ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ತಮ್ಮ ಕಟ್ಟುನಿಟ್ಟಿನ ಸುಂಕ ನೀತಿಯನ್ನು ಜಾರಿಗೆ ತರುವ ಸಿದ್ದತೆಯನ್ನು ತೋರಿಸಿದ್ದಾರೆ. ಅಕ್ಟೋಬರ್ 1, 2025 ರಿಂದ ಅನೇಕ ಆಮದು ಉತ್ಪನ್ನಗಳ ಮೇಲೆ ಹೆಚ್ಚುವರಿ ತೆರಿಗೆ ವಿಧಿಸುವ ನಿರ್ಧಾರವನ್ನು ಅವರು ಘೋಷಿಸಿದ್ದಾರೆ. ಟ್ರಂಪ್ ಅವರ ಪ್ರಕಾರ, ಈ ಕ್ರಮ ಅಮೆರಿಕದ ದೇಶೀಯ ಉತ್ಪಾದನಾ ವಲಯವನ್ನು ರಕ್ಷಿಸಲು ಹಾಗೂ ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸಲು ಸಹಾಯಕವಾಗಲಿದೆ.

ಟ್ರಂಪ್ ಈ ಕುರಿತು ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಪ್ರಕಟಣೆ ಹೊರಡಿಸಿದ್ದು, ನಾವು ಅಮೆರಿಕದಲ್ಲಿ ಉತ್ಪಾದನಾ ಘಟಕಗಳನ್ನು ಪ್ರೋತ್ಸಾಹಿಸಬೇಕಾಗಿದೆ. ವಿದೇಶಗಳಿಂದ ಹೆಚ್ಚುವರಿ ಉತ್ಪನ್ನಗಳ ಆಮದು ನಮ್ಮ ಉದ್ಯಮಗಳಿಗೆ ಅನ್ಯಾಯವಾಗಿದೆ, ಎಂದು ಹೇಳಿದ್ದಾರೆ.
ಯಾವ ಉತ್ಪನ್ನಗಳಿಗೆ ಎಷ್ಟು ಸುಂಕ?
- ಔಷಧೀಯ ಉತ್ಪನ್ನಗಳು (Pharmaceutical products): 100% ಸುಂಕ
- ಕಿಚನ್ ಕ್ಯಾಬಿನೆಟ್‌ಗಳು ಮತ್ತು ಬಾತ್ರೂಮ್ ವ್ಯಾನಿಟಿಗಳು: 50% ಸುಂಕ
- ಅಪ್ಹೋಲ್ಸ್ಟರ್ಡ್ ಪೀಠೋಪಕರಣಗಳು: 30% ಸುಂಕ
- ಹೆವಿ ಟ್ರಕ್‌ಗಳು: 25% ಸುಂಕ
ವಿಶೇಷವಾಗಿ ಔಷಧೀಯ ಉತ್ಪನ್ನಗಳ ಬಗ್ಗೆ ಮಾತನಾಡಿದ ಟ್ರಂಪ್, "ಅಮೆರಿಕದಲ್ಲಿ ಹೊಸ ಫಾರ್ಮಾ ಉತ್ಪಾದನಾ ಘಟಕ ನಿರ್ಮಾಣ ಪ್ರಾರಂಭಿಸಿದ ಕಂಪನಿಗಳಿಗೆ ಮಾತ್ರ 100% ಸುಂಕ ಅನ್ವಯಿಸುವುದಿಲ್ಲ. ನಿರ್ಮಾಣ ಕಾರ್ಯ ಪ್ರಾರಂಭವಾಗಿರುವುದು ಮುಖ್ಯ," ಎಂದು ಹೇಳಿದ್ದಾರೆ. ಅಂದರೆ, ಅಮೆರಿಕದಲ್ಲಿ ಹೂಡಿಕೆ ಮಾಡಿದ ಸಂಸ್ಥೆಗಳ ಉತ್ಪನ್ನಗಳಿಗೆ ತೆರಿಗೆ ವಿನಾಯಿತಿ ಸಿಗಲಿದೆ.
ಟ್ರಕ್ ತಯಾರಿಕಾ ವಲಯಕ್ಕೆ ವಿಶೇಷ ರಕ್ಷಣೆ:
ಟ್ರಂಪ್ ತಮ್ಮ ಘೋಷಣೆಯಲ್ಲಿ ಟ್ರಕ್ ತಯಾರಿಕಾ ವಲಯಕ್ಕೆ ವಿಶೇಷ ಮಹತ್ವ ನೀಡಿದ್ದು, ಪೀಟರ್‌ಬಿಲ್ಟ್, ಕೆನ್ವರ್ತ್, ಫ್ರೈಟ್ಲೈನರ್, ಮ್ಯಾಕ್ ಟ್ರಕ್ಸ್ ಸೇರಿದಂತೆ ನಮ್ಮ ಮಹಾನ್ ಟ್ರಕ್ ತಯಾರಕರನ್ನು ಬಾಹ್ಯ ಸ್ಪರ್ಧೆಯಿಂದ ರಕ್ಷಿಸುವುದು ಅವಶ್ಯಕ. ರಾಷ್ಟ್ರೀಯ ಭದ್ರತೆಗೂ ಇದು ಅತ್ಯಂತ ಅಗತ್ಯ, ಎಂದು ಹೇಳಿದ್ದಾರೆ. ಹೆವಿ ಟ್ರಕ್‌ಗಳ ಮೇಲೆ 25% ಸುಂಕ ವಿಧಿಸುವ ಮೂಲಕ ದೇಶೀಯ ತಯಾರಕರಿಗೆ ರಕ್ಷಣಾ ಭದ್ರತೆ ಒದಗಿಸಲಾಗುತ್ತಿದೆ.
