ಆಹಾರ ಸಂಗ್ರಹಣೆ ಮತ್ತು ಅಡುಗೆ ಉತ್ಪನ್ನಗಳ ಕಂಪೆನಿಗಳಲ್ಲಿ ಗುರುತಿಸಿಕೊಂಡಿದ್ದ ಅಮೆರಿಕಾದ ಟಪ್ಪರ್‌ವೇರ್ ಕಂಪೆನಿಯು ಸದ್ಯ ತನ್ನನ್ನು ದಿವಾಳಿ ಎಂದು ಘೋಷಿಸಿಕೊಂಡಿದೆ. ಆದರೆ ಕಂಪೆನಿಯ ಸೊತ್ತುಗಳನ್ನು ಮುಕ್ತ ಮಾರುಕಟ್ಟೆ ಹರಾಜು ಯೋಜನೆಯನ್ನ ಸ್ಥಗಿತಗೊಳಿಸಿದೆ. ಹಾಗಾಗಿ ಸದ್ಯ ತನ್ನ ಉದ್ಯಮವನ್ನೇ ಸಾಲದಾರರಿಗೆ ಸುಮಾರು 23.5 ಮಿಲಿಯನ್ ಡಾಲರ್ ನಗದಿಗೆ ಮಾರಾಟ ಮಾಡಲು ನಿರ್ಧರಿಸಿದೆ. ಈಗಾಗಲೇ ಟಪ್ಪರ್‌ವೇರ್ ಕಂಪೆನಿಯು ಅಮೆರಿಕಾದ ಡೆಲವೇರ್‌ನ ವಿಲ್ಮಿಂಗ್ಟನ್‌ನಲ್ಲಿ ದಿವಾಳಿತನದ ನ್ಯಾಯಾಲಯದ ವಿಚಾರಣೆಯಲ್ಲಿ ಒಪ್ಪಂದವನ್ನು ಘೋಷಿಸಿದೆ. ಇನ್ನು ಪ್ರಸ್ತುತ ಕಂಪೆನಿಯ ಕಠಿಣ ಪರಿಸ್ಥಿತಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ನ್ಯಾಯಾಧೀಶ ಬ್ರೆಂಡನ್ ಶಾನನ್ ಅವರು, ಮಾರಾಟದ ಅನುಮೋದನೆಯನ್ನು ಪರಿಗಣಿಸಲು ಪ್ರತ್ಯೇಕ ನ್ಯಾಯಾಲಯದ ವಿಚಾರಣೆಯನ್ನು ತ್ವರಿತವಾಗಿ ನಿಗದಿಪಡಿಸಲಾಗುವುದು. ಇದು ಕಂಪೆನಿಯ ಪ್ರಸ್ತುತ ಸನ್ನಿವೇಶಕ್ಕೆ ನೀಡಿದ ಸರಿಯಾದ ತೀರ್ಪಾಗಿದೆ ಎಂದು ತಿಳಿಸಿದ್ದಾರೆ. ಸದ್ಯ ಟಪ್ಪರ್‌ವೇರ್ ಕಂಪೆನಿಯ ಸ್ವಾಧೀನ ಪಡೆಯಲು ಸಾಲದಾತರು ಹೆಚ್ಚಿನ ಸಂಖ್ಯೆಯಲ್ಲಿ ಮುಂದಾಗಿದ್ದಾರೆ ಎನ್ನಲಾಗಿದೆ.
ಏನಿದು ಕಂಪೆನಿ, ಏನಾಗಿತ್ತು?
