ಭಾರತದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಯುರೋಪ್ ರಾಷ್ಟ್ರಗಳ ರೀತಿಯಲ್ಲಿ ಮಹತ್ವ ನೀಡದಿರುವ ವಿಚಾರ ಮತ್ತೊಮ್ಮೆ ಬಹಿರಂಗವಾಗಿದೆ. ಶಿಕ್ಷಣದಿಂದಲೇ ಒಂದು ದೇಶ ಅಭಿವೃದ್ದಿಯತ್ತ ದಾಪುಗಾಲಿಡಲು ಸಾಧ್ಯ ಎಂಬ ವಿಚಾರ ಗೊತ್ತಿದ್ದರೂ ಸರ್ಕಾರ ಮಾತ್ರ ಈಗಲೂ ಶಿಕ್ಷಣ ಕ್ಷೇತ್ರವನ್ನು ನಿರ್ಲಕ್ಷಿಸುತ್ತಿದೆಯೇ ಎಂಬ ಪ್ರಶ್ನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇನ್ನು ನೇರವಾಗಿ ವಿಚಾರಕ್ಕೆ ಬರುವುದಾದರೆ UGC-NET ಅರ್ಹತೆ ಪಡೆಯುವುದು ಪ್ರತಿಯೊಬ್ಬ ಶಿಕ್ಷಕರ ಗುರಿಯಾಗಿರುತ್ತದೆ. ಆದರೆ ಇದೀಗ ಆತಂಕಕಾರಿ ಬೆಳವಣಿಗೆಯಲ್ಲಿ UGC-NET ಅರ್ಹತೆ ಪಡೆದ ಸಂಶೋಧರೊಬ್ಬರು ತಮ್ಮ ಲಿಂಕ್ಡ್ ಇನ್ ಪೋಸ್ಟ್‌ನಲ್ಲಿ ಹಲವು ವಿಚಾರಗಳನ್ನು ಬಹಿರಂಗಪಡಿಸಿದ್ದು, ತಿಂಗಳಿಗೆ ಕೇವಲ 15000 ಸ್ಟೈಪೆಂಡ್ ನೀಡುತ್ತಿರುವ ವಿರುದ್ದ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಂಶೋಧಕರು ತಮ್ಮ ಅಸಮಾಧಾನವನ್ನು ಪೋಸ್ಟ್ ಮಾಡುತ್ತಿದ್ದಂತೆ ಲಿಂಕ್ಡ್ ಇನ್‌ನಲ್ಲಿ ಈ ವಿಷಯವು ಭಾರೀ ಚರ್ಚೆಗೆ ಕಾರಣವಾಗಿದೆ. ಹಾಗಾಗಿ ವಿದ್ಯಾವಂತರಾಗಿದ್ದರೂ ಕಳಪೆ ವೇತನ ನೀಡುತ್ತಿರುವುದು ಕೂಡ ಆಘಾತಕಾರಿಯಾಗಿದೆ.
ಪೋಸ್ಟ್‌ನಲ್ಲಿ ಏನಿದೆ?