ಕಿಚನ್ ಕ್ಯಾಬಿನೆಟ್‌ಗಳು, ಬಾತ್ರೂಮ್ ವ್ಯಾನಿಟಿಗಳು:
ಟ್ರಂಪ್ ಪ್ರಕಾರ, ಇತ್ತೀಚೆಗೆ ವಿದೇಶಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಕಿಚನ್ ಕ್ಯಾಬಿನೆಟ್‌ಗಳು, ಬಾತ್ರೂಮ್ ವ್ಯಾನಿಟಿಗಳು ಮತ್ತು ಅಪ್ಹೋಲ್ಸ್ಟರ್ಡ್ ಪೀಠೋಪಕರಣಗಳು ಅಮೆರಿಕ ಮಾರುಕಟ್ಟೆಗೆ ಬರುತ್ತಿವೆ. ಇದರಿಂದ ಸ್ಥಳೀಯ ಉತ್ಪಾದಕರಿಗೆ ನಷ್ಟವಾಗುತ್ತಿರುವುದರಿಂದ, ಈ ಉತ್ಪನ್ನಗಳ ಮೇಲೂ ಹೆಚ್ಚುವರಿ ತೆರಿಗೆ ವಿಧಿಸಲು ತೀರ್ಮಾನಿಸಲಾಗಿದೆ.
ಅವರು ಹೇಳುವಂತೆ, "ದೇಶೀಯ ಉದ್ಯಮಗಳಿಗೆ ಉತ್ತೇಜನ ನೀಡಲು ಮತ್ತು ಉದ್ಯೋಗ ಸೃಷ್ಟಿಸಲು ಈ ಕ್ರಮ ಅವಶ್ಯಕವಾಗಿದೆ. ದೇಶದ ಆರ್ಥಿಕತೆ ಬಲಪಡಿಸಲು ನಮ್ಮ ಉತ್ಪಾದನಾ ವಲಯಕ್ಕೆ ರಕ್ಷಣೆ ನೀಡಲೇಬೇಕು."
ಆರ್ಥಿಕ ತಜ್ಞರ ಆತಂಕ:
ಆದರೆ, ಆರ್ಥಿಕ ತಜ್ಞರು ಈ ಸುಂಕ ನೀತಿಯ ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಅವರ ಪ್ರಕಾರ, ಹೆಚ್ಚುವರಿ ತೆರಿಗೆಗಳು ಉತ್ಪಾದನಾ ವೆಚ್ಚವನ್ನು ಹೆಚ್ಚಿಸಬಹುದು ಮತ್ತು ಗ್ರಾಹಕರಿಗೆ ಬೆಲೆ ಏರಿಕೆ ತರಬಹುದು.
ಏಪ್ರಿಲ್‌ನಿಂದ ಉತ್ಪಾದನಾ ವಲಯದಲ್ಲಿ 42,000 ಉದ್ಯೋಗಗಳು ಕಡಿಮೆಯಾಗಿದ್ದು, ನಿರ್ಮಾಣ ವಲಯವೂ 8,000 ಉದ್ಯೋಗಗಳನ್ನು ಕಳೆದುಕೊಂಡಿದೆ. ಇದರಿಂದ ಉದ್ಯೋಗ ಸೃಷ್ಟಿಯ ಮೇಲೆ ಸುಂಕಗಳ ಪರಿಣಾಮದ ಬಗ್ಗೆ ಅನುಮಾನಗಳು ಮೂಡಿವೆ.
ಟ್ರಂಪ್ ಮಾತ್ರ ತಮ್ಮ ಸುಂಕ ನೀತಿಯನ್ನು ಸಮರ್ಥಿಸಿಕೊಂಡಿದ್ದಾರೆ. "ಹೆಚ್ಚುವರಿ ತೆರಿಗೆಗಳು ದೇಶೀಯ ಹೂಡಿಕೆಯನ್ನು ಉತ್ತೇಜಿಸುತ್ತವೆ. ವಿದೇಶಿ ಸ್ಪರ್ಧೆಯಿಂದ ನಮ್ಮ ಉದ್ಯಮಗಳನ್ನು ರಕ್ಷಿಸುವುದು ಅತ್ಯಂತ ಮುಖ್ಯ. ಹಣದುಬ್ಬರ ನಿಯಂತ್ರಣದಲ್ಲಿದೆ ಮತ್ತು ದೇಶೀಯ ಉತ್ಪಾದನೆಗೆ ಉತ್ತೇಜನ ಸಿಗುತ್ತದೆ," ಎಂದು ಅವರು ಹೇಳಿದ್ದಾರೆ. ಕಳೆದ ವರ್ಷ ಅಮೆರಿಕದ ಹಣದುಬ್ಬರ 2.9% ಏರಿದ್ದರೂ, ಅದು ನಿಯಂತ್ರಣದಲ್ಲಿದೆ ಎಂದು ಟ್ರಂಪ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
(Disclaimer: The views and recommendations expressed are solely those of the individual analysts or entities and do not reflect the views of Goodreturns.in or Greynium Information Technologies Private Limited (together referred as "we"). We do not guarantee, endorse or take responsibility for the accuracy, completeness or reliability of any content, nor do we provide any investment advice or solicit the purchase or sale of securities. All information is provided for informational and educational purposes only and should be independently verified from licensed financial advisors before making any investment decisions.)
More From GoodReturns

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications