ಭಾರತದಲ್ಲಿ ಡಿಜಿಟಲ್ ಕ್ರಾಂತಿ ಆರಂಭವಾದ ಬಳಿಕ ಡಿಜಿಟಲ್ ಖರೀದಿಯಲ್ಲ ಯಾವ ರೀತಿಯಲ್ಲಿ ಏರಿಕೆ ಕಂಡಿದೆ ಎಂಬುದರ ಬಗ್ಗೆ ನಮಗೆ ಚೆನ್ನಾಗಿಯೇ ತಿಳಿದಿದೆ. ಒಂದು ಸಮಯದಲ್ಲಿ ಶಾಪ್‌ಗಳಿಗೆ ನೇರವಾಗಿ ಹೋಗಿ ಖರೀದಿ ಪ್ರಕ್ರಿಯೆ ನಡೆಯುತ್ತಿದ್ದರೆ ಇಂದು ಸಾಮಾನ್ಯವಾಗಿ ಮನೆಯೊಳಗೆ ಕುಳಿತುಕೊಂಡೇ ನಮಗೆ ಬೇಕಾದ ವಸ್ತುಗಳನ್ನು ಮನೆಗೇ ನೇರವಾಗಿ ತರಿಸಿಕೊಳ್ಳಬಹುದು. ಜನರ ಕೊಳ್ಳುವಿಕೆ ಸಾಮರ್ಥ್ಯ ಹೆಚ್ಚಾದಂತೆ ಆನ್‌ಲೈನ್ ಶಾಪಿಂಗ್‌ಗಳ ಪ್ರಮಾಣ ಕೂಡ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಅದರಲ್ಲೂ ದೇಶದಲ್ಲಿ ಡಿಜಿಟಲ್ ಪಾವತಿ ಬಂದ ಬಳಿಕವಂತೂ ಈ ಪ್ರಮಾಣ ನಾಗಾಲೋಟದಲ್ಲಿ ಸಾಗುತ್ತಿದೆ. ಇನ್ನು ಪ್ರತಿಯೊಂದು ವಿಚಾರದಲ್ಲೂ ಒಳಿತು ಕೆಡುಕು ಎರಡೂ ಇದೆ ಎಂಬುದು ನಾವು ಅನುಭವಗಳಿಂದ ಕಂಡುಕೊಂಡ ವಿಚಾರ. ಅದೇ ರೀತಿಯಲ್ಲಿ ಆನ್‌ಲೈನ್ ಶಾಂಪಿಂಗ್‌ನಲ್ಲಿ ಏರಿಕೆ ದಾಖಲಾಗುತ್ತಿರುವ ನಡುವೆ ಸಾಮಾನ್ಯ ಶಾಪ್‌ಗಳಿಗೆ ಕಂಟಕವಾಗಿ ಪರಿಣಮಿಸಿರುವುದು ಕೂಡ ಸುಳ್ಳಲ್ಲ.
ಸದ್ಯ ಇದೇ ವಿಚಾರವನ್ನು ಬಿಲಿಯನೇರ್ ಉದ್ಯಮಿ ಉದಯ್ ಕೋಟಕ್ ಕೂಡ ಪ್ರಸ್ತಾಪಿಸಿದ್ದಾರೆ. ತ್ವರಿತ ವಾಣಿಜ್ಯದ ಬೆಳವಣಿಗೆಯಿಂದಾಗಿ ಚಿಲ್ಲರೆ ವ್ಯಾಪಾರಿಗಳು ಸಮಸ್ಯೆಗಳಿಗೆ ಸಿಲುಕುತ್ತಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಆನ್‌ಲೈನ್ ಶಾಂಪಿಂಗ್‌ಗಳ ಹೆಚ್ಚಳವು ರಾಜಕೀಯ ಸಮಸ್ಯೆ ಉಂಟಾಗಬಹುದು ಎಂದು ಅವರು ಎಚ್ಚರಿಸಿದರು. ಇತ್ತೀಚಿಗಿನ ದಿನಗಳಲ್ಲಿ ಭಾರತದಲ್ಲಿ ಬ್ಲಿಂಕಿಟ್ ಮತ್ತು ಸ್ವಿಗ್ಗಿಯಂತಹ ಪ್ಲಾಟ್‌ಫಾರ್ಮ್‌ಗಳ ಏರಿಕೆಯ ವಿಚಾರವನ್ನು ಕೂಡ ಅವರು ಪರೋಕ್ಷವಾಗಿ ತಿಳಿಸಿದರು.

ಚಿಲ್ಲರೆ ಮಾರುಕಟ್ಟೆಗಳಿಗೆ ದೊಡ್ಡ ಹೊಡೆತ
ಖಾಸಗಿ ವಾಹಿನಿಯೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಕೋಟಕ್, ಆನ್‌ಲೈನ್ ಶಾಂಪ್ ಭಾರತದಲ್ಲಿ ಗಮನಾರ್ಹ ಯಶಸ್ಸನ್ನು ಕಂಡಿದ್ದರೂ, ಇತರ ಹಲವು ರಾಷ್ಟ್ರಗಳಿಗಿಂತ ಭಿನ್ನವಾಗಿದೆ. ಇದರಿಂದ ಪ್ರಾದೇಶಿಕ ಚಿಲ್ಲರೆ ಕಂಪನಿಗಳಿಗೆ ದೊಡ್ಡ ಬೆದರಿಕೆಯಾಗುತ್ತಿದೆ ಎಂದು ಒತ್ತಿ ಹೇಳಿದರು. ಅದೂ ಅಲ್ಲದೆ ಇತ್ತೀಚಿಗಿನ ದಿನಗಳಲ್ಲಿ ಚಿಲ್ಲರೆ ವ್ಯಾಪಾರಿಗಳು ಭಾರೀ ದೊಡ್ಡ ಸವಾಲನ್ನು ಎದುರಿಸುತ್ತಿದ್ದಾರೆ. ಈ ಸವಾಲು ಅಂತಿಮವಾಗಿ ರಾಜಕೀಯ ಮುಂಭಾಗಕ್ಕೆ ಬರುತ್ತದೆ. ಕೆಲದಿನಗಳ ಹಿಂದೆ ನವೆಂಬರ್ 13 ರಂದು Swiggy ಯ ಯಶಸ್ವಿ IPO ಭಾರೀ ಪ್ರಮಾಣದಲ್ಲಿ ಯಶಸ್ವಿಯಾದ ಹಿನ್ನೆಲೆಯಲ್ಲಿ ಈ ಬಗ್ಗೆ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ಮಾರುಕಟ್ಟೆಯಲ್ಲಿ ಏರಿಳಿತ ಕಂಡಿದ್ದರೂ IPO 17 ಪ್ರತಿಶತದಷ್ಟು ಪ್ರೀಮಿಯಂ ಅನ್ನು ಕಂಡಿದೆ. ಇನ್ನು ಮೂಲಗಳ ಪ್ರಕಾರ ಆನ್‌ಲೈನ್ ಉದ್ಯಮವು 2030 ರ ಹೊತ್ತಿಗೆ 40 ಶತಕೋಟಿ ಡಾಲರ್ ಮಾರುಕಟ್ಟೆ ಗಾತ್ರದೊಂದಿಗೆ ವೇಗವಾಗಿ ವಿಸ್ತರಿಸಲಿದೆ ಎಂದು ಅಂದಾಜು ವ್ಯಕ್ತಪಡಿಸಲಾಗಿದೆ. ಆದರೆ ಉಳಿದ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರತದಲ್ಲಿ ಚಿಲ್ಲರೆ ಮಾರುಕಟ್ಟೆ ಅಂಥ ಗಂಭೀರ ಪರಿಣಾಮವನ್ನು ಉಂಟು ಮಾಡದಿರುವ ವಿಚಾರವನ್ನು ಕೂಡ ಕೋಟಕ್ ಅವರು ಬೊಟ್ಟು ಮಾಡಿದರು. ಅಲ್ಲದೆ ಜಾಗತಿಕ ಮಟ್ಟದಲ್ಲಿ ಈಗಾಗಲೇ ಪ್ರಭಾವ ಬೀರಿರುವ ಆಪಲ್, ಮೆಟಾ ಮತ್ತು ಯೂನಿಲಿವರ್‌ನಂಥ ಕಂಪೆನಿಗಳು ಭಾರತದಲ್ಲೂ ಉಗಮವಾಗಬೇಕೆಂಬ ಪರಿಕಲ್ಪನೆಯನ್ನು