ಮಾಧಬಿ ಪುರಿ ಅಧಿಕಾರವಧಿ ಅಂತ್ಯ; ಸೆಬಿ ನೂತನ ಅಧ್ಯಕ್ಷರಾಗಿ ತುಹಿನ್ ಕಾಂತಾ ಪಾಂಡೆ ನೇಮಕ

ಅನುಭವಿ ಅಧಿಕಾರಿ ಹಾಗೂ ಭಾರತದ ಹಣಕಾಸು ಕಾರ್ಯದರ್ಶಿ ತುಹಿನ್ ಕಾಂತಾ ಪಾಂಡೆ ಅವರನ್ನು ಬಂಡವಾಳ ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಾದ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ದ 11 ನೇ ಅಧ್ಯಕ್ಷರನ್ನಾಗಿ ಮೂರು ವರ್ಷಗಳ ಅವಧಿಗೆ ನೇಮಿಸಲಾಗಿದೆ.

ಸೆಬಿ ಮುಖ್ಯಸ್ಥೆ ಮಾಧಬಿ ಪುರಿ ಬುಚ್ ಅವರ ಅಧಿಕಾರಾವಧಿ ಫೆಬ್ರುವರಿ 28ಕ್ಕೆ ಮುಗಿದಿದ್ದು, ಸೆಬಿಯ ಮೊದಲ ಮಹಿಳಾ ಅಧ್ಯಕ್ಷೆಯಾಗಿ ತಮ್ಮ ಮೂರು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಲಿದ್ದಾರೆ. ಈ ಹಿನ್ನಲೆಯಲ್ಲಿ ಸೆಬಿ ಮುಖ್ಯಸ್ಥರನ್ನಾಗಿ ಕೇಂದ್ರ ಸರ್ಕಾರ ತುಹಿನ್ ಕಾಂತಾ ಪಾಂಡೆ ಅವರನ್ನು ನೇಮಕ ಮಾಡಿ ಗುರುವಾರ ಅಧಿಸೂಚನೆ ಹೊರಡಿಸಿದೆ.

ಸೆಬಿ ನೂತನ ಅಧ್ಯಕ್ಷರಾಗಿ ತುಹಿನ್ ಕಾಂತಾ ಪಾಂಡೆ

ಫೆಬ್ರವರಿ 27ರ ಗುರುವಾರ ಸರ್ಕಾರದ ಕ್ಯಾಬಿನೆಟ್ ನೇಮಕಾತಿ ಸಮಿತಿ (ACC) ಬಿಡುಗಡೆ ಮಾಡಿದ ಅಧಿಸೂಚನೆಯ ಪ್ರಕಾರ, ಸೆಬಿ ಅಧ್ಯಕ್ಷ ಹುದ್ದೆಗೆ ಹಣಕಾಸು ಕಾರ್ಯದರ್ಶಿ ಮತ್ತು ಕಂದಾಯ ಇಲಾಖೆಯ ಕಾರ್ಯದರ್ಶಿ ಐಎಎಸ್ ಪಾಂಡೆ (OR:1987) ಅವರನ್ನು ನೇಮಕ ಮಾಡಲು ಸಂಪುಟ ಅನುಮೋದನೆ ನೀಡಿದೆ. ಪಾಂಡೆ ಅವರ ನೇಮಕಾತಿ ಆರಂಭದಲ್ಲಿ ಅವರು ಅಧಿಕಾರ ವಹಿಸಿಕೊಂಡ ದಿನದಿಂದ ಮೂರು ವರ್ಷಗಳ ಅವಧಿಗೆ ಇರುತ್ತದೆ.

ಒಡಿಸ್ಸಾ ಕೇಡರ್ ನ 1987 ನೇ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿರುವ ಪಾಂಡೆ ಹಣಕಾಸು ಸಚಿವಾಲಯದಲ್ಲಿ ಕಂದಾಯ ಇಲಾಖೆಯನ್ನು ನಿರ್ವಹಿಸುವ ಹಿರಿಯ ಅಧಿಕಾರಿಯಾಗಿದ್ದಾರೆ.

ತುಹಿನ್ ಕಾಂತಾ ಪಾಂಡೆ ಶೈಕ್ಷಣಿಕ ಅರ್ಹತೆ

ಪಾಂಡೆ ಅವರು ಚಂಡೀಗಢದ ಪಂಜಾಬ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಎಂಎ ಪದವಿ ಮತ್ತು ಬರ್ಮಿಂಗ್ಹ್ಯಾಮ್ (ಯುಕೆ) ವಿಶ್ವವಿದ್ಯಾಲಯದಿಂದ ಎಂಬಿಎ ಪದವಿ ಪಡೆದಿದ್ದಾರೆ. ಅವರು ಒಡಿಶಾ ಮತ್ತು ಭಾರತ ಸರ್ಕಾರಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ವೃತ್ತಿಜೀವನದ ಆರಂಭಿಕ ಅವಧಿಯಲ್ಲಿ, ಕಾಂತಾ ಪಾಂಡೆ ಆರೋಗ್ಯ, ಸಾಮಾನ್ಯ ಆಡಳಿತ, ವಾಣಿಜ್ಯ ತೆರಿಗೆಗಳು, ಸಾರಿಗೆ ಮತ್ತು ಹಣಕಾಸು ಇಲಾಖೆಯ ಆಡಳಿತ ಮುಖ್ಯಸ್ಥರಾಗಿದ್ದರು.

ಒಡಿಶಾದಲ್ಲಿ, ಅವರು ಒಡಿಶಾ ರಾಜ್ಯ ಹಣಕಾಸು ನಿಗಮದ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಮತ್ತು ಒಡಿಶಾ ಸಣ್ಣ ಕೈಗಾರಿಕೆಗಳ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು.

ಕೇಂದ್ರ ಸರ್ಕಾರದ ಮಟ್ಟದಲ್ಲಿ, ಅವರ ಹಿಂದಿನ ಹುದ್ದೆಗಳಲ್ಲಿ ಯೋಜನಾ ಆಯೋಗದ (ಈಗ ನೀತಿ ಆಯೋಗ) ಜಂಟಿ ಕಾರ್ಯದರ್ಶಿ, ಕ್ಯಾಬಿನೆಟ್ ಸಚಿವಾಲಯದ ಜಂಟಿ ಕಾರ್ಯದರ್ಶಿ ಮತ್ತು ವಾಣಿಜ್ಯ ಸಚಿವಾಲಯದ ಉಪ ಕಾರ್ಯದರ್ಶಿ ಹುದ್ದೆಗಳು ಸೇರಿವೆ.

ವಿದೇಶಿ ಹೂಡಿಕೆ ಹಿಂತೆಗೆತ ಸವಾಲಿನ ನಡುವೆ ಸೆಬಿ ಮುಖ್ಯಸ್ಥರಾದ ಪಾಂಡೆ

ಷೇರು ಮಾರುಕಟ್ಟೆ ವಿದೇಶಿ ಹೂಡಿಕೆ ಹಿಂತೆಗೆತ ಸವಾಲಿನ ನಡುವೆ ಸೆಬಿ ಮುಖ್ಯಸ್ಥರಾಗಿರುವುದು ಗಮನಾರ್ಹ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ನಿರಂತರವಾಗಿ ಹಣವನ್ನು ಹಿಂತೆಗೆದುಕೊಳ್ಳುತ್ತಿರುವುದರಿಂದ ಭಾರತೀಯ ಷೇರು ಮಾರುಕಟ್ಟೆಯು ಕುಸಿತದ ಒತ್ತಡವನ್ನು ಅನುಭವಿಸುತ್ತಿದೆ. ಈ ಸಮಯದಲ್ಲಿ ಪಾಂಡೆ ಮಾರುಕಟ್ಟೆ ನಿಯಂತ್ರಕ ಸೆಬಿಯ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಾರೆ. ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐಗಳು) ಜನವರಿ 2025 ರಿಂದ ₹ 1 ಲಕ್ಷ ಕೋಟಿಗೂ ಹೆಚ್ಚು ಹಣವನ್ನು ಹಿಂತೆಗೆದುಕೊಂಡಿದ್ದಾರೆ.

ಪಾಂಡೆ ಅವರ ಪೂರ್ವವರ್ತಿ ಸಂಜಯ್ ಮಲ್ಹೋತ್ರಾ ಅವರು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್ ಆಗಿ ಆಯ್ಕೆಯಾದ ನಂತರ, ಜನವರಿ 9 ರಂದು ಅವರು ಭಾರತದ ಕಂದಾಯ ಇಲಾಖೆಯ ಉಸ್ತುವಾರಿ ವಹಿಸಿಕೊಂಡರು. ಮಧ್ಯಮ ವರ್ಗದವರಿಗೆ ಒಟ್ಟು ₹ 1 ಲಕ್ಷ ಕೋಟಿ ತೆರಿಗೆ ವಿನಾಯಿತಿಗಳನ್ನು ನೀಡುವ ಮೂಲಕ ಪಾಂಡೆ 2025 ರ ಬಜೆಟ್ ಅನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇದಲ್ಲದೇ 1961 ರ 64 ವರ್ಷಗಳ ಹಳೆಯ ಆದಾಯ ತೆರಿಗೆ ಕಾಯ್ದೆಯನ್ನು ಬದಲಿಸಲು ಪ್ರಯತ್ನಿಸಲಾದ ಹೊಸ ಆದಾಯ ತೆರಿಗೆ ಮಸೂದೆಯನ್ನು ರಚಿಸುವಲ್ಲಿ ಅವರು ತೊಡಗಿಸಿಕೊಂಡಿದ್ದರು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+