ನವದೆಹಲಿ, ಜುಲೈ 24: ಕೇಂದ್ರ ಬಜೆಟ್ ನಂತರ ಎಲ್ಲರಿಗೂ ಕಾಡುತ್ತಿರುವುದು ತೆರಿಗೆ ಪದ್ಧತಿಯಲ್ಲಾಗಿರುವ ಬದಲಾವಣೆ. ಈ ಬಜೆಟ್ ಪರ ಮತ್ತು ವಿರೋಧ ಚರ್ಚೆಯಾಗುತ್ತಿದೆ. ಇದೇ ಸಮಯದಲ್ಲಿ ವೇತನ ಪಡೆಯುವ ಉದ್ಯೋಗಿಗಳು ಸಾಕಷ್ಟು ತಲೆಕೆಡಿಸಿಕೊಳ್ಳುತ್ತಿದ್ದಾರೆ. ಈ ಬಜೆಟ್‌ನಿಂದ ನಮಗೆ ಒಳಿತಾಗಿರುವುದೇ? ಒಂದು ಕಡೆ ಕೊಟ್ಟು ಇನ್ನೊಂದು ಕಡೆಯಿಂದ ವಾಪಸ್ ಪಡೆಯಲಾಗಿದೆಯೇ? ಇದೆಲ್ಲದಕ್ಕೆ ಉತ್ತರ ಕಂಡುಕೊಳ್ಳಬೇಕಿದೆ.
ಕೇಂದ್ರ ಸರ್ಕಾರ ಹೊಸ ತೆರಿಗೆ ಪದ್ಧತಿಯನ್ನು ಪ್ರಚುರಪಡಿಸಲು ಹೆಚ್ಚಿನ ಪ್ರಯತ್ನ ಮಾಡಿಕೊಂಡು ಬಂದಿರುವುದು ಗೊತ್ತಾಗುತ್ತಿದೆ. ಬಜೆಟ್‌ನಲ್ಲಿ ಘೋಷಿಸಲಾದ ಸ್ಲಾಬ್ ಲೆಕ್ಕಾಚಾರದಲ್ಲಿ ಬದಲಾವಣೆ ಕ್ರಮವು ದೇಶದ 4 ಕೋಟಿಯಷ್ಟು ವೇತನ ಪಡೆಯುವ ವ್ಯಕ್ತಿಗಳು ಮತ್ತು ಪಿಂಚಣಿದಾರರಿಗೆ ಪ್ರಯೋಜನ ನೀಡುತ್ತದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಇಂದಿನ ಬಜೆಟ್ ನಲ್ಲಿ ನಿರ್ಮಲಾ ಸೀತಾರಾಮನ್ ಹೇಳಿರುವ ತೆರಿಗೆ ಲೆಕ್ಕಾಚಾರ ಹೀಗಿದೆ!
• 3 ಲಕ್ಷ ರೂಪಾಯಿಗೂ ಕಡಿಮೆ ಆದಾಯಕ್ಕೆ ಯಾವುದೇ ತೆರಿಗೆ ಇಲ್ಲ.
• 3 ಲಕ್ಷ ಮೇಲ್ಪಟ್ಟು 7 ಲಕ್ಷ ವಾರ್ಷಿಕ ಆದಾಯ ಹೊಂದಿರುವವರು ಶೇಕಡ 5 ತೆರಿಗೆ
• 7,00,001 ರಿಂದ 10,00,000 ರೂ.ವರೆಗೆ ಶೇಕಡ 10 ತೆರಿಗೆ
• 10,00,001 ರಿಂದ 12,00,000 ರೂ.ವರೆಗೆ ಶೇಕಡ 15 ತೆರಿಗೆ
• 12 ಲಕ್ಷಕ್ಕಿಂತ ಹೆಚ್ಚು ವಾರ್ಷಿಕ ಆದಾಯ ಹೊಂದಿರುವವರು ಶೇಕಡ 20 ತೆರಿಗೆ ಪಾವತಿಸಬೇಕು.
• 15 ಲಕ್ಷ ರೂ ಗೆ ಮೇಲ್ಪಟ್ಟು ವಾರ್ಷಿಕ ಆದಾಯ ಗಳಿಸುವವರಿಗೆ ಶೇ. 30 ರಷ್ಟು ತೆರಿಗೆ
ಗಮನಿಸಬೇಕಾಗಿದ್ದೇನು?
