ಟೆಕ್ಕಿಗಳಿಗೆ ಗುಡ್‌ನ್ಯೂಸ್ ಬೆಂಗಳೂರಿಗೆ ಬರಲಿದೆ ಊಬರ್ ಶಟಲ್ ಬಸ್

ಬೆಂಗಳೂರು, ಅಕ್ಟೋಬರ್ 26: ಬೆಂಗಳೂರಿನ ಟೆಕ್ಕಿಗಳಿಗೆ ಶೀಘ್ರದಲ್ಲೇ ಊಬರ್ ಸಿಹಿಸುದ್ದಿಯೊಂದನ್ನು ನೀಡಲಿದೆ. ಕಛೇರಿಗೆ ಹೋಗುವಾಗ ತಾಸುಗಟ್ಟಲೇ ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿಕೊಳ್ಳುವ ತೊಂದರೆಯಿಂದ ಮುಕ್ತಿ ದೊರೆಯುವ ನಿರೀಕ್ಷೆ ಇದೆ. ಉದ್ಯಾನ ನಗರಿ ಬೆಂಗಳೂರಿನ ಪ್ರಮುಖ ಟೆಕ್ ಪಾರ್ಕ್‌ಗಳಿಗೆ ಬಸ್ ಸೌಲಭ್ಯವನ್ನು ಆರಂಭಿಸಲಾಗುತ್ತದೆ ಎಂದು ಊಬರ್ ಘೋಷಣೆ ಮಾಡಿದೆ. ಊಬರ್ ಶಟಲ್ ಹೆಸರಿನಲ್ಲಿ ಈ ಸೇವೆಯನ್ನು ಪ್ರಾರಂಭಿಸಲಾಗುತ್ತದೆ.

ಈ ಕುರಿತು ಉಬರ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ಮುಖ್ಯಸ್ಥ ಪ್ರಭಜೀತ್ ಸಿಂಗ್ ಘೋಷಣೆ ಮಾಡಿದ್ದಾರೆ. ಈಗಾಗಲೇ 'ಊಬರ್ ಶಟಲ್' ಹೆಸರಿನಲ್ಲಿ ಈ ಮಾದರಿಯ ಸೇವೆಯನ್ನು ದೆಹಲಿ ಎನ್‌ಸಿಆರ್, ಕೋಲ್ಕತ್ತಾ, ಹೈದರಾಬಾದ್ ಮತ್ತು ಮುಂಬೈನಲ್ಲಿ ಆರಂಭಿಸಲಾಗಿದೆ. ಬೆಂಗಳೂರಿನಲ್ಲಿಯೂ ಪ್ರಾರಂಭವಾಗಲಿದೆ.

ಟೆಕ್ಕಿಗಳಿಗೆ ಗುಡ್‌ನ್ಯೂಸ್ ಬೆಂಗಳೂರಿಗೆ ಬರಲಿದೆ ಊಬರ್ ಶಟಲ್ ಬಸ್

ಪ್ರಭಜೀತ್ ಸಿಂಗ್ ಅವರ ಪ್ರಕಾರ ಬೆಂಗಳೂರು ನಗರದಲ್ಲಿ ಕೆ. ಆರ್. ಪುರ-ಸಿಲ್ಕ್ ಬೋರ್ಡ್ ಮಾರ್ಗದಲ್ಲಿ ಮೊದಲು ಊಬರ್ ಶಟಲ್ ಬಸ್ ಸೇವೆ ಆರಂಭವಾಗುವ ನಿರೀಕ್ಷೆ ಇದೆ. ಈ ಮಾರ್ಗದಲ್ಲಿ ಸುಮಾರು 30 ಟೆಕ್ ಪಾರ್ಕ್‌ಗಳು ಮತ್ತು 15 ಲಕ್ಷ ಐಟಿ ಉದ್ಯೋಗಿಗಳಿದ್ದಾರೆ.

