಗಳಲ್ಲಿ ಚಂದ್ರ ಬೇಗನೆ ಉದಯಿಸುವುದರಿಂದ ಹೆಚ್ಚು ಸಮಯ ಗ್ರಹಣ ಕಾಣಬಹುದು. ಕೋಲ್ಕತ್ತಾದಲ್ಲೂ ಉತ್ತಮ ದೃಶ್ಯ ಲಭ್ಯವಾಗುತ್ತದೆ. ಸೂರ್ಯಗ್ರಹಣದಂತಿಲ್ಲ, ಚಂದ್ರಗ್ರಹಣವನ್ನು ನೋಡಲು ಯಾವುದೇ ವಿಶೇಷ ಕನ್ನಡಕ ಅಥವಾ ಫಿಲ್ಟರ್ ಅಗತ್ಯವಿಲ್ಲ. ಬರಿಗಣ್ಣಿನಿಂದಲೇ ಸುರಕ್ಷಿತವಾಗಿ ವೀಕ್ಷಿಸಬಹುದು. ಪೂರ್ವ ದಿಕ್ಕಿನಲ್ಲಿ ಆಕಾಶ ಸ್ಪಷ್ಟವಾಗಿರುವ ಸ್ಥಳವನ್ನು ಆಯ್ಕೆ ಮಾಡಿದರೆ ಉತ್ತಮ ಅನುಭವ ಸಿಗುತ್ತದೆ.
ಭಾರತದ ಹೊರತಾಗಿ ವಿಶ್ವದ ಹಲವೆಡೆ ಸಂಪೂರ್ಣ ಗ್ರಹಣ ಸ್ಪಷ್ಟವಾಗಿ ಗೋಚರಿಸಲಿದೆ. ಅಮೆರಿಕದ ಪಶ್ಚಿಮ ಭಾಗದಲ್ಲಿ ಮುಂಜಾನೆ ಸಮಯದಲ್ಲಿ ಪೂರ್ಣ ಗ್ರಹಣ ಕಾಣಬಹುದು. ಪೂರ್ವ ಅಮೆರಿಕದಲ್ಲಿ ಚಂದ್ರ ಗ್ರಹಣಾವಸ್ಥೆಯಲ್ಲೇ ಅಸ್ತಮಿಸಬಹುದು. ಜಪಾನ್ ಮತ್ತು ಕೊರಿಯಾದ ನಗರಗಳಲ್ಲಿ ಸಂಜೆ ವೇಳೆಯಲ್ಲಿ ಸಂಪೂರ್ಣ ಗ್ರಹಣ ವೀಕ್ಷಿಸಲು ಅವಕಾಶ ಸಿಗುತ್ತದೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಪ್ರದೇಶಗಳಲ್ಲೂ ಈ ಖಗೋಳ ದೃಶ್ಯ ಅದ್ಭುತವಾಗಿ ಕಾಣಿಸಲಿದೆ.
ಒಟ್ಟಾರೆ, 2026ರ ಮಾರ್ಚ್ 3ರ ಚಂದ್ರಗ್ರಹಣವು ವಿಶ್ವದ ಅನೇಕ ದೇಶಗಳಲ್ಲಿ ಜನರನ್ನು ಆಕರ್ಷಿಸುವ ಖಗೋಳ ಘಟನೆ ಆಗಿದೆ. ಪ್ರಕೃತಿ ನೀಡುವ ಈ ಅದ್ಭುತ ಕ್ಷಣವನ್ನು ತಪ್ಪಿಸದೇ ವೀಕ್ಷಿಸಿ ಆನಂದಿಸಬಹುದು.


Click it and Unblock the Notifications