ಎಲ್ಲರಿಗೂ ತಿಳಿದಿರುವಂತೆ UGC-NET ಅರ್ಹತೆ ಪಡೆದ ಸಂಶೋಧರಿಗೆ ಭಾರೀ ಬೇಡಿಕೆ ಇದ್ದರೂ ಅವರಿಗೆ ಸ್ಟೈಪೆಂಡ್ ರೂಪದಲ್ಲಿ ತಿಂಗಳಿಗೆ ಕೇವಲ 15000 ರೂ. ಪಾವತಿ ಮಾಡುತ್ತಿರುವುದು ಅಚ್ಚರಿಗೆ ಕಾರಣವಾಗಿದೆ. ಅದೂ ಅಲ್ಲದೆ ಅವಿದ್ಯಾವಂತ ವ್ಯಕ್ತಿ ಕೂಡ ಕೂಲಿ ಕೆಲಸದ ಮೂಲಕ ದಿನಕ್ಕೆ 700 ರೂ. ನಷ್ಟು ಸಂಪಾದನೆ ಮಾಡುತ್ತಾನೆ. ಆದರೆ ಕಠಿಣ ಪರಿಶ್ರಮದ ಮೂಲಕ UGC-NET ಅರ್ಹತೆ ಪಡೆದುಕೊಂಡರೂ ದಿನಕ್ಕೆ ಕೇವಲ 500 ರೂ. ನೀಡುತ್ತಿರುವುದ ಆರ್ಥಿಕ ಅಸಮಾನತೆಯನ್ನು ತೋರಿಸುತ್ತಿದೆ ಎಂಬ ಮಾತು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಆರೋಪ ಕೇಳಿಬರುತ್ತಿದೆ. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಹಣಕಾಸಿನ ಆದ್ಯತೆಗಳು ಮತ್ತು ಭಾರತದಲ್ಲಿ ವಿದ್ಯಾವಂತ ಅಭ್ಯರ್ಥಿಗಳಿಗೆ ನಿರಾಶಾದಾಯಕ ವೇತನದ ವಿಚಾರದ ಕುರಿತು ಚರ್ಚೆಗಳನ್ನು ಹುಟ್ಟುಹಾಕಿದೆ.

UGC-NET ಅರ್ಹತೆ ಪಡೆಯುವುದೇ ಸವಾಲು!
ಎಲ್ಲರಿಗೂ ಗೊತ್ತಿರುವಂತೆ UGC-NET ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವುದೇ ಒಂದು ಸವಾಲಾಗಿದೆ. ಆದರೆ ಎಲ್ಲಾ ಸವಾಲು ಕಠಿಣತೆಗಳ ನಡುವೆಯೂ ಪರಿಶ್ರಮದ ಮೂಲಕ ಒಬ್ಬ ಅಭ್ಯರ್ಥಿಯು ತನ್ನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುತ್ತಾನೆ. ಆದರೆ ಒಂದು ಬಾರಿ ಈ ಪರೀಕ್ಷೆಯನ್ನು ತೇರ್ಗಡೆ ಹೊಂದಿದ ಬಳಿಕ ಆ ವ್ಯಕ್ತಿಗೆ ಉತ್ತಮ ವೇತನದ ಮೂಲಕ ಆತನ ಪರಿಶ್ರಮವನ್ನು ಸನ್ಮಾನಿಸಬೇಕಾಗಿರುವುದು ಸರ್ಕಾರದ ಕರ್ತವ್ಯವಾಗಿದೆ. ಆದರೆ ಸದ್ಯ ನಡೆಯುತ್ತಿರುವ ಸಂಗತಿ ಮಾತ್ರ ತೀರಾ ನಿರಾಶಾದಾಯಕವಾಗಿದೆ ಎಂಬ ಮಾತು ಸದ್ಯ ಜಾಲತಾಣಗಳಲ್ಲಿ ಕೆಲವರಿಗೆ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.\
ಅಭ್ಯರ್ಥಿಯ ಲಿಂಕ್ಡ್ ಇನ್ ಪೋಸ್ಟ್‌ನಲ್ಲಿ ಏನಿದೆ?
