ಈ ಬಾರಿ ಬಜೆಟ್‌ನಲ್ಲಿ ರೈತರಿಗೆ ಸಿಹಿ ಸುದ್ದಿ ಸಿಕ್ಕಿದೆ. ಸರ್ಕಾರದಿಂದ ಆರ್ಥಿಕ ಪರಿಹಾರ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ ರೈತರಿಗೆ ಈ ಬಾರಿ ಗುಡ್‌ನ್ಯೂಸ್ ಸಿಕ್ಕಿದೆ. ಈ ಬಾರಿ ಸರ್ಕಾರ ರೈತರಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ಕಿಸಾನ್ ಕಾರ್ಡ್‌ನ ಮಿತಿಯನ್ನ 3 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ ಮಾಡಿದೆ.
ಎಲ್ಲರ ಕಣ್ಣು ಈ ವರ್ಷ ಬಜೆಟ್‌ನ ಮೇಲೆಯೇ ಇತ್ತು. ಎಲ್ಲರೂ ಕೂಡ ಬಜೆಟ್‌ನಲ್ಲಿ ಯಾವ ವರ್ಗಕ್ಕೆ ಏನು ಹಂಚಿಕೆ ಸಿಗಬಹುದು ಎಂದು ಕುತೂಹಲದಿಂದ ಬಜೆಟ್‌ಗಾಗಿ ಕಾಯುತ್ತಿದ್ದರು. ಇನ್ನು ಈ ಬಾರಿ ರೈತರಿಗೆ ವಿಶೇಷ ಹಂಚಿಕೆಯನ್ನ ನೀಡಲಾಗ್ತಿದೆ. ರೈತರಿಗೆ ಈ ಬಾರಿ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ 3 ಲಕ್ಷ ರೂಪಾಯಿಗಳ ಸಾಲದ ಮಿತಿಯನ್ನು ಏರಿಕೆ ಮಾಡಿದ್ದು, ಈ ಮಿತಿಯನ್ನು 5 ಲಕ್ಷಕ್ಕೆ ಹೆಚ್ಚಿಸುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ತಿಳಿಸಿದ್ದಾರೆ.

ಈ ಕ್ರೆಡಿಟ್ ಕಾರ್ಡ್ ಮಿತಿಯನ್ನ ಪರಿಷ್ಕರಿಸುವ ಮೂಲಕ ರೈತರ ಅಗತ್ಯತೆಗಳನ್ನ ಪರಿಹರಿಸಬಹುದಾಗಿದೆ. ಇನ್ನು ಈ ಕ್ರಮವನ್ನ ತರುವದರಿಂದ ಗ್ರಾಮೀಣ ಆರ್ಥಿಕತೆಯನ್ನು ಉತ್ತೇಜಿಸಬಹುದು. ಹಾಗೆ ಇದನ್ನ ರೈತರಿಗೆ ಆರ್ಥಿಕ ಬೆಂಬಲವನ್ನು ಹೆಚ್ಚಿಸುವ ಮುಖ್ಯ ಕ್ರಮವಾಗಿ ಇದನ್ನ ಪರಿಗಣಿಸಲಾಗುತ್ತಿದೆ. ಹಾಗೆ ರೈತು ಸರಿಯಾದ ಸಮಯಕ್ಕೆ ಸಾಲವನ್ನು ಮರುಪಾವತಿ ಮಾಡಿದರೆ, ರೈತರು ಇನ್ನೂ 3% ಬಡ್ಡಿ ರಿಯಾಯಿತಿಯನ್ನು ಪಡೆಯಲಿದ್ದಾರೆ.
ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲದ ಉಪಯೋಗಗಳು
ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲದಿಂದ ರೈತರು ತಮ್ಮ ಕೃಷಿ ಅಗತ್ಯಗಳಿಗಾಗಿ ಇದು ಸಕಾಲಿಕ ಸಾಲಗಳನ್ನ ನೀಡುತ್ತದೆ. ಭಾರತ ಸರ್ಕಾರ ಈಯೋಜನೆಯನ್ನ ಪರಿಚಯಿಸಿದ್ದು, ಇದು ರೈತರಿಗೆ ಕೃಷಿ ಚಟುವಟಿಕೆಗಳಿಗೆ ಸುಲಭ ಮತ್ತು ಕೈಗೆಟುಕುವ ಸಾಲವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಬೆಳೆ ಕೃಷಿ, ಬೀಜಗಳು ಮತ್ತು ರಸಗೊಬ್ಬರಗಳಂತಹ ಒಳಹರಿವಿನ ಖರೀದಿ ಮತ್ತು ಸುಗ್ಗಿಯ ನಂತರದ ಚಟುವಟಿಕೆಗಳಿಗೆ ಸಂಬಂಧಿಸಿದ ವೆಚ್ಚಗಳಿಗೆ ಇದು ಸಹಾಯವಾಗಲಿದೆ.
ಅದರಲ್ಲೂ ಈ ಬಾರಿ ಸಾಲದ ಮಿತಿಯನ್ನ ಏರಿಕೆ ಮಾಡುವ ಮೂಲಕ ಸರ್ಕಾರ ರೈತರಿಗೆ ನೆರವಾಗಿದೆ. ಇದರಿಂದಾಗಿ ಈ ಬಾರಿ ಬಜೆಟ್ ರೈತರಿಗೆ ಸಂತಸವನ್ನ ತಂದಿದೆ ಎನ್ನಬಹುದು. ಇನ್ನು ಈ ಸಾಲಗಳು ರೈತರ ಅಗತ್ಯತೆಗಳಿಗೆ ಅನುಗುಣವಾಗಿ ಇರುತ್ತವೆ. ಬೆಳೆ, ಜಮೀನ ಗಾತ್ರ, ರೈತರ ಚಟುವಟಿಕೆಳಿಗೆ ಅನುಗುಣವಾಗಿ ಈ ಸಲದ ಮೊತ್ತಗಳು ಬದಲಾಗುತ್ತವೆ.
ಇನ್ನು ಈ ಸಾಲದ ಬಡ್ಡಿದರಗಳು 7% ರಿಂದ 9% ವರೆಗೆ ಇರುತ್ತದೆ. ರೈತರು ಸರಿಯಾದ ಸಮಯಕ್ಕೆ ಮರುಪಾವತಿ ಮಡಿದರೆ ಸರ್ಕಾರ ರಿಯಾಯಿತಿಗಳನ್ನ ಕೂಡ ನೀಡಲಿದೆ. ರೈತರು ತಮ್ಮ ಕೃಷಿ ಕಾರ್ಯಾಚರಣೆಗಳ ಪ್ರಮಾಣದ ಆಧಾರದ ಮೇಲೆ ಸಾಲದ ಮಿತಿಯನ್ನು ಪಡೆಯಬಹುದು. ಹಾಗೆ ರೈತರ ಮರುಪಾವತಿ ಇತಿಹಾಸ ಮತ್ತು ನವೀಕರಿಸಿದ ಅವಶ್ಯಕತೆಗಳ ಆಧಾರದ ಮೇಲೆ ಅದನ್ನು ಪ್ರತಿ ವರ್ಷ ನವೀಕರಿಸಬಹುದು.
KCC ಸಾಲವನ್ನು ವ್ಯಾಪಕ ಶ್ರೇಣಿಯ ಕೃಷಿ ಚಟುವಟಿಕೆಗಳಿಗೆ ಬಳಸಬಹುದು. ಬೀಜಗಳು, ರಸಗೊಬ್ಬರಗಳು ಮತ್ತು ಕೀಟನಾಶಕಗಳನ್ನು ಖರೀದಿಸಲು, ನೀರಾವರಿ ಮತ್ತು ಕೃಷಿ ಯಂತ್ರೋಪಕರಣಗಳನ್ನ ಕೊಳ್ಳಲು, ಕೊಯ್ಲಿನ ನಂತರದ ವೆಚ್ಚಗಳು ಮತ್ತು ಸಂಗ್ರಹಣೆ ಮಾಡಲು, ಜಾನುವಾರು ಮತ್ತು ಮೀನುಗಾರಿಕೆ ಸೇರದಂತೆ ಇತರೆ ಚಟುವಟಿಕೆಗಳಿಗಾಗಿ ಸಾಲವನ್ನ ಪಡೆಯಬಹದು.
ರೈತರು ಈ ಸಾಲಗಳಿಗೆ ಅರ್ಜಿ ಸಲ್ಲಿಸುವ ಮೂಲಕ ಸಾಲಗಳನ್ನ ಪಡೆಯಬಹುದು. ಹಾಗೆ ಈ ಕೆಸಿಸಿ ಸಾಲಗಳನ್ನ ಸಾರ್ವಜನಿಕ ವಲಯದ ಬ್ಯಾಂಕ್‌ಗಳು, ಖಾಸಗಿ ಬ್ಯಾಂಕ್‌ಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು ಮತ್ತು ಸಹಕಾರಿ ಬ್ಯಾಂಕ್‌ಗಳಿಂದ ಪಡೆಯಬಹುದು. ಇದು ವ್ಯಾಪಕವಾಗಿ ಪ್ರವೇಶಿಸುವಂತೆ ಮಾಡುತ್ತದೆ.
ಇನ್ನು ಸಾಂಪ್ರದಾಯಿಕ ಸಾಲಗಳಿಗೆ ಹೋಲಿಸಿದರೆ ಈ ಸಾಲಗಳು ಕಡಿಮೆ ಬಡ್ಡಿದರದಲ್ಲಿ ರೈತರಿಗೆ ಸಿಗುತ್ತವೆ. ಜೊತೆಗೆ ರೈತರು ಸುಲಭವಾಗಿ ಮರುಪಾವತಿ ಮಾಡಲು ಸಹಾಯ ಮಾಡುತ್ತದೆ.


Click it and Unblock the Notifications