ಟ್ವಿಟರ್ ಇಂದು ಎಕ್ಸ್ ಆಗಿ ಬದಲಾಗಿದೆ. ಮೈಕ್ರೋ ಬ್ಲಾಗಿಂಗ್ ಪ್ಲ್ಯಾಟ್ ಫಾರ್ಮ್ ಆಗಿದ್ದ ಟ್ವಿಟರ್ ಅನ್ನು 2006 ರಲ್ಲಿ ಸ್ಥಾಪಿಸಲಾಯಿತು. ಇದು ಪರಿಚಯವಾದ ಬಳಿಕ ನಾವು ಸಂವಹನ ನಡೆಸುವ ರೀತಿ ಬದಲಾಯಿತು. ಟ್ವಿಟರ್ ಆಗಮನದೊಂದಿಗೆ, ್ ಆಲೋಚನೆಗಳನ್ನು 280 ಅಕ್ಷರಗಳಿಗೆ ಸೀಮಿತಗೊಳಿಸುವುದು ಹೊಸ ರೂಢಿಯಾಯಿತು. ಸೆಲೆಬ್ರಿಟಿಗಳು ಮತ್ತು ರಾಜಕೀಯ ವ್ಯಕ್ತಿಗಳು ಟ್ವಿಟ್ಟರ್ ಅನ್ನು ಬಳಸಲು ಪ್ರಾರಂಭಿಸಿದಾಗ ವೇದಿಕೆಯ ಜನಪ್ರಿಯತೆಯು ಹೆಚ್ಚಾಯಿತು. ಆದರೆ ಇದಾದ ಬಳಿಕ ಟ್ವಿಟರ್ ಮಾಲೀಕತ್ವವನ್ನು 2023ರಲ್ಲಿ ವಿಶ್ವದ ಧನಿಕ, ಯಶಸ್ವಿ ಉದ್ಯಮಿ ಎಲೋನ್ ಮಸ್ಕ್ ವಹಿಸಿಕೊಂಡ ಬಳಿಕ ಟ್ವಿಟರ್ ಇದ್ದಕ್ಕಿದ್ದಂತೆ "X" ಆಗಿ ಬದಲಾಗಿ "X.com" ಎಂಬ URL ಹೊರಹೊಮ್ಮಿತು. ಹೊಸ ಹೆಸರಿನ ಘೋಷಣೆಯೊಂದಿಗೆ, ಟ್ವಿಟರ್ (ಅಥವಾ ಎಕ್ಸ್) ಇನ್ನು ಮುಂದೆ ಐಕಾನಿಕ್ ನೀಲಿ ಹಕ್ಕಿಯನ್ನು ಒಳಗೊಂಡಿರುವುದಿಲ್ಲ, ಅದನ್ನು "ಎಕ್ಸ್" ಶೈಲಿಯ ಲೋಗೋದೊಂದಿಗೆ ಬದಲಾಯಿಸಲಾಗುತ್ತದೆ ಎಂಬ ಘೋಷಣೆಯನ್ನು ಮಾಡಲಾಯಿತು.

ಆದರೆ ನಮ್ಮೆಲ್ಲರಿಗೂ ಟ್ವಿಟರ್ ಅಂದಕ್ಷಣ ನೀಲಿಹಕ್ಕಿಯೇ ನೆನಪಾಗುತ್ತದೆ. ಆದರೆ ಈಗ ವಿಷಯ ಏನಾಪ್ಪ ಅಂದ್ರೆ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ತನ್ನ ಹಳೆಯ ಮುಖ್ಯ ಕಚೇರಿಯಿಂದ ತೆಗೆದುಹಾಕಲಾದ ಟ್ವಿಟ್ಟರ್‌ನ ಪ್ರಸಿದ್ಧ ಪಕ್ಷಿ ಲೋಗೋ ಹರಾಜಿನಲ್ಲಿ ಸುಮಾರು $35,000 ಗೆ ಮಾರಾಟವಾಗಿದೆ ಎಂದು ಶನಿವಾರ ವರದಿಗಳು ತಿಳಿಸಿವೆ.
ಎಲೋನ್ ಮಸ್ಕ್ ಸಾಮಾಜಿಕ ಮಾಧ್ಯಮ ಕಂಪನಿಯನ್ನು ಖರೀದಿ ಮಾಡಿದ ಅದನ್ನು X ಎಂದು ಮರುಬ್ರಾಂಡ್ ಮಾಡಿದಾಗ ಹಿಂದಿನ ಟ್ವಿಟರ್‌ನಲ್ಲಿದ್ದ ನೀಲಿ ಹಕ್ಕಿ ಲೋಗೋವನ್ನು ತೆಗೆದುಹಾಕಲಾಗಿತ್ತು.
ಅಸೋಸಿಯೇಟೆಡ್ ಪ್ರೆಸ್ ವರದಿಯ ಪ್ರಕಾರ, ಅಪರೂಪದ ಮತ್ತು ಸಂಗ್ರಹ ಯೋಗ್ಯ ವಸ್ತುಗಳ ಹರಾಜು ಮಾಡುವ ಆರ್‌ಆರ್ ಹರಾಜು ಸಂಸ್ಥೆಯು 12 ಅಡಿ x 9 ಅಡಿ ಅಳತೆಯ 254 ಕೆಜಿ ತೂಕವಿರುವ ಟ್ವಿಟ್ಟರ್‌ನ ಹಕ್ಕಿ ಚಿಹ್ನೆ 34,375 ಡಾಲರ್‌ಗಳಿಗೆ ಮಾರಾಟವಾಗಿದೆ ಎಂದು ಹೇಳಿದೆ. ಆದರೆ ಯಾರು ಖರೀದಿಸಿದರು ಎಂಬ ಮಾಹಿತಿಯನ್ನು ಸಂಸ್ಥೆ ನೀಡಿಲ್ಲ.
