ಟ್ರಂಪ್ ಸುಂಕ ನೀತಿ ಬದಲಾವಣೆ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿದ ಸುಂಕ ನೀತಿ ಭಾರತಕ್ಕೆ ಸಂಕಷ್ಟ ಉಂಟು ಮಾಡಿದೆ. ಅಲ್ಲದೇ ಟ್ರಂಪ್ ಭಾರತ ಇಂಪೋಸ್ ಮಾಡಿದ ಆಮದು ಸುಂಕದ ದರಗಳನ್ನು ಟೀಕೆ ಮಾಡಿದ್ದಾರೆ. ಭಾರತದ ಪ್ರಧಾನಿ ಮೋದಿ ಅವರೊಂದಿಗೆ ಉತ್ತಮ ವೈಯಕ್ತಿಕ ಸಂಬಂಧ ಹೊಂದಿದ್ದರೂ, ಅಮೆರಿಕಾ ತನ್ನ ನಿರ್ಧಾರವನ್ನು ಹಿಂಪಡೆಯಲಿಲ್ಲ. ಇದು ಭಾರತಕ್ಕೆ ಕೊಂಚ ಅಸಮಾಧಾನ ತಂದಿದೆ. ತಮ್ಮ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಮಾಡಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅಮೆರಿಕ ತನ್ನ ಪ್ರಮುಖ ವ್ಯಾಪಾರ ಪಾಲುದಾರರ ಮೇಲೆ ವಿವಿಧ ದರಗಳಲ್ಲಿ ಸುಂಕ ವಿಧಿಸಿದ್ದು, ಚೀನಾ ಅತ್ಯಂತ ಹೆಚ್ಚು 54% ದರದ ಸುಂಕವನ್ನು ಎದುರಿಸುತ್ತಿದೆ.

ಭಾರತದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ 26% ದರವನ್ನು ವಿಧಿಸಿದೆ. ಈ ದರವು ಯುರೋಪಿಯನ್ ಒಕ್ಕೂಟಕ್ಕೆ 20%, ಜಪಾನ್‌ಗೆ 24% ಮತ್ತು ದಕ್ಷಿಣ ಕೊರಿಯಾ 25% ವಿಧಿಸಿರುವ ಸುಂಕ ದರಗಳಿಗಿಂತ ಸ್ವಲ್ಪ ಹೆಚ್ಚಾಗಿದೆ. ಅಮೆರಿಕ ತನ್ನ ಪ್ರಮುಖ ಪಾಲುದಾರರ ಮೇಲೆ ವಿಧಿಸಿರುವ ಹೊಸ ಸುಂಕದ ನಿಯಮಗಳು ಭಾರತಕ್ಕೆ ಸಂಕಟ ಸೃಷ್ಟಿಸಬಹುದು. ಈ ಹೊಸ ನಿಯಮಗಳ ಪರಿಣಾಮವಾಗಿ, ಭಾರತದಿಂದ ಅಮೆರಿಕಕ್ಕೆ ರಫ್ತು ಮಾಡುವ ಕೆಲವು ವಸ್ತುಗಳ ಬೆಲೆ ಏರಬಹುದು, ಇದರಿಂದ ಭಾರತೀಯ ಉದ್ಯಮಗಳು ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕತೆ ಕಳೆದುಕೊಳ್ಳಬಹುದು.
ಇನ್ನು ಭಾರತವು ಸುಂಕ ದರಗಳನ್ನು ಕಡಿಮೆ ಮಾಡುವ ಮೂಲಕ, ಟ್ರಂಪ್ ಆಡಳಿತದ ಒತ್ತಡ ನಿವಾರಿಸಲು ಪ್ರಯತ್ನ ಮಾಡಿತು. ಆದರೆ ಈ ಕ್ರಮಗಳು ಅಮೆರಿಕಾ ಆಡಳಿತಕ್ಕೆ ಪೂರಕವಾಗಲಿಲ್ಲ. ಹೀಗಾಗಿ ಭಾರತವು ಜಾಗತಿಕ ಮಟ್ಟದಲ್ಲಿ ತೈಲ, ಎಲ್‌ಎನ್‌ಜಿ ಮತ್ತು ರಕ್ಷಣಾ ವಸ್ತುಗಳ ಖರೀದಿಯನ್ನು ಹೆಚ್ಚಿಸಲು ಒಲವು ತೋರಿದೆ. ಇದರಿಂದ, ಭಾರತವು ಅಮೆರಿಕದೊಂದಿಗೆ ವ್ಯಾಪಾರ ಸಂಬಂಧವನ್ನು ಸುಧಾರಿಸಲು ಪ್ರಯತ್ನಿಸುತ್ತಿದೆ.
ಭಾರತದ ವಿರುದ್ಧದ ಸುಂಕದ ಕ್ರಮಗಳು:
ಅಮೆರಿಕ ಮತ್ತು ಭಾರತದ ನಡುವೆ ವ್ಯಾಪಾರ ಸಂಬಂಧ, ನಿನ್ನೆ ಮೊನ್ನೆಯದಲ್ಲ. ಕಳೆದ ಹಲವು ವರ್ಷಗಳಿಂದ ಸುಧಾರಿಸಿಕೊಂಡಿದೆ. ಆದರೂ ಅಮೆರಿಕಾ ತನ್ನ ಆರ್ಥಿಕ ತತ್ವಗಳನ್ನು ಅನುಸರಿಸಿ ಭಾರತವನ್ನು ಹೆಚ್ಚಿನ ಸುಂಕದ ವ್ಯಾಪ್ತಿಗೆ ಒಳಪಡಿಸಿದೆ. ಈ ಸುಂಕದ ನೇರ ಪರಿಣಾಮವಾಗಿ, ಭಾರತದಿಂದ ಅಮೆರಿಕಕ್ಕೆ ರಫ್ತು ಮಾಡಲಾಗುವ ಕೆಲವು ಮುಖ್ಯ ವಸ್ತುಗಳ ಬೆಲೆ ಏರಲಿದ್ದು, ಕೆಲವು ವಲಯಗಳಿಗೆ ಆರ್ಥಿಕ ಸಂಕಟ ಉಂಟಾಗುವ ಸಾಧ್ಯತೆ ಇದೆ. ಭಾರತಕ್ಕೆ ಹೋಲಿಸಿದರೆ, ಅಮೆರಿಕವು ಸ್ವತಃ ಬಹಳ ಕಡಿಮೆ ಸರಾಸರಿ ಸುಂಕ ದರವನ್ನು (3.3%) ಹೊಂದಿದೆ. ಆದರೆ, ಭಾರತವು ತನ್ನ ಆಮದುಗಳಿಗೆ 17% ಶೇಕಡಾದಷ್ಟು ಉನ್ನತ ದರದಲ್ಲಿ ಸುಂಕ ವಿಧಿಸುತ್ತದೆ. ಭಾರತವು ತನ್ನ ಆರ್ಥಿಕತೆಯನ್ನು ಬಲಪಡಿಸಲು ವಿವಿಧ ಮಾರ್ಗಗಳನ್ನು ಅನುಸರಿಸುತ್ತಿದ್ದರೂ, ಅಮೆರಿಕಾ ಹೇರಿದ ಸುಂಕದ ಪರಿಣಾಮ ಕೆಲವು ಪ್ರಮುಖ ವಲಯಗಳಿಗೆ ಹೊರೆ ತರಬಹುದು. ಅಮೆರಿಕ ಸರ್ಕಾರವು ಭಾರತಕ್ಕೆ ಹೊಸ ಆರ್ಥಿಕ ಒತ್ತಡವನ್ನು ನೀಡಲು ಈ ನಿರ್ಧಾರ ತೆಗೆದುಕೊಂಡಿದ್ದು, ಭಾರತವು ಈ ಸಮಸ್ಯೆಯನ್ನು ನಿಯಂತ್ರಿಸಲು ಪರ್ಯಾಯ ಮಾರ್ಗಗಳ ಬಗ್ಗೆ ಚಿಂತನೆ ಮಾಡುತ್ತಿದೆ.
ಹೊಸ ವ್ಯವಹಾರ ಸಂಬಂಧ ಅನುಮಾನ:
ಟ್ರಂಪ್ ತೆಗೆದುಕೊಂಡ ಈ ನಿರ್ಧಾರದಿಂದ, ಭಾರತ ಮತ್ತು ಅಮೆರಿಕಾ ನಡುವೆ ಹೊಸ ವ್ಯಾಪಾರ ಸಂಬಂಧಗಳು ಮುಂದಿನ ದಿನಗಳಲ್ಲಿ ಬದಲಾವಣೆ ನೋಡಬಹುದು. ಈ ಹೊಸ ನಿಯಮಗಳ ಪ್ರಭಾವದಿಂದಾಗಿ ಭಾರತವು ಪರ್ಯಾಯ ವ್ಯಾಪಾರ ಸಂಬಂಧಗಳ ಕಡೆಗೆ ಗಮನ ಹರಿಸುವ ಸಾಧ್ಯತೆ ಇದೆ. ಈ ಹೊಸ ನಿಯಮಗಳ ಜಾರಿಗೆ ನಂತರ, ಭಾರತವು ಪರ್ಯಾಯ ಮಾರ್ಗಗಳ ಬಗ್ಗೆ ಹೆಚ್ಚು ಚಿಂತಿಸಬೇಕಾಗಬಹುದು. ಭಾರತವು ಈಗಾಗಲೇ ಅಮೆರಿಕದೊಂದಿಗೆ ವ್ಯಾಪಾರದ ಹೊಸ ಮಾರ್ಗಗಳನ್ನು ಅನ್ವೇಷಿಸುತ್ತಿದ್ದು, ಇದು ಮುಂದಿನ ದಿನಗಳಲ್ಲಿ ಪ್ರಮುಖ ಬೆಳವಣಿಗೆಯಾಗಬಹುದು.
ಭಾರತದ ತಂತ್ರ ಮತ್ತು ತಾಳ್ಮೆ ಪರಿಕ್ಷೆ:
ಇನ್ನು ಭಾರತವು ಸುಂಕಗಳನ್ನು ತಪ್ಪಿಸಲೆಂದೇ ವ್ಯಾಪಕ ರಿಯಾಯಿತಿಗಳನ್ನು ನೀಡಲು ಪ್ರಯತ್ನ ಮಾಡಿತು. ಆದರೂ ಅಮೆರಿಕಾ ತನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ತರುವ ಲಕ್ಷಣಗಳನ್ನು ತೋರಿಸಿಲ್ಲ. ಭಾರತದ ಆರ್ಥಿಕತೆಯ ಮೇಲೆ ಅಮೆರಿಕಾ ಹೇರಿದ ಈ ಹೊಸ ಸುಂಕದ ನಿಯಮಗಳು ಬಹುಪಾಲು ಉದ್ದಿಮೆಗಳಿಗೆ ಮಾರಕವಾಗಬಹುದು. ಇದನ್ನು ನಿಯಂತ್ರಿಸಲು, ಭಾರತವು ನವದೆಹಲಿಯಲ್ಲಿ ಹಲವಾರು ಆರ್ಥಿಕ ಚರ್ಚೆಗಳನ್ನು ನಡೆಸುತ್ತಿದೆ.
ಸುಂಕ ನೀತಿಯಿಂದ ಎದುರಾಗುವ ಪರಿಣಾಗಳೇನು..?
1.ಭಾರತೀಯ ರಫ್ತು ತಗ್ಗುವ ಸಾಧ್ಯತೆ :
ಅಮೆರಿಕವು ಭಾರತದ ಪ್ರಮುಖ ವ್ಯಾಪಾರ ಪಾಲುದಾರವಾಗಿದೆ. ಸುಂಕ ಹೆಚ್ಚಾದರೆ, ಅಮೆರಿಕಕ್ಕೆ ರಫ್ತು ಮಾಡುವ ವಸ್ತುಗಳ ಬೆಲೆ ಹೆಚ್ಚಾಗುವುದರಿಂದ, ಮಾರಾಟ ಕಡಿಮೆಯಾಗಬಹುದು.
