Trump Tariffs: ಇರಾನ್‌ ಜೊತೆ ವ್ಯಾಪಾರ ಮಾಡುವ ದೇಶಗಳಿಗೆ 25% ಸುಂಕ! ಭಾರತಕ್ಕೆ ಮತ್ತೆ ತಟ್ಟಿದ ಟ್ರಂಪ್‌ ಟ್ಯಾರಿಫ್‌

ಇರಾನ್‌ನಲ್ಲಿ ಪ್ರತಿಭಟನಾ (Iran Protest) ಕಾವು ದಿನೇ ದಿನೇ ಹೆಚ್ಚಾಗುತ್ತಿದೆ. ಪ್ರತಿಭಟನೆಯನ್ನು ಹತ್ತಿಕ್ಕಲು ಸರ್ಕಾರ ಏನೇ ಕ್ರಮ ಕೈಗೊಂಡರೂ, ಜನ ಮಾತ್ರ ತನ್ನ ಆಕ್ರೋಶವನ್ನು ಹೊರಹಾಕುತ್ತಲೇ ಇದ್ದಾರೆ. ಒಂದು ಕಡೆ ಸರ್ಕಾರಿ ಆಸ್ತಿ, ಕಟ್ಟಡಗಳು ಧ್ವಂಸವಾಗುತ್ತಿದ್ದರೆ, ಮತ್ತೊಂದು ಕಡೆ ಹಿಂಸಾಚಾರದಿಂದ ನೂರಾರು ಮಂದಿ ಸಾವನ್ನಪ್ಪಿದ್ದಾರೆ. ಅಮೆರಿಕ ಇರಾನ್‌ಗೆ ಎಚ್ಚರಿಗೆ ನೀಡಿದೆ. ಆದ್ರೆ ಅದನ್ನೂ ಕ್ಯಾರೇ ಅನ್ನದ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ, ಇರಾನ್‌ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದಾರೆ. ಇದೀಗ ಈ ಬೆನ್ನಲ್ಲೆ ರೊಚ್ಚಿಗೆದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump), ಇರಾನ್‌ನಲ್ಲಿ ನೆಲೆಸಿರುವ ಅಮೆರಿಕನ್‌ ಪ್ರಜೆಗಳಿಗಳಿಗೆ ತಕ್ಷಣ ಇರಾನ್‌ (Iran vs America) ತೊರೆಯುವಂತೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಇರಾನ್‌ ಜೊತೆಗೆ ವ್ಯಾಪಾರ ನಡೆಸುವ ಇತರ ರಾಷ್ಟ್ರಗಳಿಗೂ 25% ಸುಂಕ (25% Tariffs) ವಿಧಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಇರಾನ್‌ ಜೊತೆ ವ್ಯಾಪಾರ ಮಾಡುವ ದೇಶಗಳಿಗೆ 25% ಸುಂಕ! ಭಾರತಕ್ಕೆ ಪೆಟ್ಟು

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ಭುಗಿಲೆದ್ದಿದೆ. ಹಿಂಸಾಚಾರದ ಪ್ರತಿಭಟನೆಯಿಂದಾಗಿ ಇರಾನ್‌ ಬೆಂಕಿಯಿಂದ ಧಗ ಧಗ ಉರಿಯುತ್ತಿದೆ. ಈ ಮಧ್ಯೆ ಡೊನಾಲ್ಡ್‌ ಟ್ರಂಪ್‌, "ಇರಾನ್‌ ಜೊತೆ ವ್ಯಾಪಾರ ಸಂಬಂಧ ಇಟ್ಟುಕೊಂಡ ರಾಷ್ಟ್ರಗಳಿಗೆ 25% ಸುಂಕ ವಿಧಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇದು ಅಮೆರಿಕದೊಂದಿಗೆ ಸಂಬಂಧ ಹೊಂದಿರುವ ದೇಶಗಳಿಗೆ ದೊಡ್ಡ ಹೊಡೆತ ಬೀಳಲಿದೆ. ಅದರಲ್ಲೂ ಭಾರತಕ್ಕೂ ಈ ನಿರ್ಧಾರದಿಂದ ಪರಿಣಾಮ ಬೀರಬಹುದು. ಹಾಗಿದ್ರೆ ಅಮೆರಿಕಾ-ಇರಾನ್‌ ಜಗಳದಿಂದ ಭಾರತಕ್ಕೆ ಯಾವ ರೀತಿ ಸಂಕಷ್ಟ ಎದುರಾಗಲಿದೆ ಎಂಬುದರ ಮಾಹಿತಿ ಇಲ್ಲಿದೆ ಓದಿ.

ಟ್ರಂಪ್‌ ಸುಂಕದ ಬರೆ!
ಟ್ರಂಪ್ ಸೋಮವಾರ ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಇರಾನ್‌ ಜೊತೆ ಸಂಬಂಧ ಹೊಂದಿರುವ ರಾಷ್ಟ್ರಗಳಿಗೆ ಸುಂಕದ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಇನ್ನು ಈ ಕ್ರಮಗಳು ತಕ್ಷಣದಿಂದಲೇ ಜಾರಿಗೆ ಬರಲಿವೆ ಎಂದು ಹೇಳಿದ್ದಾರೆ. ಇನ್ನು ಭಾರತ ಸೇರಿದಂತೆ ಚೀನಾ, ಬ್ರೆಜಿಲ್, ಟರ್ಕಿ, ರಷ್ಯಾ ಹಲವು ಪ್ರಮುಖ ರಾಷ್ಟ್ರಗಳು ಇರಾನ್‌ನೊಂದಿಗೆ ವ್ಯಾಪಾರ ಸಂಬಂಧಗಳನ್ನು ಹೊಂದಿವೆ. ಆದ್ದರಿಂದ ಈ ಎಲ್ಲಾ ರಾಷ್ಟ್ರಗಳು ಟ್ರಂಪ್‌ ಸುಂಕದ ಸಮರಕ್ಕೆ ಬೀಳೋದು ಪಕ್ಕಾ. ಕೆಲ ತಿಂಗಳ ಹಿಂದಷ್ಟೇ ಅಮೆರಿಕಾ, ರಷ್ಯಾ ತೈಲ ಖರೀದಿ ವಿರುದ್ಧ ಆಕ್ರೋಶ ಹೊರ ಹಾಕಿತ್ತು. ಈ ಪರಿಣಾಮ ಭಾರತ ಸೇರಿ ಹಲವು ರಾಷ್ಟ್ರಗಳಿಗೆ ಶೇ. 50% ರಷ್ಟು ಸುಂಕ ವಿಧಿಸಿತ್ತು. ಇದೀಗ ಇರಾನ್‌ ವಿರುದ್ಧದ ಕಾಳಗಕ್ಕೆ ಮತ್ತೊಮ್ಮೆ ಟ್ರಂಪ್‌ ಸುಂಕ ಏರಿಕೆಯ ಸಮರಕ್ಕೆ ಮುಂದಾಗಿದ್ದಾರೆ.

ಟ್ರಂಪ್‌ ಹೇಳಿದ್ದೇನು?
"ತಕ್ಷಣದಿಂದ ಜಾರಿಗೆ ಬರುವಂತೆ, ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್‌ನೊಂದಿಗೆ ವ್ಯಾಪಾರ ಮಾಡುವ ಯಾವುದೇ ದೇಶಗಳು, ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದೊಂದಿಗೆ ನಡೆಸುವ ಎಲ್ಲಾ ವ್ಯಾಪಾರ ವಹಿವಾಟಿಗಳಿಗೆ ಶೇ. 25% ರಷ್ಟು ಸುಂಕವನ್ನು ಪಾವತಿಸಬೇಕಾಗುತ್ತದೆ. ಈ ಆದೇಶ ಅಂತಿಮ ಮತ್ತು ನಿರ್ಣಾಯಕವಾಗಿದೆ." ಎಂದು ಟ್ರಂಪ್ ಟ್ರೂತ್ ಸೋಶಿಯಲ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಭಾರತದ ವಿರುದ್ಧ ಸುಂಕದ ಸಮರ
ಭಾರತವು ಈಗಾಗಲೇ ಅಮೆರಿಕದ ತನ್ನ ರಫ್ತಿನ ಮೇಲೆ ಶೇ. 50ರಷ್ಟು ಸುಂಕವನ್ನು ಎದುರಿಸುತ್ತಿದೆ. ಇದರಲ್ಲಿ ಶೇ. 25ರಷ್ಟು 'ಪ್ರತೀಕಾರದ ಸುಂಕ'ವಾಗಿದ್ದರೆ, ಉಳಿದ ಶೇ. 25ರಷ್ಟು ರಷ್ಯಾದಿಂದ ಭಾರತ ಆಮದು ಮಾಡಿಕೊಳ್ಳುವ ಕಚ್ಚಾ ತೈಲಕ್ಕೆ ವಿಧಿಸಲಾದ ದಂಡದ ಸುಂಕವಾಗಿದೆ. ಇದೀಗ ಮತ್ತೆ ಇರಾನ್‌ ವಿರುದ್ಧದ

ಭಾರತ ಮತ್ತು ಇರಾನ್‌ ಸಂಬಂಧ:
ಭಾರತ ಮತ್ತು ಇರಾನ್ ನಡುವೆ ಒಂದು ಪ್ರಮುಖ ವ್ಯಾಪಾರ ಸಂಬಂಧವಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಾರ, ಇತ್ತೀಚಿನ ವರ್ಷಗಳಲ್ಲಿ ಇರಾನ್‌ನ ಟಾಪ್ ಐದು ವ್ಯಾಪಾರ ಪಾಲುದಾರರಲ್ಲಿ ಭಾರತ ಸತತವಾಗಿ ಸ್ಥಾನ ಪಡೆದಿದೆ. ಭಾರತದಿಂದ ಇರಾನ್‌ಗೆ ಪ್ರಮುಖ ರಫ್ತು ಉತ್ಪನ್ನಗಳಲ್ಲಿ ಅಕ್ಕಿ (ವಿಶೇಷವಾಗಿ ಬಾಸ್ಮತಿ), ಚಹಾ, ಸಕ್ಕರೆ, ಫಾರ್ಮಾಸ್ಯುಟಿಕಲ್ ಉತ್ಪನ್ನಗಳು, ಮಾನವ ನಿರ್ಮಿತ ನೂಲುಗಳು, ವಿದ್ಯುತ್ ಉಪಕರಣಗಳು ಮತ್ತು ಕೃತಕ ಆಭರಣಗಳು ಸೇರಿವೆ.

ಪ್ರತಿಯಾಗಿ, ಭಾರತವು ಮುಖ್ಯವಾಗಿ ಇರಾನ್‌ನಿಂದ ಡ್ರೈಫ್ರೂಟ್ಸ್‌, ಸಾವಯವ ಮತ್ತು ಅಜೈವಿಕ ರಾಸಾಯನಿಕಗಳು, ಗಾಜಿನಂತಹ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತದೆ. ಭಾರತೀಯ ಬಾಸ್ಮತಿ ಅಕ್ಕಿಗೆ ಇರಾನ್ ಒಂದು ನಿರ್ಣಾಯಕ ಮಾರುಕಟ್ಟೆಯಾಗಿದೆ. ವರದಿಗಳ ಪ್ರಕಾರ, ಇದು ಸಾಮಾನ್ಯವಾಗಿ ಪ್ರತಿ ವರ್ಷ 1 ಮಿಲಿಯನ್ ಟನ್ (12 ಲಕ್ಷ ಟನ್‌) ಗಿಂತ ಹೆಚ್ಚು ಅಕ್ಕಿ ಖರೀದಿಸುತ್ತದೆ.

ಇರಾನ್ ಸಾಂಪ್ರದಾಯಿಕವಾಗಿ ಭಾರತೀಯ ಬಾಸ್ಮತಿ ಅಕ್ಕಿಗೆ ಅತಿದೊಡ್ಡ ವಿದೇಶಿ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಸುಮಾರು 12 ಲಕ್ಷ ಟನ್‌ಗಳಷ್ಟು ಅಕ್ಕಿ ಖರೀದಿಸುವುದರಿಂದ, ಈ ವ್ಯಾಪಾರದ ಅಂದಾಜು ಸುಮಾರು 12,000 ಕೋಟಿ ರೂ.ಗಳಷ್ಟಿದೆ ಎಂದು ವರದಿಗಳು ಸೂಚಿಸುತ್ತವೆ.

ಆದಾಗ್ಯೂ, ಇರಾನ್ ಭಾರತದ ಅಗ್ರ ಐದು ರಫ್ತು ಮತ್ತು ಆಮದು ಪಾಲುದಾರರ ಪಟ್ಟಿಯಲ್ಲಿಲ್ಲ. ವಾಣಿಜ್ಯ ಸಚಿವಾಲಯದ ಡ್ಯಾಶ್‌ಬೋರ್ಡ್ ಪ್ರಕಾರ, ಅಮೆರಿಕ, ಯುನೈಟೆಡ್ ಅರಬ್ ಎಮಿರೇಟ್ಸ್, ನೆದರ್‌ಲ್ಯಾಂಡ್ಸ್, ಚೀನಾ ಮತ್ತು ಯುನೈಟೆಡ್ ಕಿಂಗ್‌ಡಮ್ ಪ್ರಸ್ತುತ ಭಾರತದ ಪ್ರಮುಖ ರಫ್ತು ತಾಣಗಳಾಗಿದ್ದು, ಇವು ಭಾರತದ ಒಟ್ಟು ರಫ್ತಿನ ಶೇ. 41ರಷ್ಟನ್ನು ಹೊಂದಿವೆ. ಇದೀಗ ಇರಾನ್‌ ಜೊತೆ ಸಂಬಂಧ ಹೊಂದಿರುವ ರಾಷ್ಟ್ರಗಳಿಗೆ ಅಮೆರಿಕ ಸುಂಕದ ಬಿಸಿ ಮುಟ್ಟಿಸಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+