Union Budget 2026: ಬಜೆಟ್‌ ಮಂಡನೆಗೆ ಕೆನ್ನೇರಳೆ ಕಾಂಜೀವರಂ ರೇಷ್ಮೆ ಸೀರೆಯಲ್ಲಿ ಬಂದ ವಿತ್ತ ಸಚಿವೆ! ಏನಿದರ ವಿಶೇಷತೆ?

ಕೇಂದ್ರ ಸರ್ಕಾರದ 2026-27ನೇ (Union Budget 2026-27) ಸಾಲಿನ ಮಹತ್ವದ ಬಜೆಟ್‌, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ದಾಖಲೆಯ ಒಂಬತ್ತನೇ ಬಜೆಟ್‌ ಮಂಡನೆಗೆ ದಿನಗಣನೆ ಶುರುವಾಗಿದೆ. ಪ್ರತೀ ಬಾರಿ ಬಜೆಟ್‌ ಸಂದರ್ಭದಲ್ಲಿ ಕೇಂದ್ರದ ಯೋಜನೆ, ನೀತಿಗಳ ಬಗ್ಗೆ ಹೇಗೆ ನಿರೀಕ್ಷೆಗಳಿರುತ್ತವೆಯೋ, ಅದೇ ರೀತಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಸೀರೆ (Nirmala Sitharaman Sari) ಬಗ್ಗೆಯೂ ಭಾರೀ ಕುತೂಹಲವಿರುತ್ತದೆ. ಇದೀಗ ನಿರ್ಮಲಾ ಸೀತಾರಾಮನ್‌ ಅವರು ರಾಷ್ಟ್ರಪತಿ ಭವನದಿಂದ, ಬಜೆಟ್‌ ಫೈಲ್‌ ಹಿಡಿದುಕೊಂಡು ಹೊರಬಂದಿದ್ದಾರೆ. ಜೊತೆಗೆ ಸಚಿವೆ ನಿರ್ಮಲಾ ಸೀತಾರಾಮನ್‌ ಕೆನ್ನೇರಳೆ ಬಣ್ಣದ ಸೀರೆಯೊಂದಿಗೆ ಕಾಣಿಸಿಕೊಂಡಿದ್ದಾರೆ.

ಬಜೆಟ್‌ ಮಂಡನೆಗೆ ಕೆನ್ನೇರಳೆ ರೇಷ್ಮೆ ಸೀರೆಯಲ್ಲಿ ಬಂದ ವಿತ್ತ ಸಚಿವೆ!

ಕಾಂಜೀವರ‌ ಸೀರೆ ಉಟ್ಟ ವಿತ್ತ ಸಚಿವೆ
2026ನೇ ಸಾಲಿನ ಕೇಂದ್ರ ಬಜೆಟ್‌ ಮಂಡನೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌, ತಮಿಳುನಾಡಿನ ನೇಯ್ಗೆ ಪರಂಪರೆಗೆ ಗೌರವ ಸಲ್ಲಿಸುವ ಉದ್ದೇಶದಿಂದ, ಕೆನ್ನೇರಳೆ ಬಣ್ಣದ ಕಾಂಜೀವರಂ ರೇಷ್ಮೆ ಸೀರೆಯನ್ನು ಧರಿಸಿದ್ದಾರೆ. ತಮಿಳಿನಲ್ಲಿ 'ಕಟ್ಟಮ್' ಎಂದು ಕರೆಯಲಾಗುವ ತಿಳಿ ಚಿನ್ನದ ಕಂದು ಚೆಕ್‌ಗಳು ಮತ್ತು ಕಾಫಿ ಕಂದು ದಾರದ ಅಂಚು ಹೊಂದಿದ್ದ ಈ ಸೀರೆ, ಈ ವರ್ಷ ವಿಧಾನಸಭಾ ಚುನಾವಣೆ ಎದುರಿಸಲಿರುವ ತಮಿಳುನಾಡಿಗೆ ಸಂದೇಶ ನೀಡುವ ಉದ್ದೇಶದಿಂದ ಈ ಸೀರೆ ಉಟ್ಟಿದ್ದಾರೆ ಎನ್ನಲಾಗಿದೆ. ಸಚಿವರ ಪ್ರತಿ ವರ್ಷದ ಸೀರೆ ಆಯ್ಕೆಯು ಬಜೆಟ್ ಭಾಷಣದಷ್ಟೇ, ಭಾರೀ ಗಮನ ಸೆಳೆಯುತ್ತದೆ. ಇದು ಭಾರತದ ವಿವಿಧ ಪ್ರದೇಶಗಳ ನೇಕಾರರು, ಕರಕುಶಲತೆ ಮತ್ತು ಜವಳಿ ಪರಂಪರೆ ಆಚರಿಸುತ್ತಾ, ಆಡಳಿತಾರೂಢ ಬಿಜೆಪಿಯ ರಾಜಕೀಯ ಗಮನವನ್ನೂ ಸೂಚಿಸುತ್ತದೆ.

2025ರಲ್ಲಿ ಮಧುಬನಿ ಆರ್ಟ್‌ ಸೀರೆ (ಬಿಹಾರ)
2025ರ ಬಜೆಟ್‌ನಲ್ಲಿ ಸೀತಾರಾಮನ್ ಮಧುಬನಿ ಕಸೂತಿಯ ಆಫ್-ವೈಟ್ ಕೈಮಗ್ಗ (Handloom) ರೇಷ್ಮೆ ಸೀರೆ ಧರಿಸಿದ್ದರು. ಮೀನು, ಕಮಲ ವಿನ್ಯಾಸಗಳಿದ್ದ ಈ ಸೀರೆ ಬಿಹಾರದ ಜಾನಪದ ಕಲೆಗೆ ಗೌರವ ಸಲ್ಲಿಸಲಾಗಿತ್ತು. ಪದ್ಮಶ್ರೀ ದುಲಾರಿ ದೇವಿ ನೀಡಿದ ಈ ಸೀರೆ ಸಿದ್ಧಪಡಿಸಲು "ಒಂದು ತಿಂಗಳಿಗೂ ಹೆಚ್ಚು ಕೆಲಸ ಹಿಡಿಯಿತು" ಎಂದು ಅವರು ಹೇಳಿದ್ದರು.

2024ರ ಬಜೆಟ್:‌ ಟಸ್ಸಾರ್‌ ಸಿಲ್ಕ್‌ ಜೊತೆಗೆ ಕಾಂತಾ ಸ್ಟಿಚ್‌ ಸೀರೆ (ಪಶ್ಚಿಮ ಬಂಗಾಳ)
ಬಜೆಟ್‌ಗಾಗಿ, ನೀಲಿ ಬಣ್ಣದ ಟಸ್ಸಾರ್‌ ಸಿಲ್ಕ್ ಸೀರೆಗೆ ಕಾಂಥಾ ಹೊಲಿಗೆಯನ್ನು ಹೊಂದಿದ್ದ ಸೀರೆಯನ್ನು ಉಟ್ಟಿದ್ದರು. ಕೈಯಿಂದ ಹೊಲಿದ ದಾರ ಕೆಲಸವು ಪಶ್ಚಿಮ ಬಂಗಾಳದ ವಿಶಿಷ್ಟ ಕರಕುಶಲತೆಯಾಗಿದ್ದು, ಸೂಕ್ಷ್ಮ, ಹಲವು ಕಥೆಗಳನ್ನು ಇದು ಹೇಳುತ್ತದೆ. ಈ ಆಯ್ಕೆಯು ಪಶ್ಚಿಮ ಬಂಗಾಳದ ಜವಳಿ ಸಂಸ್ಕೃತಿಗೆ ಗೌರವ ಸಲ್ಲಿಸಿತು.

2023ರ ಬಜೆಟ್‌: ಇಳಕಲ್‌ ಸೀರೆ (ಟೆಂಪಲ್‌ ಬಾರ್ಡರ್):
2023ರಲ್ಲಿ ವಿತ್ತ ಸಚಿವರು ಸಾಂಪ್ರದಾಯಿಕ ಬಾರ್ಡರ್‌ ಹೊಂದಿರುವ ಕ್ಲಾಸಿಕ್‌ ರೆಡ್‌ ರೇಷ್ಮೆ ಸೀರೆ ಧರಿಸಿದ್ದರು. ಈ ವೇಳೆ ಕರ್ನಾಟಕದ ಇಳಕಲ್ ರೇಷ್ಮೆಯನ್ನು ಧರಿಸಿದ್ದರು. 'ಕಸೂತಿ'ಯು ಧಾರವಾಡಕ್ಕೆ ವಿಶಿಷ್ಟವಾದ ಜಾನಪದ ಕಲೆಯಾಗಿದ್ದು, ರಥ, ನವಿಲು, ಕಮಲಗಳಂತಹ ವಿನ್ಯಾಸಗಳಿರುತ್ತವೆ. ಸಚಿವರ ಸೀರೆಯಲ್ಲಿಯೂ ರಥ, ನವಿಲು ಮತ್ತು ಕಮಲದ ವಿನ್ಯಾಸಗಳು ಇದ್ದವು. 800 ಗ್ರಾಂ ತೂಕದ ಈ ಸೀರೆಯನ್ನು ಧಾರವಾಡದ 'ಆರತಿ ಕ್ರಾಫ್ಟ್ಸ್' ವಿನ್ಯಾಸಗೊಳಿಸಿತ್ತು.

ಅದೇ ರೀತಿ 2022 ರಲ್ಲಿ ಕಂದು ಬಣ್ಣದ ಕೈಮಗ್ಗ ಸೀರೆ, 2021 ರಲ್ಲಿ ಕೆಂಪು ಮತ್ತು ಬಿಳಿ ಬಣ್ಣದ ಪೋಚಂಪಲ್ಲಿ ಸೀರೆ, 2020 ರಲ್ಲಿ ಹಳದಿ ಮತ್ತು ನೀಲಿ ಮಿಶ್ರಿತ ರೇಷ್ಮೆ ಸೀರೆಯಲ್ಲಿ ಕಾಣಿಸಿಕೊಂಡಿದ್ದರು. ನಿರ್ಮಲಾ ಸೀತಾರಾಮನ್‌ ಮೊದಲ ಬಾರಿ ಹಣಕಾಸು ಸಚಿವೆಯಾಗಿ 2019ರಲ್ಲಿ ಬಜೆಟ್‌ ಮಂಡನೆ ಸಂದರ್ಭದಲ್ಲಿ ಗೋಲ್ಡನ್‌ ಬಾರ್ಡರ್‌ ಹೊಂದಿರುವ ಗುಲಾಬಿ ಬಣ್ಣದ ಮಂಗಳಗಿರಿ ಸೀರೆಯುಟ್ಟು ಮಿಂಚಿದ್ದರು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+