ಈಗಾಗಲೇ ಕಂಪೆನಿಯ ವ್ಯವಹಾರಗಳ ಬಗ್ಗೆ ನೀವು ಅರಿತುಕೊಂಡಿದ್ದೀರಿ. ಅಮೆರಿಕಾದ ಫ್ಲೋರಿಡಾದ ಒರ್ಲ್ಯಾಂಡೊ ಮೂಲದ ಕಂಪನಿಯಾಗಿರುವ ಟಪ್ಪರ್‌ವೇರ್ ಕಂಪೆನಿಯು ಕಳೆದ ತಿಂಗಳು 818 ಮಿಲಿಯನ್ ಡಾಲರ್ ಸಾಲದಲ್ಲಿ ಮತ್ತು 30 ದಿನಗಳಲ್ಲಿ ಖರೀದಿದಾರರನ್ನು ಹುಡುಕುವ ಯೋಜನೆಯೊಂದಿಗೆ ದಿವಾಳಿತನದ ರಕ್ಷಣೆಗಾಗಿ ಅರ್ಜಿ ಸಲ್ಲಿಸಿತ್ತು. ಆದರೆ ಈ ನಡುವೆ ಟಪ್ಪರ್‌ವೇರ್ ಕಂಪೆನಿಯ ಸಾಲದಾತರ ಒಂದು ಗುಂಪು ಕಂಪನಿಯ ಮಾರಾಟದ ಯೋಜನೆಗಳನ್ನು ಬಲವಾಗಿ ವಿರೋಧಿಸಿತು. ಅದರ ಬದಲಾಗಿ ಕಂಪೆನಿಯ ಸ್ವತ್ತುಗಳನ್ನು ತಾವೇ ಪಡೆದುಕೊಳ್ಳುವುದಾಗಿ ತಿಳಿಸಿದರು. ಇನ್ನು ಹೊಸ ಮಾರಾಟ ಒಪ್ಪಂದವು ಸಾಲದಾತರು ಟಪ್ಪರ್‌ವೇರ್ ನ ಬ್ರ್ಯಾಂಡ್ ಹೆಸರು ಮತ್ತು ಅನೇಕ ಪ್ರಮುಖ ಮಾರುಕಟ್ಟೆಗಳಲ್ಲಿ ಕಾರ್ಯಾಚರಣೆಗಳನ್ನು ಖರೀದಿಸಲು ಅನುವು ಮಾಡಿಕೊಡುತ್ತದೆ ಎಂದು ಕಂಪೆನಿಯ ವಕೀಲ ಸ್ಪೆನ್ಸರ್ ವಿಂಟರ್ಸ್ ಅವರು ನ್ಯಾಯಾಲಯದ ವಿಚಾರಣೆಯಲ್ಲಿ ಹೇಳಿದರು.

ಯಾವ ಮಾರುಕಟ್ಟೆ ಮೇಲೆ ಕಣ್ಣು ಹಾಕಿದ ಟಪ್ಪರ್‌ವೇರ್
ಇನ್ನು ಕಂಪೆನಿಯ ಸೊತ್ತುಗಳನ್ನು ಸೊತ್ತುಗಳನ್ನು ಸಾಲದಾತರಿಗೆ ಮಾರಾಟ ಮಾಡುವ ಭಾಗವಾಗಿ ಕಂಪೆನಿಯು ಆರಂಭದಲ್ಲಿ ಯುನೈಟೆಡ್ ಸ್ಟೇಟ್ಸ್, ಕೆನಡಾ, ಮೆಕ್ಸಿಕೋ, ಬ್ರೆಜಿಲ್, ಚೀನಾ, ಕೊರಿಯಾ, ಭಾರತ ಮತ್ತು ಮಲೇಷ್ಯಾ ಸೇರಿದಂತೆ ಮಾರುಕಟ್ಟೆಗಳ ಮೇಲೆ ಹೆಚ್ಚಿನ ಚಿತ್ತ ಹರಿಸಿದೆ. ಇನ್ನು ಕಂಪನಿಯು ಭಾರೀ ಹೊಣೆಗಾರಿಕೆಗಳನ್ನು ಹೊಂದಿರುವ ಇತರ ಮಾರುಕಟ್ಟೆಗಳಲ್ಲಿ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲಾರಿ ಆನ್ ಗೋಲ್ಡ್ಮನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಂಪೆನಿಯ ಖರೀದಿಯಲ್ಲಿ ಯಾರೆಲ್ಲಾ ಇದ್ದಾರೆ?