ಊಬರ್ ಇಂಡಿಯಾ-2024 ಎಕಾನಾಮಿಕ್‌ ಇಂಪ್ಯಾಕ್ಟ್ ರಿಪೋರ್ಟ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಭಜೀತ್ ಸಿಂಗ್, ಬೆಂಗಳೂರಿನಲ್ಲಿ ಈ ಮಾದರಿ ಸೇವೆಯನ್ನು ಆರಂಭಿಸಲು ಸಂಬಂಧಿಸಿದ ಪ್ರಾಧಿಕಾರಗಳ ಜೊತೆ ಮಾತುಕತೆ ನಡೆಯುತ್ತಿದೆ ಎಂದರು. ಈ ಮಾದರಿ ಬಸ್‌ಗಳನ್ನು ಈಗಾಗಲೇ ದೇಶದ ವಿವಿಧ ನಗರದಲ್ಲಿ ಆರಂಭಿಸಲಾಗಿದ್ದು, ಉತ್ತಮ ಪ್ರತಿಕ್ರಿಯೆಯೂ ಸಿಕ್ಕಿದೆ ಎಂದರು.

"ನಾವು ಬೆಂಗಳೂರಿನಲ್ಲಿ ಕಡಿಮೆ ಖರ್ಚಿನ, ಸಮೂಹ ಸಾರಿಗೆಯನ್ನು ಬೆಂಬಲಿಸುವ ಊಬರ್ ಶಟಲ್ ಸೇವೆ ಆರಂಭಿಸಲು ಉತ್ಸುಕರಾಗಿದ್ದೇವೆ. ಇದಕ್ಕಾಗಿ ವಿವಿಧ ಭಾಗಿದಾರರ ಜೊತೆ ನಿರಂತರ ಮಾತುಕತೆಗಳು ನಡೆಯುತ್ತಿವೆ" ಎಂದು ಪ್ರಭಜೀತ್ ಸಿಂಗ್ ಹೇಳಿದರು.

"ಒಂದು ಬಾರಿ ಎಲ್ಲಾ ಮಾತುಕತೆಗಳು ಮುಕ್ತಾಯಗೊಂಡು ಹಸಿರು ನಿಶಾನೆ ಸಿಕ್ಕಿದರೆ ಊಬರ್ ಬೆಂಗಳೂರು ನಗರದಲ್ಲಿ ಹೊರ ವರ್ತುಲ ರಸ್ತೆಯಲ್ಲಿ 200 ಊಬರ್ ಶಟಲ್ ಮಾದರಿ ಹವಾನಿಯಂತ್ರಿತ ಬಸ್ ಸೇವೆಯನ್ನು ಆರಂಭಿಸಲಿದೆ" ಎಂದು ತಿಳಿಸಿದರು.

"ಸಮೂಹ ಸಾರಿಗೆ ಬಳಸುವಂತೆ ಉತ್ತೇಜನ ನೀಡಬೇಕು ಎಂಬುದು ಎಲ್ಲಾ ಸರ್ಕಾರಗಳ ಗುರಿಯಾಗಿದೆ. ನಾವು ಪ್ರತಿ 2-3 ನಿಮಿಷಕ್ಕೆ ಒಂದು ಬಸ್ ಓಡಿಸುತ್ತೇವೆ. ಇದರಲ್ಲಿ ಇನ್ನೂ ಹೆಚ್ಚಿನ ಆಯ್ಕೆಗಳನ್ನು ಸಹ ನೀಡಲು ನಾವು ಸಿದ್ಧರಿದ್ದೇವೆ. ಇದೊಂದು ಮಾದರಿ ಸೇವೆಯಾಗಲಿದೆ" ಎಂದು ಪ್ರಭಜೀತ್ ಸಿಂಗ್ ಭರವಸೆ ವ್ಯಕ್ತಪಡಿಸಿದರು.

ಬೆಂಗಳೂರು ನಗರದ ವಿವಿಧ ಪ್ರದೇಶಗಳಿಂದ ಐಟಿ ಪಾರ್ಕ್ ಇರುವ ಕಡೆಗೆ ಐಟಿ ಉದ್ಯೋಗಿಗಳು ಪ್ರಯಾಣ ಮಾಡುವುದು ಬಹುದೊಡ್ಡ ಸಮಸ್ಯೆಯಾಗಿದೆ. ಈಗ ಕೋವಿಡ್ ಕಾಲವೂ ಮುಗಿದಿದ್ದು, ಉದ್ಯೋಗಿಗಳಿಗೆ ಕಛೇರಿಗೆ ಬನ್ನಿ ಎಂದು ವಿವಿಧ ಕಂಪನಿಗಳು ಕರೆ ನೀಡುತ್ತಿವೆ. ಬಸ್, ನಮ್ಮ ಮೆಟ್ರೋ ಸಂಪರ್ಕ ಇಲ್ಲದ ಕಡೆಗೆ ಉದ್ಯೋಗಿಗಳು ಬೈಕ್, ಕಾರು ಏರಿ ಸಂಚಾರ ನಡೆಸಬೇಕಾಗಿದೆ. ಇದರಿಂದಾಗಿ ಸಂಚಾರ ದಟ್ಟಣೆ ಉಂಟಾಗುತ್ತಿದೆ.

ಒದೊಂದು ಐಟಿ ಪಾರ್ಕ್‌ಗೆ ಸಾವಿರಾರು ಕಾರುಗಳು ಆಗಮಿಸುತ್ತದೆ. ಮಳೆ ಬಂದರೆ ಎಲ್ಲಾ ರಸ್ತೆಗಳು ಜಾಮ್ ಆಗಿ ಸಂಚಾರ ದಟ್ಟಣೆ ಉಂಟಾಗುತ್ತದೆ. ಕಳೆದ ವಾರ ಮಳೆ ಬಂದಾಗ ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಮೇಲೆ ಉಂಟಾದ ವಾಹನ ಸಂಚಾರ ದಟ್ಟಣೆಯ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಇಂತಹ ಸಮಯದಲ್ಲಿಯೇ ಐಟಿ ಉದ್ಯೋಗಿಗಳನ್ನು ಗಮನದಲ್ಲಿಟ್ಟುಕೊಂಡು ಊಬರ್ ಶಟಲ್ ಬಸ್ ಪರಿಚಯಿಸಲಾಗುತ್ತಿದೆ.

ಊಬರ್ ಶಟಲ್ ಬಸ್ ಸೇವೆ ಹೇಗಿರಲಿದೆ?, ಎಷ್ಟು ದರವನ್ನು ಪಾವತಿಸಬೇಕಾಗುತ್ತದೆ? ಮುಂತಾದ ಮಾಹಿತಿಗಳನ್ನು ಇನ್ನೂ ಊಬರ್ ನೀಡಿಲ್ಲ. ಆದರೆ ಈ ಮಾದರಿ ಸೇವೆಗಳು ದೇಶದ ಬೇರೆ ನಗರದಲ್ಲಿ ಯಶಸ್ವಿಯಾಗಿದ್ದು, ಬೆಂಗಳೂರಿನಲ್ಲಿಯೂ ಸಹ ಪರಿಚಯಿಸಲು ಊಬರ್ ಮುಂದಾಗಿದೆ. ಅದಕ್ಕಾಗಿ ಸಿದ್ಧತೆಗಳನ್ನು ನಡೆಸಿದೆ.

ಆರ್. ವಿ. ರಸ್ತೆ-ಬೊಮ್ಮಸಂದ್ರ ನಡುವಿನ ನಮ್ಮ ಮೆಟ್ರೋ ಮಾರ್ಗ ಉದ್ಘಾಟನೆಗೊಂಡರೆ ಟೆಕ್ಕಿಗಳಿಗೆ ಅನುಕೂಲವಾಗಲಿದೆ. ಹಳದಿ ಮಾರ್ಗದ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ರೈಲುಗಳ ಪ್ರಾಯೋಗಿಕ ಸಂಚಾರ ನಡೆಯುತ್ತಿದೆ. ಡಿಸೆಂಬರ್ ಅಂತ್ಯ ಅಥವ 2025ರ ಜನವರಿಯಲ್ಲಿ ಈ ಮಾರ್ಗದಲ್ಲಿ ನಮ್ಮ ಮೆಟ್ರೋ ಸಂಚಾರ ಆರಂಭವಾಗಲಿದೆ ಎಂದು ಅಂದಾಜಿಸಲಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+