ಟೆಲಿಕಾಂ ನಿಯಂತ್ರಕ ಟೆಲಿಕಾಂ ರೆಗ್ಯುಲೇಟರ್ ಅಥಾರಿಟಿ ಆಫ್ ಇಂಡಿಯಾ(TRAI) ರೀಚಾರ್ಜ್ ಪ್ಯಾಕ್‌ಗಳಿಗೆ ಸಂಬಂಧಿಸಿದಂತೆ ಹೊಸ ತಿದ್ದುಪಡಿಯನ್ನ ಮಾಡಲು ಮುಂದಾಗಿದೆ. ಇನ್ಮೇಲೆ ಕರೆ ಮತ್ತು SMSಗಾಗಿ ಪ್ರತ್ಯೇಕ ರೀಚಾರ್ಜ್ ಯೋಜನೆಗಳನ್ನು ನೀಡಲು ಹಾಗೆ ರೀಚಾರ್ಜ್ ನಿಯಮಗಳನ್ನ ತಿದ್ದಪಡಿ ಮಾಡಲು ಮೊಬೈಲ್ ಸೇವಾ ಪೂರೈಕೆದಾರರಿಗೆ ಆದೇಶವನ್ನ ನೀಡಿದೆ.
ಈ ಹೊಸ ನಿಯಮ ಮೊಬೈಲ್ ಡೇಟಾವನ್ನು ಬಳಸದ ಗ್ರಾಹಕರಿಗೆ ಪ್ರೋಜನಕಾರಿಯಾಗುವಂತೆ ಈ ಆಯ್ಕೆಗಳನ್ನ ಒದಗಿಸುವ ಗುರಿಯನ್ನ ಹೊಂದಿದೆ. ಮೊಬೈಲ್ ಸೇವಾ ಪೂರೈಕೆದಾರರ ಕಂಪನಿಗಳು ಡೇಟಾ ಬಳಸದ ಗ್ರಾಹಕರಿಗೆ ಪ್ರತ್ಯೇಕವಾಗಿ ಕರೆಗಳು ಮತ್ತು SMSಗಳಿಗಾಗಿ ಮಾತ್ರ ರೀಚಾರ್ಜ್ ಕೂಪನ್‌ಗಳನ್ನ ಒದಗಿಸುತ್ತವೆ. ಅಲ್ಲದೆ TRAI ಕೂಪನ್ ಮಿತಿಯನ್ನ 90 ದಿನಗಳ ಹೊರತಾಗಿ 365 ದಿನಗಳವರೆಗೆ ವಿಸ್ತರಿಸಲು ಆದೇಶ ನೀಡಿದೆ.

ಈ ಹೊಸ ತಿದ್ದುಪಡಿಯಿಂದ ಭಾರತದ ಹಲವರು ಇದರ ಪ್ರಯೋಜನವನ್ನ ಪಡೆದುಕೊಳ್ಳುತ್ತಾರೆ. ಅಲ್ಲದೆ ಭಾರತದಲ್ಲಿ ಹೆಚ್ಚಿನ ಜನಸಂಖ್ಯೆ ಇರುವ ಭಾಗಗಳಲ್ಲಿ ಉಪಯುಕ್ತವಾಗಲಿದೆ. ಅದಲ್ಲೂ ಭಾರತದಲ್ಲಿ ಸುಮಾರು 150 ಮಿಲಿಯನ್ ಜನರು 2G ಬಳಕೆದಾರರಿಗೆ, ಡ್ಯುಯಲ್-ಸಿಮ್ , ಬಳಸುವವರಿಗೆ ಹಾಗೆ ವಯಸ್ಸಾದ ವ್ಯಕ್ತಿಗಳು ಮತ್ತು ಗ್ರಾಮೀಣ ನಿವಾಸಿಗಳಿಗೆ ಇದರಿಂದ ಉಪಯುಕ್ತವಾಗಬಹುದು ಎಂದು ನಿರೀಕ್ಷಿಸಲಾಗಿದೆ. ಈ ಕ್ರಮದಿಂದ ಗ್ರಾಹಕರು ಅವರು ಬಳಕೆಯೇ ಮಾಡದ ಡೇಟಾಗೆ ಹೆಚ್ಚುವರಿ ಹಣವನ್ನ ಖರ್ಚು ಮಾಡುವ ಅಗತ್ಯ ಬೀಳುವುದಿಲ್ಲ, ಹಾಗೆ ಅವರು ಬಳಸುವ ಸೇವೆಗಳಿಗೆ ಮಾತ್ರ ಪಾವತಿಸಲು ಅನ್ವಯಿಸುತ್ತದೆ.