ಇನ್ನು ಹರೀಶ್ ಬಿ. ಎಂಬವರು ತಮ್ಮ ಲಿಂಕ್ಡ್ ಇನ್ ಪೋಸ್ಟ್‌ನಲ್ಲಿ, ಸಂಶೋಧನಾ ಸಹಾಯಕರ ಹುದ್ದೆಯ ಆಫರ್ ನೀಡುವ ಜಾಹೀರಾತೊಂದನ್ನು ಮರು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಹುದ್ದೆಗೆ ಇಚ್ಚಿಸುವ ಅಭ್ಯರ್ಥಿಯು ಕೇವಲ ಪ್ರಾಚೀನ ಭಾರತೀಯ ಇತಿಹಾಸ/ಇತಿಹಾಸ/ರಾಜಕೀಯ ವಿಜ್ಞಾನ ಮತ್ತು ಇತರ ಸಂಬಂಧಿತ ಕ್ಷೇತ್ರಗಳಲ್ಲಿ ಕೇವಲ ಸ್ನಾತಕೋತ್ತರ ಪದವಿಯನ್ನು ಹೊಂದಿರುವುದು ಅಲ್ಲದೆ UGC-NET ಅರ್ಹತೆಯನ್ನು ನೇಮಕಾತಿ ಪೋಸ್ಟ್‌ನಲ್ಲಿ ಅತ್ಯಗತ್ಯ ಎಂದು ಉಲ್ಲೇಖಿಸಲಾಗಿದೆ. ಆದರೆ ಹೆಚ್ಚು ಅರ್ಹತೆ ಹೊಂದಿದ ಅಭ್ಯರ್ಥಿಯನ್ನು ಹುಡುಕಾಟ ನಡೆಸುತ್ತಿದ್ದರೂ ಸುಮಾರು 10 ತಿಂಗಳ ಅವಧಿಗೆ ಪ್ರತೀ ತಿಂಗಳಿಗೆ 15000 ರೂ.ನಂತೆ ಸ್ಟೈಪೆಂಡ್ ನೀಡಲಾಗುತ್ತಿದೆ. ಆದರೆ ಸ್ಕಿಲ್ ಹೊಂದಿರುವ ಅವಿದ್ಯಾವಂತ ವ್ಯಕ್ತಿ ಕೂಡ ದಿನಕ್ಕೆ 700 ರೂ.ನಂತೆ ದುಡಿಯುತ್ತಿದ್ದಾನೆ. ನಾನು ಯಾವ ಹುದ್ದೆ ಅಥವಾ ವ್ಯಕ್ತಿಗೂ ಅಗೌರವ ತೋರುತ್ತಿಲ್ಲ. ಬದಲಾಗಿ ಆರ್ಥಿಕ ಅಸಮಾನತೆ ಎಂದು ಅವರು ಉಲ್ಲೇಖಿಸಿದ್ದಾರೆ. ಅದೂ ಅಲ್ಲದೆ ಇನ್ನು ಮುಂದೆ ಈ ರೀತಿಯ ಅಧಿಸೂಚನೆಗಳನ್ನು ಬಿಡುಗಡೆ ಮಾಡುವ ಮುನ್ನ ಎಲ್ಲಾ ಅಂಶಗಳನ್ನು ಮೌಲ್ಯಮಾಪನ ಮಾಡಬೇಕಿದೆ ಎಂದು ಅವರು ನೇಮಕಾತಿದಾರರಿಗೆ ವಿನಂತಿ ಮಾಡಿದ್ದಾರೆ.
ಚರ್ಚೆಗೆ ಕಾರಣವಾದ ಪೋಸ್ಟ್
ಹರೀಶ್ ಅವರು ಈ ಪೋಸ್ಟ್ ಮಾಡುತ್ತಿದ್ದಂತೆ ಲಿಂಕ್ಡ್ ಇನ್ ವೇದಿಕೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಹೆಚ್ಚಿನವರು ಸರ್ಕಾರಿ ವ್ಯವಸ್ಥೆಯ ಬಗ್ಗೆ ಆಕ್ರೋಶ ಹೊರಹಾಕಿದರೆ ಇನ್ನೂ ಕೆಲವರು ಕಠಿಣ ಪರಿಶ್ರಮ ಹಾಕಿ ಪರೀಕ್ಷೆಗಳನ್ನು ಉತ್ತೀರ್ಣಗೊಳಿಸಿದರೂ ಸರಿಯಾದ ವೇತನ ಲಭಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಹರೀಶ್ ಅವರ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸಿದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications