ಎಲ್ಲರೂ ಎದುರು ನೋಡುತ್ತಿದ್ದ ಬಜೆಟ್ ಅನ್ನು ಇಂದು ಫೆಬ್ರವರಿ 1 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ್ದಾರೆ. ಈ ವೇಳೆ ವಿವಿಧ ಕ್ಷೇತ್ರಗಳಿಗೆ ವಿವಿಧ ರೀತಿಯ ಹಂಚಿಕೆಗಳನ್ನ ಮಾಡಿದ್ದಾರೆ. ಇನ್ನು ಈ ಬಾರಿ ಯಾವುದು ಅಗ್ಗಾಗಲಿದೆ, ಯಾವುದು ದುಬಾರಿಯಾಗಲಿದೆ ಎನ್ನುವುದರ ಕುರಿತು ಘೊಷಣೆಯನ್ನ ಮಾಡಿದ್ದಾರೆ. ಈ ಹಿಂದೆ ಅಂದರೆ 2024ರ ಬೆಜೆಟ್‌ನ ವೇಳೆ ಮೊಬೈಲ್‌ಗಳು, ಚಾರ್ಜರ್‌ಗಳು, ಕ್ಯಾನ್ಸರ್ ಔಷಧಿಗಳು ಹಾಗೆ ಕೆಲವು ಸರಕುಗಳ ಮೇಲಿನ ಕಸ್ಟಮ್ ಸುಂಕದ ದರಗಳಲ್ಲಿ ಕಡಿತವನ್ನು ಘೋಷಣೆ ಮಾಡಿದ್ದರು. ಇನ್ನು ಈ ಬಾರಿ ಬಜೆಟ್ 2025ರಲ್ಲಿ ಯಾವುದು ಅಗ್ಗ ಮತ್ತು ಯಾವುದು ದುಬಾರಿ ಎನ್ನುವುದನ್ನು ಇಲ್ಲಿ ತಿಳಿಯಿರಿ.
ಈ ಬಾರಿ ಯಾವುದು ಅಗ್ಗವಾಗಲಿದೆ?
ಈ ಬಾರಿ ಬಜೆಟ್‌ನಲ್ಲಿ ಹಲವು ಪದಾರ್ಥಗಳು ಇಳಿಕೆಯಾಗಿವೆ. ಅವುಗಳನ್ನ ಗಮನಿಸುವುದಾದ್ರೆ..
-ಈ ವರ್ಷ ಎಲ್ಇಡಿ ಟಿವಿಗಳ ಮೇಲಿನ ಸುಂಕಗಳು ಇಳಿಕೆಯಾಗಿವೆ.
-ಹಾಗೆ ಈ ಬಾರಿ ಪ್ರಮುಖವಾಗಿ ಕ್ಯಾನ್ಸರ್ ಔಷಧಗಳ ಮೆಲಿನ ತೆರಿಗೆಗಳು ಇಳಿಕೆಯಾಗಿವೆ. ಕ್ಯಾನ್ಸರ್ ಕಾಯಿಲೆ ಹೆಚ್ಚುತ್ತಿರುವ ಸಮಯದಲ್ಲಿ ಇದು ಮಹತ್ವದ ಬದಲಾವಣೆಯಾಗಿದೆ. ಕ್ಯಾನ್ಸರ್‌ನ 36 ಜೀವ ರಕ್ಷಕ ಔಷಧಿಗಳ ಮೇಲಿನ ಕಸ್ಟಮ್ ಸುಂಕಗಳ ಮೇಲೆ ಸಂಪೂರ್ಣ ವಿನಾಯಿತಿ ನೀಡಲಾಗದೆ.

- ಅಲ್ಲದೆ ಈ ಬಾರಿ ಮೊಬೈಲ್ ಮತ್ತು ಚಾರ್ಜರ್ ಮೇಲಿನ ತೆರಿಗೆ ಇಳಿಕೆ ಮಾಡಿದೆ. ಇತ್ತ ಎಲೆಕ್ಟ್ರಿಕ್ ವಾಹನಗಳ ಮೇಲಿನ ತೆರಿಗೆ ಕೂಡ ಇಳಿಕೆಯಾಗಿದೆ.
-ಹಾಗೆ ಸ್ವದೇಶಿ ಬಟ್ಟೆಗಳ ಮೇಲಿನ ತೆರಿಗೆಯನ್ನ ಇಳಿಕೆ ಮಾಡಲಾಗಿದೆ. ಜೊತೆಗೆ ಚರ್ಮದ ಉತ್ಪನ್ನಗಳ ಮೇಲಿನ ತೆರಿಗೆಗಳು ಕೂಡ ಕಡಿಮೆಯಾಗಿವೆ.
-ಹೆಪ್ಪುಗಟ್ಟಿದ ಮೀನಿನ ವಹಿವಾಟಿನ ಮೇಲೆ ಕಸ್ಟಮ್ ಸುಂಕವನ್ನ 15 ರಿಂದ 5 ಕ್ಕೆ ಇಳಿಸಲಾಗಿದೆ. ಜೊತೆಗೆ ಮೀನಿನ ಮೇಲಿನ ತೆರಿಗೆ ಕೂಡ ಈ ಬಾರಿ ಇಳಿಕೆಯಾಗಿದೆ.
-ಚರ್ಮದ ವಸ್ತುಗಳ ಮೇಲಿನ ಕಸ್ಟಮ್ಸ್ ಸಂಪೂರ್ಣ ಇಳಿಕೆಯಾಗಿದೆ. ಒದರ ಜೊತೆಗೆ ಎತರ್ನೆಟ್ ಸ್ವಿಚ್ ಮೇಲಿನ ಟ್ಯಾಕ್ಸ್ ಇಳಿಕೆಯಾಗಿದೆ.
-ಸಾಗರ ಉತ್ಪನ್ನಗಳ ಮೇಲಿನ ಕಸ್ಟಮ್ ಸುಂಕವನ್ನು 30 ರಿಂದ 5 ಪ್ರತಿಶತಕ್ಕೆ ಇಳಿಸಲಾಗಿದೆ. ಅಂದರೆ ದೋಣಿ, ಹಡಗು ತಯಾರಿಸಲು ಬಳಸುವ ಕಚ್ಚಾ ವಸ್ತುಗಳ ಮೇಲಿನ ಕಸ್ಟಮ್ ಸುಂಕವನ್ನ ಇಳಿಕೆ ಮಾಡಿದೆ.
-ಈ ಭಾರಿ ಖನಿಜಗಳ ಮೇಲಿನ ತೆರಿಗೆಯನ್ನ ಇಳಿಕೆಮಾಡಿದೆ. ಹಾಗೆ ಓಪನ್ ಸೆಲ್ ಮೇಲಿನ ತೆರಿಗೆ ಇಳಿಕೆಯಾಗಿದೆ. ಕೋಬಲಲ್ಟ್, ಲಿಥಿಯಮ್ ಬ್ಯಾಟರಿಯ ಸ್ಕ್ರ್ಯಾಪ್, ಸೀಸ ಸೇರಿದಂತೆ 12 ನಿರ್ಣಯಕ ಖನಿಜಗಳ ಮೇಲಿನ ಸುಂಕಗಳನ್ನ ಇಳಿಕೆ ಮಾಡಿದೆ. ಜೊತೆಗೆ ಮೊಬೈಲ್ ಫೋನ್ ತಯಾರಿಕೆಗೆ ಬಳಸುವ 28 ಸರಕುಗಳು ಜೊತೆಗೆ ಇವಿ ಬ್ಯಾಟರಿಗಳ ಮೇಲಿನ ತೆರಿಗೆ ಇಳಿಕೆಯಾಗಿದೆ.
EV ಮತ್ತು EV ಬ್ಯಾಟರಿ ತಯಾರಿಕೆಗಾಗಿ 35 ಹೆಚ್ಚುವರಿ ಸರಕುಗಳನ್ನ ಮತ್ತು ಮೊಬೈಲ್ ಫೋನ್ ಬ್ಯಾಟರಿ ತಯಾರಿಕೆಗಾಗಿ 28 ಹೆಚ್ಚುವರಿ ಸರಕುಗಳನ್ನ ಮೇಲೆ ಈ ಬಾರಿ ವಿನಾಯಿತಿ ಬಂಡವಾಳ ಸರಕುಗಳ ಪಟ್ಟಿಗೆ ಸೇರಿಸಲಾಗಿದೆ.
ಈ ಬಾರಿ ಯಾವುದು ದುಬಾರಿಯಾಗಿದೆ?
ಈ ವರ್ಷ ಬಜೆಟ್‌ನಲ್ಲಿ ಫ್ಲಾಟ್ ಪ್ಯಾನಲ್ ಡಿಸ್ಪ್ಲೇಗಳು ದುಬಾರಿಯಾಗಿವೆ.
ಈ ಹಿಂದೆ ಬಜೆಟ್‌ನ ವೇಳೆ ನಿರ್ಮಲಾ ಸೀತಾರಾಮನ್ ಅವರು ಚಿನ್ನ, ಬೆಳ್ಳಿ, ಪ್ಲಾಟಿನಂ ಮತ್ತು ಇತರ ವಸ್ತುಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಇಳಿಕೆ ಮಾಡಿದ್ದರು. ಇದರ ಜೊತೆಗೆ ಪ್ರಮುಖ ಬದಲಾವಣೆಗಳನ್ನ ಕೂಡ ಒಳಗೊಂಡಿತ್ತು. ಅಂದರೆ ಮೊಬೈಲ್‌ಗಳು, ಕ್ಯಾನ್ಸರ್ ಔಷಧಗಳು ಮತ್ತು ಕೆಲವು ಖನಿಜಗಳ ಮೇಲಿನ ಸುಂಕ ಕಡಿತಗೊಳಿಸಲಾಗಿತ್ತು. ಅದೇ ರೀತಿ ಈ ಬಾರಿ ಕೆಲ ಪ್ರಮುಖ ಪದಾರ್ಥಗಳ ಮೇಲೆ ಕೇಂದ್ರೀಕರಿಸಲಾಗಿದೆ. ಆದ್ರೆ ಈ ಬಾರಿ ಬಜೆಟ್‌ನಲ್ಲಿ ಕಡಿತಗೊಳಿಸಬಹುದು ಎಂಬ ನಿರೀಕ್ಷೆಯಲ್ಲಿದ್ದ ಚಿನ್ನ ಮತ್ತು ಬೆಳ್ಳಿ ಮತ್ತು ಪ್ಲಾಟಿನಮ್ ದರಗಳು ಇಳಿಕೆಯಾಗಿಲ್ಲ ಹೊರತಾಗಿ ಯಥಾಸ್ಥಿತಿಯಲ್ಲಿವೆ.


Click it and Unblock the Notifications