BSNLನಿಂದ ಜಿಯೋ, ಏರ್‌ಟೆಲ್ ಗೆ ಮಾಸ್ಟರ್‌ಸ್ಟ್ರೋಕ್: ಏನಿದು ಸಿಮ್ ಇಲ್ಲದೆ ಕರೆ ಮಾಡುವ ತಂತ್ರಜ್ಞಾನ?

ಭಾರತದಲ್ಲಿ ಜಿಯೋ ಆರಂಭಕ್ಕೂ ಮುನ್ನ ಹೆಚ್ಚಿನ ಜನತೆ ಸರ್ಕಾರದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಮೂಲಕವೇ ಸಂಪರ್ಕ ಪಡೆಯುತ್ತಿದ್ದ ಸಂಗತಿ ಬಹುತೇಕ ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಏರ್‌ಟೆಲ್‌ ಅದರಲ್ಲೂ 2014ರಲ್ಲಿ ಜಿಯೋ ಮಾರುಕಟ್ಟೆಗೆ ದಾಪುಗಾಲಿಟ್ಟ ಬಳಿಕ ಬಿಎಸ್‌ಎನ್‌ಎಲ್‌ ಎಲ್ಲಿಗೆ ಹೋಯಿತು ಎಂಬ ಪ್ರಶ್ನೆ ಬಹುತೇಕರಲ್ಲಿ ಮೂಡಿತ್ತು. ಹತ್ತು ವರ್ಷಗಳಿಂದ ಇಂಟರ್‌ನೆಟ್‌ ಡೇಟಾ ಪೂರೈಕೆಯಲ್ಲಿ ದೇಶದ ಪ್ರಮುಖ ಸಂಸ್ಥೆಗಳಲ್ಲಿ ಒಂದಾಗಿದ್ದ ಜಿಯೋಗೆ ಇದೀಗ 2024ರಲ್ಲಿ ಪ್ರಬಲ ಸವಾಲನ್ನು ಒಡ್ಡಲು BSNL ಮುಂದಾಗಿದೆ.

ಏನಿದು BSNL ಹೊಸ ಯೋಜನೆ?

ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಜಾಗತಿಕ ಉಪಗ್ರಹ ಸಂವಹನ ಸಂಸ್ಥೆ Viasat ಸಹಯೋಗದೊಂದಿಗೆ ಅದರ ಡೈರೆಕ್ಟ್-ಟು-ಡಿವೈಸ್ (D2D) ತಂತ್ರಜ್ಞಾನದ ಪ್ರಯೋಗಗಳನ್ನು ಪೂರ್ಣಗೊಳಿಸಿದೆ. ಈ ಮೂಲಕ ಭಾರತದಲ್ಲಿ ಮತ್ತೊಮ್ಮೆ ಸಂಪರ್ಕ ಕ್ರಾಂತಿಯಲ್ಲಿ ತನ್ನ ಪಾಲನ್ನು ವಿಸ್ತರಿಸಲು BSNL ಮುಂದಾಗಿದೆ. ಹೊಸ ತಂತ್ರಜ್ಞಾನವು ಆಂಡ್ರಾಯ್ಡ್ ಮತ್ತು ಐಒಎಸ್ (ಆಪಲ್‌ ಫೋನ್)‌ ಸ್ಮಾರ್ಟ್‌ಫೋನ್‌ಗಳು, ಸ್ಮಾರ್ಟ್‌ವಾಚ್‌ಗಳು ಮತ್ತು ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರ ಸ್ಮಾರ್ಟ್ ಸಾಧನಗಳೊಂದಿಗೆ ಹೊಂದಿಕೊಳ್ಳುತ್ತದೆ ಎಂಬ ವಿಚಾರವನ್ನು BSNL ಬಳಕೆದಾರರು ಗಮನಿಸಬೇಕಿದೆ.

BSNLನಿಂದ ಜಿಯೋ, ಏರ್‌ಟೆಲ್ ಗೆ ಮಾಸ್ಟರ್‌ಸ್ಟ್ರೋಕ್

ಅಲ್ಲದೆ ದೂರದ ಪ್ರದೇಶಗಳಲ್ಲಿ ಅಥವಾ ನೆಟ್‌ವರ್ಕ್ ಸ್ಥಗಿತದ ಸಮಯದಲ್ಲಿಯೂ ತಡೆರಹಿತ ಇಂಟರ್‌ನೆಟ್‌ ಸಂಪರ್ಕ ಒದಗಿಸುವುದು ಹೊಸ ತಂತ್ರಜ್ಞಾನದ ಮುಖ್ಯ ಗುರಿಯಾಗಿದೆ. ಸಹಜವಾಗಿಯೇ ಇದು ರಿಲಯನ್ಸ್‌ ಜಿಯೋಗೆ ಬಹುದೊಡ್ಡ ಸವಾಲು ಒಡ್ಡಲಿದೆ ಎಂಬುದು ಎಲ್ಲರ ಅಭಿಪ್ರಾಯ.

