ಇನ್ನೇನು ಕೆಲವೇ ದಿನಗಳಲ್ಲಿ 2026-27ನೇ ಸಾಲಿನ ಕೇಂದ್ರ ಬಜೆಟ್ (Union Budget 2026-27) ಮಂಡಣೆಯಾಗಲಿದೆ. ಪ್ರತೀ ವರ್ಷ ಫೆಬ್ರವರಿ 1ಕ್ಕೆ ಬಜೆಟ್ ಮಂಡನೆ ಮಾಡುತ್ತಾರೆ. ಆದ್ರೆ ಈ ಬಾರಿ ಫೆಬ್ರವರಿ 1, ಭಾನುವಾರ ಬಂದಿರುವುದರಿಂದ, ಯಾವಾಗ ಮಂಡನೆಯಾಗುತ್ತೆ ಎಂಬ ಕುತೂಹಲ ಹೆಚ್ಚಾಗಿದೆ. ಆದರೆ ಕ್ಯಾಬಿನೆಟ್ ಕಮಿಟಿ ಅಂತಿಮ ನಿರ್ಧಾರ ಏನು ತೆಗೆದುಕೊಳ್ಳುತ್ತದೆ ಎಂದು ಕಾದು ನೋಡಬೇಕಿದೆ. ಆದರೆ ಈ ಬಾರಿಯ ಬಜೆಟ್ ಬಗ್ಗೆ ಭಾರೀ ಕುತೂಹಲ ಹುಟ್ಟಿದೆ.

ಕೇಂದ್ರ ಬಜೆಟ್ 2026 ಸಮೀಪಿಸುತ್ತಿದ್ದಂತೆ, ತೆರಿಗೆ ಸುಧಾರಣೆ ಬಗ್ಗೆ, ರಿಫಂಡ್, ಹಲವು ಸುಧಾರಣೆಗಳ ಬಗ್ಗೆ ತೆರಿಗೆದಾರರು ಕಾಯುತ್ತಲೇ ಇದ್ದಾರೆ. ಫೆಬ್ರವರಿ 1 ರಂದು ಬಜೆಟ್ ಮಂಡನೆಯಾಗಲಿದ್ದು, ಪ್ರತಿ ವರ್ಷದಂತೆ ಈ ಬಾರಿಯೂ ನಿರೀಕ್ಷೆಗಳು ಹೆಚ್ಚಾಗಿದೆ. ಅದರಲ್ಲೂ ರಿಫಾರ್ಮ್‌ಗಳು, ರಿಫಂಡ್, ಕಾಂಪ್ಲೈಯನ್ಸ್ ಮೇಲೆ ಪ್ರಭಾವ ಬೀರಬಹುದು.
ಟ್ಯಾಕ್ಸ್ ರಿಫಾರ್ಮ್:
ಈ ಬಾರಿಯ ಕೇಂದ್ರ ಬಜೆಟ್ ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸುವ ಮತ್ತು ತೆರಿಗೆದಾರರಿಗೆ ಸುಲಭಗೊಳಿಸುವ ನಿರೀಕ್ಷೆಯಿದೆ. ಏನೆಲ್ಲಾ ಸುಲಭಗಳಿಸುಬಹುದು?
ನ್ಯೂಸ್ ಇನ್‌ಕಮ್ ಟ್ಯಾಕ್ಸ್ ಆಕ್ಟ್ ಜಾರಿ: ಏಪ್ರಿಲ್ 1, 2026 ರಿಂದ ಹೊಸ ಇನ್‌ಕಮ್ ಟ್ಯಾಕ್ಸ್ ಕಾಯ್ದೆ (ಇನ್‌ಕಮ್ ಟ್ಯಾಕ್ಸ್ ಆಕ್ಟ್ 1961ರ ಬದಲು) ಜಾರಿಗೆ ಬರಲಿದೆ. ಅದೇ ಕಾರಣದಿಂದ ಈ ಬಾರಿ ಬಜೆಟ್ ಭಾರೀ ಮಹತ್ವವನ್ನು ಪಡೆಯಲಿದೆ. ಇದು ಭಾಷೆ ಸರಳಗೊಳಿಸುವುದು, ಲಿಟಿಗೇಷನ್ ಕಡಿಮೆ ಮಾಡುವುದು ಮತ್ತು ತೆರಿಗೆ ನಿಯಮಗಳನ್ನು ಸರಳಗೊಳಿಸುವುದು ಹೀಗೆ ಹಲವು ಸುಧಾರಿಸುವ ಸಾಧ್ಯತೆಉದೆ. ಆದ್ದರಿಂದ ಹೊಸ ಕಾಯಿದೆಯಡಿ ತೆರಿಗೆ ರೇಟ್‌ಗಳು ಸರಳವಾಗಿ, ಮಧ್ಯಮ ವರ್ಗಕ್ಕೆ ರಿಲೀಫ್ ನೀಡಬಹುದು ಎನ್ನಲಾಗಿದೆ.
ಅಸೆಟ್ ಕ್ಲಾಸ್ ಸರಳೀಕರಣ: ವಿವಿಧ ಅಸೆಟ್ ಕ್ಲಾಸ್‌ಗಳು (ಸ್ಟಾಕ್, ಮ್ಯೂಚುವಲ್ ಫಂಡ್, ಪ್ರಾಪರ್ಟಿ) ಮೇಳಿನ ತೆರಿಗೆ ರೇಟ್ ಸರಳಗೊಳಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಇದರಿಂದ ಹೂಡಿಕೆದಾರರಿಗೆ ಉತ್ತೇಜನ ಸಿಗಲಿದೆ.
ಮಧ್ಯಮ ವರ್ಗಕ್ಕೆ ರಿಲೀಫ್: ಹೊಸ ರೆಜಿಮ್‌ನಡಿ 15 ಲಕ್ಷದವರೆಗೆ ತೆರಿಗೆ ರಹಿತ ಮಿತಿ ಹೆಚ್ಚಿಸುವ ಸಾಧ್ಯತೆ ಇದೆ. ಹಾಗೆಯೇ ಸೀನಿಯರ್ ಸಿಟಿಜನ್‌ಗಳಿಗೂ ರಿಲೀಫ್ ನೀಡುವ ಸಾಧ್ಯತೆ ಇದೆ.
ರಿಫಂಡ್‌ನಲ್ಲಿ ಸುಧಾರಣೆ:
ತೆರಿಗೆದಾರರಿಗೆ ಕಾಡುವ ಸಮಸ್ಯೆಗಳಲ್ಲಿ ರಿಫಂಡ್ ಕೂಡಾ ಒಂದು. ಆದ್ದರಿಂದ 2026ರ ಬಜೆಟ್ ಇದನ್ನು ಸುಧಾರಿಸುವ ನಿರೀಕ್ಷೆಯಿದೆ.
ಫಾಸ್ಟರ್ ರಿಫಂಡ್ ನಿರೀಕ್ಷೆ: ಪ್ರಿ-ವೆರಿಫಿಕೇಶನ್ ಸಿಸ್ಟಮ್, ರಿಯಲ್ ಟೈಮ್ ಡೇಟಾ ಮ್ಯಾಚಿಂಗ್ ಮತ್ತು ಆಟೋಮೇಟೆಡ್ ರಿಫಂಡ್ ಪ್ರೊಸೆಸಿಂಗ್ ಜಾರಿಗೆ ಬರುವ ಸಾಧ್ಯತೆ ಇದೆ. ಅಲ್ಲದೇ ಡಿಲೇ ಆದ ರಿಫಂಡ್‌ಗಳಿಗೆ ಇಂಟ್ರೆಸ್ಟ್ ಹಣವನ್ನು ಜಾಸ್ತಿ ಮಾಡುವ ನಿರೀಕ್ಷೆಯಿದೆ.
ಅಂತಿಮವಾಗಿ ಈ ಬಾರಿಯ ಬಜೆಟ್ 2026 ತೆರಿಗೆದಾರರಿಗೆ ಸರಳತೆ, ಫಾಸ್ಟರ್ ರಿಫಂಡ್ ಮತ್ತು ಕಡಿಮೆ ಒತ್ತಡ ನೀಡುವ ಸಾಧ್ಯತೆಯಿದೆ. ಆದರೆ ಹೊಸ ಕಾಯಿದೆಯ ಜಾರಿ, ಹಲವು ಸವಾಲುಗಳಿಗೆ ಕಾರಣವಾಗಬಹುದು. ಅದರಲ್ಲೂ ಮಧ್ಯಮ ವರ್ಗಕ್ಕೆ ಬಿಗ್ ರಿಲೀಫ್ ನೀಡುವ ಸಾಧ್ಯತೆ ಇದೆ. ಆದ್ದರಿಂದ ಫೆಬ್ರವರಿ 1 ರಂದು ಮಂಡನೆಯಾಗುವ ಬಜೆಟ್ ಹೇಗಿರಲಿದೆ ಎಂಬ ಕುತೂಹಲ ಎಲ್ಲರಲ್ಲೂ ಹೆಚ್ಚಾಗಿದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications