ಸದ್ಯ ಫ್ಲಿಪ್‌ಕಾರ್ಟ್‌ನಲ್ಲಿ ಬಿಗ್ ಬಿಲಿಯನ್ ಡೇಲ್ ಸೇಲ್ ನಡೆಯುತ್ತಿದೆ. ಇದಕ್ಕಾಗಿ ಇ-ಕಾಮರ್ಸ್ ಕಂಪನಿ ಬೆಂಗಳೂರಿನಲ್ಲಿ ಹೊಸ ಅಭಿಯಾನ ಜಾರಿಗೆ ತಂದಿದೆ. ಪೀಕ್ ಟೈಮ್‌ನಲ್ಲಿ ಜಸ್ಟ್ ಒಂದು ರೂಪಾಯಿಗೆ ಆಟೊ ರಿಕ್ಷಾಗಳು ಲಭ್ಯ. ಇದು ಸಾಮಾಜಿಕ ತಾಣದಲ್ಲಿ ಎಲ್ಲರ ಚಿತ್ತ ಕದ್ದಿದೆ. ಇದಕ್ಕೆ ನೆಟ್ಟಿಗರು ತರಹೆವಾರಿ ಕಮೆಂಟ್ ಮಾಡಿದ್ದಾರೆ.
ಫ್ಲಿಪ್‌ಕಾರ್ಟ್ ಯುಪಿಐ ಅಭಿಯಾನವು ಬೆಂಗಳೂರಿನ ಪ್ರಯಾಣವನ್ನು ಸುಗಮಗೊಳಿಸುವುದಾಗಿದೆ. ಈ ಅಭಿಯಾನ ಪೀಕ್ ಆಫೀಸ್ ಟೈಮಿಂಗ್‌ನಲ್ಲಿ ಆಗುವ ತೊಂದರೆ ತಪ್ಪಿಸುತ್ತದೆ. ಅಲ್ಲದೆ ಆಟೊ ರಿಕ್ಷಾ ಚಾಲಕರಲ್ಲಿ ಡಿಜಿಟಿಲ್ ಪೇಮೆಂಟ್ ಜಾಗೃತಿ ಮೂಡಿಸುವುದಾಗಿದೆ.

ಒಂದು ರೂಪಾಯಿಗೆ ಆಟೊ ಅಭಿಯಾನ
ಈ ಅಭಿಯಾನವನ್ನು ಫ್ಲಿಪ್‌ಕಾರ್ಟ್ ಕಂಪನಿ ಆಯ್ದ ಸ್ಥಳಗಳಲ್ಲಿ ಸದ್ಯ ಚಾಲನೆ ನೀಡಿದೆ. ಅಲ್ಲದೆ ಸ್ಥಳೀಯ ಆಟೊ ಚಾಲಕರಿಗೆ ಫ್ಲಿಪ್ ಕಾರ್ಟ್ ಯುಪಿಐ ಪಾವತಿ ಸೇವೆ ನೀಡಿದೆ. ಇದು ಗ್ರಾಹಕರ ಜೇಬಿನ ಭಾರವನ್ನು ಕಡಿಮೆ ಮಾಡುವುದಲ್ಲದೆ, ದಿನನಿತ್ಯದ ವಹಿವಾಟಿಗೆ ಯುಪಿಐ ಬಳಕೆಯನ್ನು ಉತ್ತೇಜಿಸುವುದಾಗಿದೆ ಎಂದು ಫ್ಲಿಪ್‌ಕಾರ್ಟ್ ಹೇಳಿಕೊಂಡಿದೆ.
