ಬೆಂಗಳೂರು, ಆಗಸ್ಟ್ 27: ಜನಪ್ರಿಯವಾಗಿರುವ ಉಬರ್ ಈಗ ಮತ್ತೆ ಹೊಸದೊಂದು ಅವತಾರದ ಮುಖೇನ ನಮ್ಮ ಮುಂದೆ ಬರಲಿದೆ. ತನ್ನ ಪ್ರಮುಖ ಟಾಪ್-ಆಫ್-ಲೈನ್ ಪ್ರಾಡಕ್ಟ್ ' ಉಬರ್ ಬ್ಲ್ಯಾಕ್' ಮತ್ತೆ ಭಾರತಕ್ಕೆ ಬರುತ್ತಿದೆ.
ಜಾಗತಿಕ ರೈಡ್-ಹೇಲಿಂಗ್ ದೈತ್ಯ Uber , ಭಾರತದಲ್ಲಿ ತನ್ನ ಪ್ರೀಮಿಯಂ ಸೇವೆ Uber Black ಅನ್ನು ಮರುಪರಿಚಯಿಸಲು ಸಿದ್ಧವಾಗಿದೆ.ಈ ಕ್ರಮವು ಭಾರತೀಯ ಗ್ರಾಹಕರಿಗೆ ಮತ್ತಷ್ಟು ಪ್ರಿಯವಾಗುವ ಸಾಧ್ತೆ ಇದೆ. ಮುಂದಿನ ಕೆಲವು ವಾರಗಳಲ್ಲಿ ಮುಂಬೈನ ಆಯ್ದ ಪ್ರದೇಶಗಳಲ್ಲಿ ಈ ಸೇವೆಯು ಆರಂಭದಲ್ಲಿ ಲಭ್ಯವಿರಲಿದೆ ಎಂದು ಹೇಳಲಾಗಿದೆ. ಗ್ರಾಹಕರಿಗೆ ಮತ್ತಷ್ಟು ಪ್ರಿಮಿಯಂ ಅನುಭವ ನೀಡುವತ್ತ ಉಬರ್ ಈ ಮೂಲಕ ಹೆಜ್ಜೆ ಇಡುತ್ತಿದೆ.

ಕಂಪನಿಯು 2013 ರಲ್ಲಿ ಉಬರ್ ಬ್ಲ್ಯಾಕ್‌ನೊಂದಿಗೆ ಭಾರತದದಲ್ಲಿ ಸೇವೆ ಆರಂಭಿಸಿತ್ತು. ಇದರ ಅಡಿ ಮರ್ಸಿಡಿಸ್, ಬಿಎಂಡಬ್ಲ್ಯು ಮತ್ತು ಆಡಿಯಂತಹ ಸಿ-ಸೂಟ್ ಕಾರುಗಳು ಬೇಡಿಕೆಯ ಮೇರೆಗೆ ಲಭ್ಯವಿದ್ದವು. ಇದು ನಂತರ ಐಷಾರಾಮಿ ಕಾರುಗಳನ್ನು ಟೊಯೊಟಾ ಇನ್ನೋವಾ, ಹೋಂಡಾ ಸಿಟಿ ಮತ್ತು ಟೊಯೊಟಾ ಕೊರೊಲ್ಲಾದಂತಹ ಕಾರುಗಳೊಂದಿಗೆ ಬದಲಾಯಿಸಿತು. ಒಂದು ವರ್ಷದ ನಂತರ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು.
ಹೊಸ ಉಬರ್ ಬ್ಲಾಕ್ ಸೇವೆಯು ಟೊಯೋಟಾ ಮತ್ತು ಎಂಜಿ ಮೋಟಾರ್‌ನಂತಹ ಬ್ರಾಂಡ್‌ಗಳಿಂದ ಎಸ್‌ಯುವಿಗಳು ಮತ್ತು ಎಂಯುವಿಗಳನ್ನು ಹೊಂದಿರುತ್ತದೆ .ಈ ಪ್ರೀಮಿಯಂ ಸೇವೆಯ ಬೆಲೆಯು ಕಂಪನಿಯ ಅಸ್ತಿತ್ವದಲ್ಲಿರುವ ಉನ್ನತ ಉತ್ಪನ್ನವಾದ ಉಬರ್ ಪ್ರೀಮಿಯರ್‌ಗಿಂತ 30-40% ಹೆಚ್ಚು ಪಾವತಿ ಇಲ್ಲಿ ಮಾಡಬೇಕಾಗುತ್ತದೆ.