ಟೆಲಿಕಾಂ ಆಪರೇಟರ್‌ಗಳು ಮಾಹಿತಿ ನೀಡಿರುವಂತೆ ಭಾರತದಲ್ಲರುವ 150 ಮಿಲಿಯನ್ ಚಂದಾದಾರರು ಇನ್ನೂ ಕೂಡ ಕೀಪ್ಯಾಡ್‌ಗಳನ್ನ ಬಳಕೆ ಮಾಡುತ್ತಿದ್ದಾರೆ. ಆದ್ರೆ ಅವರಿಗೆ ಪ್ರತ್ಯೇಕ ರಿಚಾರ್ಜ್ ಆಯ್ಕೆಗಳು ಮಾತ್ರ ಇಲ್ಲ ಎಂದು TRAI ವರದಿ ಮಾಡಿದೆ.
ಟೆಲಿಕಾಂ ಗ್ರಾಹಕ ರಕ್ಷಣೆ ನಿಯಮಗಳು 12ನೇ ತಿದ್ದುಪಡಿ ಪ್ರಕಾರ ಸೇವಾ ಪೂರೈಕದಾರರು ಧ್ವನಿ ಕರೆಗಳು ಮತ್ತು SMSಗಾಗಿ ಪ್ರತ್ಯೇಕವಾಗಿ ಒಂದು ವಿಶೇಷ ವೋಚರ್‌ಅನ್ನು ಒದಗಿಸಬೇಕಾಗುತ್ತದೆ. ಇನ್ನು ಇರ ಮಿತಿ 365 ದಿನಗಳವರೆಗೆ ಇರಬೇಕು. ಅಲ್ಲದೆ ಈ ನಿಯಮ ಇಂಟರ್‌ನೆಟ್ ಬಳಸದ ಮತ್ತು ಧ್ವನಿ ಕರೆಗಳು ಮತ್ತು SMSಅನ್ನು ಬಳಸುವ ಗ್ರಾಹಕರಿಗೆ ಸಹಾಯವಾಗಲಿದೆ.
ಅನೇಕ ಭಾರತೀಯರಿಗೆ ಡೇಟಾ ಅಗತ್ಯ ಇಲ್ಲ
TRAI ವರದಿಯ ಪ್ರಕಾರ ಅನೇಕ ಭಾರತೀಯರಿಗೆ ಡೇಟಾ ಪ್ಯಾಕ್‌ಗಳ ಅಗತ್ಯ ಇಲ್ಲ ಎಂಬುದು ತಿಳಿದುಬಂದಿದೆ. ಅದರಲ್ಲೂ ಭಾರತದಲ್ಲಿ ಸಾಕಷ್ಟು ಜನರು ಕೀಪ್ಯಾಡ್‌ಗಳನ್ನ ಬಳಕೆ ಮಾಡುತ್ತಿರುವುದರಿಂದ ಅದರ ಅವಶ್ಯಕತೆ ಹೆಚ್ಚಿನ ಜನರಿಗೆ ಬೇಕಾಗುವುದಿಲ್ಲ. ಹಾಗೆ ಇನ್ನು ಕೆಲವು ಹಿರಿಯರು ಇದನ್ನ ಬಳಕೆ ಮಡುವುದು ತೀವ್ರ ಕಡಿಮೆ. ಹೀಗಾಗಿ ಅಂತವರಿಗಾಗಿ ಪ್ರತ್ಯೇಕ ಧ್ವನಿ ಕರೆ ಮತ್ತು SMSಗಾಗಿ ರೀಚಾರ್ಜ್ ಪ್ಯಾಕ್‌ಗಳನ್ನ ನೀಡಿದರೆ ಅಂತವರಿಗೆ ಬಹಳ ಉಪಯೋಗವಾಗಲಿದೆ.
ವಾಯ್ಸ್ ಮತ್ತು ಎಸ್‌ಎಂಎಸ್ ಅನ್ನು ಕಡ್ಡಾಯಗೊಳಿಸುವುದರಿಂದ ಡೇಟಾ ಅಗತ್ಯವಿಲ್ಲದ ಚಂದಾದಾರರಿಗೆ ಎಸ್‌ಟಿವಿ ಆಯ್ಕೆಯನ್ನು ಒದಗಿಸಬಹುದು ಅಲ್ಲದೆ ಇವುಗಳು ನಿರ್ದಿಷ್ಟ ಪ್ರಿಪೇಯ್ಡ್ ಯೋಜನೆಗಳು ಅಥವಾ ಟೆಲಿಕಾಂ ಸೇವಾ ಪೂರೈಕೆದಾರರು ನೀಡುವ ವೋಚರ್‌ಗಳು ಯಾವುದೇ ಡೇಟಾ ಹಂಚಿಕೆಯಿಲ್ಲದೆ ಕೇವಲ ಧ್ವನಿ ಕರೆಗಳು ಮತ್ತು SMS ಸೇವೆಗಳನ್ನು ಪ್ರವೇಶಿಸಲು ಚಂದಾದಾರರಿಗೆ ಅವಕಾಶ ನೀಡುತ್ತದೆ. ಈ STVಗಳು ಇಂಟರ್ನೆಟ್ ಸೇವೆಗಳ ಅಗತ್ಯವಿಲ್ಲದ ಮತ್ತು ಕೇವಲ ಮೂಲ ಧ್ವನಿ ಮತ್ತು SMS ಕಾರ್ಯನಿರ್ವಹಣೆಯ ಅಗತ್ಯವಿರುವ ಬಳಕೆದಾರರನ್ನು ಗುರಿಯಾಗಿರಿಸಿಕೊಂಡಿವೆ.
