ಪ್ರತೀ ಬಾರಿ ಬಜೆಟ್ ಮಂಡನೆ ವೇಳೆ ನಿರ್ಮಲಾ ಸೀತಾರಾಮನ್ ಅವರು ಉಡುವ ಸೀರೆ ಬಹಳಷ್ಟು ವೈಶಿಷ್ಟ್ಯತೆಗಳನ್ನ ಒಳಗೊಂಡಿರುತ್ತದೆ. ಪ್ರತೀ ವರ್ಷ ಸಚಿವೆ ಅವರ ಸೀರೆಯ ಮೂಲಕವೇ ಎಲ್ಲರ ಗಮನ ಸೆಳೆಯುತ್ತಾರೆ. ಅದೇ ರೀತಿ ಈ ಬಾರಿ ಕೂಡ ವಿಭಿನ್ನ ಸೀರೆ ಉಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಈ ಬಾರಿ ಅವರು ಕೆಂಪು, ನೀಲಿ, ಹಳದಿ ಕಂದು ಬಣ್ಣಗಳನ್ನ ಒಳಗೊಂಡ ಕೆನೆ ಬಣ್ಣದ ಸೀರೆಯನ್ನ ಉಟ್ಟಿದ್ದಾರೆ. ಅಲ್ಲದೆ ಅವರು ಪ್ರತೀ ಬಾರಿ ಉಡುವ ಸೀರೆ ಭಾರತೀಯ ಸಂಸ್ಕೃತಿ, ಪರಂಪರೆಯನ್ನ ಪ್ರತಿನಿಧಿಸುತ್ತದೆ. ವಿಭಿನ್ನ ಇತೀಹಾಸಗಳನ್ನ ಒಳಗೊಂಡ ಸೀರೆಯನ್ನ ಅವರು ಬಜೆಟ್ ದಿನದಂದು ಧರಿಸುತ್ತಾರೆ. ಬಜೆಟ್ ಮಂಡನೆಯ ವೇಳೆ ತೆರಿಗೆ, ಹಣಕಾಸು ನೀತಿ ಇತ್ಯಾದಿ ಪ್ರಮುಖ ವಿಷಯಗಳಂತೆ ಇವರ ಸೀರೆ ಕೂಡ ಪ್ರಮುಖ ಅಂಶವಾಗಿದೆ.

ಬಿಹಾರದ ಬಿಳಿ ಮಧುಬನಿ ಸೀರೆ ಧರಿಸಿರುವ ನಿರ್ಮಲಾ ಸೀತಾರಾಮನ್
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಬಾರಿ ಬಿಹಾರದ ಮಧುಬನಿ ಕಲೆ ಒಳಗೊಂಡ ಗೋಲ್ಡನ್ ಬಾರ್ಡರ್‌ನ ಬಿಳಿ ಸೀರೆಯನ್ನ ಧರಿಸಿದ್ದಾರೆ. ಅದಕ್ಕೆ ಕೆಂಪು ಕುಪ್ಪಸ ಜೊತೆಗೆ ಶಾಲ್ ಧರಿಸಿದ್ದಾರೆ. ಈ ಸೀರೆ ಕೈಮಗ್ಗದಿಂದ ಮಾಡಿದ್ದಾಗಿದೆ. ಪದ್ಮಶ್ರೀ ಪುರಸ್ಕ್ಋತ ದುಲಾರಿ ದೇವಿ ಅವರ ಕೌಶಲ್ಯಗಳನ್ನ ಈ ಸೀರೆ ಒಳಗೊಂಡಿದೆ. ಅವರ ಗೌರವ ಪೂರ್ವಕವಾಗಿ ಈ ಸೀರೆಯನ್ನ ಧರಿಸಿದ್ದಾರೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಿಹಾರ್‌ಗೆ ತೆರೆಳಿದ್ದಾಗ ಅಲ್ಲಿ ದುಲಾರಿ ದೇವಿಯವರನ್ನ ಭೇಟಿ ಮಾಡಿದ್ದರು. ಆ ವೇಳೆ ಈ ಸೀರೆಯನ್ನ ನಿರ್ಮಲಾ ಸೀತಾರಾಮನ್ ಅವರಿಗೆ ಉಡುಗೊರೆಯಾಗಿ ನೀಡಲಾಗಿತ್ತು. ಬಿಹಾರದಲ್ಲಿರುವ ಮಧುಬನಿ ಮಿಥಿಲಾ ಆರ್ಟ್ ಇನ್ಸಟಿಟ್ಯೂಟ್‌ಗೆ ಭೇಟಿ ನೀಡಿದಾಗ ದುಲಾರಿ ದೇವಿಯವರು ಈ ಸೀರೆಯನ್ನ ನೀಡಿದ್ದರು. ಹಾಗೆ ಆ ಸೀರೆಯನ್ನ ಬಜೆಟ್ ದಿದಂದು ಉಡುವಂತೆ ದುಲಾರಿ ದೇವಿಯವರು ಹೇಳಿದ್ದರಂತೆ. ಅಲ್ಲದೆ ಆ ಸೀರೆ ಬಿಹಾರಿ ಮಧುಬನಿ ಕಲೆಯನ್ನ ಪ್ರತಿನಿಧಿಸುತ್ತದೆ. ಹೀಗಾಗಿ ಈ ಬಾರಿ ಬಜೆಟ್‌ನ ವೇಳೆ ನಿರ್ಮಲಾ ಸೀತಾರಾಮನ್ ಅವರು ಈ ವಿಶೇಷ ಸೀರೆಯನ್ನ ಧರಿಸಿದ್ದಾರೆ.
ಹಣಕಾಸು ಸಚಿವೆ ಸೀರೆಗೆ ಸರಿಹೊಂದುವ ಕಿವಿಯೋಲೆ, ಚೈನ್, ಮತ್ತು ಚಿನ್ನದ ಬಳೆಗಳನ್ನ ಧರಿಸಿದ್ದಾರೆ. ಇದೆಲ್ಲವೂ ಕೂಡ ಅವರ ಸೀರೆಗೆ ಸರಿಹೊಂದುವಂತಿವೆ.
ಮಧುಬನಿ ಕಲೆ ಬಗ್ಗೆ ತಿಳಿಯಿರಿ
ಮಧುಬನಿ ಕಲೆ ಒಂದು ಸಾಂಪ್ರದಾಯಿಕ ಜನಪದ ಕಲೆಯಾಗಿದೆ. ಬಿಹಾರದ ಮುಥಿಲಾ ಪ್ರದೇಶದಲ್ಲಿ ಈ ಕಲೆ ಮೊದಲು ಹುಟ್ಟಿದ್ದು. ಹೀಗಾಗಿ ಇದಕ್ಕೆ ಮಧುಬನಿ ಕಲೆ ಅಥವಾ ಮಿಥಿಲಾ ಕಲೆ ಎಂದು ಕರೆಯುತ್ತಾರೆ. ಸಂಕೀರ್ಣವಾದ ಹೂವಿನ ಲಕ್ಷಣಗಳನ್ನ ಈ ಕಲೆ ಒಳಗೊಂಡಿದೆ. ಅಲ್ಲದೆ ರೋಮಾಂಚಕ ಬಣ್ಣಗಳು ಮತ್ತು ಸೂಕ್ಷ್ಮ ರೇಖೆಗಳ ಬಳಕೆ ಮಾಡಿ ಪ್ರಕೃತಿ ಪುರಾಣಗಳನ್ನ ಚಿತ್ರಿಸಲಾಗುತ್ತದೆ. ಅಲ್ಲದೆ ಇದು ಆ ಪ್ರದೇಶದ ಸಾಂಸ್ಕೃತಿಕ ಮತ್ತು ಧಾರ್ಮಿಕ ಜೀವನವನ್ನ ಪ್ರತಿಬಿಂಭಿಸುತ್ತದೆ.
ವಿತ್ತ ಸಚಿವೆ ಪ್ರತೀ ಬಾರಿ ಬಜೆಟ್‌ನ ವೇಳೆ ವಿಭಿನ್ನ ಸೀರೆಗಳನ್ನ ಆಯ್ಕೆ ಮಾಡುತ್ತಾರೆ. ಪ್ರತೀ ಬಾರಿ ಉಡುವ ಸೀರೆಗಳು ಕೂಡ ಒಂದೊಂದು ಸಂಸ್ಕೃತಿ ಇತಿಹಾಸವನ್ನ ಒಳಗೊಂಡಿರುತ್ತವೆ. ಅದೇ ರೀತಿ ಈ ಬಾರಿ ಉಟ್ಟಿರುವ ಸೀರೆ ಹೆಚ್ಚಿನ ಗಮನ ಸೆಳೆದಿದ್ದು, ಎಲ್ಲರ ಕುತೂಹಲವನ್ನ ಕೆರೆಳಿಸಿದೆ.
ಬಜೆಟ್ ವೇಳೆ ನಿರ್ಮಲಾ ಸೀತಾರಾಮನ್ ಉಟ್ಟಿರುವ ಸೀರೆಗಳ ಬಗ್ಗೆ ಇಲ್ಲಿ ತಿಳಿಯಿರಿ
1. 2019 - ಗುಲಾಬಿ ಮತ್ತು ಚಿನ್ನದ ರೇಷ್ಮೆ ಸೀರೆ
2019 ರಲ್ಲಿ ಅವರ ಮೊದಲ ಕೇಂದ್ರ ಬಜೆಟ್ ವೇಳೆ ನಿರ್ಮಲಾ ಸೀತಾರಾಮನ್ ಅವರು ಗುಲಾಬಿ ಮತ್ತು ಚಿನ್ನದ ರೇಷ್ಮೆ ಸೀರೆಯನ್ನ ಧರಿಸಿದ್ದರು. ಈ ಸೀರೆಯು ಸೊಬಗು ಮತ್ತು ಸಂಪ್ರದಾಯವನ್ನು ಪ್ರತಿಬಿಂಬಿಸುತ್ತದೆ. ಸೀರೆಯು ಐಷಾರಾಮಿ ಮತ್ತು ಸರಳತೆಯ ವಿಶಿಷ್ಟ ಮಿಶ್ರಣವನ್ನು ಹೊಂದಿದೆ.
2. 2020 - ಕೆಂಪು ಬಂಧನಿ ಸೀರೆ
2020 ರಲ್ಲಿ ತನ್ನ ಎರಡನೇ ಬಜೆಟ್ ಮಂಡನೆಗಾಗಿ, ಸೀತಾರಾಮನ್ ಸಾಂಪ್ರದಾಯಿಕ ಕೆಂಪು ಬಂಧನಿ ಸೀರೆಯನ್ನು ಧರಿಸಿದ್ದರು. ಇದು ಆಳವಾದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಮಹತ್ವವನ್ನು ಹೊಂದಿದೆ. ಬಂಧನಿ, ಗುಜರಾತ್ ಮತ್ತು ರಾಜಸ್ಥಾನದಲ್ಲಿ ಬಳಸಲಾಗುವ ಟೈ-ಡೈ ತಂತ್ರವು ದೇಶದ ಆಳವಾದ ಬೇರೂರಿರುವ ಸಂಪ್ರದಾಯವನ್ನು ಸಂಕೇತಿಸುತ್ತದೆ ಮತ್ತು ಭಾರತದ ಶ್ರೀಮಂತ ಜವಳಿ ಪರಂಪರೆಯನ್ನು ಎತ್ತಿ ತೋರಿಸುತ್ತದೆ. ಇದು ಪ್ರಾದೇಶಿಕ ಕಲೆಗಾರಿಕೆಯನ್ನು ಪ್ರದರ್ಶಿಸುವ ಅರ್ಥಪೂರ್ಣ ಆಯ್ಕೆಯಾಗಿತ್ತು.
3. 2021 - ಕಪ್ಪು ಅಂಚುಗಳೊಂದಿಗೆ ಆಫ್-ವೈಟ್ ಸೀರೆ
2021 ರಲ್ಲಿ, ಅವರು ಕಪ್ಪು ಅಂಚುಗಳೊಂದಿಗೆ ಸೊಗಸಾದ ಆಫ್-ವೈಟ್ ಸೀರೆಯನ್ನು ಆಯ್ಕೆ ಮಾಡಿದರು. ಈ ಸೂಕ್ಷ್ಮ ಮತ್ತು ಕ್ಲಾಸಿ ನೋಟವು ಚಿನ್ನದ ಕುಪ್ಪಸದೊಂದಿಗೆ ಜೋಡಿಸಲ್ಪಟ್ಟಿತ್ತು. ಅತಿಯಾಗಿ ಹೋಗದೆ ಭವ್ಯತೆಯ ಸ್ಪರ್ಶವನ್ನು ಒಳಗೊಂಡಿತ್ತು. ಇದು ಹಿಂದಿನ ವರ್ಷದ ರೋಮಾಂಚಕ ಕೆಂಪು ಬಂಧನಿ ಸೀರೆಗೆ ಸಂಪೂರ್ಣವಾಗಿ ವ್ಯತಿರಿಕ್ತವಾಗಿದೆ ಆದರೆ ಅದರ ಅತ್ಯಾಧುನಿಕತೆಯಲ್ಲಿ ಅಷ್ಟೇ ಶಕ್ತಿಯುತವಾಗಿದೆ.
4. 2022 - ಹಸಿರು ಸಿಲ್ಕ್ ಸೀರೆ
ತನ್ನ 2022 ರ ಬಜೆಟ್ ಮಂಡನೆಗಾಗಿ, ಸೀತಾರಾಮನ್ ಕಡು ಹಸಿರು ಬಣ್ಣದ ರೇಷ್ಮೆ ಸೀರೆಯನ್ನು ಆರಿಸಿಕೊಂಡರು, ಇದು ಸೊಬಗು ಮತ್ತು ಶಕ್ತಿ ಎರಡನ್ನೂ ಹೊರಹಾಕುತ್ತದೆ. ಹಸಿರು ಬಣ್ಣವು ಸಾಮಾನ್ಯವಾಗಿ ಬೆಳವಣಿಗೆ, ಸಮೃದ್ಧಿ ಮತ್ತು ಸುಸ್ಥಿರತೆಗೆ ಸಂಬಂಧಿಸಿದೆ.
5. 2023 - ಕಪ್ಪು ಗಡಿಯೊಂದಿಗೆ ಬೀಜ್ ಸೀರೆ
2023 ರಲ್ಲಿ, ಸೀತಾರಾಮನ್ ದಪ್ಪ ಕಪ್ಪು ಗಡಿಯೊಂದಿಗೆ ಬೀಜ್ ಸೀರೆಯನ್ನು ಧರಿಸಿದ್ದರು. ತಟಸ್ಥ ಟೋನ್ ಶಾಂತ ಮತ್ತು ನೆಲದ ವೃತ್ತಿಪರತೆಯ ಪ್ರಜ್ಞೆಯನ್ನು ಪ್ರತಿಬಿಂಬಿಸುತ್ತದೆ. ಆದರೆ ಕಪ್ಪು ಗಡಿಯ ವ್ಯತಿರಿಕ್ತತೆಯು ಉಡುಪಿಗೆ ಆಧುನಿಕ ಅಂಚನ್ನು ಸೇರಿಸಿತು. ಈ ಸಂಯೋಜನೆಯು ಸಮತೋಲನ ಮತ್ತು ಸಾಮರಸ್ಯವನ್ನು ಸಂಕೇತಿಸುತ್ತದೆ, ಸಾಂಕ್ರಾಮಿಕ ನಂತರದ ಸ್ಥಿರ ಚೇತರಿಕೆ ಮತ್ತು ಸಮರ್ಥನೀಯತೆಯ ಮೇಲೆ ಸರ್ಕಾರದ ಗಮನವನ್ನು ಪ್ರತಿಧ್ವನಿಸುತ್ತದೆ.
More From GoodReturns

Silver Rate Today: ಭಾರತದಲ್ಲಿ ಸ್ಥಿರವಾದ ಬೆಳ್ಳಿ ದರ; ಎಷ್ಟಿದೆ ಗೊತ್ತಾ ಇಂದಿನ ದರ?

LPG shortage: ಮಧ್ಯಪ್ರಾಚ್ಯದ ಉದ್ವಿಗ್ನತೆ, ಬೆಂಗಳೂರು-ಮುಂಬೈನಲ್ಲಿ LPG ಕೊರತೆ ಆತಂಕ: ರೆಸ್ಟೋರೆಂಟ್ಗಳು ಮುಚ್ಚುವ ಭೀತಿ

Biggest Airport: ಭಾರತದ ಅತಿದೊಡ್ಡ ವಿಮಾನ ನಿಲ್ದಾಣ ಸಂಚಾರಕ್ಕೆ ಸಿದ್ಧ; 45 ದಿನದೊಳಗೆ ಆರಂಭ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

LPG Cylinder Shortage Live Updates: ಭಾರತದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ಪಿಎಂ ಮೋದಿ ಮಹತ್ವದ ಸಭೆ

LPG ಪೂರೈಕೆಯಲ್ಲಿ ಕೊರತೆ; ದೇಶದಲ್ಲಿ ಎಲ್ಪಿಜಿ ಉತ್ಪಾದನೆ 10% ಹೆಚ್ಚಳ

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Bank Holidays: ಮಾರ್ಚ್ನಲ್ಲಿ ಬ್ಯಾಂಕ್ಗಳಿಗೆ 18 ದಿನ ರಜೆ! ಗ್ರಾಹಕರೇ ಇಲ್ಲಿ ಗಮನಿಸಿ

Silver Rate Today: ಒಂದೇ ದಿನ 10,000 ಇಳಿಕೆ ಕಂಡ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

India Oil: ಇಸ್ರೇಲ್, ಯುಎಸ್ ಮತ್ತು ಇರಾನ್ ನಡುವೆ ವಾರ್! ಭಾರತದ ಕಚ್ಚಾ ತೈಲದ ಮೇಲೆ ಪರಿಣಾಮ ಬೀರಿದ್ದು ಹೇಗೆ?



Click it and Unblock the Notifications