ಬೆಂಗಳೂರಿನ ಸಾಮಾನ್ಯ ಸಮಸ್ಯೆಗಳತ್ತ ಫ್ಲಿಪ್‌ಕಾರ್ಟ್ ಚಿತ್ತ ನೆಟ್ಟಿದೆ. ಅದರ ಪರಿಣಾಮ ಆಟೊ ಹುಡುಕುವ ತೊಂದರೆ ಹಾಗೂ ಚಿಲ್ಲರೆ ಇಲ್ಲದೆ ಪರದಾಟ ನಡೆಸುವುದನ್ನು ತಪ್ಪಿಸಬಹುದಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಕಂಪನಿಯ ಕಾರ್ಯಕ್ಕೆ ಶ್ಲಾಘನೆ
ಈ ಅಭಿಯಾನ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಯಿತು. ಜನರು ಇದಕ್ಕೆ ಭಿನ್ನ ವಿಭಿನ್ನ ಕಮೆಂಟ್‌ಗಳನ್ನು ಮಾಡಿದರು. ಕೆಲವು ಜನರು ಈ ಅಭಿಯಾವನ್ನು ಶ್ಲಾಘಿಸಿದರೆ, ಇನ್ನು ಕೆಲವರೂ ಬೆಂಗಳೂರು ಹೊರಗಿನ ಜನರು ಏನು ಮಾಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ಒಬ್ಬ ಬಳಕೆದಾರ ಆಟೊ ರಿಕ್ಷಾ ಕಾಯುವ ಕಿರಿಕಿರಿ ಇಲ್ಲ. ಇದು ಕಂಪನಿಯ ಪ್ರಚಾರದ ಕಾರ್ಯ ಎಂದು ಬರೆದುಕೊಂಡಿದ್ದಾರೆ.
ತನ್ನ ಪ್ರೇಯಸಿಗೆ ಪ್ರಪೋಸ್ ಮಾಡಿದ ಮೇಲೆ ಅವಳ ಉತ್ತರಕ್ಕಾಗಿ ಕಾಯುವ ರೀತಿ ಕಾಣುತ್ತಿದೆ, ಒಂದು ರೂಪಾಯಿಗೆ ಆಟೊ ಅಭಿಯಾನ. ಆದರೆ ಈ ಅಭಿಯಾನವನ್ನು ಫ್ಲಿಪ್ ಕಾರ್ಟ್ ಚೆನ್ನಾಗಿ ನಡೆಸಿದ್ದು, ಗೇಮ್ ಚೆಂಜಿಂಗ್ ಆಗಿದೆ ಎಂದು ಇನ್ನೊಬ್ಬ ಬಳಕೆದಾರ ಬರೆದಿದ್ದಾರೆ. ಬೆಂಗಳೂರಿನ ನಿವಾಸಿಗಳಲ್ಲದವರು ಏನು ಮಾಡಬೇಕು ಎಂದು ಇನ್ನೊಬ್ಬರು ಕಂಪನಿಗೆ ಕೇಳಿದ್ದಾರೆ.
ಒಂದು ರೂಪಾಯಿ ನೋಡಿ ವರ್ಷಗಳೇ ಕಳೆದಿದ್ದವು
ಕಂಪನಿಯ ಅಭಿಯಾನಕ್ಕೆ ಪ್ರತಿಕ್ರಿಯಿಸಿರುವ ಇನ್ನೊಬ್ಬ ಬಳಕೆದಾರ, 'ನಾನು ಇಂದು 9 ರಿಂದ 11ರ ಸಮಯದಲ್ಲಿ ಒಂದು ರೂಪಾಯಿಗೆ ಆಟೊ ಪಡೆದೆ. ನಾನು ಒಂದು ರೂಪಾಯಿ ಕಾಯಿನ್ ನೋಡಿ ವರ್ಷಗಳೇ ಕಳೆದಿದ್ದವು ಎಂದು ತಿಳಿಸಿದ್ದಾರೆ.
ಸದ್ಯ ಫ್ಲಿಪ್ ಕಾರ್ಟ್‌ನಲ್ಲಿ ಬಿಗ್ ಬಿಲಿಯನ್ ಡೇ ಫೆಸ್ಟಿವಲ್ ನಡೆಯುತ್ತಿದೆ. ಈ ಸಮಯದಲ್ಲಿ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ವಸ್ತುಗಳನ್ನು ನೀಡಲು ಕಂಪನಿ ಮುಂದಾಗಿದೆ. ದುಬಾರಿ ಫೋನ್‌ಗಳನ್ನು ಕೊಳ್ಳುವ ಆಸೆ ಇರುವ ಜನರು, ಈ ಸೇಲ್‌ನಲ್ಲಿ ಆ ಫೋನ್‌ಗಳನ್ನು ಕಡಿಮೆ ದರದಲ್ಲಿ ಖರೀದಿಸಬಹುದಾಗಿದೆ.


Click it and Unblock the Notifications