2. ಉದ್ಯೋಗಕ್ಕೆ ಹೊಡೆತ:
ಉದ್ಯಮಗಳು ಮತ್ತು ಕಾರ್ಖಾನೆಗಳು ಹೆಚ್ಚು ತೆರಿಗೆ ಪಾವತಿಸಬೇಕಾಗಿರುವುದರಿಂದ ಉದ್ಯೋಗ ಸೃಷ್ಟಿಯ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೇ ಹೂಡಿಕೆ ಕೂಡ ಕಡಿಮೆಯಾದರೆ ಉದ್ಯೋಗಗಳ ಬೆಳವಣಿಗೆ ಕೂಡ ಅಸಾಧ್ಯವಾಗಿರುತ್ತದೆ. ಖರ್ಚು ಉಳಿಸಲು ಉದ್ಯಮಿಗಳು ಬೇರೆ ತಂತ್ರದ ಮೊರೆ ಹೋಗಬಹುದು.
3. ಭಾರತದ ಆರ್ಥಿಕತೆ ಮೇಲೆ ಒತ್ತಡ:
ಹೂಡಿಕೆದಾರರು ಭಾರತೀಯ ಮಾರುಕಟ್ಟೆಗೆ ಹೂಡಿಕೆ ಮಾಡುವ ಮುನ್ಸೂಚನೆಗಳು ಕಡಿಮೆಯಾಗಬಹುದು. ಭಾರತವು ಯುರೋಪ್, ಏಷ್ಯಾ, ಆಫ್ರಿಕಾ ಮುಂತಾದ ಬೇರೆ ರಾಷ್ಟ್ರಗಳೊಂದಿಗೆ ವ್ಯಾಪಾರ ಸಂಬಂಧಗಳನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ. ಹೀಗಾಗಿ ಅಮೆರಿಕಾಗಿಂತ ಬೇರೆ ದೇಶಗಳತ್ತ ಮುಖ ಮಾಡಬಹುದು.
4. ಜವಳಿ ಉದ್ಯಮದ ಮೇಲೂ ಪರಿಣಾಮ:
ಇನ್ನು ಈ ಸುಂಕನೀತಿಯಿಂದ ಉಡುಪು, ಪಾದರಕ್ಷೆಗಳು, ರತ್ನ ಮತ್ತು ಆಭರಣ ವಲಯಗಳು ಈ ಹೊಸ ನಿಯಮಗಳಿಂದ ಹೆಚ್ಚು ಹಾನಿ ಅನುಭವಿಸಬಹುದು. ಭಾರತವು ಆರ್ಥಿಕ ತಂತ್ರನೀತಿಗಳನ್ನು ಹೊಸದಾಗಿ ರೂಪಿಸುವ ಮೂಲಕ ತನ್ನ ಪರೋಕ್ಷ ನಷ್ಟವನ್ನು ಕಡಿಮೆ ಮಾಡಲು ಉತ್ಸುಕವಾಗಿದೆ.
ಒಟ್ಟಿನಲ್ಲಿ ಭಾರತವು ಮುಂದಿನ ದಿನಗಳಲ್ಲಿ ಅಮೆರಿಕದ ವ್ಯಾಪಾರ ಸಂಬಂಧಗಳನ್ನು ಪರಿಷ್ಕರಿಸಲು ನಿರ್ಧರಿಸಬಹುದು. ಆದ್ದರಿಂದ, ಈ ಹೊಸ ನಿಯಮಗಳ ಪರಿಣಾಮವನ್ನು ಕಡಿಮೆ ಮಾಡಲು ಭಾರತವು ಹೊಸ ವ್ಯವಹಾರ ಸಂಬಂಧಗಳ ಕಡೆಗೆ ಗಮನ ಹರಿಸಬಹುದು.


Click it and Unblock the Notifications