ಬೆಂಗಳೂರು: ಸರ್ಕಾರ vs ಸಾರಿಗೆ (Govt vs Transport) ನೌಕರರ ನಡುವಿನ ಸಮರ ಮತ್ತೆ ಶುರುವಾಗಿದೆ. ಹಲವು ವರ್ಷಗಳಿಂದ ಬಾಕಿ ಸಂಬಳದ ವಿಚಾರವಾಗಿ ಶುರುವಾದ ಜಟಾಪಟಿ ಇನ್ನೂ ನಿಂತಿಲ್ಲ. ಸರ್ಕಾರದ ಪ್ರತಿಕ್ರಿಯೆಯಿಂದ ರೊಚ್ಚಿಗೆದ್ದಿರುವ ಸಾರಿಗೆ ನೌಕರರು (Transport Workers) ಇದೀಗ ಬೆಂಗಳೂರು ಚಲೋಗೆ ಕರೆ ಕೊಟ್ಟಿದ್ದಾರೆ. ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸಾರಿಗೆ ನೌಕರರು ನಾಳೆ ಅಂದರೆ ಜನವರಿ 29ರಂದು "ಬೆಂಗಳೂರು ಚಲೋ"ಗೆ (Bengaluru Chalo) ಕರೆ ಕೊಟ್ಟಿದ್ದಾರೆ. ಇನ್ನು ಈ ಪ್ರತಿಭಟನೆ ಸಾರಿಗೆ ನೌಕರರ ಮುಖಂಡ ಅನಂತ್ ಸುಬ್ಬರಾವ್ ಅವರ ನೇತೃತ್ವದಲ್ಲಿ ನಡೆಯಲಿದೆ. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ (Bengaluru Freedom Park) ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಪ್ರತಿಭಟನೆ ನಡೆಯಲಿದೆ. ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ಮುಖಂಡರು, ನೌಕರರು ಈ ಪ್ರತಿಭಟನೆಗೆ ಕೈ ಜೋಡಿಸಿದ್ದಾರೆ.

ನಾಳೆ "ಬೆಂಗಳೂರು ಚಲೋ"!
ಹೌದು, ಸಾರಿಗೆ ನೌಕರರು ಮತ್ತು ಸರ್ಕಾರದ ನಡುವೆ ಮತ್ತೆ ಸಂಬಳ, ವಿವಿಧ ಬೇಡಿಕೆಗಗಳನ್ನು ಆಧರಿಸಿ ಸಮರ ಆರಂಭವಾಗಿದೆ. 2025 ರಲ್ಲಿ ನಡೆಯಬೇಕಿದ್ದ ಪ್ರತಿಭಟನೆ, ಇದೀಗ ನಾಳೆಗೆ (ಜ.29) ದಿನ ನಿಗದಿಯಾಗಿದೆ. ಇನ್ನು ಬಸ್ ಸೇವೆಗಳಲ್ಲಿ ಸ್ವಲ್ಪ ಮಟ್ಟಿಗೆ ಅಡಚಣೆಯಾಗುವ ಸಾಧ್ಯತೆ ಇದ್ದು, ಸಾರ್ವಜನಿಕರು ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವಂತೆ ಸಲಹೆ ನೀಡಲಾಗಿದೆ.
ಇನ್ನು ಪ್ರತಿಭಟನೆಯು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯಲಿದೆ. ಕರ್ನಾಟಕದ ನಾಲ್ಕು ಸಾರಿಗೆ ನಿಗಮಗಳ ಉದ್ಯೋಗಿಗಳು ಭಾಗವಹಿಸಲಿದ್ದಾರೆ ಎನರನಲಾಗಿದೆ. ಜಂಟಿ ಕ್ರಿಯಾ ಕಮಿಟಿ (JAC) ಆಫ್ RTC ವರ್ಕರ್ಸ್ ಯೂನಿಯನ್‌ಗಳು ಈ ಪ್ರತಿಭಟನೆಯನ್ನು ಕೈಗೊಂಡಿದೆ. ಸರ್ಕಾರಕ್ಕೆ ನೌಕರರ ಮನವಿ ಸಲ್ಲಿಸಿದ್ದರೂ ಇನ್ನೂ ಬಗೆಹರಿದಿಲ್ಲ ಎಂಬ ಆರೋಪಗಳು ಕೇಳಿಬಂದಿದೆ. ಜಂಟಿ ಕ್ರಿಯಾ ಸಮಿತಿ ಪ್ರತಿಭಟನೆಗೆ ಕರೆ ಕೊಟ್ಟಿದ್ದರೂ, ಕೆಎಸ್‌ಆರ್‌ಟಿಸಿ ಎಂಡಿ ಅಕ್ರಂ ಪಾಷ್ ಅವರು ಪ್ರಯಾಣಿಕರಿಗೆ ಯಾವುದೇ ಸಮಸ್ಯೆ ಆಗದಂತೆ ಎಚ್ಚರಿಕೆವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನೌಕರರ ಪ್ರಮುಖ ಬೇಡಿಕೆಗಳೇನು?
