ಮೊಬೈಲ್ (Mobile) ಬಳಕೆ ಹೆಚ್ಚಾದಂತೆ ಸೈಬರ್ ವಂಚಕರ (Cyber Crime) ಸಂಖ್ಯೆಯೂ ಹೆಚ್ಚಾಗುತ್ತಿದೆ. ಆದ್ದರಿಂದ ಇತ್ತೀಚೆಗೆ "ಸೈಬರ್ ವಂಚಕರಿದ್ದಾರೆ" ಎಂಬ ಪೋಸ್ಟರ್ ವೈರಲ್ ಮಾಡುವಂತಾಗಿದೆ. ಅಮಾಯಕ ಮೊಬೈಲ್ ಬಳಕೆದಾರರೇ ಈ ಸೈಬರ್ ಖದೀಮರ ಟಾರ್ಗೆಟ್. ಸಾಲ, ಆನ್‌ಲೈನ್ ಪ್ರೊಡಕ್ಟ್, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ರೂಪದಲ್ಲಿ ಆಮಿಷವೊಡ್ಡಿ ಜನರನ್ನು ಮೋಸದ ಬಲೆಗೆ ಬೀಳಿಸುತ್ತಿದ್ದಾರೆ. ಆದರೆ ಇದೀಗ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (TRAI) ಮಹತ್ವದ ಕ್ರಮ ಕೈಗೊಂಡಿದೆ. ಈ ಮೂಲಕ ಇನ್ಮೇಲೆ ವಂಚನೆ ದೂರುಗಳು ಕಡಿಮೆಯಾಗಲಿದೆ.

ಮಹತ್ವದ ನಿರ್ಧಾರ ಕೈಗೊಂಡ ಪ್ರಾಧಿಕಾರ
ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (TRAI) ತೆಗೆದುಕೊಂಡ ಹೊಸ ನಿರ್ಧಾರದ ಪ್ರಕಾರ, ಇನ್ಮೇಲೆ ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗಳು, ವಿಮಾ ಕಂಪನಿಗಳು ಮತ್ತು ಸರ್ಕಾರಿ ಇಲಾಖೆಗಳು ತಮ್ಮ ಗ್ರಾಹಕರಿಗೆ ಯಾವುದೇ ಸೇವೆಯ ಮಾಹಿತಿಯನ್ನು ನೀಡಬೇಕೆಂದರೆ 1600 ಸೀರಿಸ್‌ನ ನಂಬರ್‌ಗಳನ್ನು ಬಳಸಬೇಕು. ಇನ್ನು ಟ್ರಾಯ್‌ನ ಉದ್ದೇಶ ಗ್ರಾಹಕರ ವಿಶ್ವಾಸ ಹೆಚ್ಚಿಸುವುದು, ಸ್ಪ್ಯಾಮ್ ಕರೆಗಳಿಗೆ ಬ್ರೇಕ್ ಹಾಕುವುದು ಮತ್ತು ಕಾಲ್ ಮೂಲಕ ನಡೆಯುವ ವಂಚನೆಗಳನ್ನು ತಡೆಗಟ್ಟುವುದು. ದೂರಸಂಪರ್ಕ ಇಲಾಖೆ (DoT) ಈಗಾಗಲೇ BFSI (Banking, Financial Services and Insurance) ವಲಯದ ಸಂಸ್ಥೆಗಳಿಗೆ 1600 ಸೀರಿಸ್ ನಂಬರ್ ಅನ್ನು ಹಂಚಿಕೊಂಡಿದೆ.
ಈ ವಿಶೇಷ ಸಂಖ್ಯೆಗಳ ಸೀರಿಸ್ ಇರುವುದರಿಂದ, ಇನ್ಮೇಲೆ ಬ್ಯಾಂಕ್‌ಗಳಿಂದ, ಇತರ ಸಂಸ್ಥೆಗಳಿಂದ ಬರುವ ನಿಜವಾದ ಕರೆಗಳನ್ನು ಜನರು ಸುಲಭವಾಗಿ ಗುರುತಿಸಬಹುದು. 1600 ಸರಣಿಯಿಂದ ಬರುವ ಕರೆಗಳಿಂದಾಗಿ ಜನರಿಗೆ ಇನ್ಮೇಲೆ ಸ್ಪ್ಯಾಮ್ ಯಾವುದು, ಸಂಸ್ಥೆಗಳ ಕರೆಗಳು ಯಾವುದು ಎಂದು ಮೊದಲೇ ನಿರ್ಧರಿಸಬಹುದು. ಟೆಲಿಕಾಂ ಸೇವಾ ಪೂರೈಕೆದಾರರಿಗೆ ಈ ನಂಬರ್‌ಗಳನ್ನು ನೀಡಿದ ನಂತರ, TRAI, BFSI ನಿಯಂತ್ರಕ ಸಂಸ್ಥೆಗಳೊಂದಿಗೆ ಸೇರಿ ಈ ನಂಬರ್‌ಗಳು ಬಳಕೆಗೆ ಬರುವಂತೆ ಕ್ರಮ ಕೈಗೊಳ್ಳಲಾಗುತ್ತದೆ.