ಮೊಬೈಲ್ ರೀಚಾರ್ಜ್ ಆಯ್ಕೆಗಳು
ಟೆಲಿಕಾಂ ಕಂಪನಿಗಳಿಗೆ ಯಾವುದೇ ರೀಚಾರ್ಜ್ ವೋಚರ್‌ಗಳನ್ನು ನೀಡುವ ಅವಕಾಶವಿದೆ. ಆದ್ರೆ ಅವರು ಕನಿಷ್ಠ 10 ರೂಗಳ ರೀಚಾರ್ಜ್ ಕೂಪನ್‌ಅನ್ನು ಸಹ ಇದು ನೀಡಬೇಕಾಗುತ್ತದೆ. ಈ ಮೊದಲು ನಿಯಮವು ಟೆಲಿಕಾಂ ಆಪರೇಟರ್‌ಗಳಿಗೆ ಟಾಪ್-ಅಪ್ ವೋಚರ್‌ಗಳನ್ನು 10 ರೂಪಯಿ ಮತ್ತು 10 ರೂಗಳ ಗುಣಕಗಳಲ್ಲಿ ವಿತರಿಸಲು ಅವಕಾಶ ಇತ್ತು. ಆದ್ರೆ ಸಮಾಲೋಚನೆ ಪ್ರಕ್ರಿಯೆಯಲ್ಲಿ TRAIಗೆ ವಿಭಿನ್ನ ಅಭಿಪ್ರಾಯಗಳು ಬಂದಿವೆ. ಇವುಗಳಲ್ಲಿ ಅನೇಕ ಹಿರಿಯ ನಾಗರಿಕರು ಮತ್ತು ಇತರರಿಗೆ ಮೊಬೈಲ್ ಫೋನ್‌ಗಳಿಗೆ ಡೇಟಾದೊಂದಿಗೆ ರೀಚಾರ್ಜ್ ಯೋಜನೆಗಳ ಅಗತ್ಯವಿಲ್ಲ.
ಟೆಲಿಕಾಂ ಕಂಪನಿಗಳಾದ Jio, Airtel ಮತ್ತು Vi ಈ ಹಿಂದೆ ಪ್ರತ್ಯೇಕ ಧ್ವನಿ ಮತ್ತು SMS-ಮಾತ್ರ ಪ್ಯಾಕ್‌ಗಳನ್ನ ನೀಡಲು ವಿರೋಧವನ್ನ ಮಾಡಿತ್ತು. ಹಾಗೆ ಡೇಟಾ ಆಧುನಿಕ ಸಂವಹನದ ಮೂಲಾಧಾರವಾಗಿದೆ ಎಂದು ವಾದ ಮಾಡಿದ್ದವು. ಹಳೆಯ ಪೇ-ಆಸ್-ಯು-ಗೋ ಅಂತಹ ಮಾದರಿಗಳಿಗೆ ಹೋಲಿಕೆ ಮಾಡಿದರೆ ಅನಿಯಮಿತ ಡೇಟಾ ಮತ್ತು ಕರೆಗಳಂತಕೊಡುಗೆಗಳಿಂದಾಗಿ ಬಳಕೆದಾರರು ಕೂಡ ಹೆಚ್ಚಾಗಿದ್ದಾರೆ ಎಂದು ಅವರು ಹೇಳಿದ್ದರು.
ಆದ್ರೆ ಲಕ್ಷಾಂತರ ಭಾರತೀಯರಿಗೆ, TRAIನ ಈ ಹೊಸ ಕ್ರಮವು ಸ್ವಾಗತಾರ್ಹ ಪರಿಹಾರವನ್ನು ತರಲಿದೆ. ಮೊಬೈಲ್ ಸಂಪರ್ಕಕ್ಕಾಗಿ ಕೈಗೆಟುಕುವ ಹಾಗೆ ಪ್ರಾಯೋಗಿಕ ಆಯ್ಕೆಗಳನ್ನು ಇು ಖಚಿತ ಪಡಿಸುತ್ತದೆ. ಅದಲ್ಲದೆ, ಟೆಲಿಕಾಂ ದೈತ್ಯರಿಗೆ ಡೇಟಾ-ಚಾಲಿತ ಮಾರುಕಟ್ಟೆಯಲ್ಲಿ ತಮ್ಮ ಆದಾಯದ ಗಿರಿಯ ಜೊತೆಗೆ ನಮ್ಯತೆಗಾಗಿ ಗ್ರಾಹಕರ ಬೇಡಿಕೆಗಳನ್ನು ಸಮತೋಲನದಲ್ಲಿಡಲು ಈ ಹೊಸ ನಿಯಮ ಸವಾಲಾಗಿದೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications