ಕೋಟಕ್ ಮಹೀಂದ್ರಾ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ಥಾನಕ್ಕೆ ಉದಯ್ ಕೋಟಕ್ ರಾಜೀನಾಮೆ ನೀಡಿದ್ದಾರೆ. ಇದು ಸೆಪ್ಟೆಂಬರ್ 1 ರಿಂದ ಜಾರಿಗೆ ಬರಲಿದೆ ಎಂದು ಕೋಟಕ್ ಮಹೀಂದ್ರಾ ಬ್ಯಾಂಕ್ ಸೆಪ್ಟೆಂಬರ್ 2 ರಂದು ವಿನಿಮಯ ಕೇಂದ್ರಗಳಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದೆ.
ಆದರೆ ಉದಯ್ ಕೋಟಕ್ ಬ್ಯಾಂಕ್‌ನ ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿ ಮುಂದುವರಿಯುತ್ತಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಉದಯ್ ಕೋಟಕ್ ಅವರ ಅಧಿಕಾರಾವಧಿಯು ಡಿಸೆಂಬರ್ 31, 2023 ರಂದು ಕೊನೆಗೊಳ್ಳುತ್ತದೆ.

ಮಧ್ಯಂತರ ಎಂಡಿ ಹಾಗೂ ಸಿಇಒ ಆಗಿ ಜಂಟಿ ವ್ಯವಸ್ಥಾಪಕ ನಿರ್ದೇಶಕರಾದ ದೀಪಕ್ ಗುಪ್ತಾ ಇರಲಿದ್ದಾರೆ. ಆರ್‌ಬಿಐ ಮತ್ತು ಬ್ಯಾಂಕ್ ಸದಸ್ಯರ ಅನುಮೋದನೆ ಬಳಿಕ ಡಿಸೆಂಬರ್ 31 ರವರೆಗೆ ದೀಪಕ್ ಗುಪ್ತಾ ಕೋಟಕ್ ಬ್ಯಾಂಕ್‌ನ ಎಂಡಿ ಮತ್ತು ಸಿಇಒ ಆಗಿ ಕರ್ತವ್ಯ ನಿರ್ವಹಿಸುತ್ತಾರೆ ಎಂದು ಹೇಳಿಕೆಯಲ್ಲಿ ಉಲ್ಲೇಖ ಮಾಡಲಾಗಿದೆ.
ಉತ್ತರಾಧಿಕಾರ ಸರಳಗೊಳಿಸಲು ರಾಜೀನಾಮೆ
ಉದಯ್ ಕೋಟಕ್, ಸೆಪ್ಟೆಂಬರ್ 2 ರಂದು ಸಾಮಾಜಿಕ ಮಾಧ್ಯಮದಲ್ಲಿ ನೀಡಿದ ಮಾಹಿತಿ ಪ್ರಕಾರ ಬ್ಯಾಂಕ್‌ನಲ್ಲಿ ಉತ್ತರಾಧಿಕಾರವನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಉದಯ್ ಕೋಟಕ್ ತನ್ನ ಸ್ಥಾನದಿಂದ ಕೆಳಗಿಳಿಯುತ್ತಿದ್ದಾರೆ.
"ಕೋಟಕ್ ಮಹೀಂದ್ರಾ ಬ್ಯಾಂಕ್‌ನ ಉತ್ತರಾಧಿಕಾರವು ನನ್ನ ಮನಸ್ಸಿನಲ್ಲಿ ಅಗ್ರಗಣ್ಯವಾಗಿದೆ. ಆದರೆ ನಮ್ಮ ಅಧ್ಯಕ್ಷರು, ನಾನು ಮತ್ತು ಜಂಟಿ ಎಂಡಿ ಎಲ್ಲರೂ ವರ್ಷಾಂತ್ಯದೊಳಗೆ ಕೆಳಗಿಳಿಯಬೇಕಾಗಿದೆ. ನಾನು ಈ ಪ್ರಕ್ರಿಯೆ ಸರಳಗೊಳಿಸಲು ಮುಂದಾಗಿದ್ದೇನೆ. ನಾನು ಈ ಪ್ರಕ್ರಿಯೆಯನ್ನು ಈಗ ಪ್ರಾರಂಭಿಸುತ್ತೇನೆ, ಮೊದಲು ಹೆಜ್ಜೆ ಇರಿಸುತ್ತೇನೆ. ಸಿಇಒ ಸ್ಥಾನದಿಂದ ಸ್ವಯಂಪ್ರೇರಿತವಾಗಿ ಕೆಳಗಿಯುತ್ತೇನೆ," ಎಂದು ಕೋಟಕ್ ಹೇಳಿದರು.
ಉತ್ತರಾಧಿಕಾರಿಯ ಆರ್‌ಬಿಐ ಅನುಮೋದನೆಗಾಗಿ ಬ್ಯಾಂಕ್ ಕಾಯುತ್ತಿದೆ ಎಂದು ಕೋಟಕ್ ಹೇಳಿದರು. ಈ ವರ್ಷದ ಫೆಬ್ರವರಿಯಲ್ಲಿ, ಬ್ಲ್ಯೂಬರ್ಗ್ ತನ್ನ ಬಿಲಿಯನೇರ್ ಸಂಸ್ಥಾಪಕ ಕೋಟಕ್ ಇರುವ ಸ್ಥಾನವನ್ನು ಬದಲಾವಣೆ ಮಾಡಲು ಆ ಸ್ಥಾನಕ್ಕೆ ಸರಿಯಾದ ವ್ಯಕ್ತಿಯ ಹುಡುಕಾಟದಲ್ಲಿದೆ. ಇದಕ್ಕಾಗಿ ಸಲಹಾ ಸಂಸ್ಥೆಯಾದ ಎಗಾನ್ ಜೆಹೆಂಡರ್ ಸಹಾಯ ಪಡೆಯುತ್ತಿದೆ.
ಉದಯ್ ಕೋಟಕ್ 1985 ರಲ್ಲಿ ಬ್ಯಾಂಕಿಂಗ್ ಅಲ್ಲದ ಹಣಕಾಸು ಸಂಸ್ಥೆಯಾಗಿ ಪ್ರಾರಂಭವಾದಾಗಿನಿಂದ ಬ್ಯಾಂಕ್ ಅನ್ನು ಮುನ್ನಡೆಸುತ್ತಿದೆ. ಇದು 2003 ರಲ್ಲಿ ವಾಣಿಜ್ಯವಾಗಿ ಸಾಲ ನೀಡುವ ಸಂಸ್ಥೆಯಾಯಿತು. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ ಉದಯ್ ಕೋಟಕ್ ಅವರು ಸುಮಾರು 13.4 ಬಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.


Click it and Unblock the Notifications