ದುಬೈನಲ್ಲಿರುವ ಭಾರತೀಯರೇ..ನೀವು ಈಗಲೇ ವಂಚಕರ ವಿಚಾರದಲ್ಲಿ ಅಲರ್ಟ್ ಆಗಿ. ಯಾಕಂದ್ರೆ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷವೇ, ವಂಚಕರ ಬಂಡವಾಳವಾಗಿದೆ. ವಂಚಕರು ಬೀಸುತ್ತಿರುವ ಬಲೆಗೆ ಬೀಳದಂತೆ ಎಚ್ಚರದಿಂದಿರಿ. ದುಬೈ ಅಷ್ಟೇ ಅಲ್ಲ ಯುಎಇ ಬೇರೆ ಭಾಗಗಳಲ್ಲಿ ಅನೇಕ ಭಾರತೀಯರು ಈ ವಿಚಾರವನ್ನು ತಿಳಿಯಲೇಬೇಕು. ಅದೇನೆಂದರೆ ಸರ್ಕಾರಿ ಅಧಿಕಾರಿಗಳು ಹಾಗೂ ಪೊಲೀಸರು, ಬಿಕ್ಕಟ್ಟು ನಿಯಂತ್ರಣ ಅಧಿಕಾರಿಗಳ ಹೆಸರಲ್ಲಿ ನಕಲಿ ಸ್ಕ್ಯಾಮ್ ಕರೆಗಳು ಬರುತ್ತಿವೆ. ಹಣ ಪೀಕಲು ಕೆಡ್ಡ ತೋಡುತ್ತಿದ್ದಾರೆ ವಂಚಕರು.

ಹೌದು, ದುಬೈ ಹಾಗೂ ಯುಎಇಯ ಹಲವು ದೇಶಗಳಲ್ಲಿ ಲಕ್ಷಾಂತರ ಮಂದಿ ಭಾರತೀಯರು ನೆಲೆಸಿದ್ದಾರೆ. ಅಂಥವರಿಗೆ ವಂಚಕರು ತಮ್ಮನ್ನು ಸರ್ಕಾರಿ ಅಧಿಕಾರಿಗಳು ಅಥವಾ ಪೊಲೀಸ್ ಎಂದು ಹೇಳಿಕೊಂಡು ನಿಮ್ಮ ಯುಎಇ ಪಾಸ್, ಎಮಿರೇಟ್ಸ್ ಐಡಿ ಅಥವಾ ಲಾಗಿನ್ ಮಾಹಿತಿಗಳನ್ನು ಕೇಳುತ್ತಾರೆ. ಅವರ ಕರೆ ಸ್ವೀಕರಿಸಿದರೂ ನೀವೇನಾದ್ರೂ ತಪ್ಪು ಮಾಹಿತಿ ಕೊಟ್ಟಿದ್ದೀರ ಅಂದ್ರೆ ನೀವೇನು ಚತುರರು ಎಂದರ್ಥ ಅಲ್ಲ. ಏಕೆಂದರೆ ಕೆಲವೊಮ್ಮೆ ಅವರು ಸಿಮ್ ಸ್ವೈಪ್ ತಂತ್ರ ಬಳಸಿ ನಿಮ್ಮ ಮೊಬೈಲ್ ನಂಬರ್ ಸಂಪೂರ್ಣವಾಗಿ ಕಂಟ್ರೋಲ್ ಮಾಡಿಕೊಳ್ಳುತ್ತಾರೆ.
ಈ ರೀತಿ ವಂಚನೆಯ ಮೂಲಕ ಅವರು ನಿಮ್ಮ ಬ್ಯಾಂಕ್ ಖಾತೆ, ಡಿಜಿಟಲ್ ವ್ಯಾಲೆಟ್ ಹಾಗೂ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್‌ನ ಟ್ರಾಕ್ ಮಾಡುತ್ತಿದ್ದಾರೆಂಬ ಮಾಹಿತಿ ತಿಳಿದುಬಂದಿದೆ. ಅದರಲ್ಲೂ ಮೊಬೈಲ್ ಬ್ಯಾಂಕಿಂಗ್ ಬಳಸುವವರು ವಂಚಕರ ಬಲೆಗೆ ಬೇಗ ಬೀಳುವ ಸಾಧ್ಯತೆ ಇದೆ. ಹಾಗಾದ್ರೆ ನೀವು ಸುರಕ್ಷಿತವಾಗಿರಲು ಏನು ಮಾಡಬೇಕು? ಇಲ್ಲಿ ತಿಳಿಯಿರಿ
ಸುರಕ್ಷಿತವಾಗಿರಲು ಎಚ್ಚರಿಕೆ ಕ್ರಮಗಳು:
1. ಯಾರಿಗೂ ನಿಮ್ಮ ಮೊಬೈಲ್ ಸಂಖ್ಯೆ ಮತ್ತು OTP ಹಂಚಬೇಡಿ. ಕರೆ ಮಾಡುವವರ ಸಂಖ್ಯೆ ಅಧಿಕೃತವಾಗಿ ಕಂಡರೂ ಅದನ್ನು ನಿರ್ಲಕ್ಷಿಸಿ
2. ಗೊತ್ತಿಲ್ಲದ ಲಿಂಕ್ಗಳ ಮೇಲೆ ಕ್ಲಿಕ್ ಮಾಡಬೇಡಿ. ಹಾಗೆಯೇ ಒಂದು ವೇಳೆ ನಿಮ್ಮ ವಾಟ್ಸಾಪ್ ಅಥವಾ SMS ಮೂಲಕ ಲಿಂಕ್ ಬಂದರೆ ನಿರ್ಲಕ್ಷ್ಯ ಮಾಡಿ.
3. ಯುಎಇ ಪಾಸ್ ಅಥವಾ ಪರಿಶೀಲನೆ ಹೆಸರಿನಲ್ಲಿ ಬಂದ ಯಾವುದೇ ಕೋರಿಕೆಗಳು ಶಂಕಾಸ್ಪದ ಎಂದು ಗಮನಿಸಿ. ಹಾಗೂ ಸಾಧ್ಯವಾದರೆ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅಪ್‌ಡೇಟ್ ಪಡೆಯಿರಿ. ಹಾಗೂ ಅಧಿಕೃತ ಆಪ್ ಸ್ಟೋರ್ನಿಂದ ಮಾತ್ರ ಅಪ್ಲಿಕೇಶನ್ ಡೌನ್ಲೋಡ್ ಮಾಡಿ.
4. ಬ್ಯಾಂಕ್ ಖಾತೆ ಅಲರ್ಟ್ಗಳನ್ನು ನಿರಂತರ ಸಕ್ರಿಯವಾಗಿರಿಸಿ, ಮತ್ತು ಯುಎಇ ಅಧಿಕೃತ ವೆಬ್ಸೈಟ್ನಿಂದ ಮಾಹಿತಿಯನ್ನು ಪರಿಶೀಲಿಸಿ.
5. ಈ ಎಚ್ಚರಿಕೆಯನ್ನು ಕುಟುಂಬದವರಿಗೂ ಹಂಚಿ, ವಿಶೇಷವಾಗಿ ಹಿರಿಯರಿಗೆ ತಿಳಿಸಿ.
ನೀವು ಈ ಸಲಹೆಗಳನ್ನು ಅನುಸರಿಸಿದರೆ, ನಕಲಿ ಯುಎಇ ಪಾಸ್ ಸ್ಕ್ಯಾಮ್ಗಳಿಂದ ನಿಮ್ಮ ಮಾಹಿತಿಯನ್ನು ಸುರಕ್ಷಿತವಾಗಿರಿಸಬಹುದು ಮತ್ತು ಯಾವುದೇ ಹಣ ಹಾನಿಯನ್ನು ತಪ್ಪಿಸಬಹುದು. ಯುಎಇಯಲ್ಲಿ ನೆಲೆಸಿರುವ ಭಾರತೀಯರು ತಮ್ಮ ಸುರಕ್ಷತೆ ಬಗ್ಗೆ ಎಚ್ಚರಿಕೆಯಿಂದ ಇರಬೇಕು.


Click it and Unblock the Notifications