Uber Black ನ ಪರಿಷ್ಕರಿಸಿದ ಆವೃತ್ತಿಯುಒಂದು ಅದ್ಭುತ ಮಾದರಿ ಆಗಿರುತ್ತದೆ, ಅಲ್ಲಿ ಗ್ರಾಹಕರಿಗೆ ಪ್ರಸ್ತುತ ಲಭ್ಯವಿರುವ ಕಮರ್ಷಿಯಲ್ ಸೆಡಾನ್‌ಗಳಿಗಿಂತ ದೊಡ್ಡ ಕಾರುಗಳಲ್ಲಿ ವೈಟ್ ಗ್ಲೋವ್ ಕ್ಯಾಬ್ ಸೇವೆಯನ್ನು ಒದಗಿಸಲಾಗುವುದು ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಟೊಯೋಟಾ, MG ಮತ್ತು ಇತರರ ಸ್ಪೋರ್ಟ್-ಯುಟಿಲಿಟಿ ವೆಹಿಕಲ್ಸ್ (SUV ಗಳು) ಮತ್ತು ಮಲ್ಟಿ-ಯುಟಿಲಿಟಿ ವೆಹಿಕಲ್ಸ್ (MUV ಗಳು) ಸೇವೆಗಾಗಿ ಬಳಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಮೊದಲೆ ಹೇಳಿದಂತೆ Uber Black ಪ್ಲಾಟ್‌ಫಾರ್ಮ್‌ನ ಅಸ್ತಿತ್ವದಲ್ಲಿರುವ ಉನ್ನತ ಉತ್ಪನ್ನವಾದ Uber Premier ಗಿಂತ 30-40% ಹೆಚ್ಚಿನ ದರ ಹೊಂದಿರುತ್ತದೆ. ಉಬರ್ ಫ್ಲೀಟ್ ಪಾಲುದಾರರ ಮೂಲಕ ಸೇವೆಯನ್ನು ಪ್ರಾರಂಭಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಯುಎಸ್ ಮೂಲದ ರೈಡ್ ದೈತ್ಯ ಉಬರ್ ತನ್ನ ಫ್ಲೀಟ್ ಪಾಲುದಾರಿಕೆಯಲ್ಲಿ ದೊಡ್ಡ ಮಟ್ಟದ ಹೂಡಿಕೆ ಮಾಡುತ್ತಿದೆ. ಕಳೆದ ವರ್ಷ ಮುಂಬೈ ಮೂಲದ ಎವರೆಸ್ಟ್ ಫ್ಲೀಟ್‌ನಲ್ಲಿ 20-ಮಿಲಿಯನ್ ಡಾಲರ್ ಹೂಡಿಕೆ ಮಾಡಿತ್ತು.
ಕೊರೋನಾ ನಂತರ ಬದಲಾದ ಕಾಲದಲ್ಲಿ ವಿವಿಧ ಕಂಪನಿಗಳು ಹೊಸತನದ ಪ್ರಯೋಗ ಮಾಡುತ್ತಲೇ ಬಂದಿವೆ. ಫುಡ್ ಡಿಲಿವರಿಯ ಜೊಮ್ಯಾಟೋ ಮತ್ತು ಸ್ವಿಗ್ಗಿ ಹೊಸ ಪ್ರಯೋಗ ಮಾಡಿದ್ದು ಅಲ್ಲದೆ ಪ್ಲಾಟ್ ಫಾರ್ಮ್ ಫೀ ಮೂಲಕ ಅಪಾರ ಆದಾಯ ಗಳಿಸಿಕೊಂಡಿವೆ. ಈಗ ಉಬರ್ ತನ್ನ ಪ್ರಿಮಿಯಂ ಸೇವೆಗಳಿಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಬ್ಲ್ಯಾಕ್ ಸೇವೆ ಒದಗಿಸಲಿದ್ದು ಗ್ರಾಹಕರಿಗೆ ಐಷಾರಾಮಿ ಅನುಭೂತಿ ನೀಡಲು ಅಡಿಯಿಟ್ಟಿದೆ.


Click it and Unblock the Notifications