ಬೆಂಗಳೂರು ನಗರದ 108 ಎಕರೆ ವ್ಯಾಪ್ತಿಯ ಐತಿಹಾಸಿಕ ಉಲ್ಸೂರು ಕೆರೆ ಈಗ ಬಹುತೇಕ ಖಾಲಿಯಾಗಿದೆ. ಹೀಗಾಗಿ ಇದನ್ನು ಶುದ್ಧೀಕರಣಗೊಳಿಸುವ ಕೆಲಸ ಕೂಡ ಆರಂಭವಾಗಿದ್ದು, ಎಲ್ಲರ ಗಮನ ಸೆಳೆದಿದೆ. ಬೆಂಗಳೂರು ಸಿಟಿ ಕಾರ್ಪೋರೇಷನ್ ಮುಖ್ಯ ಜಲಾಶಯ, ಮಳಿಗೆ ಕೆರೆ ಮತ್ತು ಕಲ್ಯಾಣಿ ಭಾಗದಲ್ಲಿ ಈ ಶುದ್ಧೀಕರಣ ಕೆಲಸವನ್ನು ಕೈಗೊಳ್ಳಲಾಗಿದೆ.

ಮಾಹಿತಿ ಪ್ರಕಾರ ಶುದ್ಧೀಕರಣ ಕೆಲಸಕ್ಕಾಗಿ ಸರ್ಕಾರವು 4 ಕೋಟಿ ರೂ. ಅನುದಾನ ನೀಡಲಾಗಿದೆ. ಏಕೆಂದರೆ ಸುಮಾರು 20 ವರ್ಷಗಳ ನಂತರ ಈ ಸರೋವರವನ್ನು ಸಂಪೂರ್ಣವಾಗಿ ಸ್ವಚ್ಚಗೊಳಿಸಲಾಗ್ತಿದೆ. ಕೆರೆಯ ನೀರನ್ನು ಹೊರ ಹಾಯಿಸಲು ನಿದರ್ದಿಷ್ಟ ಮಾರ್ಗವನ್ನು ಕೂಡ ಬಳಸಲಾಗ್ತಿದೆ. ಸದ್ಯ ಈ ಸರೋವರಕ್ಕೆ BWSSB ಇಂದ ದಿನಕ್ಕೆ 1.5 ಎಂಎಲ್ಡಿ ಶುದ್ಧ ನೀರು ಹರಿಸುತ್ತಿದೆ. ಅಧಿಕಾರಿಗಳು ಶುದ್ಧೀಕರಣದ ಸಮಯದಲ್ಲಿ ನೀರನ್ನು ತಾತ್ಕಾಲಿಕವಾಗಿ ಕಾಲುವೆಗೆ ಹರಿಸುವ ಆಯ್ಕೆಯನ್ನು ಪರಿಶೀಲಿಸುತ್ತಿದ್ದಾರೆ.
ಮೀನುಗಾರರ ದೃಷ್ಟಿಕೋಣ:
ಉಲ್ಲ್ಸೂರಿನ ಸರೋವರದಲ್ಲಿ ಕಳೆದ 14 ವರ್ಷಗಳಿಂದ ಬೆಂಗಳೂರು ಮೀನು ಉತ್ಪನ್ನ ಮತ್ತು ಮಾರಾಟಗಾ ಸಂಘದ 120 ಸದಸ್ಯರು ಮೀನುಗಾರಿಕೆ ಮತ್ತು ನಿರ್ವಹಣೆಯಲ್ಲಿ ಭಾಗವಹಿಸುತ್ತಿದ್ದಾರೆ. ಕೆರೆ ಶುದ್ಧೀಕರಣದ ಬಗ್ಗೆ ಮಾಧ್ಯಮವೊಂದಕ್ಕೆ ಸಂಘದ ಕಾರ್ಯದರ್ಶಿ ಸುಬ್ಬಯ್ಯ ಅವರು ಹೇಳಿಕೆ ನೀಡಿದ್ದಾರೆ. ಅವರು ಹೇಳಿದ್ದೇನೆಂದರೆ ನೀರು ಈಗ 3 ಅಡಿ ಮಟ್ಟವಿದೆ. ಹೀಗಾಗಿ ಜಾಲ ಮೀನುಗಾರಿಕೆ ಸಾಧ್ಯವಿಲ್ಲ. ಪೂರ್ವದಲ್ಲಿ ಸಂಪೂರ್ಣ ಶುದ್ಧೀಕರಣ 2001-02 ರಲ್ಲಿ ಮಾಡಲಾಗಿತ್ತು. 2020 ರಲ್ಲಿ ಭಾಗಶಃ ಶುದ್ಧೀಕರಣ ನಡೆಸಿದ್ದು, ಮೀನುಬಾಲಗಳನ್ನು ಬಿಡುಗಡೆ ಮಾಡಿದ್ದೆವು ಎನ್ನಲಾಗಿದೆ.
ಇನ್ನು ಈ ಬಗ್ಗೆ ಸಾರ್ವಜನರಿಕರು ಕೂಡ ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡಿದ್ದು, ಸರೋವರದ ಪಕ್ಕದ ಪಾತ್ ವೇ ಸಹ ಸುಂದರವಾಗಿ ಅಭಿವೃದ್ಧಿಪಡಿಸಲಾಗಿದೆ. RBANMS ಕಾಲೇಜು ಭಾಗದಿಂದ ಫೈರ್ ಮತ್ತು ಇಮರ್ಜೆನ್ಸಿ ಸೇವಾ ಮುಖ್ಯ ಕಚೇರಿಯವರೆಗೆ ಜನರು ಪಾತ್‌ವೇ ಮೂಲಕ ನಿತ್ಯ ನಡೆಯಲು, ಜಾಗವಿಡಲು ಅವಕಾಶ ಸಿಗುತ್ತದೆ. ಶುದ್ಧೀಕರಣದ ಸಮಯದಲ್ಲಿ ಕೆಲವೊಂದು ಭಾಗಗಳಲ್ಲಿ ತಾತ್ಕಾಲಿಕ ತಡೆ ಇದ್ದರೂ, ಕಾರ್ಯ ಮುಗಿದ ಮೇಲೆ ಪಾತ್‌ವೇ ಎಲ್ಲರಿಗೂ ಮುಕ್ತವಾಗಲಿದೆ ಎಂದಿದ್ದಾರೆ.
ಇನ್ನು ಈ ಶುದ್ಧೀಕರಣ ಕೆಲಸದಿಂದ ಉಲ್ಸೂರಿನ ಐತಿಹಾಸಿಕ ಮಹತ್ವವನ್ನು ಉಳಿಸಿಕೊಳ್ಳಬಹುದು. ಹಾಗೂ ನೀರಿನ ಗುಣಮಟ್ಟವನ್ನು ಉತ್ತಮಗೊಳಿಸುವಲ್ಲಿ ಸಹಾಯಕವಾಗುತ್ತದೆ. ನಾಗರುಕರು ನಾಗರಿಕರು ಕೂಡ ನಿತ್ಯ ನಡಿಗೆ, ವಿಶ್ರಾಂತಿ ಮತ್ತು ಪ್ರಕೃತಿಯನ್ನು ಆನಂದಿಸಬಹುದು. ಮೀನುಬಾಲಗಳು ಬಿಡುಗಡೆ ಮಾಡುವ ಮೂಲಕ ಪರಿಸರ ಮತ್ತು ಜೀವ ವೈವಿಧ್ಯತೆಯನ್ನು ಉಳಿಸಲಾಗುವುದು.
ಈ ಶುದ್ಧೀಕರಣವು ಸರೋವರವನ್ನು ನಗರದ ಹಸಿರು ಹೃದಯ ಆಗಿ ಉಳಿಸುತ್ತದೆ. ಮೀನುಗಾರರು, ಸಾರ್ವಜನಿಕರು ಮತ್ತು ಪರಿಸರ ಕಾರ್ಯಕರ್ತರ ಸಹಕಾರದಿಂದ, ಉಲ್ಲ್ಸೂರಿನ ಸರೋವರವು ಮುಂದೆ ಶುದ್ಧ, ಹಸಿರು ಮತ್ತು ಜನಪ್ರಿಯ ಸ್ಥಳವಾಗಲಿದೆ.


Click it and Unblock the Notifications