'ಬೆಂಗಳೂರು' ಜಾಗತಿಕವಾಗಿ ಸೆಳೆಯುತ್ತಿರುವ ನಗರ. ಮಾಹಿತಿ ತಂತ್ರಜ್ಞಾನ, ಸ್ಟಾರ್ಟ್‌ಅಪ್‌ಗಳು ಹಾಗೂ ಜೈವಿಕ ತಂತ್ರಜ್ಞಾನದಂತಹ ಕ್ಷೇತ್ರಗಳಲ್ಲಿ ಬೆಂಗಳೂರು ಮುಂಚೂಣಿಯಲ್ಲಿದೆ. ಇದೇ ಕಾರಣಕ್ಕೆ ಇತ್ತೀಚೆಗೆ ಟೆಕ್ ದೈತ್ಯ ಗೂಗಲ್ ಕೂಡಾ ತನ್ನ ಅತಿ ದೊಡ್ಡ ಜಾಗತಿಕ ಕಚೇರಿಯಾದ 'ಗೂಗಲ್ ಅನಂತ' ಬೆಂಗಳೂರಿನ ಮಹದೇವಪುರದಲ್ಲಿ ಪ್ರಾರಂಭಿಸಿದೆ. ಇದೀಗ ಮತ್ತೊಂದು ಹೊಸ ಸುದ್ದಿ ಅಂದರೆ ಜಪಾನಿನ ಆಟೋ ದೈತ್ಯ ಕಂಪನಿಯಾದ ಟೊಯೋಟಾ ಮೋಟಾರ್ ಕಾರ್ಪೊರೇಷನ್(Toyota Motor Corporation) ಕೂಡಾ ತನ್ನ ಘಟಕವನ್ನು ಬೆಂಗಳೂರಿನಲ್ಲಿ ತೆರೆಯಲು ಯೋಜನೆ ಹಾಕಿಕೊಂಡಿದೆ.

ಟೊಯೋಟಾ ಮೋಟಾರ್ ಕಾರ್ಪೊರೇಶನ್ ತನ್ನ ಸ್ಥಳೀಯ ಘಟಕದ ಮೂಲಕ ಭಾರತದಲ್ಲಿ ತನ್ನ ಮೊದಲ ಸಂಶೋಧನೆ ಮತ್ತು ಅಭಿವೃದ್ಧಿ(R&D) ಕೇಂದ್ರವನ್ನು ಸ್ಥಾಪಿಸಲು ಯೋಜಿಸುತ್ತಿದೆ ಎಂದು ಬ್ಲೂಮ್‌ಬರ್ಗ್ ವರದಿ ತಿಳಿಸಿದೆ. ಬಿಡದಿಯಲ್ಲಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್‌ನ ಅಸ್ತಿತ್ವದಲ್ಲಿರುವ ಸ್ಥಾವರದ ಬಳಿ ಈ ಘಟಕವನ್ನು ತೆರೆಯಲಿದ್ದು, 2,000 ಉದ್ಯೋಗಿಗಳೊಂದಿಗೆ ಕಾರ್ಯಾಚರಣೆಯನ್ನು ಪ್ರಾರಂಭಿಸುವ ಮತ್ತು 2027 ರ ವೇಳೆಗೆ 3,000 ಎಂಜಿನಿಯರ್‌ಗಳಿಗೆ ವಿಸ್ತರಿಸುವ ನಿರೀಕ್ಷೆಯಿದೆ ಎಂದು ಮೂಲಗಳು ಔಟ್‌ಲೆಟ್‌ಗೆ ತಿಳಿಸಿವೆ.
ಭಾರತದಲ್ಲಿ ಟೊಯೋಟಾ ಕಂಪನಿಯ ಮೊದಲ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವಾಗಿದ್ದು, ಈಗಾಗಲೇ ಥೈಲ್ಯಾಂಡ್ ಮತ್ತು ಚೀನಾದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಿದೆ. ಈ ಹೂಡಿಕೆಗಳ ನಂತರ, ಜಪಾನ್ ದೇಶದ ಹೊರಗಡೆ ಏಷ್ಯಾ ಪೆಸಿಫಿಕ್ (APAC) ಪ್ರದೇಶದಲ್ಲಿ ಟೊಯೋಟಾ ಸ್ಥಾಪಿಸುತ್ತಿರುವ ಮೂರನೇ R&D ಕೇಂದ್ರ ಇದು. ಆರಂಭದಲ್ಲಿ ಭಾರತೀಯ ಮಾರುಕಟ್ಟೆಯ ಮೇಲೆ ಕೇಂದ್ರೀಕರಿಸಿದ್ದರೂ, ಇದು 9,000 ಎಂಜಿನಿಯರ್‌ಗಳನ್ನು ನೇಮಿಸಿಕೊಂಡಿರುವ ಮರ್ಸಿಡಿಸ್ ಬೆಂಝ್ ನಂತಹ ಬೆಂಗಳೂರಿನ ಸೌಲಭ್ಯದಂತೆಯೇ ಜಾಗತಿಕ R&D ಕೇಂದ್ರವಾಗಿ ವಿಕಸನಗೊಳ್ಳುವ ನಿರೀಕ್ಷೆಯಿದೆ.
ಟೊಯೋಟಾ ಕಂಪನಿಯು 2010 ರಲ್ಲಿ ಭಾರತದಲ್ಲಿ ಒಂದು ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವನ್ನು ಸ್ಥಾಪಿಸಲು ಯೋಜಿಸಿತ್ತು. ಆದರೆ ಈಗ ಆ ಯೋಜನೆಯನ್ನು ಬಿಟ್ಟು ಟೊಯೋಟಾ ಕಂಪನಿಯು ಸುಜುಕಿ ಕಂಪನಿಯೊಂದಿಗೆ ಪಾಲುದಾರಿಕೆಯನ್ನು ಹೆಚ್ಚು ಬಲಪಡಿಸಲು ಮುಂದಾಗಿದೆ. ಇದಕ್ಕಾಗಿ ಟೊಯೋಟಾ ಸಂಸ್ಥೆಯೂ , ಹೊಸ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವಾಘಿರುವ 3,000 ಎಂಜಿನಿಯರ್‌ಗಳನ್ನು ಹೊಂದಿರುವ ಭಾರತದ ಅತಿದೊಡ್ಡ ಆಟೋಮೋಟಿವ್ ಎಂಜಿನಿಯರಿಂಗ್ ಕೇಂದ್ರಗಳಲ್ಲಿ ಒಂದಾದ ಸುಜುಕಿಯ ರೋಹ್ಟಕ್ ಸೌಲಭ್ಯವನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡುತ್ತಿದೆ.
ಟೊಯೋಟಾ-ಸುಜುಕಿ ಪಾಲುದಾರಿಕೆಯ ಮೂಲಕ ಒಂದು ಹೊಸ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡವುದು ಪ್ರಮುಖವಾಗಿ ಯೋಜನೆಗಳಲ್ಲಿ ಒಂದಾಗಿದೆ. ಈ ಹೊಸ ಕಾರಿನ ಹೆಸರು "ಅರ್ಬನ್ ಕ್ರೂಸರ್ ಇವಿ" ಇದು ಸುಜುಕಿ ಕಂಪನಿಯ ಇ-ವಿಟಾರಾದ ಮರುಬ್ರಾಂಡೆಡ್ ಆವೃತ್ತಿಯಾಗಿದ್ದು, 2025 ರಿಂದ ಸುಜುಕಿ ಮೋಟಾರ್ ಗುಜರಾತ್‌ನಲ್ಲಿ ತಯಾರಿಸಲ್ಪಡಲಿದೆ.
ಈ ಪಾಲುದಾರಿಕೆ ಮಹತ್ವದಾಗಿದ್ದು, ಭಾರತೀಯ ಮತ್ತು ಜಾಗತಿಕ ಇವಿ ಮಾರುಕಟ್ಟೆಗಳಲ್ಲಿ ಪ್ರವೇಶಿಸಲು ಟೊಯೋಟಾ ಮತ್ತು ಸುಜುಕಿಯ ಜಂಟಿ ಪ್ರಯತ್ನಗಳಲ್ಲಿ ಇದು ಒಂದು ಪ್ರಮುಖ ಹೆಜ್ಜೆಯಾಗಲಿದೆ. ಆದರೆ ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಲು ಟೊಯೋಟಾ ನಿರಾಕರಿಸಿದೆ.
ಕಳೆದ ವರ್ಷ, ಟೊಯೋಟಾ ತನ್ನ ಭಾರತದ ಕಾರ್ಯಾಚರಣೆಗಳನ್ನು ಪುನರ್ ರಚನೆ ಮಾಡಿ, ಮಧ್ಯಪ್ರಾಚ್ಯ, ಪೂರ್ವ ಏಷ್ಯಾ ಮತ್ತು ಓಷಿಯಾನಿಯಾ ವ್ಯವಹಾರಕ್ಕೆ ಕೇಂದ್ರ ಕೇಂದ್ರವನ್ನಾಗಿ ಮಾಡಿತ್ತು. ಪರಿಸರ ಸ್ನೇಹಿ ಮತ್ತು ಹಸಿರು ತಂತ್ರಜ್ಞಾನಗಳಲ್ಲಿ ಭಾರತವನ್ನು ಜಾಗತಿಕ ನಾಯಕನನ್ನಾಗಿ ಮಾಡಲು ಕಂಪನಿಯು ದೊಡ್ಡ ಮೊತ್ತದ ಹಣವನ್ನು ಹೂಡಿಕೆ ಮಾಡುತ್ತಿದೆ.


Click it and Unblock the Notifications