ಎಲ್ಲದಕ್ಕಿಂತ ಮುಖ್ಯವಾಗಿ ನಾವು ಗಮನಿಸಬೇಕಾದ ವಿಚಾರ ಇಲ್ಲಿದೆ. ಹಳೆ ತೆರಿಗೆ ಪದ್ಧತಿ ಹಾಗೆ ಇದೆ ಅಲ್ಲಿ ಯಾವ ಬದಲಾವಣೆಯನ್ನು ಮಾಡಲಾಗಿಲ್ಲ. ಆದಾಯ ತೆರಿಗೆ ಮಿತಿ 2.5 ಲಕ್ಷ ರೂ. ಇದೆ. 2.5 ಲಕ್ಷದಿಂದ 5 ಲಕ್ಷದವರೆಗೆ ಶೇ. 5 ರಷ್ಟು ತೆರಿಗೆ, 5 ರಿಂದ 10 ಲಕ್ಷ ಕ್ಕೆ ಶೇ. 20 ರಷ್ಟು ತೆರಿಗೆ ನಿಮ್ಮ ಆದಾಯ 10 ಲಕ್ಷ ಮೇಲ್ಪಟ್ಟಿದ್ದರೆ ಶೇ. 30 ರಷ್ಟು ತೆರಿಗೆ.. ಈ ಪೊದ್ಧತಿಯಲ್ಲಿ ನೀವು ಎಚ್ಆರ್ ಎ, ಹೂಡಿಕೆಗೆ ಸಮಬಂಧಿಸಿ ತೆರಿಗೆ ವಿನಾಯಿತಿ ಪಡೆದುಕೊಳ್ಳಲು ಈಗಲೂ ಸಾಧ್ಯವಿದೆ.
ಈ ದಿನ ನಿರ್ಮಲಾ ಸೀತಾರಾಮನ್ ಮಮಡನೆ ಮಾಡಿರುವ ಬಜೆಟ್‌ನಲ್ಲಿ ಹೊಸ ತೆರಿಗೆ ಪದ್ಧತಿಯಲ್ಲಿ ಕೆಲವು ಸಣ್ಣ ಬದಲಾವಣೆ ಮಾಡಿದ್ದಾರೆ.
ವೈಯಕ್ತಿಕ ಆದಾಯ ತೆರಿಗೆ ಪಾವತಿದಾರರಿಗೆ ತೆರಿಗೆ ಆಡಳಿತವನ್ನು ಸರಳಗೊಳಿಸುವ ಭರವಸೆ ಸಹ ನಿರ್ಮಲಾ ನೀಡಿದ್ದಾರೆ. 3 ರಿಂದ 6 ಲಕ್ಷಕ್ಕೆ ಇದ್ದ ಶೇ. 5 ರ ತೆರಿಗೆಯನ್ನು 3 ರಿಂದ 7 ಲಕ್ಷಕ್ಕೆ ಅಂದರೆ ಒಂದು ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಇದರ ಜತೆಗೆ 6 ರಿಂದ 9 ಲಕ್ಷಕ್ಕೆ ಇದ್ದ ಶೇ. 10 ರಷ್ಟು ತೆರಿಗೆಯನ್ನು 7 ರಿಂದ 10 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. 9 ರಿಂದ 12 ಲಕ್ಷಕ್ಕೆ ಇದ್ದ ಏ. 15 ರಷ್ಟು ತೆರಿಗೆಯನ್ನು 10 ರಿಂದ 12 ಲಕ್ಷಕ್ಕೆ ಸೀಮಿತ ಮಾಡಲಾಗಿದೆ.
ಕೇಂದ್ರ ಸರ್ಕಾರ ತೆರಿಗೆ ಪದ್ಧತಿಯಲ್ಲಿ ದೊಡ್ಡ ರಿಲೀಫ್ ನೀಡುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಸಣ್ಣ ಪುಟ್ಟ ಬದಲಾವಣೆ ಮಾಡಿದೆ. ಇನ್ನು ಮ್ಯೂಚುವಲ್ ಫಂಡ ಮಾರಾಟಕ್ಕೆ ಸಂಬಂಧಿಸಿ, ಶಾರ್ಟ್ ಟರ್ಮ್ ಕ್ಯಾಪಿಟಲ್ ಗೇನ್ ಮತ್ತು ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ ಗಳಿಗೂ ತೆರಿಗೆ ಹೆಚ್ಚಾಗಿದೆ.


Click it and Unblock the Notifications