ಪಾಕಿಸ್ತಾನ ಮತ್ತು ಭಾರತ (Pakistan-India) ನಡುವಿನ ಘರ್ಷಣೆ ನಂತರ, ಅಮೆರಿಕ ಅಧ್ಯಕ್ಷ ಒಂದಲ್ಲಾ ಒಂದು ಕಾರಣಕ್ಕೆ ಭಾರತದ ಜೊತೆ ವಿವಾದಕ್ಕೆ ಗುರಿಯಾಗುತ್ತಿದ್ದಾರೆ. ಕಾಲುಕೆರದು ಜಗಳಕ್ಕೆ ಬಂದಿದ್ದ ಪಾಕಿಸ್ತಾನಕ್ಕೆ, ಭಾರತ ತಕ್ಕ ಪಾಠ ಕಲಿಸಿತ್ತು. ಆದರೆ ಕೊನೆಗೂ ಸೋಲೊಪ್ಪಿಕೊಂಡ ಪಾಕಿಸ್ತಾನ, ಭಾರತದೊಂದಿಗೆ ಕದನ ವಿರಾಮ ಮಾಡುವಂತೆ ಅಂಗಲಾಚಿತ್ತು. ಆದರೆ ಟ್ರಂಪ್ (Donald Trump) ಮಾತ್ರ ತಾನೇ ಕದನ ವಿರಾಮ ಮಾಡಿಸಿದ್ದಾಗಿ ಹಲವು ಬಾರಿ ಹೇಳುತ್ತಲೇ ಇದ್ದರು. ಅಲ್ಲದೇ ಭಾರತ ರಷ್ಯಾದಿಂದ ತೈಲ ಖರೀದಿ ಮಾಡುವುದನ್ನು ಸಹಿಸಲಾಗದ ಅಮೆರಿಕಾ ಭಾರತದ ವಿರುದ್ಧ ಸುಂಕದ ಸಮರ ಕೈಗೊಂಡಿತ್ತು. ಅದ್ರೆ ಭಾರತ ಇದನ್ನು ಕ್ಯಾರೇ ಎನ್ನದೇ ತನ್ನ ವಹಿವಾಟು ಮುಂದುವರೆಸಿತ್ತು. ಆದ್ರೆ ಇದೀಗ ಮತ್ತೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದೊಂದಿಗೆ ಮತ್ತೆ ವ್ಯಾಪಾರ ಒಪ್ಪಂದ (Trade Deal) ಮಾಡುವುದಾಗಿ ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದೊಂದಿಗೆ ಶೀಘ್ರದಲ್ಲೇ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವುದಾಗಿ ಹೇಳಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಬಗ್ಗೆಯೂ ಭಾರೀ ಗೌರವ ವ್ಯಕ್ತಪಡಿಸಿದ್ದಾರೆ. ಸದ್ಯ ಟ್ರಂಪ್ ನಡೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಆದರೂ ಎರಡೂ ದೇಶಗಳ ನಡುವಿನ ವ್ಯಾಪಾರ ವಹಿವಾಟು ಮತ್ತೆ ಶುರುವಾಗುವ ಲಕ್ಷಣ ಕಾಣುವಂತಿದೆ.
ಶೃಂಗಸಭೆಯಲ್ಲಿ ಟ್ರಂಪ್ ಅಚ್ಚರಿ ಹೇಳಿಕೆ
ದಕ್ಷಿಣ ಕೊರಿಯಾದ ಗ್ವಾಂಗ್‌ಜುನಲ್ಲಿ ನಡೆದ ಏಷ್ಯಾ-ಪೆಸಿಫಿಕ್ ಎಕನಾಮಿಕ್ ಕೋಆಪರೇಷನ್ (APEC) ಶೃಂಗಸಭೆ ವೇಳೆ ಮಾತನಾಡಿದ ಟ್ರಂಪ್, ಪ್ರಧಾನಿ ಮೋದಿ ಅವರನ್ನು ಅತ್ಯಂತ ಉತ್ತಮ ವ್ಯಕ್ತಿ ಎಂದು ಬಣ್ಣಿಸಿದರು.
ಭಾರತದೊಂದಿಗೆ ಆರ್ಥಿಕವಾಗಿ, ವ್ಯಾಪಾರ ಸಂಬಂಧವನ್ನು ಮತ್ತೆ ಸ್ಥಾಪಿಸುವ ಬಗ್ಗೆ ಪುನರುಚ್ಚರಿಸಿದ ಟ್ರಂಪ್, "ನಾನು ಭಾರತದೊಂದಿಗೆ ಶೀಘ್ರದಲ್ಲೇ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲಿದ್ದೇನೆ" ಎಂದು ಹೇಳಿದ್ದಾರೆ. ಅಲ್ಲದೇ ಈ ಸಂದರ್ಭದಲ್ಲಿ ಭಾರತದ ಬಗ್ಗೆ ಮತ್ತು ಪ್ರಧಾನಿ ಮೋದಿ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ಮೋದಿ ಬಗ್ಗೆ ಟ್ರಂಪ್ ಭಾರೀ ಮೆಚ್ಚುಗೆ
ಇನ್ನು ಟ್ರಂಪ್ ವ್ಯಾಪಾರ ಸಂಬಂಧದ ಜೊತೆಗೆ ಪ್ರಧಾನಿ ಮೋದಿಯನ್ನೂ ಹಾಡಿಹೊಗಳಿದ್ದಾರೆ. "ನಾವು ಭಾರತದೊಂದಿಗೆ ಮತ್ತೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ನಿರ್ಧರಿಸಿದ್ದೇವೆ. ಪ್ರಧಾನಿ ಮೋದಿ ಬಗ್ಗೆ ನನಗೆ ಅಪಾರ ಗೌರವವಿದೆ. ನಮ್ಮಿಬ್ಬರ ಮಧ್ಯೆ ಉತ್ತಮ ಬಾಂಧವ್ಯವಿದೆ." ಎಂದು ಹೇಳಿಕೊಂಡಿದ್ದಾರೆ.