ಇನ್ನು ಟಪ್ಪರ್‌ವೇರ್ ಕಂಪೆನಿಯನ್ನು ಪಡೆದುಕೊಳ್ಳಲು ಪ್ರಮುಖ ಕಂಪೆನಿಗಳು ಮುಂದಾಗಿದೆ ಎನ್ನಲಾಗಿದೆ. ಅದೂ ಅಲ್ಲದೆ ಸಾಲದಾತರು ಆಲ್ಡೆನ್ ಗ್ಲೋಬಲ್ ಕ್ಯಾಪಿಟಲ್, ಸ್ಟೋನ್‌ಹಿಲ್ ಇನ್‌ಸ್ಟಿಟ್ಯೂಶನಲ್ ಪಾರ್ಟ್‌ನರ್ಸ್ ಮತ್ತು ಬ್ಯಾಂಕ್ ಆಫ್ ಅಮೇರಿಕಾ ಟ್ರೇಡಿಂಗ್ ಡೆಸ್ಕ್ ಕೂಡ ಇದರಲ್ಲಿ ಸೇರಿದೆ.
ಉನ್ನತ ಮಟ್ಟಕ್ಕೇರಿದ್ದ ಕಂಪೆನಿ
ಒಂದು ಕಾಲದಲ್ಲಿ ಯಶಸ್ಸಿನ ಹಾದಿಯಲ್ಲಿತ್ತು ಟಪ್ಪರ್‌ವೇರ್ ಸದ್ಯ ಆನ್‌ಲೈನ್ ಅಥವಾ ಚಿಲ್ಲರೆ ಅಂಗಡಿಗಳಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುವ ಅವಕಾಶಗಳನ್ನು ಕಳೆದುಕೊಂಡಿದೆ. ಸದ್ಯ ಕಂಪೆನಿಯು ಸದ್ಯ ತನ್ನನ್ನು ದಿವಾಳಿ ಎಂದು ಘೋಷಿಸಿದ್ದರೂ ಒಂದು ಕಾಲದಲ್ಲಿ ಮಾತ್ರ ಮೋಡಿ ಮಾಡಿತ್ತು. ಮಹಾಯುದ್ದದ ಬಳಿಕ ಮಹಿಳೆಯರು ತಮ್ಮ ಮನೆಗಳಲ್ಲಿ ಮಹಿಳೆಯರು ತಮ್ಮ ಮನೆಗೆ "ಟಪ್ಪರ್‌ವೇರ್ ಉತ್ಪನ್ನಗಳನ್ನೇ ಖರೀದಿಸುತ್ತಿದ್ದರು. ಈ ಮೂಲಕ ಸಬಲೀಕರಣ ಮತ್ತು ಸ್ವಾತಂತ್ರ್ಯ ಬಯಸಿದ ಮಹಿಳೆಯರಿಗೆ ಇದರಿಂದ ಹೆಚ್ಚಿನ ನೆರವಾಗಿತ್ತು ಎನ್ನಲಾಗಿದೆ. ಆ ಸಮಯದಲ್ಲಿ ಅಮೆರಿಕಾದ ಬಹುತೇಕ ಎಲ್ಲಾ ಕಿಚನ್‌ಗಳಲ್ಲಿ ಟಪ್ಪರ್‌ವೇರ್ ಕಂಪೆನಿಯ ವಸ್ತುಗಳೇ ಸಿಂಹಪಾಲನ್ನು ಪಡೆದಿತ್ತು. ಆಗಿನ ಕಾಲಕ್ಕೆ ಹೋಲಿಕೆ ಮಾಡಿದರೆ ಅತ್ಯಾಧುನಿಕ ಹಾಗೂ ಸುಲಭ ರೀತಿಯಲ್ಲಿ ಬಳಕೆಯಾಗುವ ರೀತಿಯ ಕಿಚನ್ ಸ್ನೇಹಿ ವಸ್ತುಗಳು ಜನತೆಯ ಮನ ಗೆದ್ದಿತ್ತು. ಆದರೆ ಕ್ರಮೇಣವಾಗಿ ಕಂಪೆನಿಯು ವರ್ಷದಿಂದ ವರ್ಷಕ್ಕೆ ಮಾರಾಟದಲ್ಲಿ ಕುಸಿತ ಅನುಭವಿಸುತ್ತಲೇ ಹೋಗಿತ್ತು. ಪರಿಣಾಮ ಸದ್ಯ ಕಂಪೆನಿಯು ದೊಡ್ಡ ಪ್ರಮಾಣದಲ್ಲಿ ನಷ್ಟ ಅನುಭವಿಸಿ, ಇದೀಗ ದಿವಾಳಿ ಎಂದು ತನ್ನನ್ನು ಘೋಷಿಸಿಕೊಂಡಿದೆ.


Click it and Unblock the Notifications