ಅವರು ವ್ಯಕ್ತಪಡಿಸಿದ್ದಾರೆ. ಅದೂ ಅಲ್ಲದೆ ಕೋಟಕ್ ಅವರು ಅತಿಯಾದ ರಕ್ಷಣಾತ್ಮಕತೆಯ ವಿರುದ್ಧ ಕೂಡ ಎಚ್ಚರಿಕೆ ನೀಡಿದರು. ಇದು ದೀರ್ಘಾವಧಿಯ ಸ್ಪರ್ಧಾತ್ಮಕತೆಗೆ ಅಪಾಯವನ್ನುಂಟುಮಾಡುತ್ತದೆ ಎಂದು ಹೇಳಿದರು. ಅಂತರಾಷ್ಟ್ರೀಯ ಆರ್ಥಿಕ ಬದಲಾವಣೆಗಳ ಮುಖಾಂತರ ಭಾರತದ ನಿಲುವನ್ನು ಸುಧಾರಿಸುವ ಸಲುವಾಗಿ, ಕೋಟಾಕ್ ಹೆಚ್ಚು ಮುಕ್ತ ವ್ಯಾಪಾರದ ವಾತಾವರಣವನ್ನು ಪ್ರತಿಪಾದಿಸಿದರು ಮತ್ತು ಸಂಭವನೀಯ ಬಂಡವಾಳದ ಹೊರಹರಿವುಗಳಿಗೆ ಸಿದ್ಧವಾಗುವಂತೆ ರಾಷ್ಟ್ರಕ್ಕೆ ಸಲಹೆ ನೀಡಿದರು. ಈಗಾಗಲೇ ಸಾಮಾಜಿಕ ಸೇವಾ ಕಾರ್ಯದಲ್ಲೂ ಗುರುತಿಸಿಕೊಂಡಿರುವ ಕೋಟಕ್ ಅವರ ಮಾತಿನ ಬಗ್ಗೆ ಸದ್ಯ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.
ಪರಿಹಾರಗಳೇನು?
ಸದ್ಯ ಭಾರತದಲ್ಲಿ ಚಿಲ್ಲರೆ ಮಾರುಕಟ್ಟೆಗಳು ಕೂಡ ಆನ್‌ಲೈನ್ ಮೂಲಕ ತಮ್ಮ ವ್ಯವಹಾರಗಳನ್ನು ವೃದ್ದಿಸಿಕೊಳ್ಳುತ್ತಿರುವುದು ಉತ್ತಮ ಅಂಶವಾಗಿದೆ. ಹಲವಾರು ಆನ್‌ಲೈನ್ ವ್ಯಾಪಾರ ಸಂಸ್ಥೆಗಳೊಂದಿಗೆ ಚಿಲ್ಲರೆ ಉದ್ಯಮಗಳು ಒಪ್ಪಂದ ಮಾಡಿಕೊಳ್ಳುವ ಅಡ್ಡ ಪರಿಣಾಮಗಳನ್ನು ತಡೆಯಬಹುದು ಎನ್ನಲಾಗಿದೆ. ಇದಕ್ಕೆ ಉದಾಹರಣೆ ಎಂಬಂತೆ ಸದ್ಯ ಭಾರತದಲ್ಲಿ ಕಾರ್ಯಾಚರಿಸುತ್ತಿರುವ ಹಲವಾರು ಆನ್‌ಲೈನ್ ದೈತ್ಯ ಸಂಸ್ಥೆಗಳು ಕೂಡ ದೇಶದಲ್ಲಿರುವ ಚಿಲ್ಲರೆ ವ್ಯಾಪಾರಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಆರಂಭಿಸಿದ್ದು, ಇದರಿಂದ ಆನ್‌ಲೈನ್ ಶಾಪ್‌ಗಳ ಬೆಳವಣಿಗೆ ದರವನ್ನು ರಿಟೇಲ್ ಶಾಪ್‌ಗಳು ಪಡೆದುಕೊಳ್ಳಲು ಆರಂಬಿಸಿರುವುದು ಉತ್ತಮ ಅಂಶವೇ ಸರಿ.


Click it and Unblock the Notifications