ಭಾರತ-ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ; ಟ್ರಂಪ್ ಮತ್ತೆ ಹೇಳಿಕೆ
ಆಪರೇಷನ್ ಸಿಂಧೂರ್‌ನಲ್ಲಿ ಭಾರತದ ದಾಳಿಯಿಂದ ಪಾಕಿಸ್ತಾನ ಅಕ್ಷರಶಃ ತತ್ತರಿಸಿ ಹೋಗಿತ್ತು. ಭಾರತದ ದಾಳಿಗೆ ಪಾಕಿಸ್ತಾನ ಮಂಡಿಯೂರಿ ಸೋಲೊಪ್ಪಿಕೊಂಡಿತ್ತು. ಆದರೆ ಟ್ರಂಪ್ ಮಾತ್ರ ಪಾಕಿಸ್ತಾನ ಮತ್ತು ಭಾರತದೊಂದಿಗೆ ಮಾತನಾಡಿ ನಾನೇ ಕದನ ವಿರಾಮ ಮಾಡಿಸಿದ್ದು ಎಂದು ಹೇಳುತ್ತಾ, ಭಾರತವನ್ನು ಟೀಕಿಸುತ್ತಲೇ ಬಂದಿದ್ದರು. ಆದರೆ ಸ್ವಾಭಿಮಾನವನ್ನು ಬಿಡದ ಭಾರತ ಮಾತ್ರ, ನಮಗೆ ಯಾರೂ ಹೇಳಿಲ್ಲ ಎಂದು ಪ್ರತಿಕ್ರಿಯೆ ನೀಡಿತ್ತು. ಆದ್ರೆ ಇದೀಗ ಟ್ರಂಪ್ ಮತ್ತೆ ಕದನವ ವಿರಾಮದ ಬಗ್ಗೆ ಮಾತನಾಡಿ, "ನಾನು ಪ್ರಧಾನಿ ಮೋದಿಯವರಿಗೆ ಕರೆ ಮಾಡಿ, ನೀವು ಪಾಕಿಸ್ತಾನದೊಂದಿಗೆ ಯುದ್ಧ ಮಾಡುವುದರಿಂದ ನಾನು ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಬೆದರಿಕೆಯೊಡ್ಡಿದೆ. ಅಲ್ಲದೇ ಪಾಕಿಸ್ತಾನಕ್ಕೂ ಇದೇ ರೀತಿ ಬೆದರಿಕೆ ಹಾಕಿದೆ. ಅಷ್ಟೇ ಅಲ್ಲದೇ "250% ಸುಂಕ" ವಿಧಿಸುತ್ತೇನೆ ಎಂಬ ಬೆದರಿಕೆಯಿಂದಾಗಿ 48 ಗಂಟೆಗಳ ಒಳಗೆ ಯುದ್ಧವನ್ನು ನಿಲ್ಲಿಸಲು ಒಪ್ಪಿಕೊಂಡರು ಎಂದು ಮತ್ತೊಮ್ಮೆ "ನಾನೇ ಕಾರಣ" ಎಂದು ತನ್ನನ್ನು ತಾನು ಟ್ರಂಪ್ ಹೊಗಳಿಕೊಂಡಿದ್ದಾರೆ.
ಟ್ರಂಪ್ ಹೇಳಿಕೆಗೆ ಭಾರತ ಹೇಳಿದ್ದೇನು?
ಇನ್ನು ಟ್ರಂಪ್ ಇದೇ ಮೊದಲಲ್ಲ, ಈ ಹಿಂದೆಯೂ ಹಲವು ಬಾರಿ ನಾನೇ ಕದನ ವಿರಾಮ ಮಾಡಿಸಿದ್ದು ಎಂದು ಹೇಳಿಕೊಂಡು ಬಂದಿದ್ದರು. ಆದ್ರೆ ಇದಕ್ಕೆ ಪ್ರತಿಕ್ರಿಯೆಯಾಗಿ ಭಾರತ, "ಎರಡೂ ದೇಶಗಳ ಪರಸ್ಪರ ಮಾತುಕತೆಯಿಂದ ಕದನ ವಿರಾಮ ಘೋಷಿಸಲಾಗಿದೆ. ಇದರಲ್ಲಿ ಯಾವುದೇ ಮೂರನೇ ವ್ಯಕ್ತಿ ಭಾಗವಹಿಸಿಲ್ಲ, ದ್ವಿಪಕ್ಷೀಯ ಮಾತುಕತೆಯಿಂದ ಯುದ್ಧ ನಿಲ್ಲಿಸಲಾಗಿದೆ" ಎಂದು ಸ್ಪಷ್ಟನೆ ನೀಡಿತ್ತು. ಆದ್ರೆ ಟ್ರಂಪ್ ಮಾತ್ರ ತನ್ನ ಹಳೇ ಚಾಳಿಯನ್ನು ಬಿಡುತ್ತಲೇ ಇಲ್ಲ.


Click it and Unblock the Notifications