ಎಲೋನ್ ಮಸ್ಕ್ ಅವರು ಟ್ವಿಟ್ಟರ್ ಅನ್ನು ಖರೀದಿಸಿದ ನಂತರ, ಹಿಂದಿನ ಟ್ವಿಟ್ಟರ್ ಸಂಸ್ಥೆಯಿಂದ ಲೋಗೋ ಮತ್ತು ಸ್ಮರಣಿಕೆಗಗಳು ಮಾತ್ರವಲ್ಲದೇ ಹಿಡಿದು ಅಡುಗೆ ಸಲಕರಣೆಗಳು ಮತ್ತು ಕಚೇರಿ ಪೀಠೋಪಕರಣಗಳಂತಹ ದಿನಬಳಕೆಯ ವಸ್ತುಗಳನ್ನು ಹರಾಜು ಮಾಡಿದ್ದರು.
ಇತರ ವಸ್ತುಗಳು ಕೂಡಾ ಹರಾಜಿನಲ್ಲಿ ಗಣನೀಯ ಮೊತ್ತಕ್ಕೆ ಮಾರಾಟವಾಗಿತ್ತು. ಟೆಕ್ನಿಕಲ್ ಇತಿಹಾಸವುಳ್ಳ ಇತರ ವಸ್ತುಗಳು ಹರಾಜಿನಲ್ಲಿ ಬೃಹತ್ ಮೊತ್ತಕ್ಕೆ ಮಾರಾಟವಾಗಿದ್ದು, ಅವುಗಳೆಂದರೆ, ಆಪಲ್-1 ಕಂಪ್ಯೂಟರ್ 375,000 ಡಾಲರ್‌ಗಳಿಗೆ, 1976 ರಲ್ಲಿ ಸ್ಟೀವ್ ಜಾಬ್ಸ್ ಸಹಿ ಮಾಡಿದ ಆಪಲ್ ಕಂಪ್ಯೂಟರ್ ಕಂಪನಿಯ ಚೆಕ್ 112,054 ಡಾಲರ್‌ಗಳಿಗೆ ಮತ್ತು ಪೆಟ್ಟಿಗೆಯಲ್ಲಿ ಸೀಲ್ ಮಾಡಲಾದ ಮೊದಲ ತಲೆಮಾರಿನ 4GB ಐಫೋನ್ 87,514 ಡಾಲರ್‌ಗಳಿಗೆ ಮಾರಾಟವಾಗಿವೆ.
X $44 ಬಿಲಿಯನ್ ಸಂಗ್ರಹಿಸಲು ಮುಂದಾದ ಎಕ್ಸ್
ಎಲೋನ್ ಮಸ್ಕ್ ಅವರ "ಎಕ್ಸ್" ವೇದಿಕೆಯು ಹೂಡಿಕೆದಾರರಿಂದ 44 ಬಿಲಿಯನ್ ಡಾಲರ್ ಮೌಲ್ಯದ ಹಣವನ್ನು ಸಂಗ್ರಹಿಸುವ ಗುರಿಯನ್ನು ಹೊಂದಿದೆ. ಇದಕ್ಕಾಗಿ ಮಾತುಕತೆಗಳು ನಡೆಯುತ್ತಿವೆ ಎಂದು ಬ್ಲೂಮ್‌ಬರ್ಗ್ ಕಳೆದ ತಿಂಗಳು ವರದಿ ಮಾಡಿದೆ.
2022 ರಲ್ಲಿ, ಎಲೋನ್ ಮಸ್ಕ್ ಅವರು "ಎಕ್ಸ್" (ಹಿಂದೆ ಟ್ವಿಟರ್) ಅನ್ನು ಅದೇ 44 ಬಿಲಿಯನ್ ಡಾಲರ್‌ಗಳಿಗೆ ಖರೀದಿಸಿದ್ದು, ಆದರೆ, ಸ್ವಾಧೀನದ ನಂತರ ಜಾಹೀರಾತುದಾರರನ್ನು ಉಳಿಸಿಕೊಳ್ಳಲು ವೇದಿಕೆಯು ಕಷ್ಟಪಟ್ಟಿದ್ದರಿಂದ, ಫಿಡೆಲಿಟಿ ಇನ್ವೆಸ್ಟ್‌ಮೆಂಟ್ಸ್ ಸೇರಿದಂತೆ ಕೆಲವು ಹೂಡಿಕೆದಾರರು ತಮ್ಮ ಪಾಲಿನ ಮೌಲ್ಯವನ್ನು ತೀವ್ರವಾಗಿ ಕಡಿಮೆ ಮಾಡಿದ್ದಾರೆ.
ಮತ್ತೊಂದೆಡೆ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆದ್ದ ನಂತರ ಮಸ್ಕ್ ಅವರ ಇತರ ಕಂಪನಿಗಳ ಮೌಲ್ಯವು ಹೆಚ್ಚಾಗಿದೆ. ಮಸ್ಕ್ ಮತ್ತು ಟ್ರಂಪ್ ಅವರ ನಡುವಿನ ನಿಕಟ ಸಂಬಂಧ ಹೊಂದಿದ್ದು ಕಂಪನಿಗಳ ಮೌಲ್ಯವು ಹೆಚ್ಚಾದ ಕಾರಣ ಈ ಮಾತುಕತೆಗಳು ವರದಿಯಾಗಿವೆ.


Click it and Unblock the Notifications