ಸದ್ಯಕ್ಕೆ ಸುಮಾರು 485 ಸಂಸ್ಥೆಗಳು 1600 ಸೀರಿಸ್‌ನೊಂದಿಗೆ ಅಳವಡಿಸಿಕೊಂಡಿದೆ. ಇವುಗಳು ಒಟ್ಟಾಗಿ ಸುಮಾರು 2800 ನಂಬರ್‌ಗಳನ್ನು ಬಳಸುತ್ತಿವೆ. TRAI ನಿರ್ಧಾರದ ನಂತರ, ಪ್ರತಿ ವಿಭಾಗವು 1600 ಸರಣಿಗೆ ಯಾವಾಗ ಬದಲಾಗಬೇಕು ಎಂಬುದರ ಕುರಿತು ಕಾಲಮಿತಿ ನೀಡಲಾಗುತ್ತದೆ. ವಾಣಿಜ್ಯ ಬ್ಯಾಂಕುಗಳು 2026ರ ಜನವರಿ 1 ರಿಂದ, ಸಣ್ಣ ಹಣಕಾಸು ಬ್ಯಾಂಕುಗಳು, ದೊಡ್ಡ NBFCಗಳು ಮತ್ತು ಪಾವತಿ ಬ್ಯಾಂಕುಗಳು 2026ರ ಫೆಬ್ರವರಿ 1 ರಿಂದ, ಸಹಕಾರಿ ಬ್ಯಾಂಕುಗಳು ಮತ್ತು ಸಣ್ಣ NBFCಗಳು 2026ರ ಮಾರ್ಚ್ 1 ರಿಂದ ಈ ಹೊಸ ಸರಣಿ ನಂಬರ್ ಅನ್ನು ಅಳವಡಿಸಿಕೊಳ್ಳಬೇಕು. ಮ್ಯೂಚುವಲ್ ಫಂಡ್‌ಗಳು, ಪಿಂಚಣಿ ನಿಧಿಗಳು ಮತ್ತು CRAಗಳು 2026ರ ಫೆಬ್ರವರಿ 15 ರಿಂದ 1600 ಸರಣಿ ನಂಬರ್ ಬಳಸುವಂತೆ ಸೂಚನೆ ನೀಡಲಾಗಿದೆ.
ಏನಿದರ ಉದ್ದೇಶ?
ಟ್ರಾಯ್ ತೆಗೆದುಕೊಂಡಿರುವ ಈ ನಿರ್ಧಾರಗಳ ಮುಖ್ಯ ಉದ್ದೇಶವೇ, ವಂಚನೆಯಿಂದ ಮುಕ್ತಿ ನೀಡುವುದು. ಈಗಾಗಲೇ ಅಸ್ತಿತ್ವದಲ್ಲಿರುವ 10 ನಂಬರ್‌ನ ಕರೆಗಳು ಜನರನ್ನು ಗೊಂದಲಕ್ಕೀಡು ಮಾಡುತ್ತದೆ. ಅಲ್ಲದೇ ವಂಚಕರು ಸಹ ಇಂತಹ 10 ಅಂಕಿಯ ನಂಬರ್‌ಗಳನ್ನೇ ಬಳಸಿ ಜನರನ್ನು ಮೋಸ ಮಾಡುತ್ತಿರುವುದು ಪತ್ತೆಯಾಗಿದೆ. ಆದ್ದರಿಂದ, 1600 ಸೀರಿಸ್ ನಂಬರ್‌ಗಳನ್ನು ಹಂತ ಹಂತವಾಗಿ ಜಾರಿಗೆ ತರಲು ಸ್ಪಷ್ಟ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಇದರಿಂದ ಎಲ್ಲಾ ಹಣಕಾಸು ಸಂಸ್ಥೆಗಳು ಇಂತಹ ಸ್ಪಷ್ಟ ಗುರುತು ಹೊಂದಿರುವ ಸಂಖ್ಯೆಗಳಿಂದ ಕರೆಗಳನ್ನು ಮಾಡಬೇಕಾಗುತ್ತದೆ.


Click it and Unblock the Notifications