ಈ ಬಾರಿ ಬಜೆಟ್‌ನಲ್ಲಿ ಕ್ಯಾನ್ಸರ್ ರೋಗಿಗಳಿಗಾಗಿ ದೊಡ್ಡ ಘೋಷಣೆಯನ್ನ ಮಾಡಲಾಗಿದೆ. ದೇಶದಲ್ಲಿ ಕ್ಯಾನ್ಸರ್ ರೋಗಿಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಕೇಂದ್ರ ಸರ್ಕಾರ ಮಹತ್ವದ ಬದಲಾವಣೆಯನ್ನ ತರ್ತಿದೆ. ಈ ವರ್ಷ ಕ್ಯಾನ್ಸರ್ ಔಷಧಿಗಳ ದರಗಳು ಇಳಿಕೆಯಾಗಿವೆ. ಹಾಗೆ ಕ್ಯಾನ್ಸರ್ ಸೇರಿದಂತೆ ಇತರೆ ಗಂಭಿರ ಕಯಿಲೆಗಳಲ್ಲಿ ಬಳಸುವ 36 ಔಷಧಿಗಳ ಮೇಲಿನ ಮೂಲ ಕಸ್ಟಮ್ ಸುಂಕದಿಂದ ವಿನಾಯಿತಿ ನೀಡಲಾಗುವುದು.
ಇದರ ಜೊತೆಗೆ ಪ್ರತೀ ಜಿಲ್ಲಾಸ್ಪತ್ರೆಗಳಲ್ಲಿ ಡೇಕೇರ್ ಕ್ಯಾನ್ಸರ್ ಕೇಂದ್ರಗಳನ್ನ ಸ್ಥಾಪನೆ ಮಾಡುವುದಾಗಿ ಈ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. ಇದರಿಂದಾಗಿ ಜನರು ಕ್ಯಾನ್ಸರ್ ಬಗ್ಗೆ ಜಾಗೃತಿ ವಹಿಸುತ್ತಾರೆ. ಹಾಗೆ ಪ್ರತೀಒಬ್ಬ ರೋಗಿಗೂ ಕೂಡ ಮೊದಲ ಹಂತದಲ್ಲೇ ಸರಿಯಾದ ಚಿಕಿತ್ಸೆ ಸಿಗುತ್ತದೆ. ಇತ್ತ ಆರು ಜೀವರಕ್ಷಕ ಔಷಧಿಗಳ ಮೇಲೆ ಶೇಕಡಾ 5 ರಷ್ಟು ಕಸ್ಟಮ್ಸ್ ಸುಂಕವನ್ನು ಕಡಿತಗೊಳಿಸಲಿದೆ.

ಕ್ಯಾನ್ಸರ್ ರೋಗಿಗಳಿಗೆ ಸಹಾಯವಾಗಲಿ ಎಂಬ ನಟ್ಟಿನಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಜಿಲ್ಲಾಸ್ಪತ್ರೆಗಳಲ್ಲಿ ಡೇಕೇರ್ ಕ್ಯಾನ್ಸರ್ ಕೇಂದ್ರಗಳನ್ನ ಸ್ಥಾಪಸಲಿದೆ. ಇನ್ನು ಇವುಗಳಲ್ಲಿ 200 ಕೇಂದ್ರಗಳನ್ನ ಈ ವರ್ಷದಲ್ಲಿಯೇ ಸ್ಥಾಪಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಕ್ಯಾನ್ಸರ್ ಕೇಂದ್ರಗಳ ಉಪಯೋಗಗಳೇನು?
ಈ ಕ್ಯಾನ್ಸರ್ ಕೇಂದ್ರಗಳನ್ನ ಸ್ಥಾಪಿಸುವುದರಿಂದ ಗ್ರಾಮೀಣ ಭಾಗದ ರೋಗಿಗಳಿಗೆ ಸಹಾಯವಾಗಲಿದೆ. ಇದರಿಂದ ರೋಗಗಳು ಬೇರೆ ನಗರಗಳಿಗೆ ಹೋಗದೇ ತಾವಿರುವ ಪ್ರದೇಶಗಳಲ್ಲಿ ಉತ್ತಮ ಚಿಕಿತ್ಸೆಯನ್ನ ಪಡೆಯಬಹುದು. ಇದರಿಂದಾಗಿ ಕ್ಯಾನ್ಸರ್ ಕಾಯಿಲೆ ಗುಣ ಲಕ್ಷಣಗಳು ಕಂಡ ಕೂಡಲೇ ಚಿಕಿತ್ಸೆಯನ್ನ ಪಡೆಯಬಹುದು. ಈ ಮೂಲಕ ಕ್ಯಾನ್ಸರ್ ರೋಗಿಗಳು ಚಿಕಿತ್ಸೆಯಿಂದ ವಂಚಿತರಾಗುವುದನ್ನು ತಪ್ಪಿಸಬಹುದು.
ಈ ಡೇಕೇರ್ ಕೇಂದ್ರಗಳು ಜನರಿಗೆ ಹೆಚ್ಚು ಸಹಾಯವಾಗಲಿದೆ. ರೋಗಿಗಳು ದಿನನಿತ್ಯ ತಮ್ಮ ಆರೋಗ್ಯವನ್ನ ಪರಿಶೀಲಿಸಬಹುದು. ಇದರಿಂದ ರೋಗಿಗಳಿಗೆ ಹೆಚ್ಚು ಮುನ್ನೆಚ್ಚರಿಕೆ ವಹಿಸಲು ಸಾಧ್ಯವಾಗುತ್ತದೆ. ಇವುಗಳಿಂದ ರೋಗಿಗಳು ಆಸ್ಪತ್ರೆಗೆ ಹೋಗಿ ಕಾಯುವ ಅಗತ್ಯ ಇರುವುದಿಲ್ಲ. ತ್ವರಿತವಾಗಿ ಚಿಕಿತ್ಸಯನ್ನ ಪಡೆಯಬಹುದು.
ಈಗಂತೂ ಎಲ್ಲಾ ಚಿಕಿತ್ಸೆಯ ದರಗಳು ಹೆಚ್ಚಾಗಿವೆ. ಇದನ್ನು ಬಡವು ಭರಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಈ ಡೇಕೇರ್‌ಗಳಿಂದ ರೋಗಿಗಳು ಸರಿಯಾದ ಸಮಯಕ್ಕೆ ಚಿಕಿತ್ಸೆಯನ್ನ ಪಡೆಯಬಹುದು. ಈ ಮೂಲಕ ಅವರ ಚಿಕಿತ್ಸೆಯ ವೆಚ್ಚಗಳು ಕೂಡ ಕಡಿಮೆಯಾಗಲಿವೆ.
ವೈದ್ಯಕೀಯ ಪ್ರವಾಸೋದ್ಯಮವನ್ನ ಉತ್ತೇಜಿಸುವುದಕ್ಕಾಗಿ ಖಾಸಗಿ ವಲಯದ ಸಹಭಾಗಿತ್ವದಲ್ಲಿ ಸಾಮರ್ಥ್ಯ ವೃದ್ಧಿ ಮತ್ತು ಸುಲಭ ವೀಸಾ ಮಾನದಂಡಗಳೊಂದಿಗೆ 'ಹೀಲ್ ಇನ್ ಇಂಡಿಯಾ' ಉಪಕ್ರಮವನ್ನು ಸರ್ಕಾರ ಮುನ್ನೆಡೆಸಲಿದೆ.
ಇತ್ತ ವೈದ್ಯಕೀಯ ಕಾಲೇಜುಗಳಲ್ಲಿ ಸೀಟುಗಳನ್ನ ಹೆಚ್ಚಿಸುವುದಾಗಿ ನಿರ್ಮಲಾ ಸೀಾರಾಮನ್ ಅವರು ತಿಳಸಿದ್ದಾರೆ. ಇದರಿಂದ ವೈದ್ಯಕೀಯ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಸಹಾಯವಾಗಲಿದೆ. ಮುಂದಿನ ಐದು ವರ್ಷಗಳಲ್ಲಿ 75,000 ಸೀಟುಗಳನ್ನ ಸೇರಿಸುವ ಗುರಿಯನ್ನ ಸರ್ಕಾರ ಹೊಂದಿದೆ. ಹಾಗೆ ಮುಂದಿನ ವರ್ಷ ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳಲ್ಲಿ ಹೆಚ್ಚುವರಿ 10,000 ಸೀಟುಗಳನ್ನು ಸೇರಿಸಲಿದೆ.
ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ (ಪಿಎಂ-ಜೆಎವೈ) ಅಡಿಯಲ್ಲಿ ಕಾರ್ಮಿಕರಿಗೆ ಆರೋಗ್ಯ ಸೌಲಭ್ಯಗಳನ್ನ ನೀಡಲಿದೆ. ಇನ್ನು ಈ ಯೋಜನೆಯ ಮೂಲಕ ಸುಮಾರು 1 ಕೋಟಿ ಕಾರ್ಮಿಕರಿಗೆ ಸಹಾಯ ದೊರೆಯುವ ಸಾಧ್ಯತೆಯಿದೆ.
ರೋಗಿಳ ಆರ್ಥಿಕ ಹೊರೆಯನ್ನ ಕಡಿಮೆ ಮಾಡುವ ನಿಟ್ಟಿನಲ್ಲಿ, ಕಳೆದ ವರ್ಷ ಕೇಂದ್ರ ಬಜೆಟ್ 2024ರ ವೇಳೆ ಮೂರು ಕ್ಯಾನ್ಸರ್ ಔಷಧಿಗಳ ಕಸ್ಟಮ್ ಸುಂಕದ ಮೇಲೆ ವಿನಾಯಿತಿಯನ್ನ ನೀಡಿದ್ದರು. ಅದೇ ರೀತಿ ಈ ಬಾರಿ ಕೂಡ ಕ್ಯಾನ್ಸರ್ ಅಲ್ಲದೆ ಪ್ರಮುಖ ಗಂಭೀರ ಕಾಯಿಲೆಗಳ ಔಷಧಿಗಳ ಮೇಲೆ ವಿನಾಯಿತಿಗಳನ್ನ ನೀಡಿದ್ದಾರೆ. ಇದರ ಜೊತೆಗೆ ಸರ್ಕಾರ ರೋಗಿಗಳ ಕಲ್ಯಾಣಕ್ಕಾಗಿ ಇತರೆ ಕರ್ಯಕ್ರಮಗಳನ್ನ ಕೂಡ ಘೋಷಣೆ ಮಾಡಿದೆ.


Click it and Unblock the Notifications