ಸ್ಯಾಲರಿ ಅರಿಯರ್ಸ್: ಕಳೆದ 38 ತಿಂಗಳಿಂದ ಬಾಕಿ ಇರುವ ವೇತನ ಅರಿಯರ್ಸ್‌ಗಳನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂಬುದೇ ನೌಕರರ ಬೇಡಿಕೆ. ನಾಲ್ಕು ನಿಗಮಗಳಲ್ಲಿ ಒಟ್ಟು 8,010 ಕೋಟಿ ಬಾಕಿ ಇದೆ ಎಂದು ಯೂನಿಯನ್‌ಗಳು ಹೇಳಿವೆ.
ವೇತನ ಪರಿಷ್ಕರಣೆ: ಜನವರಿ 1, 2024 ರಿಂದ ಜಾರಿಗೆ ಬರಬೇಕಿದ್ದ ವೇತ ಪರಿಷ್ಕರಣೆಯನ್ನು ತಕ್ಷಣ ಜಾರಿಗೆ ಬರುವಂತೆ ಆಗ್ರಹಿಸಲಾಗಿದೆ.
ಕೆಎಸ್‌ಆರ್‌ಟಿಸಿ ನೀಡಿರುವ ಎಚ್ಚರಿಕೆಗಳೇನು?
- ಸಾರಿಗೆ ವಿರೋಧಿ ಚಟುವಟಿಗೆಗೆ ಅವಕಾಶ ಕೊಡಬಾರದು.
- ಬೆಂಗಳೂರು ಚಲೋ ಪ್ರತಿಭಟನೆಯಲ್ಲಿ ಭಾಗಿಯಾಗದಂತೆ ಸೂಚನೆ
- ಮುಷ್ಕರಕ್ಕೆ ಬೆಂಬಲ ಸೂಚಿಸುವುದು ಅಥವಾ ಪ್ರಚೋದಿಸುವುದು ಕೂಡಾ ನಿಷೇಧ
- ಡ್ಯೂಟಿಗೆ ಗೈರಾದರೆ "ನೋ ವರ್ಕ್, ನೋ ಪೇ" ನಿಯಮ ತಕ್ಷಣ ಜಾರಿಗೊಳಿಸಲಾಗುವುದು
- ದಿನವಿಡೀ ಬಸ್ ಸಂಚಾರದಲ್ಲಿ ಯಾವುದೇ ವ್ಯತ್ಯಯ ಉಂಟಾಗಬಾರದು.
ಬಸ್ ಓಡಾಡುತ್ತಾ? ಇಲ್ವಾ?
ಪ್ರತಿಭಟನೆ ಮಾತ್ರ ನಡೆಸುವುದರಿಂದ ಸೇವೆಗಳಲ್ಲಿ ಸಂಪೂರ್ಣವಾಗಿ ಅಡಚಣೆ ಕಂಡುಬರುವ ಸಾಧ್ಯತೆ ಕಡಿಮೆ ಇದೆ. ಆದರೆ ಕೆಲವು ಬಸ್‌ಗಳ ಸಂಚಾರದಲ್ಲಿ ವಿಳಂಬ ಉಂಟಾಗಬಹುದು. ವಿಶೇಷವಾಗಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನರು ಈ ಬಗ್ಗೆ ಗಮನ ಹರಿಸುವುದು ಮುಖ್ಯ.


Click it and Unblock the Notifications