ವಿಶ್ವಾಸಾರ್ಹ ಸಂಪರ್ಕ ಒದಗಿಸಲು ಮುಂದಾದ BSNL

ಡೈರೆಕ್ಟ್-ಟು-ಡಿವೈಸ್ ಸಂಪರ್ಕದ ಮಾರುಕಟ್ಟೆಗೆ ಬಂದ ಬಳಿಕ ಮೊಬೈಲ್ ಫೋನ್‌ಗಳು, ಸ್ಮಾರ್ಟ್‌ವಾಚ್‌ಗಳು ಮತ್ತು ಕಾರುಗಳ ಬಳಕೆದಾರರು ನೇರವಾಗಿ ಉಪಗ್ರಹ ನೆಟ್‌ವರ್ಕ್‌ಗಳ ಮೂಲಕ ಸಂಪರ್ಕಿಸಬಹುದು. ಇನ್ನು Viasat ಪ್ರಕಾರ, ಈ ತಂತ್ರಜ್ಞಾನವನ್ನು ವೈಯಕ್ತಿಕ ಮತ್ತು ಸಾಧನ ಸಂವಹನವನ್ನು ಬೆಂಬಲಿಸಲು ವಿನ್ಯಾಸಗೊಳಿಸಲಾಗಿದೆ. ಇದು ಸ್ಥಳವನ್ನು ಲೆಕ್ಕಿಸದೆ ವಿಶ್ವಾಸಾರ್ಹ ಸಂಪರ್ಕವನ್ನು ಒದಗಿಸುತ್ತದೆ ಎಂದು ತಿಳಿಸಿದೆ. BSNL ನ ಈ ಕ್ರಾಂತಿಕಾರಕ ನಡೆಯಿಂದ ಬಳಕೆದಾರರಿಗೆ, ವಿಶೇಷವಾಗಿ ದೂರದ ಮತ್ತು ಕಡಿಮೆ ಪ್ರದೇಶಗಳಲ್ಲಿ ಹೆಚ್ಚಿನ ವ್ಯಾಪ್ತಿ ಮತ್ತು ವಿಶ್ವಾಸಾರ್ಹ ಸಂವಹನವನ್ನು ತರುವ ನಿರೀಕ್ಷೆಯಿದೆ.

ಉಪಗ್ರಹ ಸಂವಹನವನ್ನು ಆಧರಿಸಿ, ಡೈರೆಕ್ಟ್-ಟು-ಡಿವೈಸ್ ಸೇವೆಯು ಮೊಬೈಲ್ ಟವರ್‌ಗಳು ಅಥವಾ ವೈರ್ಡ್ ಸಂಪರ್ಕಗಳ ಅಗತ್ಯವಿಲ್ಲದೇ ನೇರವಾಗಿ ಸಂಪರ್ಕಿಸಲು ಸಾಧನಗಳನ್ನು ಸಕ್ರಿಯಗೊಳಿಸುತ್ತದೆ. ಉಪಗ್ರಹ ಫೋನ್‌ಗಳಂತೆಯೇ ಈ ಹೊಸ ತಂತ್ರಜ್ಞಾನವು ಸ್ಮಾರ್ಟ್‌ಫೋನ್‌ಗಳು, ಸ್ಮಾರ್ಟ್‌ವಾಚ್‌ಗಳು ಮತ್ತು ಇತರ ಸ್ಮಾರ್ಟ್ ಗ್ಯಾಜೆಟ್‌ಗಳ ನಡುವೆ ಸಂವಹನವನ್ನು ಸುಗಮಗೊಳಿಸುತ್ತದೆ.

ಪ್ರಾಯೋಗಿಕ ಹಂತ

ಇನ್ನು BSNL ಹಾಗೂ Viasat ಪ್ರಾಯೋಗಿಕ ಹಂತವಾಗಿ Non-Terrestrial Network (NTN) ಬಳಸಿಕೊಂಡು ವಾಣಿಜ್ಯ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಯಶಸ್ವಿಯಾಗಿ ದ್ವಿಮುಖ ಸಂದೇಶ (ಟು ವ್ಹೇ ಮೆಸೆಜಿಂಗ್‌) ಹಾಗೂ ಎಸ್‌ಒಎಸ್‌ ಸಂದೇಶಗಳನ್ನು ಕಳುಹಿಸಿದೆ. ಈ ಪ್ರಾಯೋಗಿಕ ಪ್ರಯೋಗದಲ್ಲಿ 36,000 ಕಿಲೋಮೀಟರ್ ದೂರದಲ್ಲಿರುವ ಉಪಗ್ರಹವನ್ನು ಬಳಸಿಕೊಂಡು ಫೋನ್ ಕರೆ ಮಾಡುವುದನ್ನು ಒಳಗೊಂಡಿತ್ತು. ಹಾಗಾಗಿ ಇದು ತಡೆರಹಿತ ಸಂವಹನದ ಕಡೆಗೆ ಮಹತ್ವದ ಹೆಜ್ಜೆಯನ್ನು ಗುರುತಿಸುತ್ತದೆ.

BSNL ಹಾಗೂ Viasat ಜುಗಲ್‌ಬಂಧಿ ಯಶಸ್ವಿಯಾದೀತೆ?

ಒಂದು ಕಾಲದಲ್ಲಿ ಭಾರತದಲ್ಲಿ ಮನೆಮಾತಾಗಿದ್ದ ಬಿಎಸ್‌ಎನ್‌ಎಲ್‌ ಒಂದು ಹಂತದಲ್ಲಿ ಸಂಪೂರ್ಣ ನೆಲಕಚ್ಚಿ, ಅವಸಾನದ ಅಂಚಿನಲ್ಲಿತ್ತು. ಆದರೆ ಕೆಲವು ತಿಂಗಳುಗಳಲ್ಲಿ ಆಕರ್ಷಕ ಯೋಜನೆಗಳನ್ನು ಪ್ರಕಟಿಸುವ ಮೂಲಕ ಮತ್ತೆ ಸಂಸ್ಥೆ ಮುನ್ನೆಲೆಗೆ ಬಂದಿದೆ. ಸದ್ಯ ಹೊಸ ರೀತಿಯ ತಂತ್ರಜ್ಞಾನವನ್ನು ಪರಿಚಯಿಸಿದ್ದು, ಮತ್ತೊಮ್ಮೆ ಗ್ರಾಹಕರ ವಿಶ್ವಾಸವನ್ನು ಪಡೆಯಲು ಮುಂದಾಗಿದೆ. ಅದರಲ್ಲೂ ಜಿಯೋ, ಏರ್‌ಟೆಲ್‌ ಸೇರಿದಂತೆ ಹಲವು ಕಂಪೆನಿಗಳು ತನ್ನ ಯೋಜನೆಗಳ ಬೆಲೆಯನ್ನು ತೀರಾ ಏರಿಸಿರುವುದು BSNL ಗೆ ಕೊಂಚ ಮುನ್ನಡೆ ಒದಗಿಸಿದಂತಾಗಿದೆ.

ಒಂದು ವೇಳೆ BSNL ದೇಶಾದ್ಯಂತ ತನ್ನ ನೆಟ್ವರ್ಕ್‌ ಸಮಸ್ಯೆಯನ್ನು ಸರಿಪಡಿಸಿ, ಹಳ್ಳಿ ಹಳ್ಳಿಯಲ್ಲೂ ನೆಟ್ವರ್ಕ್‌ ವಿಸ್ತರಿಸಿದರೆ ಸಹಜವಾಗಿಯೇ ಇದರಿಂದ ಇತರೆ ಕಂಪೆನಿಗಳಿಗೆ ನಡುಕ ಮೂಡಲಿರುವುದು ಬಹುತೇಕ ಖಚತ ಎನ್ನಬಹುದು. ಸದ್ಯ ಕಾಲ ಬದಲಾಗುತ್ತಿದ್ದು, ತಂತ್ರಜ್ಞಾನದಲ್ಲಿ ಕೂಡ ಮಹತ್ತರ ಬದಲಾವಣೆ ಕಾಣುತ್ತಿದೆ. ಉಪಗ್ರಹ ಸಂವಹನವನ್ನು ಆಧರಿಸಿ, ಡೈರೆಕ್ಟ್-ಟು-ಡಿವೈಸ್ ಸೇವೆಯು ಮೊಬೈಲ್ ಟವರ್‌ಗಳು ಅಥವಾ ವೈರ್ಡ್ ಸಂಪರ್ಕಗಳ ಅಗತ್ಯವಿಲ್ಲದೇ ನೇರವಾಗಿ ಸಂಪರ್ಕಿಸಲು ಸಾಧನಗಳನ್ನು ಸಕ್ರಿಯಗೊಳಿಸುವ ಯೋಜನೆಯಿಂದ ದೇಶದಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ತರಲಿದೆ ಎಂಬುದು ತಂತ್ರಜ್ಞರ ಅಭಿಮತ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+